” ಅಪ್ಪ “ಕಾರ್ಪೊರೇಟರ್ “ಕೇಶವಮೂರ್ತಿ ಒಂದ್ ರೂಂನಲ್ಲಿ ಕಂಠಪೂರ್ತಿ ಕುಡೀತಾ ಕೂತಿದ್ರೆ….ಪಕ್ಕದ ರೂಂನಲ್ಲೇ ಮಗ ಯಶಸ್  ಭಯವಿಲ್ಲದೆ ಡ್ರಗ್ ಸೇವಿಸ್ತಿದ್ದನಂತೆ

0
ಡ್ರಗ್ ಜಾಲದಲ್ಲಿ ಸಿಕ್ಕಿ ಬಿದ್ದಿರುವ ಕಾರ್ಪೊರೇಟರ್ ಪುತ್ರರತ್ನ ಯಶಸ್..
ಡ್ರಗ್ ಜಾಲದಲ್ಲಿ ಸಿಕ್ಕಿ ಬಿದ್ದಿರುವ ಬಿಬಿಎಂಪಿ “ಕೈ”ಕಾರ್ಪೊರೇಟರ್ ಪುತ್ರರತ್ನ ಯಶಸ್..
 ಮಗನ ವರ್ತನೆಯಿಂದಾಗಿ ತೀವ್ರ ಮುಜುಗರಕ್ಕೊಳಗಾಗಿರುವ ಅಪ್ಪ,ಕಾರ್ಪೊರೇಟರ್ ಕೇಶವಮೂರ್ತಿ
ಮಗನಿಂದಾಗಿ ತೀವ್ರ ಮುಜುಗರಕ್ಕೊಳಗಾಗಿರುವ ಅಪ್ಪ, ಕಾರ್ಪೊರೇಟರ್ ಕೇಶವಮೂರ್ತಿ

ಬೆಂಗಳೂರು:ಯಾವ್ ಪೋಷಕರಿಗೂ ಈ ಕಾರ್ಪೊರೇಟರ್ ಗೆ ಬಂದಂಥ ಪರಿಸ್ತಿತಿ ಬರೋದು ಬೇಡ..ಪಾಕೆಟ್ ಮನಿಗೆ ಕೊಡುವ ಹಣವನ್ನು ಮಗ ಏನ್ ಮಾಡ್ತಿದ್ದಾನೆಂದು ತಿಳಿದುಕೊಳ್ಳುವ ಗೋಜಿಗೆ ಹೋಗದೆ,ಹಾದಿ ತಪ್ಪುತ್ತಿದ್ದಾನೆನಿಸಿದಾಗ್ಲೂ, ಹುಡುಗ್ ಬುದ್ಧಿಯಲ್ವಾ ಎಂದುಕೊಂಡು ಸುಮ್ಮನಿದ್ದ ನಿರ್ಲಕ್ಷ್ಯವೇ..ಇವತ್ತು ಮಗನನ್ನು ಡ್ರಗ್ ಕ್ರಿಮಿನಲ್ ಎನ್ನೋ ಮಟ್ಟಕ್ಕೆ ಬೆಳೆಸಿದ್ದರೆ,ಈ ಪರಿಸ್ತಿತಿಗೆ ನಾನೇ ಕಾರಣನಾದ್ನಾ ಎಂದು ಅಪ್ಪ ಕೊರಗುವಂಥ ಮಾಡಿದೆ..

ಬೆಂಗಳೂರು:ಪತ್ರಕರ್ತ ಹಾಗೂ ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಕೊಟ್ಟ ಆ ಒಂದು   ಸುಳಿವು.ಸಿಡಿಸಿದ ಬಾಂಬ್ ಇನ್ನೆಷ್ಟು ಸ್ಪೋಟಕ ಸತ್ಯಗಳನ್ನು ಹೊರಗಾಕಲಿದೆಯೋ..ನಾವು ನಿರೀಕ್ಷಿಸಲಿಕ್ಕೇ ಆಗದ ಇನ್ನೆಷ್ಟು ಜನರನ್ನು ಕಾನೂನಿನ ಕಟಕಟೆಗೆ ತಂದು ನಿಲ್ಲಿಸಲಿದೆಯೋ ದೇವ್ರೇ ಬಲ್ಲ..ಆದ್ರೆ ಮೇಲ್ನೋಟದ ತನಿಖೆಯಲ್ಲೇ ಸಾಕಷ್ಟು ಕೆಟ್ಟ ಹುಳುಗುಳು ಸಿಸಿಬಿ ಇಟ್ಟಿರೋ ಬೆಂಕಿಗೆ ಪತರುಗುಟ್ಟುತ್ತಾ,ರೆಕ್ಕೆ ಸುಟ್ಟುಕೊಂಡು ಮಂಡಿಯೂರುತ್ತಿರುವುದಂತೂ ಸತ್ಯ..ಹಾಗೆ ಖೆಡ್ಡಾಕ್ಕೆ  ಬಿದ್ದಿರೋ ಮತ್ತೊಂದು ಮಿಕವೇ ಮಿಸ್ಟರ್ ಯಶಸ್..ದಿ ಗ್ರೇಟ್ ಸನ್ ಆಫ್ ಕಾಂಗ್ರೆಸ್ ಕಾರ್ಪೊರೇಟರ್ ಕೇಶವಮೂರ್ತಿ.

ಬಹಳಷ್ಟು ಸನ್ನಿವೇಶಗಳಲ್ಲಿ ಹೀಗೆಯೇ ಆಗಿರುತ್ತೆ..ಪೋಷಕರು ಸೊಸೈಟಿಯಲ್ಲಿ ತಮ್ಮ ಸ್ಟೇಟಸ್-ಪೊಸಿಷನ್ ನಂಥ ಸಿಕ್ಕಾಪಟ್ಟೆ ಬಿಲ್ಡಪ್ ಕೊಡ್ತಿರುತ್ತಾರೆ..ಆದ್ರೆ ಅವ್ಳ ಮಕ್ಕಳು ಕೆಟ್ಟು ಕೆರ ಹಿಡಿದು ಹೋಗಿರುತ್ತಾರೆ. ಮಕ್ಕಳನ್ನು ಸರಿಯಾ ವಯಸ್ಸಿನಲ್ಲಿ ಕಿವಿ ಹಿಂಡಿ ಬುದ್ಧಿ ಹೇಳದೆ ಅವರಿಗೆ ಪ್ಯಾಕೆಟ್ ಮನಿ ಕೊಟ್ಟು ಕೊಟ್ಟು ಅಭ್ಯಾಸ ಮಾಡಿ ಅವರು ಹಾಳಾಗೊಕ್ಕೆ ಕಾರಣವಾಗಿರುತ್ತಾರೆ.

ಯಶಸ್ ವಿಷಯದಲ್ಲಿ ಆಗಿರೋದು ಅದೇ..ತಂದೆ ಕಾರ್ಪೊರೇಟರ್,ಕೇಳಬೇಕೆ ಸಮಾಜದಲ್ಲಿ ಒಂದು ಸ್ಟೇಟಸ್ ಜೊತೆಗೆ ಕೈ ತುಂಬಾ ಹಣ..ಅವರಿವರ ಸಹವಾಸಕ್ಕೆ ಬಿದ್ದು ಡ್ರಗ್ಸ್ ಚಟ ಮೈಗತ್ತಿಸಿಕೊಂಡಿದ್ದಾನೆ. ಅಪ್ಪಾ..ಕೇಶವಮೂರ್ತಿ ಮನೆ-ಮಗ-ಸಂಸಾರದ ಬಗ್ಗೆ ತಲೆಕೆಡಿಸಿಕೊಳ್ಳದಷ್ಟು  ಪಾಲಿಟಿಕ್ಸ್ ಹಾಗೂ ತನ್ನದೇ ವ್ಯವಹಾರಗಳಲ್ಲಿ ಬ್ಯುಸಿಯಾಗಿದ್ದೇ ಮಗ ಹಳ್ಳ ಹಿಡಿಯೊಕ್ಕೆ ಶುರು ಮಾಡ್ದ.ದಾರಿ ತಪ್ಪುವ ಸೂಕ್ಷ್ಮಗಳು ಸಿಕ್ಕಾಗ್ಲೂ ಇದನ್ನು ಪ್ರಶ್ನಿಸುವ ಗೋಜಿಗೇ ಹೋಗಲಿಲ್ಲ ಕೇಶವಮೂರ್ತಿ.ಆ ನಿರ್ಲಕ್ಷ್ಯವೇ ಇವತ್ತು ಡ್ರಗ್ ಪೆಡ್ಲರ್ ಗಳ ಜೊತೆಯಲ್ಲಿ ಅತ್ಯಂತ ನಿಕಟ ಸಂಪರ್ಕ ಇಟ್ಟುಕೊಂಡ ಪರಮಭ್ರಷ್ಟ ದೇಶದ್ರೋಹಿ-ಕ್ರಿಮಿನಲ್ ಆಗಿ ಬೆಳೆಯೊಕ್ಕೆ ಕಾರಣವಾಯ್ತು.

 ಡ್ರಗ್ ಜಾಲದಲ್ಲಿ ಪಾತ್ರವಿರುವ ಬಗ್ಗೆ ವಿಚಾರಣೆಗೆ ಬರುವಂತೆ ಯಶಸ್ ಗೆ ನೊಟೀಸ್ ನೀಡಿದ್ದ NCB
ಡ್ರಗ್ ಜಾಲದಲ್ಲಿ ಪಾತ್ರವಿರುವ ಬಗ್ಗೆ ವಿಚಾರಣೆಗೆ ಬರುವಂತೆ ಯಶಸ್ ಗೆ ನೊಟೀಸ್ ನೀಡಿದ್ದ NCB

ಒಂದು ಮೂಲಗಳ ಪ್ರಕಾರ ಯಶಸ್ ಎಷ್ಟರ ಮಟ್ಟಿಗೆ ಡ್ರಗ್ ಅಡಿಕ್ಟ್ ಆಗಿದ್ದನೆಂದ್ರೆ ದಿನಕ್ಕೆ ಕಡಿಮೆ ಎಂದ್ರೂ 50 ಸಾವಿರ ನಷ್ಟು ಹಣವನ್ನು ಇದಕ್ಕೆಂದೆ ಖರ್ಚು ಮಾಡುತ್ತಿದ್ದನಂತೆ.ತನ್ನ ಮಗ ಡ್ರಗ್ ಅಡಿಕ್ಟ್ ಆಗಿರೋ ವಿಷಯ ತಂದೆ ಕೇಶವಮೂರ್ತಿಗೆ ಗೊತ್ತಿರದ ಸಂಗತಿಯೇನಾಗಿರಲಿಲ್ಲವಂತೆ.ಆದ್ರೆ ತನ್ನದೇ ಕೌಟುಂಬಿಕ ಕಲಹ-ರಾಜಕೀಯ ಹೊಯ್ಲಾಟಗಳ ಬಗ್ಗೇನೆ ಬ್ಯುಸಿಯಿರುತ್ತಿದ್ದ ಕೇಶವ ಮೂರ್ತಿಗೆ ಮಗನನ್ನು ಸರಿ ದಾರಿಗೆ ತರೊಕ್ಕೆ ಪುರುಸೊತ್ತು ಇರಲಿಲ್ಲವಂತೆ.

ಯಶಸ್ ಎಷ್ಟರ ಮಟ್ಟಿಗೆ ಡ್ರಗ್ ಗೆ ದಾಸನಾಗಿದ್ದನೆಂದ್ರೆ ಡ್ರಗ್ಸ್ ಗೆ ದುಡ್ಡು ಬೇಕು ಎಂದು ನೇರವಾಗೇ ಕೇಳುತ್ತಿದ್ದನಂತೆ. ದುಡ್ಡು ಕೊಡದಿದ್ರೆ ಅಪ್ಪನೊಂದಿಗೆ ಜಗಳಕ್ಕಿಳಿಯುತ್ತಿದ್ದನಂತೆ.ಅದೆಷ್ಟೋ ಬಾರಿ ಅಪ್ಪನ ಮೇಲೆಯೇ ಹಲ್ಲೆ ಮಾಡಿ ದುಡ್ಡು ಕಿತ್ತುಕೊಂಡು ಹೋಗಿದ್ದುಂಟಂತೆ.ಮನೆಯಲ್ಲಿ ದುಡ್ಡು ಸಿಗದಿದ್ರೆ ಕದಿಯುವ ಕೆಟ್ಟ ಚಾಳಿಯನ್ನೂ ಬೆಳೆಸಿಕೊಂಡಿದ್ದನಂತೆ.ಡ್ರಗ್ಸ್ ಹುಚ್ಚಿಗೆ ಮನೆಯಲ್ಲಿದ್ದ ಎಷ್ಟೋ ವಸ್ತುಗಳನ್ನು ಕದ್ದು ಕಡಿಮೆ ದುಡ್ಡಿಗೆ ಮಾರಿದ್ದುಂಟಂತೆ.ಇನ್ನೊಂದು ವಿಚಿತ್ರ ಎಂದ್ರೆ ಅಪ್ಪ ವಾರ್ಡ್ ನಲ್ಲಿ ಹೇಗೋ ಮಾಡಿ ಹೆಸರನ್ನು ಉಳಿಸಿಕೊಂಡು ಬಂದಿದ್ರೆ ಮಗ ಯಶಸ್ ವಾರ್ಡ್ ಮತದಾರರ ಬಳಿ ಸಾಲಕ್ಕೆ ಅಂಗಲಾಚುತ್ತಿದ್ದನಂತೆ.ಇದರ ಬಗ್ಗೆ ಎಷ್ಟೊ ಬಾರಿ ಮತದಾರರೇ ಕೇಶವಮೂರ್ತಿಗೆ ದೂರು ನೀಡಿದ್ದುಂಟಂತೆ.

ಆದ್ರೆ ಮಗ ಬುದ್ದಿ ಕೇಳಿಸಿಕೊಳ್ಳದಷ್ಟು ದೂರ ಹೊರಟು ಹೋಗಿದ್ನಂತೆ.ಇದೇ ಕೊರಗಿನಲ್ಲಿ ಅಪ್ಪ ಕೇಶವಮೂರ್ತಿ ಕುಡಿತಕ್ಕೆ ದಾಸರಾಗಿ ಹೋಗಿದ್ರಂತೆ.ಮೊದ್ಲೇ ಕೌಟುಂಬಿಕ ಸಮಸ್ಯೆಯಿಂದ ತುಂಬಾ ಡಿಸ್ಟರ್ಬ್ ಆಗೋಗಿದ್ದ ಅವರಿಗೆ ಮಗನ ಡ್ರಗ್ ವ್ಯಸನ ಮತ್ತಷ್ಟು ಚಿಂತೆಗೀಡುಮಾಡಿತ್ತಂತೆ.ಅದನ್ನು ತನ್ನ ಕೆಲವೇ ಕೆಲವು ಆಪ್ತರೊಂದಿಗೂ ಹಂಚಿಕೊಂಡಿದ್ದರಂತೆ.ಆದರೇನು ಪ್ರಯೋಜನ..ಇವತ್ತು ಮಗನಿಂದಾಗಿ ಮಾನ ಕಳೆದುಕೊಳ್ಳುವಂತಾಗಿದೆ.ಇಂಥ ಪರಿಸ್ಥಿತಿ ನಿಜಕ್ಕೂ ಯಾವಪ್ಪನಿಗೂ ಬರಬಾರದು ಅನ್ಸುತ್ತೆ.

ಸ್ವಭಾವತಃ ದುಷ್ಟರಲ್ಲದ ಕೇಶವಮೂರ್ತಿ ಎರಡು ಬಾರಿ ಕಾರ್ಪೊರೇಟರ್ ಆಗಿ ಎಲ್ಲರೊಂದಿಗೂ ಪ್ರೀತಿ-ವಿಶ್ವಾಸದಿಂದಲೇ ಇದ್ದವರು.ಆದ್ರೆ ಇವತ್ತು ಮಗನಿಂದಾಗಿ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗಿ ಬಂದಿದೆ.ಮೊಳಕೆಯಲ್ಲಿ ಚಿವುಟಿದಿದ್ದರೆ ಇವತ್ತು ಮಗ ವಿಷಕಕ್ಕುವ ಮರವಾಗುತ್ತಿರಲಿಲ್ಲವೇನೋ..ಕೇಶವಮೂರ್ತಿ ಅವರಿಗೂ ಹೀಗನಿಸುತ್ತಿರಬೇಕಲ್ವಾ..ಅವರ ಪರಿಸ್ತಿತಿ ನೋಡುದ್ರೆ ಎಂಥವ್ರಿಗು ಬೇಸರವಾಗುತ್ತೆ..

Spread the love
Leave A Reply

Your email address will not be published.

Flash News