ಡ್ರಗ್ ರಾ(ಗಿ)ಣಿ ಲೀಸ್ಟ್ ನಲ್ಲಿ ಸ್ಟಾರ್ ನಟರು.?? ರಾಜಕಾರಣಿಗಳು.??..ಆಕೆ ಬಾಯ್ಬಿಟ್ಟರೆ ಅದೆಷ್ಟ್ “ದೊಡ್ಡವರ” ಮಾನ ಬೀದಿಗೆ ಬರುತ್ತೆ. ..ಗೊತ್ತಾ..??

0

ಬೆಂಗಳೂರು:ತುಪ್ಪದ ಬೆಡಗಿ ರಾಗಿಣಿ ಸಿಸಿಬಿ ಮುಂದೆ ಬಾಯಿ ಬಿಡುತ್ತಿರುವ ಸಂಗತಿಗಳನ್ನು ಕೇಳಿ ವಿಚಾರಣಾಧಿಕಾರಿಗಳೇ ಬೆಚ್ಚಿ ಬೀಳುತ್ತಿದ್ದಾರೆನ್ನುವ ಸುದ್ದಿ ಬರ್ತಿದೆ.ಟಾಪ್ ಸ್ಟಾರ್ ಗಳೇ ಡ್ರಗ್ಸ್ ದಂಧೆಯಲ್ಲಿ ತಮಗೆ ನಿಕಟ ಸಂಪರ್ಕದಲ್ಲಿದ್ದರು ಎಂಬ ಸುದ್ದಿಯನ್ನು ಹೊರಗಾಕಿದ್ದಾಳೆನ್ನಲಾಗಿದೆ.ಹಾಗೆಯೇ ಆಕೆ ಬಾಯಿ ಬಿಟ್ಟಿರುವ ಮತ್ತೊಂದು ಸ್ಪೋಟಕ ವಿಚಾರ ಎಂದ್ರೆ ತನಗೆ ಇರುವ ಡ್ರಗ್ ಲಿಂಕ್ ಬಗ್ಗೆಯೂ ಸಾಕಷ್ಟು ರಾಜಕಾರಣಿಗಳಿಗೆ ಮಾಹಿತಿಯೂ ಇತ್ತು.ಅದರ ಹೊರತಾಗ್ಯೂ ಅವರು ನನ್ನೊಂದಿಗೆ ಆತ್ಮೀಯವಾಗೇ ಇದ್ದರೆನ್ನುವುದು.ಇದನ್ನು ಕೇಳಿ ವಿಚಾರಣಾಧಿಕಾರಿಗಳೇ ಕ್ಷಣ ಕಕ್ಕಾಬಿಕ್ಕಿಯಾಗಿದ್ದಾರಂತೆ.

ರಾಗಿಣಿಯನ್ನು ವಿಚಾರಣೆಗಂಥ ಕರೆದೊಯ್ದು ಸಿಸಿಬಿ ಕಚೇರಿಯಲ್ಲಿ ಕೂರಿಸಿಕೊಂಡಾಗ ಆಕೆಯನ್ನು ಬಿಡುವಂತೆ ರಾಜಕಾರಣಿಯೊಬ್ಬರು ಸಿಸಿಬಿ ಮೇಲೆ ಪ್ರೆಷರ್ ಹಾಕಿದ್ರೆನ್ನುವ ಸುದ್ದಿ ಹೊರಬಿದ್ದಾಗ್ಲೇ ಆಕೆಗೆ ರಾಜಕಾರಣಿಗಳ ನಂಟು ಇದೆ ಎನ್ನೋ ಸೂಕ್ಷ್ಮ ಜಗಜ್ಜಾಹೀರಾಗಿತ್ತು.ಸಾಕಷ್ಟು ಪಾರ್ಟಿ,ಸಭೆ-ಸಮಾರಂಭಗಳಲ್ಲಿ ಜತೆಜತೆಯಾಗಿ ಈಕೆ ಜೊತೆಗೆ ವೇದಿಕೆ ಹಂಚಿಕೊಂಡ ರಾಜಕಾರಣಿಗಳೂ ಇದ್ದಾರೆ.ವೇದಿಕೆ ಹಂಚಿಕೊಂಡಾಗ್ಲೇ ಮೊಬೈಲ್ ಸಂಖ್ಯೆ ಜೊತೆಗೆ ಬೇರೆ ಬೇರೆ ಮಾಹಿತಿಗಳು ಕೂಡ ವಿನಿಮಯಗೊಂಡು ಅದು ಬೇರ್ಯಾವುದೋ ಸಂಪರ್ಕಕ್ಕೂ ಕಾರಣವಾಗಿರುವ ಸಾಧ್ಯತೆಗಳಿರೋದನ್ನು ಕೂಡ ಅಲ್ಲಗೆಳೆಯೊಕ್ಕಾಗೊಲ್ಲ ಎನ್ನುತ್ತಾರೆ ಚಿತ್ರೋದ್ಯಮ ಹಾಗು ರಾಜಕಾರಣಿಗಳ ಸಂಪರ್ಕ-ಸಂಬಂಧದ ಬಗ್ಗೆ ಸಾಕಷ್ಟು ಮಾಹಿತಿ ಇರುವ ಓರ್ವ ಸಾಮಾಜಿಕ ಕಾರ್ಯಕರ್ತ.

ತುಪ್ಪದ ಬೆಡಗಿ ರಾಗಿಣಿ ತನ್ನ ಪ್ರತಿಭೆ ಮೂಲಕ ಬೆಳೆದಿದ್ದೇ ಕಡ್ಮೆ.ತನ್ನ ಬೋಲ್ಡ್ ಆದ ಮಾತು-ಮಾದಕ ನೋಟ-ಪ್ರಚೋದನಕಾರಿ ವರ್ತನೆ-ಡಬ್ಬಲ್ ಮೀನಿಂಗ್ ಡೈಲಾಗ್ ಗಳ ಮೂಲಕ ಹೆಸರು ಮಾಡಿದ್ದೇ ಹೆಚ್ಚು.ಇವತ್ತಿಗೂ ಗಾಂಧೀನಗರ  ರಾಗಿಣಿಯನ್ನು ಒಬ್ಬ ಕಲಾವಿದೆ ಎನ್ನೋದಕ್ಕಿಂತ  ಮಾದಕ ಬೆಡಗಿ ಎಂದೇ ಕರೆಯುತ್ತೆ.ತನ್ನ ಮಾದಕ ನೋಟ-ಡಬ್ಬಲ್ ಮೀನಿಂಗ್ ಡೈಲಾಗ್ ಮೂಲಕವೇ ಸಾಕಷ್ಟು ಪ್ರತಿಷ್ಟಿತರು ಹಾಗೂ ಪ್ರಭಾವಿಗಳಿಗೆ ಹತ್ತಿರವಾಗಿದ್ದುಂಟಂತೆ.ಅದು ಸತ್ಯ ಕೂಡ ಅಂತೆ. ಸಲುಗೆಯಲ್ಲಿ “ದೊಡ್ಡ”ವರ ಮಾತನಾಡುವಾಗ ಹರಕಲು-ಮುರುಕಲು ಕನ್ನಡದಲ್ಲೇ ಡಬ್ಬಲ್ ಮೀನಿಂಗ್  ಡೈಲಾಗ್ ಹೊಡೆದು ಖೆಡ್ಡಾಕ್ಕೆ ಬೀಳಿಸಿಕೊಳ್ಳೋದ್ರಲ್ಲಿ ರಾಗಿಣಿಯನ್ನು ನೋಡ್ ಕಲೀಬೇಕ್ ಕಣ್ರಿ ಎಂಬ  ಮಾತು  ಸ್ಯಾಂಡಲ್ ವುಡ್ ನಲ್ಲೇ ಇದೆ.

ಇಂಥಾ ರಾಗಿಣಿ ಡ್ರಗ್ ದಂಧೆಯಲ್ಲಿ ಸಿಕ್ಕಾಕೊಳ್ತಾಳೆನ್ನುವುದು ಇಂದ್ರಜಿತ್ ಡ್ರಗ್ ಲಿಂಕ್ ಬಾಂಬ್ ಸಿಡಿಸಿದಾಗ್ಲೇ ಎಲ್ಲರಿಗೂ ಗೊತ್ತಿತ್ತಂತೆ.ಇನ್ ಫ್ಯಾಕ್ಟ್ ಬಹುತೇಕರು ಮೊದಲು ಶಂಕೆ ಪಟ್ಟಿದ್ದೇ ರಾಗಿಣಿ ಬಗ್ಗೆ.ಅದು ಸತ್ಯ ಕೂಡ ಆಯ್ತು.ಆಕೆ..ಹಾಗಾ ಎಂದು ಮೂಗಿನ ಮೇಲೆ  ಬೆರಳಿಟ್ಟುಕೊಂಡವ್ರೇ ಕಡ್ಮೆ.ಇಂಥಾ ರಾಗಿಣಿಗೆ ಸಿಸಿಬಿ ಕೊಡ್ತಿರೋ ಕ್ವಾಟ್ಲೆ ಅಂತಿಂಥದ್ದಲ್ಲ.ಸಿಸಿಬಿ ಡ್ರಿಲ್ ಮುಂದೆ ರಾಗಿಣಿ ಆಟವೇನೂ ನಡೆಯುತ್ತಿಲ್ಲ..ಆದ್ರೆ ಆಕೆ ಕೊಡೋ ಹೇಳಿಕೆಯಿಂದ ಆತಂಕ ಸೃಷ್ಟಿಯಾಗಿರೋದು ಆಕೆಯ ಲಿಂಕ್ ಪಟ್ಟಿಯಲ್ಲಿರುವ ಸ್ಟಾರ್ ನಟರು ಹಾಗೂ ರಾಜಕಾರಣಿಗಳು.ಹಾಗಾಗಿ ಈ ಕ್ಷಣವೂ ಸಿಸಿಬಿ ಮೇಲೆ  ಆಕೆಗೆ ಯಾವ್ದೇ ರೀತಿಯ ಪ್ರೆಷರ್ ಹಾಕದಿರುವಂತೆ ಒತ್ತಡ ಕೇಳಿಬರುತ್ತಿದೆಯಂತೆ.

ರಾಗಿಣಿ ಲೀಸ್ಟ್ ನಲ್ಲಿ ಯಾವೆಲ್ಲಾ ಪೊಲಿಟಿಷಿಯನ್ಸ್ ಇರಬಹುದೆನ್ನುವ ಕುತೂಹಲ ಎಲ್ಲರಲ್ಲೂ ಇದೆ.ಹಾಲಿ ಸರ್ಕಾರದಲ್ಲಿ ಸಚಿವರಾಗಿರುವ ಒಂದಷ್ಟು ಹೆಸರುಗಳು ಕೂಡ ರಾಗಿಣಿ ಮನಸಲ್ಲಿದೆಯಂತೆ.ಅದು ಬಾಯಿ ಮೂಲಕವೇನಾದ್ರು ಹೊರಬಿದ್ರೆ ಅವರಿಗಷ್ಟೇ ಅಲ್ಲ,ಸರ್ಕಾರಕ್ಕು ಕೆಟ್ಟ ಹೆಸರು.ಇದು ಗೊತ್ತಿದ್ದೇ ರಾಗಿಣಿ ಇಂಥದ್ದ್ಯಾವುದೇ ತಪ್ಪು ಮಾಡದಂತೆ ಸಿಸಿಬಿ ಅವ್ರೇ ತೇಪೆ ಹಚ್ಚುವಂತೆ ಅವರ ಮೇಲೆ ಒತ್ತಡ ಹೇರೋ ಪ್ಲ್ಯಾನನ್ನು ಕೂಡ ಕೆಲವರು ಮಾಡ್ಕೊಂಡಿದ್ದಾರಂತೆ.ಆದ್ರೆ ಆ ಹೆಸರುಗಳು ಯಾರವೇ ಇರಲಿ,ಅದು ಹೊರಬರಬೇಕು.ಕೇವಲ ಸಣ್ಣಪುಟ್ಟ  ಕಲಾವಿದರೇನಾ..ಈ ಮಾಫಿಯಾದಲ್ಲಿರುವುದು,ರಾಗಿಣಿ ಜೊತೆಗೆ ತೆರೆ ಹಂಚಿಕೊಂಡಿರಬಹುದಾದ ಸಾಕಷ್ಟು ಸ್ಟಾರ್  ನಟರಿಗೂ ಇದರ ಲಿಂಕ್ ಇರುವ ಸಾಧ್ಯತೆಗಳಿವೆ.ಅವರನ್ನೂ ವಿಚಾರಣೆಗೊಳಪಡಿಸುವ ಕೆಲಸ ಆಗುತ್ತಾ ಎಂದು ನೇರವಾಗಿ ಪ್ರಶ್ನಿಸಿದ್ದಾರೆ ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್.

ಡ್ರಗ್ಸ್ ಕಳಂಕದಿಂದ ಗಾಂಧೀನಗರಿಗೆ ಕೆಟ್ಟ ಹೆಸರು ಬಂದ್ಬಿಟ್ಟಿದೆ.ಕಳಂಕ ತಂದಂಥವ್ರನ್ನು ಬ್ಯಾನ್ ಮಾಡ್ಬೇಕೆನ್ನುವ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿರುವವರಲ್ಲೇ ಅದೆಷ್ಟೋ ಜನ ಕೇವಲ ಡ್ರಗ್ ನೊಂದಿಗಲ್ಲ,ರಾಗಿಣಿ ಜೊತೆಗು ಸಂಪರ್ಕ ಇಟ್ಟುಕೊಂಡಿರುವ ಸಾಧ್ಯತೆಗಳಿರಬಹುದಲ್ವಾ..ಆಕೆಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಮೂಲಕ ತಮ್ಮನ್ನು ಈ ಲಿಂಕ್ ನಿಂದ ಹೊರಗುಳಿಸಿಕೊಳ್ಳುವ ಪ್ರಯತ್ನವನ್ನು  ಸ್ಟಾರ್ ನಟರು ಮಾಡುತ್ತಿರಬಹುದಲ್ಲಾ..ಅದರ ಬಗ್ಗೆಯೂ ತನಿಖೆ ಆಗ್ಬೇಕು.ರಾಗಿಣಿ ಆ ಹೆಸರುಗಳನ್ನು ಬಾಯ್ಬಿಡೊಕ್ಕೆ ಇಷ್ಟವಿದ್ದರೂ ಧೈರ್ಯ ಸಾಲುತ್ತಿಲ್ಲವೇನೋ ಎನ್ನುವುದು ಸಿನೆಮಾ ಇಂಡಸ್ಟ್ರಿಯಲ್ಲಿರೋ ಕೆಲವರ ಮಾತುಗಳು.ಸಿಸಿಬಿ ರಾಗಿಣಿಗೆ ಅಭಯವನ್ನಿತ್ತು ಆ ಸ್ಟಾರ್ ನಟರ ಡ್ರಗ್ ಲಿಂಕ್ ಬಗ್ಗೆಯೂ ಮಾಹಿತಿ ಹೊರತೆಗೆಸಿಕೊಂಡ್ರೆ ಹಣ್ಣು ತಿಂದು ಸಿಪ್ಪೆ ಬಿಸಾಕಿ ತಪ್ಪಿಸಿಕೊಂಡೆ ಎಂದು ಗಹಗಹಿಸುತ್ತಿರುವವರ ಬಂಡವಾಳ ಬಯಲಾಗ್ಬೋದು.ಹಾಗೊಮ್ಮೆ ಬಯಲಾದ್ರೆ ತೆರೆ ಮೇಲೆ ಹೀರೋಗಳಾಗಿ ಮೆರೆಯುತ್ತಿರುವರ ಸ್ಥಿತಿ ಏನಾಗ್ಬೋದು ನೀವೇ ಊಹಿಸಿ..

ಕೇವಲ ಸ್ಟಾರ್ ನಟರಷ್ಟೇ ಅಲ್ಲ,ರಾಗಿಣಿ ಲೀಸ್ಟ್ ನಲ್ಲಿ ಕೆಲವು ರಾಜಕಾರಣಿಗಳ ಹೆಸರುಗಳೂ ಇವೆ ಎನ್ನಲಾಗ್ತಿದೆ. ರ್ಕಾರದಲ್ಲಿರುವ ಕೆಲವು ಜೊಲ್ಲು ಪಾರ್ಟಿಗಳು ರಾಗಿಣಿಯೊಂದಿಗೆ ಡ್ರಗ್ಸ್ ಹಾಗೂ ವೈಯುಕ್ತಿಕ ಸಂಪರ್ಕ ಇಟ್ಟುಕೊಂಡಿರುವ ಸಾಧ್ಯತೆಗಳು ಗೋಚರಿಸುತ್ತಿವೆ.ಸಾಕಷ್ಟು ಜನ ಆಕೆಯ ಫಲಾನುಭವಿಗಳ ಲೀಸ್ಟ್ ನಲ್ಲಿದ್ದಾರೆ.ಅದರಲ್ಲಿ ಕೆಲವರು ಬೆಂಗಳೂರು ರಾಜಕಾರಣದ ಮಟ್ಟಿಗೆ ಗುರುತಿಸಿಕೊಂಡವರಾಗಿದ್ದಾರೆನ್ನಲಾಗ್ತಿದೆ.

ಆದರೆ ಕೇವಲ ಡ್ರಗ್ ಪೆಡ್ಲರ್ಸ್ ಗಳ  ಮಟ್ಟದಲ್ಲೇ ತನಿಖೆ ಗಿರಕಿ ಹೊಡೆಯೋದ್ ಬಿಟ್ಟು ರಾಗಿಣಿಯ ನಟ್ಟು ಬೋಲ್ಟುಗಳನ್ನು ಸರಿಯಾಗಿ ಟೈಟ್ ಮಾಡಿದ್ರೆ ಅವರೆಲ್ಲರ ಹೆಸರುಗಳು ಹೊರಬಹುದು.ಸಾಚಾಗಳಂತೆ ಡ್ರಗ್ಸ್ ವ್ಯಸನ ಹಾಗು ದಂಧೆ ಬಗ್ಗೆ ಮಾತನಾಡುತ್ತಿರುವ ರಾಜಕಾರಣಿಗಳ ರಂಗಿನಾಟ ಬಯಲಾಗಬಹುದು.ಆ ದಿನಕ್ಕೆ ಇಡೀ ಕರ್ನಾಟಕ ಕಾಯುತ್ತಿದೆ.ಏಕೆಂದ್ರೆ ಕ್ಲೀನ್ ಆಗಬೇಕಿರುವುದು ಕೇವಲ ಸ್ಯಾಂಡಲ್ ವುಡ್ ಮಾತ್ರ ಅಲ್ಲ.ಡ್ರಗ್ಸ್ ಹಾಗೂ ಮಾರಾಟದ ಏಜೆಂಟ್ ಗಳಾಗಿರುವ ರಾಗಿಣಿಯಂಥವರೊಂದಿಗೆ ಲಿಂಕ್ ಇಟ್ಟುಕೊಂಡಿರುವ ರಾಜಕಾರಣಿಗಳಿರುವ ಪೊಲಿಟಿಕಲ್ ಫೀಲ್ಡ್ ಕೂಡ ಸ್ವಚ್ಛವಾಗ್ಬೇಕಿದೆ.

Spread the love
Leave A Reply

Your email address will not be published.

Flash News