ಅಪರಾತಪರ ಲೆಕ್ಕ ಕೊಟ್ಟು, ವಿದ್ಯುತ್ ವಿಭಾಗದ ನಾಲಾಯಕ್ ಗಳು ಬಿಬಿಎಂಪಿಗೆ ತಿಕ್ಕಲು ಹೊರಟಿದ್ದು ಬರೋಬ್ಬರಿ 240 ಕೋಟಿ ಉಂಡೆನಾಮ…

0

ಬೆಂಗಳೂರು: ಇದು BBMP “420”ಯ ಗ್ಯಾಂಗ್ “240” ಕೋಟಿ LED ಬಿಲ್  ಶಾಕ್ ಕೊಡ್ಲಿಕ್ಕೆ ಹೋಗಿ ಸಿಕ್ಕಿಬಿದ್ದ ಕಹಾನಿ.ಕಿಕ್ ಬ್ಯಾಕ್ ಆಸೆಗೆ ಏನ್ ಬೇಕಾದ್ರೂ ಮಾಡಬಲ್ಲ ನಾಲಾಯಕ್-ನಮಕ್ ಹರಾಮ್ ಗಳು ಬಿಬಿಎಂಪಿಯಲ್ಲಿದ್ದಾರೆನ್ನೋದಕ್ಕೆ ಜೀವಂತ ನಿದರ್ಶನ.ಇದನ್ನು ನೋಡಿಯೂ  ಕಮಿಷನರ್ ಮಂಜುನಾಥ್ ಪ್ರಸಾದ್ ಸಾಹೇಬ್ರು, ಆಡಳಿತ ಯಂತ್ರಕ್ಕೆ ಸಾಣೆ ಹಿಡಿಯದೇ ಹೋದ್ರೆ ಈಗಾಗ್ಲೇ ಬಿಬಿಎಂಪಿ ಮಾನವನ್ನು ಕಾಸಿಗೊಂದರಂತೆ ಹರಾಜು ಹಾಕಿರುವ ಭ್ರಷ್ಟ ಅಧಿಕಾರಿಗಳು ಪಾಲಿಕೆ ಕಟ್ಟಡ-ಆಸ್ತಿಪಾಸ್ತಿಯನ್ನೇ ಅಡವಿಟ್ಟು ಗುಂಡಗಾಗುವುದರಲ್ಲಿ ಅನುಮಾನವೇ ಇಲ್ಲ..ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ.ಅದೇ ಸಾಂಪ್ರದಾಯಿಕ ದೀಪಗಳಿಗಿಂತ ವಿದ್ಯುತ್ ಮಿತವ್ಯಯಕ್ಕೆ ಸಹಕಾರಿಯಾಗುವ LED ದೀಪಗಳ ನಿರ್ವಹಣೆ ಕುರಿತಾಗಿ ಅಧಿಕಾರಿಗಳು ಕೊಟ್ಟಿರುವ 240 ಕೋಟಿ ಅಪರತಪರಾ ಲೆಕ್ಕದ  ಗೋಲ್ಮಾಲ್.

ಹೌದು,ಬಿಬಿಎಂಪಿ ಮಾನವನ್ನು ಮತ್ತೊಂದು ಮಹಾಪ್ರಮಾದದಿಂದ ಭ್ರಷ್ಟ ಅಧಿಕಾರಿಗಳು ಹರಾಜಾಕಿದ್ದಾರೆ.ನಿಮ್ಗೆ ಗೊತ್ತಾ, ಬಿಬಿಎಂಪಿಯ ಕೆಲ ನಾಲಾಯಕ್ ಅಧಿಕಾರಿಸಿಬ್ಬಂದಿಗೆ  ಬೀದಿ ದೀಪಗಳ ವಾರ್ಷಿಕ ನಿರ್ವಹಣೆಗೆ ತಗಲುತ್ತಿರುವ ವಿದ್ಯುತ್ ವೆಚ್ಚ ಎಷ್ಟೆನ್ನುವ ಮಾಹಿತಿಯು ಇಲ್ಲ..ಹೀಗಿರುವಾಗ ಇಷ್ಟ್ ವರ್ಷ ಹೇಗೆ ಅದರ ಲೆಕ್ಕ ರೆಡಿಯಾಗ್ತಿತ್ತು.ಎಷ್ಟು ಬಿಲ್ ಪಾವತಿಯಾಗ್ತುತ್ತು ಎನ್ನುವುದನ್ನು ಸಲೀಸಾಗಿ ಅರ್ಥ ಮಾಡಿಕೊಳ್ಳಬಹುದು.

ಪಾಲಿಕೆ ವ್ಯಾಪ್ತಿಯಲ್ಲಿ ಈವರೆಗೆ ಅಳವಡಿಸಿರುವ  ಬೀದಿದೀಪಗಳು ಬಾಳಿಕೆ,ಗುಣಮಟ್ಟ ಹಾಗೂ ವಿದ್ಯುತ್ ಉಳಿತಾಯದ ದೃಷ್ಟಿಯಿಂದ ದುಬಾರಿ ಹಾಗೂ ಹೊರೆಯಾಗುತ್ತಿದೆ ಎನ್ನುವ ಆರೋಪ ಮೊದಲಿಂದ್ಲೂ ಇದೆ.ಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ ಲಕ್ಷಾಂತರ  ಬೀದಿದೀಪಗಳ ನಿರ್ವಹಣೆಗೆ ಸಂಬಂಧಿಸಿದ ಲೆಕ್ಕವನ್ನೂ ಸರಿಯಾಗಿ ನಿಭಾಯಿಸುತ್ತಿಲ್ಲ ಎನ್ನುವ ಗಂಭೀರ ಆಪಾದನೆ ಅಧಿಕಾರಿಗಳ ಮೇಲಿತ್ತು.ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವ ಕಾರಣಕ್ಕೆ LED ದೀಪಗಳ ಅಳವಡಿಕೆ ಸೂಕ್ತ ಎನ್ನುವ ನಿರ್ದಾರಕ್ಕೆ ಬಂದಿತ್ತು ಬಿಬಿಎಂಪಿ.

ಈ ಹಿನ್ನಲೆಯಲ್ಲಿ ಕರೆಯಲಾದ  ಟೆಂಡರ್ ನಲ್ಲಿ ಪಾಲ್ಗೊಂಡ ಸಮುದ್ರ ಎಲೆಕ್ಟ್ರಾನಿಕ್ಸ್ ಸಂಸ್ಥೆ ಅಳವಡಿಸಲು ಹೊರಟಿರುವ 4ವರೆ ಲಕ್ಷದಷ್ಟು ವಿದ್ಯುತ್ ದೀಪಗಳ ವಾರ್ಷಿಕ ಬಿಲ್ ಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಪಡೆಯದೆ ಇದ್ದಕ್ಕಿದ್ದಂತೆ 240 ಕೋಟಿ ಆಗಬಹುದೆನ್ನುವ ಅಂಶವನ್ನು ಟೆಂಡರ್  ಪೂರ್ವಭಾವಿ ಸಭೆಯಲ್ಲಿ ವಿದ್ಯುತ್ ಪೂರ್ವ ವಲಯದ ಅಧಿಕಾರಿಗಳು ಮಂಡಿಸಿದ್ದರು ಎನ್ನುತ್ತಾರೆ ಹಗರಣ ನಡೆದಿರುವುದನ್ನು ಸಾಕ್ಷ್ಯ ಸಮೇತ ಹೆಕ್ಕಿ ತೆಗೆದಿರುವ ಕರ್ನಾಟಕ ರಾಷ್ಟ್ರಸಮಿತಿ ಅಧ್ಯಕ್ಷ ಹಾಗೂ ಸಾಮಾಜಿ ಕಾರ್ಯಕರ್ತ ರವಿಕೃಷ್ಣಾರೆಡ್ಡಿ.

ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಶಾರ್ಪೊಂಜಿ ಪಲ್ಲೊಂಜಿ,ಎಸ್ ಎಂಎಸ್ ಇನ್ಪ್ರಾಸ್ಟ್ರಕ್ಚರ್ ಮತ್ತು ಸಮುದ್ರ ಎಲೆಕ್ಟ್ರಾನಿಕ್ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್ ಗಳ ಒಕ್ಕೂಟ ಸಂಸ್ಥೆ(ESCO), ತಾನು ಅಳವಡಿಸಲಿರುವ 4ವರೆ ಲಕ್ಷದ ಬೀದಿ ದೀಪಗಳು ಹಾಗೂ ಅದ ಸಂಬಂಧಿಸಿದ ಮಾಹಿತಿಯನ್ನೇ ಉಲ್ಲೇಖಿಸಿರಲಿಲ್ಲ.ಐಎಫ್ ಸಿ ಎನ್ನುವ ಸಂಸ್ಥೆ ಟೆಂಡರ್ ಪ್ರಕ್ರಿಯೆ ಕೈಗೊಂಡಿದ್ದ ಸಭೆ 18-06-2020ರಂದು ನಡೆದಿತ್ತು.ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸಿದ್ದ  ಮೇಯರ್ ಗೌತಮ್ ಕುಮಾರ್,  ಮಾಹಿತಿ ಮುಚ್ಚಿಟ್ಟಿದ್ದರೂ,ಎಸ್ಕೋ ಸಂಸ್ಥೆ ಪರವಾಗಿ ನಿಂತು  ಟೆಂಡರ್ ಪ್ರಕ್ರಿಯೆ ಕೈಗೊಂಡಿದ್ದ  IFC ಸಂಸ್ಥೆಯನ್ನು ಬ್ಲಾಕ್ ಲೀಸ್ಟ್ ಗೆ ಸೇರಿಸುವಂತೆಯು ತಿಳಿಸಿದ್ದರಂತೆ.

ಕರ್ನಾಟಕ ರಾಷ್ಟ್ರಸಮಿತಿ ಅಧ್ಯಕ್ಷ ಹಾಗೂ ಸಾಮಾಜಿ ಕಾರ್ಯಕರ್ತ ರವಿಕೃಷ್ಣಾರೆಡ್ಡಿ.
ಕರ್ನಾಟಕ ರಾಷ್ಟ್ರಸಮಿತಿ ಅಧ್ಯಕ್ಷ ಹಾಗೂ ಸಾಮಾಜಿ ಕಾರ್ಯಕರ್ತ ರವಿಕೃಷ್ಣಾರೆಡ್ಡಿ.

ಬೇರೆ ರಾಜ್ಯದ ನಗರಗಳಲ್ಲಿ ಎಲ್ ಇಡಿ ದೀಪಗಳಿಂದ ವಿದ್ಯುತ್ ಉಳಿತಾಯದ ಪ್ರಮಾಣ ಶೇಕಡಾ 60-70ರಷ್ಟಿರುವಾಗ   ಶೇಕಡಾ 85.50 ರಷ್ಟು ವಿದ್ಯುತ್ ಉಳಿತಾಯ ಮಾಡುತ್ತೇನೆಂದು ಮುಂದೆ ಬಂದ ಸಂಸ್ಥೆಯಿಂದ ಅದಕ್ಕೆ ಪೂರಕವಾಗಿ ಯಾವುದೇ ಪ್ರಮಾಣ ಪತ್ರವನ್ನು ಅದಿಕಾರಿಗಳು ಪಡೆದೇ ಇರಲಿಲ್ಲ.ಅಲ್ಲದೇ ಸಂಸ್ಥೆ ಹೇಳಿದ್ದಂತೆ ಪುಣೆ,ಭಾರಾಮತಿಯಲ್ಲಿ ತನ್ನ ಶಾಖಾ ಕಚೇರಿ ಹಾಗೂ ಸಿಬ್ಬಂದಿ ಹೊಂದಿರುವುದಕ್ಕೂ ಸಮುದ್ರ ಎಲೆಕ್ಟ್ರಾನಿಕ್ಸ್ ಸಂಸ್ಥೆ ಪುರಾವೆ ಒದಗಿಸಿರಲಿಲ್ಲ ಎನ್ನುತ್ತಾರೆ ರವಿಕೃಷ್ಣಾರೆಡ್ಡಿ.

ನಿಯಮಬಾಹೀರವಾಗಿ LED ದೀಪ ಅಳವಡಿಸುವ ವಿಚಾರದಲ್ಲಿ ಸೀಮನ್ಸ್ ಸಂಸ್ಥೆಯೊಂದಿಗೂ ಒಪ್ಪಂದ ಮಾಡಿಕೊಳ್ಳಲಾಗಿತ್ತು.ಹಾಗೆಯೇ ವಿದ್ಯುತ್ ದೀಪಗಳ ಉತ್ಪಾದನಾ ಘಟಕದ ಸ್ಥಳಪರಿಶೀಲನೆಯೂ ನಡೆದಿರಲಿಲ್ಲ.ಇದೆಲ್ಲಕ್ಕೂ ಪಾಲಿಕೆಯ ಅಧಿಕಾರಿಗಳೇ ಸಹಕರಿಸಿದ್ದರೆನ್ನುವುದನ್ನು ಅಂದೇ ಮೇಯರ್ ಗೌತಮ್ ಕುಮಾರ್ ಬಹಿರಂಗಪಡಿಸಿದ್ದರು.

ಸಮುದ್ರ ಎಲೆಕ್ಟ್ರಾನಿಕ್ಸ್ ಸಂಸ್ಥೆಗೆ ಭಾರೀ ಲಾಭ ಮಾಡಿಕೊಡುವ ಏಕೈಕ ಉದ್ದೇಶಕ್ಕೆ ಯಾವುದೇ ದೃಢೀಕರಣ ಪ್ರಮಾಣ ಪತ್ರ ಪಡೆಯದೆ 240 ಕೋಟಿ ರೂಗಳ ಅಂದಾಜು ಬಿಲ್ ನ ಕಡತಗಳನ್ನು ಸಿದ್ಧಪಡಿಸಿದ್ದರ ಹಿಂದೆ  ಬಿಬಿಎಂಪಿ ಪೂರ್ವ ವಲಯ ವಿದ್ಯುತ್ ವಿಭಾಗದ ಕಾರ್ಯಪಾಲಕ ಅಭಿಯಂತರರ 420 ಟೀಮ್ ನ ಕೈವಾಡ ಮೇಲ್ನೋಟಕ್ಕೆ ಸಾಬೀತಾಗಿದೆ.   

Spread the love
Leave A Reply

Your email address will not be published.

Flash News