ಡ್ರಗ್ಸ್ ಗಲಾಟೆ ನಡುವೆ “ಹೀರೋ” ಹರ್ಷವರ್ಧನ್ ಮದ್ಯ ರಂಪಾಟ..ಪೊಲೀಸ್ ಜೊತೆ “ಖಳ”ನಟನ ಕಿರಿಕ್..!

0

ಬೆಂಗಳೂರು:ನಿರ್ದೇಶಕ ಹಾಗು ಪತ್ರಕರ್ತ ಇಂದ್ರಜಿತ್ ಲಂಕೇಶ್ ಡ್ರಗ್ಸ್ ಹಾಗೂ ಗಾಂಜಾ ಮಾಫಿಯಾಗಳಿಗೆ ಕೊಟ್ಟ ಸ್ಫೋಟಕ ಹೇಳಿಕೆ ಇದೀಗ ನಿಜವಾಗುತ್ತಿದೆ.ಕೇವಲ ಡ್ರಗ್ಸ್ ಮಾತ್ರ ನಶೆಯ ಮತ್ತಿನಲ್ಲಿ ಕಿರಿಕ್ ಮಾಡಿಕೊಳ್ತಿರುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ.ಅಂತದ್ದೇ ಒಂದು ಕಿರಿಕ್ ಕಾರಣಕ್ಕೆ ಸುದ್ದಿಯಾಗಿದ್ದಾರೆ. ರಾಜಾಹುಲಿ,ವರ್ಧನ,ಗಜಪಡೆ ಚಿತ್ರಗಳ ನಟ ಹರ್ಷ ಅಲಿಯಾಸ್ ವರ್ಧನ ಉರುಫ್ ಹರ್ಷವರ್ಧನ…

ಬೆರಳೆಣಿಕೆಯ ಚಿತ್ರಗಳಲ್ಲಿ ನಟಿಸಿ ಗಾಂಧಿನಗರದಲ್ಲಿ ತಲೆ ಎತ್ತುವ ಮುನ್ನವೇ ತಲೆ ತಿರುಗಿ ಮತಿಗೆಟ್ಟು ಕುಡಿದು ಚಿತ್ತಾಗಿ ಪೊಲೀಸ್, ಪಬ್ಲಿಕ್ ಎಂಬ ಪ್ರಜ್ಞೆ ಇರದೆ ನಶೆಯಲ್ಲಿ ಕಿರಿಕ್ ಮಾಡಿಕೊಂಡು ಪೊಲೀಸ್ ಠಾಣೆಯಲ್ಲಿ ದಿನ ಕಳೆಯುವಂತೆ ಮಾಡಿಕೊಳ್ಳುವ ಮೂಲಕ ಚಿತ್ರರಂಗಕ್ಕೆ ಮುಜುಗರ ಉಂಟುಮಾಡಿದ್ದಾರೆನ್ನಲಾಗ್ತಿದೆ.

ತುಮಕೂರು ರಸ್ತೆ ಹೊರವಲಯದ ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಹರ್ಷ ಅಂಡ್ ಫ್ರೆಂಡ್ಸ್ ಸಖತ್ತಾಗಿ ಕುಡಿದು ಚಿತ್ತಾಗಿದ್ದಾರೆ. ಮಧ್ಯರಾತ್ರಿಯಲ್ಲಿ ಇವರ ಗದ್ದಲ ಕೇಳಿ ನೈಟ್ ಗಸ್ತು ಪೊಲೀಸರು ಬುದ್ದಿ ಹೇಳಿದ್ದಾರೆ. ಕುಡಿದು ಮತಿಗೆಟ್ಟ ಹರ್ಷ ಅಂಡ್ ಫ್ರೆಂಡ್ಸ್ ಪೊಲೀಸರ ಮೇಲೆಯೇ ತಿರುಗಿಬಿದಿದ್ದಾರೆ. ಪರಿಣಾಮ ಲಾಠಿ ಏಟು ಕುಂಡಿಗೆ ಕೊಟ್ಟು ಎತ್ತಾಕೊಂಡು ಹೋಗಿ ಠಾಣೆಯಲ್ಲಿ ತುಂಬಿದ್ದಾರೆ.ಮತ್ತು ಇಳಿದ ನಂತರ ಪೊಲೀಸರೇ ಬುದ್ದಿ ಹೇಳಿ ಉಗಿದು ಉಪ್ಪಿನ ಕಾಯಿ ಹಾಕಿ ಮನೆಗೆ ಕಳುಹಿಸಿ ತಮ್ಮ ಸಾಮಾಜಿಕ ಬದ್ದತೆ ಮೆರೆದಿದ್ದಾರೆ.

ರಾಜಾಹುಲಿ,ಗಜಪಡೆ, ವರ್ಧನದಂಥ  ಚಿತ್ರಗಳಲ್ಲಿ ನಟಿಸಿ ಮೂರು ಆರಕ್ಕೇರದೆ ಮೂರಕ್ಕಳಿಯದೆ ತಿಣುಕಾಡುತ್ತಿರುವ ಹರ್ಷನಿಗೆ ಸಧ್ಯಕ್ಕೆ ಚಿತ್ರಗಳಲ್ಲಿ ಅವಕಾಶವೂ ಇಲ್ಲ.. ಜೊತೆಗೆ ಮಾಡಿದ ಒಂದಷ್ಟು ಚಿತ್ರಗಳಿಂದ ಸಿಕ್ಕ ಅಲ್ಪಸ್ವಲ್ಪ ಜನಪ್ರಿಯತೆಯಿಂದ ತಲೆಯೂ ನಿಲ್ಲುತ್ತಿಲ್ಲ. ಪರಿಣಾಮವೇ ಈ ಘಟನೆ..

ಈ ಘಟನೆ ಚಿತ್ರರಂಗದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಹರ್ಷ ಆ ರೀತಿ ಮಾಡಿರಲು ಸಾಧ್ಯವಿಲ್ಲ.ಸ್ವಭಾವತಃ ಒಳ್ಳೆಯ ಹುಡುಗ,ನಮ್ಮ ಚಿತ್ರ ಗಜಪಡೆಯಲ್ಲಿ ಕೆಲಸ ಮಾಡುವಾಗ ಆತನ ಡೀಸೆಂಟ್ ನೆಸ್ ನಮಗೆ ಇಷ್ಟವಾಗಿತ್ತು.ಡೆಡಿಕೇಷನ್ ನಿಂದ್ಲೇ ಕೆಲಸ ಮಾಡುತ್ತಿದ್ದ.ಚಿತ್ರ ಮುಗಿದ ಮೇಲೂ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದ.ಆತ ಈ ರೀತಿ ರಂಪಾಟ ಮಾಡಿಕೊಂಡಿದ್ದಾನೆಂದು ತಿಳಿದು ಆತಂಕವಾಗಿದೆ ಎನ್ನುತ್ತಾರೆ ಗಜಪಡೆ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ರಾಘವೇಂದ್ರ(ಕುಂಚಿ).

ಅದೇನೇ ಇರಲಿ,ಡ್ರಗ್ಸ್  ದಂಧೆಯಲ್ಲಿ ಸಿಕ್ಕಿ ಬಿದ್ದು ಕಣ್ಣೀರ ಕೋಡಿ ಹರಿಸಿ ಕಸ್ಟಡಿಯಲ್ಲಿ ಗೋಣು ಮಡಿಚಿ ಸಿಸಿಬಿ ತೆಕ್ಕೆಯ ನರಳಾಟದ ಅಮಲಿನಲ್ಲಿರುವ ರಾಗಿಣಿಯ ಕಥೆ  ಹರ್ಷನಿಗೆ ತಿಳಿದಿಲ್ಲವೇ..? ಏನೇ ಮಾಡಿದ್ರೂ ಈ ಸಂದರ್ಭದಲ್ಲಿ ಡ್ರಗ್ಸ್ ಶಂಕೆ ಎನ್ನುವ ಕಾರಣಕ್ಕೆ ಪೊಲೀಸ್ರು ಚೆನ್ನಾಗಿ ತುಂಬ್ತಾರೆ.ಅನುಮಾನ ಬಂದ್ರೆ ಎತ್ತಾಕಂಡು ಹೋಗಿ ಏರೋಪ್ಲೇನ್ ಏರಿಸ್ಬೋದು ಎನ್ನುವ ಸಣ್ಣ ಕಾಮನ್ ಸೆನ್ಸೂ ಇಲ್ಲದಂತೆ ಇಂಗು ತಿಂದ ಮಂಗನಂತೆ ರಂಪಾಟ ಮಾಡಿಕೊಂಡಿರುವುದನ್ನು ನೋಡಿದ್ರೆ ಹರ್ಷ,ಅರ್ಧ ಬೆಂದ ಮಡಿಕೆ, ಅರ್ಧ ಸುಟ್ಟ ಇಟ್ಟಿಗೆ, ಅಂತೆನ್ನದೇ ವಿಧಿಯಿಲ್ಲ. 

Spread the love
Leave A Reply

Your email address will not be published.

Flash News