“ನಾನೇಕೆ ಪಕ್ಷಾಂತರ ಮಾಡಿದೆ ಗೊತ್ತಾ.” ಪಕ್ಷಾಂತರದ ಒಳಗುಟ್ಟು ಬಿಚ್ಚಿಟ್ಟ ಹೊಸಪೇಟೆ ಸಾಹುಕಾರ್ ಸಚಿವ ಆನಂದ್ ಸಿಂಗ್

0

ಹೊಸಪೇಟೆ:  ಅರಣ್ಯ ಸಚಿವ ಆನಂದ್ ಸಿಂಗ್ ತಮ್ಮ ಪಕ್ಷಾಂತರದ ಒಳಗುಟ್ಟನ್ನು ಬಹಿರಂಗಗೊಳಿಸಿದ್ದಾರೆ. ಚುನಾವಣೆ ರಣತಂತ್ರ ರೂಪಿಸುವ ಸಲುವಾಗಿ ಈ ಹಿಂದೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೆ ಎಂದು ಹೇಳಿದ್ದಾರೆ.

ಹೊಸಪೇಟೆ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷ ಬಿಟ್ಟು ಹೋಗಿ ಬಂದವರು ಅಂತ ಯಾರು ಏನೆ ಆಂದ್ರು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ನಾನು ಈ ಹಿಂದೆ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗಿ ಬಂದ ಉದ್ದೇಶ ಚುನಾವಣೆ ರಣತಂತ್ರ ರೂಪಿಸಲು…ಎದುರಾಳಿಗಳ ಕೋಟೆ ಒಳಗೆ ಹೋದರೆ ತಾನೆ ವಿರೋಧಿಗಳ ವೀಕ್ನೆಸ್ ಗೊತ್ತಾಗುತ್ತೆ

ನಮ್ಮ ಎದುರಾಳಿಗಳ ಒಳ ಗುಟ್ಟು ಏನೆಂಬುದು ನಮಗೆ ಗೊತ್ತಾದರೆ ನಾನು ಈಗಿರುವ ಪಕ್ಷದಲ್ಲಿ ಸಂಘಟನೆಮಾಡಲು ಸಹಾಯವಾಗುತ್ತೆ ಎಂದರು. ಆನಂದ್ ಸಿಂಗ್ ಅವರ ಈ ಮಾತು ಹಲವು ಆಯಾಮಗಳಲ್ಲಿ ಚರ್ಚೆಗೆ ಈಡಾಗುತ್ತಿದ್ದು, ಎದುರಾಳಿಗಳ ಸ್ನೇಹ ಬೆಳಸಿ ಎದುರಾಳಿಗಳನ್ನೇ ರಾಜಕೀಯವಾಗಿ ಮುಗಿಸಿದರಾ ಆನಂದ್ ಸಿಂಗ್ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.  

Spread the love
Leave A Reply

Your email address will not be published.

Flash News