ವ್ಯಾಪಾರಿಯ ಮರ್ಡರ್ ಮಿಸ್ಟರಿ ಬೇಧಿಸಿದ ಶಿಡ್ಲಘಟ್ಟ ಸೂಪರ್ ಕಾಪ್ಸ್

0

ಚಿಕ್ಕಬಳ್ಳಾಪುರ:ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಪೊಲೀಸರು ವ್ಯಾಪಾರಿಯ ಕೊಲೆಗಾರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಂಗಮಕೋಟೆ ಬಳಿ ಕಳೆದ ಆಗಸ್ಟ್ 27 ರಂದು ನಿರಂಜನ್ ಮೂರ್ತಿ  ಎಂಬುವರನ್ನ  ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ನವೀನ್  ಎಂಬ ಆರೋಪಿಯನ್ನ ಖಾಕಿ ಪಡೆ ಬಂಧಿಸಿದೆ.

ಹಳೇ ವಾಹನಗಳನ್ನು ಮಾರಾಟ ಮಾಡುತ್ತಿದ್ದ ನವೀನ್ ಬಳಿ ಐದು ತಿಂಗಳ ಹಿಂದೆ ನಿರಂಜನ್ ಮೂರ್ತಿ 2.80 ಲಕ್ಷ   ರೂಗಳಿಗೆ ಓಮಿನಿ ಕಾರನ್ನು ಖರೀದಿಸಿದ್ದರು. ಆದರೆ ಕಾರಿನ ಹಣದ ವಿಚಾರವಾಗಿ ಇಬ್ಬರ ನಡುವೆ ಸಾಕಷ್ಟು ಬಾರಿ ಜಗಳ ನಡೆದಿತ್ತು.

ಆಗಸ್ಟ್ 27 ರಂದು  ಕೂಡ ಹಣದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದು ಮಾತಿಗೆ ಮಾತು ಬೆಳೆದಿತ್ತು.ಅಂತಿಮವಾಗಿ ನವೀನ್, ನಿರಂಜನ್ ಮೂರ್ತಿ ಅವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಬಳಿಕ ರಸ್ತೆ ಪಕ್ಕದಲ್ಲಿ ಹೆಣವನ್ನು ಬಿಸಾಡಿ ಪರಾರಿಯಾಗಿದ್ದ ಎಂಬುದು ಆತನ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.ಶಿಡ್ಲಘಟ್ಟ ವೃತ್ತ ನಿರೀಕ್ಷಕ ಸುರೇಶ್,  ಗ್ರಾಮಾಂತರ ಠಾಣೆಯ ಪಿ ಎಸ್ ಐ.ಲಿಯಾಖತ್ ಉಲ್ಲಾ ಸಿಬ್ಬಂದಿ ನೇತೃತ್ವದಲ್ಲಿ ನಿಯೋಜಿಸಿದ್ದ ತಂಡ ಈ ಕೊಲೆ ಪ್ರಕರಣ ಭೇದಿಸಿದ್ದು, ಆರೋಪಿ ನವೀನ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ.

Spread the love
Leave A Reply

Your email address will not be published.

Flash News