CORONA VIRUSKANNADAFLASHNEWSFIGHTAGAINSTCORONAMoreTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆ

ಡ್ರಗ್ಸ್ ಮಾಫಿಯಾ:ರಾಜ್ಯಾದ್ಯಂತ ಕಾರ್ಯಾಚರಣೆ ತುಮಕೂರು-ಚಿಕ್ಕಾಬಳ್ಳಾಪುರದಲ್ಲಿ ಪೊಲೀಸರ ಭರ್ಜರಿ ಬೇಟೆ:ಲಕ್ಷಾಂತರ ಗಾಂಜಾ ವಶ.

ತುಮಕೂರು/ಚಿಕ್ಕಾಬಳ್ಳಾಪುರ:ಸ್ಯಾಂಡಲ್‌ವುಡ್ ನಲ್ಲಿ ಡ್ರಗ್ಸ್ ದಂಧೆ ವಿಚಾರವಾಗಿ ನಟಿಯರಾದ ರಾಗಿಣಿ, ಸಂಜನಾ ಬಂಧನವಾದ ಬೆನ್ನಲ್ಲೆ ರಾಜ್ಯದ್ಯಂತ ಪೊಲೀಸರು ಡಗ್ಸ್ ವಿಚಾರದಲ್ಲಿ ಹೈಅಲರ್ಟ್ ಆಗಿದ್ದಾರೆ.

ಎಲ್ಲಾ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಡ್ರಗ್ಸ್ ಚಟುವಟಿಕೆ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ಪ್ರತಿದಿನ ಭರ್ಜರಿ ಬೇಟೆಯಾಡುತ್ತಿದ್ದಾರೆ. ಶೈಕ್ಷಣಿಕ ನಗರಿ ಎಂದೇ ಖ್ಯಾತಿಗಳಿಸಿರುವ ತುಮಕೂರಿನಲ್ಲಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ಹಲವೆಡೆ ಪೊಲೀಸರು ದಾಳಿ ನಡೆಸಿ ಎಂಟು ಮಂದಿಯನ್ನ ಬಂಧಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ, ಅಫೀಮು ಜಪ್ತಿಮಾಡಿದ್ದಾರೆ.

ತುಮಕೂರು ನಗರದ ಬಿ.ಜಿ.ಪಾಳ್ಯ ವೃತ್ತ ಹಾಗೂ ಸಂತೇ ಪೇಟೆ ಮಾಗ್ರದ ರಸ್ತೆಯಲ್ಲಿನ ಅಭಯ ಆಂಜನೇಯ ದೇವಾಲಯದ ಪಕ್ಕದ ಮನೆಯಲ್ಲಿ ಅಫೀಮು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ನಗರ ವೃತ್ತ ನಿರೀಕ್ಷಕ ನವೀನ್ ಬಿ ಹಾಗೂ ಸಬ್ ಇನ್ಸ್ ಪೆಕ್ಟರ್ ಬಿ.ಸಿ. ಮಂಜುನಾಥ್ ದಾಳಿ ಮಾಡಿ ರಾಜಸ್ಥಾನ ಮೂಲದ  ರಾಜುರಾಮ್ ಹಾಗೂ ನರಸಿ ರಾಮ್ ಎಂಬುವರನ್ನ ಬಂಧಿಸಿದ್ದಾರೆ. ಬಂಧಿತರಿಂದ ಮೂರು ಲಕ್ಷ ಮೌಲ್ಯದ ಅಫೀಮನ್ನು ವಶ ಪಡಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಸಿಇಎನ್ ಪೋಲಿಸರು ದಾಳಿ ನಡೆಸಿ ಗಾಂಜಾ ಸಾಗಾಣಿಕೆಯಲ್ಲಿ ತೊಡಗಿದ್ದ ೪ ಆರೋಪಿಗಳನ್ನು ಬಂಧಿಸಿದ್ದಾರೆ. ತುಮಕೂರು ನಗರ ವಾಸಿಗಳಾದ ಜಿ. ಮಂಜುನಾಥ್, ಮುನಿರಾಜು, ಕೊರಟಗೆರೆ ವಾಸಿಗಳಾದ ಚಿನ್ನರಾಮಾಂಜಿ ಹಾಗೂ ಸೀತಾರಾಮಯ್ಯ ಬಂಧಿತ ಆರೋಪಿಗಳು.

ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಗಂಜಲಗುಂಟೆ ಗ್ರಾಮದ ಮಾರಪ್ಪ ಎಂಬಾತನಿಂದ ಗಾಂಜಾ ಸೊಪ್ಪು ಖರೀದಿಸಿ ಕೊರಟಗೆರೆ ತಾಲ್ಲೂಕು ಜಂಪೇನಹಳ್ಳಿ ಕ್ರಾಸ್ ನ ಮಾರುತಿ ಡಾಬಾ ಹಾಗೂ ಹನುಮಂತಗಿರಿ ಗ್ರಾಮದ ತಿಗಳರ ಸಮುದಾಯ ಭವನದ ಮುಂಭಾಗದಲ್ಲಿ ಅಕ್ರಮವಾಗಿ ಗಾಂಜಾ ಸೊಪ್ಪನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಬಂಧಿತರಿಂದ ಎರಡೂ ವರೆ ಕೆ.ಜಿ ಗಾಂಜಾ ಸೊಪ್ಪನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇನ್ನೂ ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲೂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 10  ಲಕ್ಷ ಮೌಲ್ಯದ 32  ಕೆ.ಜಿ ಗಾಂಜಾವನ್ನು ಜಪ್ತಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಆಂದ್ರಪ್ರದೇಶ ಮೂಲದ ವೆಂಕಟರವಣಪ್ಪ   ಹಾಗೂ ಶಿಡ್ಲಘಟ್ಟದ ಶಾಬಾಜ್ ಬಿನ್ ಹಯಾತ್ ಪಾಷಾ ಬಂಧಿತ ಆರೋಪಿಗಳಾಗಿದ್ದು, ಇವರು ಅಕ್ರಮವಾಗಿ ಕಾರಿನ ಹಿಂಬದಿ ಸೀಟ್ ನಲ್ಲಿ ಮೂರು ಬ್ಯಾಗ್ ಗಳಲ್ಲಿ ಗಾಂಜಾ ಸಾಗಿಸುತ್ತಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News