CORONA VIRUSKANNADAFLASHNEWSFIGHTAGAINSTCORONAMoreTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆರಾಜಕೀಯರಾಜ್ಯ-ರಾಜಧಾನಿಸಿನೆಮಾ ಹಂಗಾಮ

ಸಂಜನಾ ಬಾಯ್ಬಿಟ್ಟ ಆ “ಕೈ” MLA ಇವರೇನಾ..?! ಪ್ರೂವ್ ಆದ್ರೆ ಅಂದರ್ ಆಗೋದ್ರಲ್ಲಿ ಡೌಟೇ ಇಲ್ಲ..

  ಬೆಂಗಳೂರು:ಡ್ರಗ್ ಜಾಲದ ಒಳಸುಳಿಗಳು ಒಂದೊಂದಾಗೇ ಬಯಲಾಗ್ತಿವೆ.ಸಿಸಿಬಿ ಡ್ರಿಲ್-ಗ್ರಿಲ್ ಗೆ ರಾಗಿಣಿ-ಸಂಜನಾ ಎಲ್ಲವನ್ನು ಕಕ್ಕಿದ್ದಾರೆ.ಅವರಿಬ್ಬರ ಹೇಳಿಕೆಗಳು ಡ್ರಗ್ಸ್ ಜೊತೆ ಲಿಂಕ್ ಹೊಂದಿರುವ ಸೆಲೆಬ್ರಿಟಿಸ್-ಪೊಲಿಟಿಷಿನ್ಸ್ ಗಳ ಬಂಡವಾಳ ಹೊರಗಾಕಿದೆ.ಅದರಲ್ಲೂ ಸಂಜನಾ ಬಾಯ್ಬಿಟ್ಟ ಆ ರಾಜಕಾರಣಿಯ ಹೆಸರು,ರಾಜಕೀಯ ವಲಯದಲ್ಲಿ ನಡುಕವನ್ನುಂಟುಮಾಡಿದೆ.ಎಲ್ಲಾ ನಿರೀಕ್ಷೆಯಂತಾದ್ರೆ ಆ ಕೈ ನಾಯಕನೇ ಅಂದರ್ ಆಗೋದು ಗ್ಯಾರಂಟಿ.

ಸಿಸಿಬಿ,ಡ್ರಗ್ಸ್ ಜಾಲದ ಮೂಲ ಬೇರು ಹುಡುಕುತ್ತಾ ಹೋದಂತೆಲ್ಲಾ ದೊಡ್ಡ ದೊಡ್ಡ ಮಿಕಗಳೇ ಬಲೆಗೆ ಬೀಳ್ತಿವೆ. ರಾಗಿಣಿ, ಸಂಜನಾಳಂತ ಸೆಲೆಬ್ರಿಟಿಸ್.. ಕಾಪೋರೇಟರ್ ಕೇಶವಮೂರ್ತಿ ಮಗ ಯಶಸ್, ಲಕ್ಷ್ಮೀ ಕಬ್ಬಾಳ್ ಗಂಡ ಉಮೇಶ್ ಕಬ್ಬಾಳ್..ಹೀಗೆ ಹಲವರ ಅಸಲೀಯತ್ತು ಈಗಾಗಲೇ ಬಯಲಾಗಿದೆ.ಅದರ ಬೆನ್ನಲ್ಲೇ ಮತ್ತೋರ್ವ ಕೈ ನಾಯಕನ ಹೆಸರನ್ನು ಖುದ್ದು ಸಂಜನಾಳೇ ಬಾಯ್ಬಿಟ್ಟಿದ್ದಾಳೆ.

ಸದ್ಯದ ಮಟ್ಟಿಗೆ ಆಡಳಿತ,ವಿರೋಧ ಪಕ್ಷಗಳು ಏನೇ ನಸಗುನ್ನಿ ಆಟ ಆಡಿದರೂ ತಪ್ಪಿತಸ್ಥರು ಹಾಗೂ ದಾಖಲೆ ಸಮೇತ ಸಿಕ್ಕಿ ಬಿದ್ದವರು ಕಂಬಿ ಎಣಿಸಲೇ ಬೇಕು..ಇದೀಗ ಪತ್ರಿಕೆಗಳಿಗೆ ಸಿಗುತ್ತಿರುವ ಸ್ಫೋಟಕ ಮಾಹಿತಿ ಪ್ರಕಾರ ಆ ಪ್ರಭಾವಿ “ಕೈ” ಶಾಸಕ ಕೂಡ ಕಂಬಿ ಎಣಿಸುವ ಸಾಧ್ಯತೆ ದಟ್ಟವಾಗಿದೆ.

ಸದಾ ಕಾಂಟ್ರವರ್ಸಿ ಬಯಸುವ, ಪ್ರಚಾರದ ಗುಂಗಿನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಬೆನ್ನು ತಟ್ಟಿಕೊಳ್ಳುವ ಈ ಶಾಸಕನ ಆಪ್ತ ಬಳಗ ಶ್ರೀಲಂಕಾ ಕೇಸಿನೋದಲ್ಲಿ ಲಲನೆಯರ ಜೊತೆ ನಂಗಾನಾಚ್, ಎಣ್ಣೆ ಡ್ರಗ್ಸ್ ಪಾರ್ಟಿ, ಮದ್ಯ-ಮಾನಿನಿಯರ ಸರಸ ಹಾಗೂ ಕೋಟಿ ಕೋಟಿ ಜೂಜು-ಮೋಜು ಮಸ್ತಿಯಲ್ಲಿ ತೇಲಾಡುತ್ತಿರುವುದು  ಸ್ಫೋಟಕ ದಾಖಲೆಗಳಿಂದ್ಲೇ ಸ್ಪಷ್ಟವಾಗಿದೆ.  ಇದಕ್ಕೆಲ್ಲಾ ಕಿರೀಟವಿಟ್ಟಂತೆ ಈ ಪ್ರಭಾವಿ ನಾಯಕನ ಕೆಸಿನೋ ಸೆಂಟರ್ ಶ್ರೀಲಂಕಾದಲ್ಲಿ ಐಷಾರಾಮಿಯಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನೋ ಸುದ್ದಿ ಕೂಡ ಇದೆ.

ಇಲ್ಲಿ ಘಟಾನುಘಟಿಗಳು ಭಾಗವಹಿಸಿದ ಛಾಯಚಿತ್ರಗಳೇ ತನಿಖೆಗೆ ಎವಿಡೆನ್ಸ್(ಸಾಕ್ಷಿ)ಆಗಲಿದೆ.ಇದನ್ನೇ ಆಧಾರವಾಗಿಟ್ಟುಕೊಂಡು ಸಿಸಿಬಿ ಹೆಡೆಮುರಿಕಟ್ಟಲು ರೆಡಿಯಾಗಿದೆ.ಡ್ರಗ್ಸ್ ಸುಳಿಯಲ್ಲಿ ಸಿಕ್ಕಿ ಬಿದ್ದ ಪಾತಕಿಗಳ  ಜೊತೆ ವಿವೇಕ್ ಒಬೆರಾಯ್, ಅರ್ಬಾಜ್ ಖಾನ್, ಸೋನುಸೂದ್ ಹೀಗೆ ಸಾಲು ಸಾಲು ನಟರೇ ಮೋಜುಮಸ್ತಿ ಪಾರ್ಟಿಯಲ್ಲಿ ಮಜಾ ಮಾಡುತ್ತಾ ಕ್ಯಾಸಿನೋ ಅಲೆಯಲ್ಲಿ ತೇಲಾಡುತ್ತಾ ದಾಖಲೆಗಳ ಸಮೇತ ಸಿಕ್ಕಿಬಿದ್ದಿದ್ದಾರೆ.

ಸಂಜನಾ ಹೇಳಿದ ಹೆಸ್ರು ಜಮೀರ್ ದಾ..ಹೀಗೂ ಒಂದು ರೀತಿಯಲ್ಲಿ ಅಂದಾಜಿಸಲಾಗುತ್ತಿದೆ.ಏಕೆಂದ್ರೆ ಪ್ರಶಾಂತ್ ಸಂಬರಗಿ ಎನ್ನುವ ಸಾಮಾಜಿಕ ಕಾರ್ಯಕರ್ತ ತನ್ನ ಬಗ್ಗೆ ಮಾತನಾಡುವಾಗ ಜಮೀರ್ ಸಾರ್ ಪ್ಲೀಸ್ ನನ್ನನ್ನು ಬಚಾವ್ ಮಾಡಿ ಎನ್ನುವ ರೀತಿಯ ಹೇಳಿಕೆಯನ್ನು ಸಂಜನಾ ಕೊಟ್ಟಿದ್ದನ್ನು ಮಾದ್ಯಮಗಳೇ ವರದಿ ಮಾಡಿವೆ.ಅಲ್ಲದೇ ಜಮೀರ್ ನ ಆಪ್ತನೇ ಶ್ರೀಲಂಕಾದ ಕ್ಯಾಸಿನೋವನ್ನು ಮೆಂಟೇನ್ ಮಾಡ್ತಾ,ಹುಡುಗಿಯರೊಂದಿಗೆ ಫೋಟೋಗೆ ಫೋಸ್ ಕೊಟ್ಟಿರುವುದು ಕೂಡ ಈಗಾಗಲೇ ಬಯಲಾಗಿದೆ.

ಇದೆಲ್ಲವನ್ನು ನೋಡುವಾಗ ಸಂಜನಾ ಹೇಳಿದ ಆ ಕೈ ಶಾಸಕನ ಸುಳಿವು ಜಮೀರ್ ಅಹಮದ್ ರತ್ತ ಕೇಂದ್ರೀಕೃತವಾದಂತೆ ಕಾಣ್ತಿದೆ.ಜಮೀರ್ ಗೆ ಶ್ರೀಲಂಕಾದಲ್ಲಿ ಕ್ಯಾಸಿನೋ ಸ್ವಂತದ್ದೇ ಇದೆಯಾ.? ಅಥವಾ ಪಾಲುದಾರಿಕೆಯಲ್ಲಿ ನಡೆಸುತ್ತಿದ್ದಾರಾ..? ಅಥವಾ ಇತರರಂತೆ ಆಗಾಗ ಶ್ರೀಲಂಕಾಗೆ ಜೂಜಾಡಲಿಕ್ಕೇನೆ ತನ್ನ ಸ್ನೇಹಿತರೊಂದಿಗೆ ತೆರಳುತ್ತಿದ್ದರಾ..? ಗೊತ್ತಿಲ್ಲ.ಆದ್ರೆ ಕ್ಯಾಸಿನೋದಲ್ಲಿ ಜೂಜಾಡಿಸುವ ಭಂಟನೊಂದಿಗಿನ ಅವರ ತರೇವಾರಿ ಫೋಟೋಗಳನ್ನು ನೋಡಿದಾಗ ಆ ಕೈ ಶಾಸಕ ಜಮೀರೇ ಇರಬಹುದಾ ಎಂದೆನಿಸೋದಂತೂ ಸುಳ್ಳಲ್ಲ.

ಒಂದ್ವೇಳೆ ಆ ಕೈ ಶಾಸಕ ಜಮೀರ್ ಆಗಿದ್ದೇ ಆದಲ್ಲಿ,ಅವರನ್ನು ನಾಶ ಮಾಡ್ಲಿಕ್ಕಂತನೇ ಕಾದು ಕೂತಂತಿರುವ ಬಿಜೆಪಿ ಸರ್ಕಾರಕ್ಕೆ ಒಂದು ಪ್ರಮುಖ ಅಸ್ತ್ರ ಸಿಕ್ಕಂತಾಗೋದು ಗ್ಯಾರಂಟಿ.ಜಮೀರ್ ಅಸ್ತ್ರವನ್ನೇ ಇಟ್ಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ-ನಾಚಿಕೆ ಉಂಟುಮಾಡುವ ರೀತಿಯಲ್ಲಿ ಬಿಜೆಪಿ ನಾಯಕರು ಈ ಇಶ್ಯೂವನ್ನು ಬಳಸಿಕೊಳ್ಳೋ ಸಾಧ್ಯತೆಗಳಿವೆ.ಒಂದ್ವೇಳೆ ಇದೆಲ್ಲದರೊಂದಿಗೆ  ಜಮೀರ್ ಗೆ ಸಂಪರ್ಕ ಇರೋದೇ ಸತ್ಯವಾಗಿದ್ದಲ್ಲಿ,ಕೆಜಿ ಹಳ್ಳಿ-ಡಿಜೆ ಹಳ್ಳಿ ಘಟನೆಯಲ್ಲಿ ಪಕ್ಷವನ್ನು ತನ್ನ ವರ್ತನೆಯಿಂದ್ಲೇ ಮಾತನಾಡದಂತೆ ಕಟ್ಟಿ ಹಾಕಿದ ಜಮೀರ್ ಈ ಘಟನೆ ಮೂಲಕ ಮತ್ತೊಮ್ಮೆ ಪಕ್ಷದವರನ್ನು ಸೊಲ್ಲೆತ್ತದಷ್ಟು ಅಸಹಾಯಕರನ್ನಾಗಿ ಮಾಡೋದಂತೂ ಸತ್ಯ.

ಸಂಜನಾ ಬಾಯ್ಬಿಟ್ಟ ಆ “ಕೈ” MLA ಇವರೇನಾ..?! ಪ್ರೂವ್ ಆದ್ರೆ ಅಂದರ್ ಆಗೋದ್ರಲ್ಲಿ ಡೌಟೇ ಇಲ್ಲ..

https://www.youtube.com/watch?v=AhHMshfEJ4w

Spread the love

Related Articles

Leave a Reply

Your email address will not be published.

Back to top button
Flash News