CORONA VIRUSKANNADAFLASHNEWSFIGHTAGAINSTCORONAMoreTop NewsUncategorizedಆಹಾರ-ಆರೋಗ್ಯ-ಆಯುರ್ವೇದಜಿಲ್ಲೆಬೆಡಗು-ಬಿನ್ನಾಣಮಾಹಿತಿ/ತಂತ್ರಜ್ಞಾನವಿಚಿತ್ರ-ವಿಶೇಷ

‘ಅರ್ಜುನಾ’ ನಿಂಗೆ ವಯಸ್ಸಾಯ್ತೋ…‘ಅಭಿಮನ್ಯು’ ನಿಂಗೆ “ಪಟ್ಟ”ದ ಅದೃಷ್ಟ ಬಂತೋ..!-ಅರ್ಜುನನ “ಪರಾಕ್ರಮ”-ಅಭಿಮನ್ಯುವಿನ “ಗಾಂಭೀರ್ಯ” ನೋಡೋಕ್ಕೆ ಚೆಂದ.

ವಿಶೇಷ ವರದಿ:ಸುನೀಲ್ ಕುಮಾರ್

ಮೈಸೂರು: ಮೈಸೂರು ದಸರಾ ಅಂದ್ರೆ ಎಷ್ಟೊಂದು ಸುಂದರ ಅಲ್ವಾ….ಹೀಗಾಗಿಯೇ ದೇಶ ವಿದೇಶಗಳಿಂದ, ದೇಶದ ನಾನಾಭಾಗಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಸಾಂಸ್ಕೃತಿಕ ನಗರಿಯಲ್ಲಿ ಪ್ರತಿವರ್ಷ ಜರುಗುವ ದಸರಾ ಮಹೋತ್ಸವ ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಅದರಲ್ಲೂ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ನೋಡಲು ಎರಡು ಕಣ್ಣುಗಳು ಸಾಲೋದಿಲ್ಲ…750  ಕೆ.ಜಿ ತೂಕದ ಚಿನ್ನದ ಅಂಬಾರಿಯ ಒಳಗೆ ನಾಡದೇವಿ ಚಾಮುಂಡೇಶ್ವರಿ ತಾಯಿಯ ವಿಗ್ರಹ ಪ್ರತಿಷ್ಟಾಪಿಸಿ, ಗಜ ಗಾಂಭಿರ್ಯದಿಂದ ಅರಮನೆಯಿಂದ ಬನ್ನಿ ಮಂಟಪದವರೆಗೂ ಸಾಗುತ್ತಿದ್ರೆ ದೇವಲೋಕವೇ ಧರೆಗಿಳಿದ ಭಾಸವಾಗುತ್ತದೆ….

ಕಳೆದ ಕಳೆದ ಎಂಟು ವರ್ಷಗಳಿಂದ ಮೈಸೂರು ದಸರಾ ಮಹೋತ್ಸವದಲ್ಲಿ ಅರ್ಜುನಾ ಈ ಚಿನ್ನದ ಅಂಬಾರಿ ಹೊರುವ ಸಾಧನೆ ಮಾಡುತ್ತಿದ್ದ. ಆದರೆ ಈ ಬಾರಿಯ ಮೈಸೂರು ದಸರಾ ಉತ್ಸವದಲ್ಲಿ ಅರ್ಜುನಾ ಅಂಬಾರಿ ಹೊರುವ ಕಾರ್ಯದಿಂದ ನೇಪತ್ಯಕ್ಕೆ ಸರಿಯಲಿದ್ದಾನೆ. ಇದಕ್ಕೆ ಕಾರಣ ಆತನ ವಯಸ್ಸು… ಅರ್ಜುನನಿಗೆ ಈಗ 60  ವರ್ಷ ತುಂಬಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ 60  ವರ್ಷ ಪೂರೈಸಿದ ಆನೆಗಳಿಗೆ ಬಾರ ಹೊರಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜುನನ್ನು ಈ ಸಲ ಮೈಸೂರು ದಸರಾದಲ್ಲಿ ಸಾಮಾನ್ಯ ಆನೆಗಳ ಸಾಲಿನಲ್ಲಿ ಮಾತ್ರ ನೋಡಬೇಕಾಗಿದೆ….

2012 ರಿಂದ-2019 ರವರೆಗೆ ಅಂದರೆ 8 ವರ್ಷ ಚಿನ್ನದ ಅಂಬಾರಿ ಹೊತ್ತ ಹೆಗ್ಗಳಿಕೆ ಅರ್ಜುನನದು..
2012 ರಿಂದ-2019 ರವರೆಗೆ ಅಂದರೆ 8 ವರ್ಷ ಚಿನ್ನದ ಅಂಬಾರಿ ಹೊತ್ತ ಹೆಗ್ಗಳಿಕೆ ಅರ್ಜುನನದು..

ಅಷ್ಟಕ್ಕೂ ಯಾರು ಅರ್ಜುನ..? ಈತನ ಹಿನ್ನೆಲೆ ಏನು..?:ಈ ಬಗ್ಗೆ  ನೋಡೋದಾದ್ರೆ ಸಾಕಷ್ಟು ಕಥೆಗಳು ತೆರೆದುಕೊಳ್ಳುತ್ತವೆ. ಕಾಕನಕೋಟೆಯ ದಟ್ಟ ಕಾನನದಲ್ಲಿ ರಾಜ್ಯಭಾರ ಮಾಡುತ್ತಿದ್ದ ಒಂಟಿ ಸಲಗವನ್ನು 1966 ರಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆಹಿಡಿಯುತ್ತಾರೆ. ಆ ಒಂಟಿ ಸಲಗದ ಮೈಕಟ್ಟು, ಉತ್ಸಾಹ, ಗಾಂರ್ಭಿರ್ಯ ಕಂಡು ಅವತ್ತಿನ ದಿನಗಳಲ್ಲಿ ಅರಣ್ಯ ಇಲಾಖೆಯೇ ದಂಗಾಗಿ ಹೋಗುತ್ತೆ.

ಬಳಿಕ ಈ ಆನೆಗೆ ಅರ್ಜುನ ಎಂದು ನಾಮಕರಣ ಮಾಡಿ ಮೈಸೂರು ದಸರಾ ಮಹೋತ್ಸವಕ್ಕೆ ಅಣಿ ಮಾಡಲಾಗುತ್ತದೆ. ಸಾಕಷ್ಟು ತರಬೇತಿಯ ಬಳಿಕ 2012 ಲ್ಲಿ ಅರ್ಜುನನಿಗೆ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊರುವ ಕಾರ್ಯವನ್ನು ನೀಡಲಾಗುತ್ತದೆ. ಅರ್ಜುನ ಎಲ್ಲರ ನಿರೀಕ್ಷೆಯಂತೆಯೇ ಮೊದಲ ಬಾರಿಗೆ 750  ಕೆ.ಜಿ ತೂಕದ ಸ್ವರ್ಣಖಚಿತ  ಅಂಬಾರಿಯನ್ನ ಸುಲಲಿತವಾಗಿ ಹೊತ್ತು ಮೈಸೂರು ದಸರಾಗೆ ಮತ್ತಷ್ಟು ಮೆರಗು ನೀಡುತ್ತಾನೆ. ಅಲ್ಲಿಂದ ಅರ್ಜುನ ಹಿಂತಿರುಗಿ ನೋಡಿದ್ದೇ ಇಲ್ಲ…

2012 ರಿಂದ 2019 ರವರೆಗೂ ಅಂದರೆ ಬರೊಬ್ಬರಿ 8  ವರ್ಷ ಮೈಸೂರು ದಸರಾ ಮಹೋತ್ಸವದಲ್ಲಿ ಅರ್ಜುನ ಚಿನ್ನದ ಅಂಬಾರಿ ಹೊತ್ತು ಎಲ್ಲರಿಂದ ಮೆಚ್ಚುಗೆಗೆ ಪಾತ್ರನಾಗಿದ್ದ. ಆದರೆ ಈಗ ಆತನಿಗೆ ವಯಸ್ಸಾದ ಕಾರಣ ಈ ವರ್ಷದಿಂದ ಅರ್ಜುನ ಮಾಡುತ್ತಿದ್ದ ಅಂಬಾರಿ ಹೊರುವ ಮಹತ್ಕಾರ್ಯವನ್ನ ಅಭಿಮನ್ಯು ಮಾಡಲಿದ್ದಾನೆ.

5800 ಕೆ.ಜಿ ತೂಕ ಅಭಿಮನ್ಯು ಕೂಡ ಸಾಮಾನ್ಯ ಏನಲ್ಲ.. ಈತನ ಕೂಡ ಪರಾಕ್ರಮಿಯೆ...
5800 ಕೆ.ಜಿ ತೂಕ ಅಭಿಮನ್ಯು ಕೂಡ ಸಾಮಾನ್ಯ ಏನಲ್ಲ.. ಈತನ ಕೂಡ ಪರಾಕ್ರಮಿಯೆ…

ಅಭಿಮನ್ಯು ಸಾಮರ್ಥ್ಯ ಕಡ್ಮೆನಾ..5800 ಕೆ.ಜಿ ತೂಕ ಅಭಿಮನ್ಯು ಕೂಡ ಸಾಮಾನ್ಯ ಏನಲ್ಲ.. ಈತನ ಕೂಡ ಪರಾಕ್ರಮಿಯೆ… ಅರಣ್ಯ ಇಲಾಖೆಯಲ್ಲಿ ಆಪತ್ಬಾಂಧವ ಎಂದೇ ಕರೆಸಿಕೊಳ್ಳುವ ಅಭಿಮನ್ಯು ಈವರೆಗೂ 100 ಪುಂಡಾನೆಗಳ ಮದ ಇಳಿಸಿದ್ದಾನೆ. ಪುಂಡಾನೆಗಳ ಸೆರೆಹಿಡಿಯುವ ವೇಳೆ ಸಾಕಷ್ಟು ಬಾರಿ ಮಾವುತರಿಗೂ ರಕ್ಷಣೆ ನೀಡಿದ್ದಾನೆ ಅಭಿಮನ್ಯು.

ಪುಂಡಾನೆಗಳನ್ನ ಸೆರೆಹಿಡಿಯುವ ವೇಳೆ ಆನೆಗಳ ನಡುವೆ ಭಾರೀ ಕಾಳಗವೇ ನಡೆಯುತ್ತದೆ. ಈ ವೇಳೆ ಸಾಕಾನೆಗಳನ್ನು ಪುಂಡಾನೆಗಳು ಹಿಮ್ಮೆಟ್ಟುವಂತೆ ಮಾಡುತ್ತವೆ. ಆದರೆ ಅಭಿಮನ್ಯು ಮಾತ್ರ ಒಮ್ಮೆಯೂ ಪುಂಡಾನೆಗಳಿಗೆ ಹೆದರಿದ ಉದಾಹರಣೆ ಇಲ್ಲ. ಈತನನ್ನು ನಂಬಿ ಯಾವುದೇ ಕಾರ್ಯಚರಣೆ ಕೈಗೊಂಡರೂ ಅಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಅನ್ನೋ ಮಾತು ಅರಣ್ಯ ಇಲಾಖೆಯಲ್ಲಿದೆ.

ಕೇವಲ ಪುಂಡಾನೆಗಳನ್ನಷ್ಟೇ ಅಲ್ಲ ಹುಲಿಗಳಿಗೂ ನಡುಕ ಹುಟ್ಟಿಸಿರುವ ಖ್ಯಾತಿ ಅಭಿಮನ್ಯುವಿಗೆ ಇದೆ. ವಿವಿಧ ಪ್ರದೇಶಗಳಲ್ಲಿ ಹುಲಿಗಳ ಭೀತಿ ಹೆಚ್ಚಾದಾಗ ಅಭಿಮನ್ಯುವಿನ ಸಹಾಯದಿಂದ ಅರಣ್ಯ ಇಲಾಖೆ 10 ಕ್ಕೂ ಹೆಚ್ಚು ಹುಲಿಗಳನ್ನು ಸೆರೆಹಿಡಿದಿದೆ. ಇದಿಷ್ಟೇ ಅಲ್ಲಾ ಅಚಾನಾಕ್ಕಾಗಿ ಹೊಂಡಳಲ್ಲಿ, ಕೆಸರುಗಳಲ್ಲಿ ಬಿದ್ದ  ಸಾಕಷ್ಟು ಆನೆಗಳನ್ನೂ ಕೂಡ ರಕ್ಷಣೆ ಮಾಡಿ ಸೈ ಎನಿಸಿಕೊಂಡಿದ್ದಾನೆ ಅಭಿಮನ್ಯು.

1977 ರಲ್ಲಿ ನಾಗರಹೊಳೆ ಅಭಯಾರಣ್ಯದಲ್ಲಿ ಅಭಿಮನ್ಯುವನ್ನ ಸೆರೆಹಿಡಿಯಲಾಗಿತ್ತು. ಪ್ರಾರಂಭದ ದಿನಗಳಲ್ಲಿ ಅಭಿಮನ್ಯು ಲಾರಿಗೆ ಟಿಂಬರ್ ತುಂಬುವ ಕೆಲಸ ಮಾಡುತ್ತಿದ್ದ.. ತನ್ನ ಶಕ್ತಿ ಪರಾಕ್ರಮದಿಂದ ಅರಣ್ಯ ಇಲಾಖೆಯಲ್ಲಿ ಎಲ್ಲರ ಪ್ರೀತಿ ಪಾತ್ರಗಳಿಸಿರುವ ಅಭಿಮನ್ಯುವಿಗೆ ‘ಎ.ಕೆ 47  ಅಂತ ಕೂಡ ಬಿರುದು ನೀಡಲಾಗಿದೆ. ಈ ಬಾರಿಯ ಮೈಸೂರು ದಸರಾ ಮಹೋತ್ಸವ ಕರೋನಾ ಕಾರಣದಿಂದ ಸರಳವಾಗಿ ಆಚರಣೆ ಆಗಲಿದೆ. ಅರಮನೆ ಆವರಣದಲ್ಲಿ ಮಾತ್ರ ಜಂಬೂಸವಾರಿ ನಡೆಸಲಿದೆ. ಇದಕ್ಕಾಗಿ ಅಭಿಮನ್ಯು ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದಾನೆ.

ಅರ್ಜುನ-ಅಭಿಮನ್ಯು ಸ್ಪೆಷಾಲಿಟಿ

-ಅರ್ಜುನನ ವಯಸ್ಸು ಈಗ 60 ವರ್ಷ

-60  ವರ್ಷ ಪೂರೈಸಿದ ಆನೆಗೆ ಬಾರ ಹೊರಿಸುವಂತಿಲ್ಲ

-ಈ ಬಾರಿಯಿಂದ ಅಂಬಾರಿ ಹೊರಲಿದ್ದಾನೆ ಅಭಿಮನ್ಯು

-ಕಾಕನ ಕೋಟೆಯಲ್ಲಿ 1969 ರಲ್ಲಿ ಸೆರೆ ಸಿಕ್ಕಿದ್ದ ಅರ್ಜುನ

-2012 ರಲ್ಲಿ ಮೊದಲ ಬಾರಿಗೆ ಅಂಬಾರಿ ಹೊತ್ತಿದ್ದ ಅರ್ಜುನ

-8 ಬಾರಿ ದಸರಾ ಅಂಬಾರಿ ಹೊತ್ತಿರುವ ಅರ್ಜುನ

-ಮೊದಲ ಬಾರಿಗೆ ಅಂಬಾರಿ ಹೊರಲಿರುವ ಅಭಿಮನ್ಯು

-ಪರಾಕ್ರಮಿ ಅಭಿಮನ್ಯು ತೂಕ ಬರೊಬ್ಬರಿ 5800 ಕೆ.ಜಿ

-100  ಪುಂಡಾನೆಗಳ ಮದ ಅಡಗಿಸಿರುವ ಅಭಿಮನ್ಯು

-10 ಕ್ಕೂ ಹೆಚ್ಚು ಹುಲಿಗಳನ್ನು ಖೆಡ್ಡಾಗೆ ಬೀಳಿಸಿದ್ದಾನೆ ಅಭಿಮನ್ಯು

-ಅಭಿಮನ್ಯುವಿಗೆ ‘ಎ.ಕೆ 47 ಅಂತಾನೂ ಕರೆಯಲಾಗುತ್ತೆ

-ಸಾಕಷ್ಟು ಆನೆಗಳನ್ನೂ ರಕ್ಷಿಸಿದ್ದಾನೆ ಅಭಿಮನ್ಯು

-1977 ರಲ್ಲಿ ನಾಗರಹೊಳೆ ಕಾನನದಲ್ಲಿ ಸೆರೆಸಿಕ್ಕಿದ್ದ ಅಭಿಮನ್ಯು

Spread the love

Related Articles

Leave a Reply

Your email address will not be published.

Back to top button
Flash News