ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೊವಿಡ್ ಸಾವಿನ ಪ್ರಮಾಣ ಶೇ.1.3 ರಷ್ಟಿದೆ:ಕೊರೊನಾ ಮೂಲೋತ್ಪಾಟನೆಗೆ ಶೀಘ್ರವೇ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ

0

ಚಿಕ್ಕಬಳ್ಳಾಪುರ :ಜಿಲ್ಲೆಯಲ್ಲಿ ಕೋವಿಡ್ ಸಾವಿನ ಪ್ರಮಾಣ ಶೇ.1 ಕ್ಕಿಂತ ಕಡಿಮೆಗೆ ಇಳಿಸುವ ಗುರಿ ಹಾಕಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.. ಜಿಲ್ಲೆಯಲ್ಲಿ ಈವರೆಗೂ 87,704  ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 5137  ಜನರಿಗೆ ಸೋಂಕು ದೃಢ ಪಟ್ಟಿವೆ. ಇದರಲ್ಲಿ  4,117  ಜನ ಬಿಡುಗಡೆಯಾಗಿದ್ದು, ಶೇ. 1.31 ಸಾವಿನ ಪ್ರಮಾಣವಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು. ಸಾವಿನ ಪ್ರಮಾಣವನ್ನು ಶೇ. 1 ಕ್ಕಿಂತ ಕೆಳಗಿಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಿ ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದ ಸಚಿವರು  ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ಲಾಸ್ಮಾ ಬ್ಯಾಂಕ್ ತೆರೆಯಲು ತಿಳಿಸಿದರು.

ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆದೇಶಿಸಿದ ಡಾ.ಸುಧಾಕರ್‌ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಈ ಕಾರ್ಯಕ್ರಮದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ  ಕುರಿತು ರೂಪುರೇಷೆ ರಚಿಸಿ ಇನ್ನೊಂದು ವಾರದೊಳಗೆ ಮಾಹಿತಿ ನೀಡುವಂತೆ ಸಿಇಒಗೆ ಸೂಚನೆ ನೀಡಿದರು. ಈ ವೇಳೆ ಕೇವಲ 70  ಸಮುದಾಯ ಶೌಚಾಲಯದ ಗುರಿ ಹೊಂದಿರುವುದಕ್ಕೆ ಕೋಪಗೊಂಡ ಸಚಿವರು,  157  ಗ್ರಾಮ ಪಂಚಾಯಿತಿಗಳಿದ್ದು, ಪ್ರತಿ ಗ್ರಾಪಂಗೆ ಒಂದೊಂದು ಸಮುದಾಯ ಶೌಚಾಲಯ ನಿರ್ಮಿಸುವ ಗುರಿ ಹಾಕಿಕೊಂಡು ಮೂರು ತಿಂಗಳೊಳಗೆ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.

ಇನ್ನೂ ಚಿಕ್ಕಬಳ್ಳಾಪುರದ ಎಲ್ಲಾ ನಗರಸಭೆಗಳು  6 ತಿಂಗಳೊಳಗೆ ಸ್ವಚ್ಛತೆಯಲ್ಲಿ ಟಾಪ್ 5  ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಎರಡು ಗ್ರಾಪಂಗೆ ಒಂದು ಕಸ ಸಂಸ್ಕರಣ ಘಟಕ ನಿರ್ಮಾಣದ ಕಾಮಗಾರಿಯನ್ನು ಇನ್ನು ಮೂರು ತಿಂಗಳೊಳಗೆ ಪ್ರಾರಂಭಿಸಿ. ಜೊತೆಗೆ ಜನರಲ್ಲಿ ಈ ಬಗ್ಗೆ ವೈಜ್ಞಾನಿಕ ಹಾಗೂ ಪ್ರಾಯೋಗಿಕ ಅರಿವು ಮೂಡಿಸುವ ಕೆಲಸ ಆಗಬೇಕು. ಪರಿಣತಿ ಹೊಂದಿರುವ ಎನ್‌ಜಿಒ ಅಥವಾ ಕಂಪನಿಗಳ ಸಹಯೋಗದಲ್ಲಿ ಕಸ ವಿಂಗಡಣೆ ಬಗ್ಗೆ ಅರಿವು ಮೂಡಿಸಿ. ಇದರ ಅನುಷ್ಠಾನ ಅನಿವಾರ್ಯ ಎಂದರು.

Spread the love
Leave A Reply

Your email address will not be published.

Flash News