CORONA VIRUSKANNADAFLASHNEWSFIGHTAGAINSTCORONAMoreTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಜ್ಯೋತಿಷ್ಯರಾಜಕೀಯರಾಜ್ಯ-ರಾಜಧಾನಿ

ಅರುಣ್ ಶ್ಯಾಂ ನೇಮಕಕ್ಕೆ ಕುತ್ತು ತಂತಾ.. ರಾಘವೇಶ್ವರ ಶ್ರೀ ಅತ್ಯಾಚಾರ ಪ್ರಕರಣ..!!ಹೆ.ಅಡ್ವೋಕೇಟ್ ಜನರಲ್ ನೇಮಕಕ್ಕೆ ಮೆತ್ತಿಕೊಳ್ತಾ “ಕಳಂಕ”ದ ವಿವಾದ..??!! ಅರುಣ್ ಶ್ಯಾಂ ನೇಮಕಕ್ಕೆ ಜನವಾದಿ ಸಂಘಟನೆ-ಅಖಿಲ ಹವ್ಯಕ ಒಕ್ಕೂಟ ತೀವ್ರ ಖಂಡನೆ.  

ರಾಜ್ಯದ ಹೆಚ್ಚುವರಿ ಅಡ್ಬೋಕೇಟ್ ಜನರಲ್ ಆಗಿ ನೇಮಕಗೊಂಡಿರುವ ಹಿರಿಯ ವಕೀಲ ಅರುಣಶ್ಯಾಂ
ರಾಜ್ಯದ ಹೆಚ್ಚುವರಿ ಅಡ್ಬೋಕೇಟ್ ಜನರಲ್ ಆಗಿ ನೇಮಕಗೊಂಡಿರುವ ಹಿರಿಯ ವಕೀಲ ಅರುಣಶ್ಯಾಂ
ಸರ್ಕಾರದಿಂದ ಅಧೀಕೃತವಾಗಿ ಹೊರಬಿದ್ದಿರುವ ನೇಮಕಾತಿ ಆದೇಶ
ಸರ್ಕಾರದಿಂದ ಅಧೀಕೃತವಾಗಿ ಹೊರಬಿದ್ದಿರುವ ನೇಮಕಾತಿ ಆದೇಶ

ಬೆಂಗಳೂರು:ರಾಜ್ಯದ ಹೆಚ್ವುವರಿ ಅಡ್ವೋಕೇಟ್ ಜನರಲ್ ನೇಮಕಾತಿಗೆ ವಿವಾದ ಮೆತ್ತಿಕೊಂಡಿದೆ.ಕಳಂಕಿತ ಸ್ಥಾನದಲ್ಲಿರುವವರಿಗೆ ಸಾಂವಿಧಾನಿಕ ಹುದ್ದೆಯನ್ನು ನೀಡಲಾಗಿದೆ ಎನ್ನುವುದು ನೂತನ ಅಡ್ವೊ ಕೇಟ್ ಜನರಲ್ ಆಗಿ ಸರ್ಕಾರದಿಂದ ನಿಯೋಜನೆಗೊಂಡಿರುವ ಅರುಣ್ ಶ್ಯಾಮ್ ಅವರ ವಿರುದ್ಧದ ಆರೋಪ. ಜವಾಬ್ದಾರಿಯುತ ಹಾಗೂ ಆಯಕಟ್ಟಿನ ಹುದ್ದೆಯ ನೇಮಕದ ವಿಚಾರದಲ್ಲಿಹಾದಿ ತಪ್ಪಿದೆ ಎನ್ನೋದು ಸಂಘಟನೆಗಳ ಆರೋಪ.ಸರ್ಕಾರಕ್ಕೆ ಮಾಹಿತಿ ಕೊರತೆಯಿತ್ತೋ..ಅಥವಾ ಪ್ರಜ್ಞಾ ಪೂರ್ವಕವಾಗಿಯೇ ಇಂತದ್ದೊಂದು ತಪ್ಪನ್ನು ಮಾಡಿದೆಯೋ ಎಂದು ಪ್ರಶ್ನಿಸಿರುವ ಸಂಘಟನೆಗಳು ಸರ್ಕಾರದ ನೇಮಕಾತಿಯನ್ನು ಪ್ರಶ್ನಿಸಿ ಹೋರಾಡೊಕ್ಕೆ ನಿರ್ಧರಿಸಿವೆ.

ಅಡ್ವೊಕೇಟ್ ಜನರಲ್ ಆಗಿದ್ದ ಆರ್.ನಟರಾಜ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದ ಕಾರಣಕ್ಕೆ ತೆರವಾದ ಅವರ ಸ್ಥಾನಕ್ಕೆ ನೇಮಕಗೊಂಡಿರುವ ಅರುಣ್ ಶ್ಯಾಂ ಹಲವು ದಶಕಗಳ ಕಾಲ ವಕೀಲರಾಗಿ ಕೆಲಸ ಮಾಡಿದವರು.

ಪ್ರಸ್ತುತ ಹೈಕೋರ್ಟ್ ನ ಹಿರಿಯ ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ. ನ್ಯಾಶನಲ್ ಸ್ಕೂಲ್ ಆಫ್ ಲಾದ ಅಕಾಡೆಮಿಕ್ ಕೌನ್ಸಿಲ್ ನ ಸದಸ್ಯರೂ ಆಗಿರುವ ಭಂಟ್ವಾಳ ಮೂಲದ ಅರುಣ್ ಶ್ಯಾಂ ಅವರ ಆಯ್ಕೆಯನ್ನು ಜನವಾದಿ ಮಹಿಳಾ ಸಂಘಟನೆ ಹಾಗೂ ಬೆಂಗಳೂರು ವಿಜಯನಗರದಲ್ಲಿರುವ ಅಖಿಲ ಹವ್ಯಕ   ಒಕ್ಕೂಟಗಳು ತೀವ್ರವಾಗಿ ಖಂಡಿಸಿವೆ.

ವಿವಾದ ಏನು..?: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ ಪ್ರಕರಣ  ರಾಮಚಂದ್ರಾ ಪುರ ಮಠದ ಪೀಠಾಧ್ಯಕ್ಷ ರಾಘವೇಶ್ವರ ಶ್ರೀಗಳ ವಿರುದ್ಧದ ಅತ್ಯಾಚಾರ ಪ್ರಕರಣ.ಈ ಪ್ರಕರಣದ ಮೊಕದ್ದಮೆಯಲ್ಲಿ ಅರುಣ್ ಶ್ಯಾಂ ಕೂಡ  ಆಪಾದಿತರಾಗಿದ್ದು,ಇವರ ವಿರುದ್ಧದ ಆರೋಪದ ಪ್ರಕರಣ  ಇನ್ನೂ ಖುಲಾಸೆಗೊಂಡಿಲ್ಲ.

ಪ್ರಕರಣವಿನ್ನೂ ಇತ್ಯರ್ಥವಾಗದಿರುವಾಗ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅಂಥ ಬಹುದೊಡ್ಡ ಹುದ್ದೆಗೆ ಅರುಣ್ ಶ್ಯಾಂ ಅವರನ್ನು ನೇಮಕ ಮಾಡಿರುವುದು  ಅಕ್ಷಮ್ಯ ಅಷ್ಟೇ ಅಲ್ಲ, ಸಾಂವಿಧಾನಿಕ ಹುದ್ದೆಗೆ ಮಾಡಿದ ಅಪಮಾನ  ಎನ್ನೋದು ಜನವಾದಿ ಹಾಗೂ ಹವ್ಯಕ ಸಂಘಟನೆಗಳ ಗಂಭೀರ ಆರೋಪ.

ಜನವಾದಿ ಸಂಘಟನೆ ಆರೋಪವೇನು..? ಶ್ರೀ ರಾಮಚಂದ್ರಪುರ ಮಠದಲ್ಲಿ  ರಾಘವೇಶ್ವರ ಶ್ರೀಗಳ ಅತ್ಯಾಪ್ತರಾಗಿ ಕೆಲಸ ಮಾಡಿರುವ ಅರುಣ್ ಶ್ಯಾಂ,ರಾಘವೇಶ್ವರ  ಶ್ರೀಗಳ ವಿರುದ್ಧ ಕೇಳಿಬಂದ ಅತ್ಯಾಚಾರದ ಆಪಾದನೆಯಲ್ಲೂ ತಪ್ಪಿತಸ್ಥರಾಗಿದ್ದಾರೆ.ಅದು ಕೋರ್ಟ್ ವ್ಯಾಪ್ತಿಯಲ್ಲೂ ವಿಚಾರಣೆ ಹಂತದಲ್ಲಿದೆ.ವಿಚಾರಣೆ ಕೊನೆಯಾಗಿ ತೀರ್ಪು ಹೊರಬರುವವರೆಗೂ ಅರುಣ್ ಶ್ಯಾಂ ಕಳಂಕಿತರೆಂದೇ ಪರಿಗಣಿಸಬೇಕಾಗ್ತದೆ ಅಲ್ಲವೇ ಎಂದು ಅತ್ಯಾಚಾರ ಪ್ರಕರಣದಲ್ಲಿ ಕಾನೂನಾತ್ಮಕ ಹೋರಾಟ ನಡೆಸುತ್ತಿರುವ ಜನವಾದಿ ಸಂಘಟನೆ ಯ ವಿಮಲಾ ಕನ್ನಡ ಫ್ಲಾಶ್ ನ್ಯೂಸ್ ಮೂಲಕ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ರಾಮಚಂದ್ರಾ ಪುರ ಮಠದ ಪೀಠಾಧ್ಯಕ್ಷ ರಾಘವೇಶ್ವರ ಶ್ರೀ
ರಾಮಚಂದ್ರಾ ಪುರ ಮಠದ ಪೀಠಾಧ್ಯಕ್ಷ ರಾಘವೇಶ್ವರ ಶ್ರೀ

ನ್ಯಾಯಾಲಯದಲ್ಲಿ ಶೋಷಿತರ ಪರವಾಗಿ ನ್ಯಾಯ ಒದಗಿಸಿಕೊಡಬೇಕಾದವ್ರೇ ತಪ್ಪಿತಸ್ಥ ಸ್ಥಾನದಲ್ಲಿರುವಾಗ ಅವರಿಗೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಹುದ್ದೆ ನೀಡುವುದು ಸೂಕ್ತವೇ..?ರಾಘವೇಶ್ವರ ಶ್ರೀಗಳ ಪ್ರಕರಣದ ವಿಚಾರಣೆಗೆ ಬಂದಾಗ ಉನ್ನತ ಹುದ್ದೆಯಲ್ಲಿರುವ ಇವರ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿರುವುದಿಲ್ಲವೇ? ಇದೇ ಪ್ರಕರಣದಲ್ಲಿಆಪಾದಿತರೂ ಆಗಿರುವ ಅರುಣ್ ಶ್ಯಾಂ ಅವರು ಸರಿಯಾದ ನ್ಯಾಯ ಒದಗಿಸ್ಲಿಕ್ಕೆ ಸಾಧ್ಯವಿದೆಯೇ? ಖಂಡಿತಾ ಇಲ್ಲ ಎನ್ನುವ ವಿಮಲಾ ಇವರ ವಿರುದ್ಧದ ವಿಚಾರಣೆ ಇನ್ನೂ ಸುಪ್ರಿಂ ಕೋರ್ಟ್ ನಲ್ಲಿ ಬಾಕಿ ಇದೆ.

ಎಫ್ ಐಆರ್ ಹಾಗೂ ಚಾರ್ಜ್ ಶೀಟ್ ನಲ್ಲಿ ತಮ್ಮ ಪ್ರಭಾವ ಬಳಸಿ ಹೆಸರುಗಳನ್ನು ತೆಗೆಸಿ ಹಾಕಿದ್ರೂ ನಾವು ಅದನ್ನು ಕಾನೂನಾತ್ಮಕವಾಗಿ ಪ್ರಶ್ನಿಸಿದ್ದೇವೆ.ಅದರ ಜೊತೆಗೇನೆ ಸುಪ್ರಿಂ ಕೋರ್ಟ್ ನಲ್ಲಿ ಪ್ರಕರಣ ಇತ್ಯರ್ಥವಾಗದಿರುವಾಗ ಸರ್ಕಾರಕ್ಕೆ ಇಂತದ್ದೊಂದು ವಿವಾದ ಬೇಕಿತ್ತೇ ಎನ್ನುವುದು ವಿಮಲಾ ಅವರ ಪ್ರಶ್ನೆ.

ಅಖಿಲ ಹವ್ಯಕ ಒಕ್ಕೂಟದ ಆಪಾದನೆಯೇನು..??  ವಿಜಯನಗರದಲ್ಲಿರುವ ಅಖಿಲ ಹವ್ಯಕ ಒಕ್ಕೂಟ ಕೂಡ ಸರ್ಕಾರದ ನೇಮಕವನ್ನು ಪ್ರಶ್ನಿಸಿದೆಯಲ್ಲದೇ ಆಕ್ಷೇಪಿಸಿದೆ ಕೂಡ.2015ರಲ್ಲಿ ರಾಘವೇಶ್ವರ ಶ್ರೀಗಳ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಆಪಾದಿತರಾಗಿರುವ ಅರುಣ್ ಶ್ಯಾಂ ಅವರನ್ನು ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ನೇಮಿಸಿರುವುದು ಸ್ವಾಮೀಜಿ ವಿರುದ್ಧ ಹೋರಾಟ ನಡೆಸುತ್ತಿರುವ ಸಂತ್ರಸ್ಥೆಯರಿಗೆ ಸರ್ಕಾರ ಮಾಡುತ್ತಿರುವ ಘೋರ ಅನ್ಯಾಯವಾಗಿದೆ ಎಂದು ಕೆಂಡಕಾರಿದ್ದಾರೆ.

ರಾಘವೇಶ್ವರ ಶ್ರೀಗಳ ಪರವಾಗಿ ಹೈಕೋರ್ಟ್ ಹಾಗೂ ಸುಪ್ರಿಂ ಕೋರ್ಟ್ ಗಳಲ್ಲಿ ವಕಾಲತ್ತು ವಹಿಸುತ್ತಾ ಬಂದಿರುವ ಅವರ ಮುಂದೆಯೇ ರಾಘವೇಶ್ವರ ಶ್ರೀಗಳ ವಿರುದ್ಧದ ಪ್ರಕರಣ ವಿಚಾರಣೆಗೆ ಬಂದಾಗ ಪ್ರಾಸಿಕ್ಯೂಷನ್ ವಕೀಲರ ಮೇಲೆ ಒತ್ತಡ ತರುವ ಸಾಧ್ಯತೆಗಳ ಜಿತೆಗೆ ಸಾಕ್ಷ್ಯ ನಾಶದ ಆತಂಕ ಇರುವುದಿಲ್ಲವೇ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ತಾರಾನಾಥ ಯು.ಆಪಾದಿಸಿದ್ದಾರೆ.

ಜನವಾದಿ ಸಂಘಟನೆಯ ವಿಮಲಾ
ಜನವಾದಿ ಸಂಘಟನೆಯ ವಿಮಲಾ

ಕೋರ್ಟ್ ಕಟಕಟೆಯಲ್ಲಿರುವ ಪ್ರಕರಣ ಇತ್ಯರ್ಥವಾಗಿ ಅರುಣ್ ಶ್ಯಾಂ ಅವರು ನಿರಪರಾಧಿಯಾಗಿ ಖುಲಾಸೆ ಆದ್ಮೇಲೆ ಸರ್ಕಾರ ಇವರನ್ನು ಆಯಕಟ್ಟಿನ ಹುದ್ದೆಗೆ ನಿಯೋಜಿಸಿಕೊಳ್ಳುವುದರಲ್ಲಿ ನಮ್ಮ ಅಭ್ಯಂತರವೇನೂ ಇಲ್ಲ..ಆದ್ರೆ ಪ್ರಕರಣ ಇತ್ಯರ್ಥವಾಗದೆ ಇರುವಾಗ್ಲೇ ಅರುಣ್ ಶ್ಯಾಂ ಅವರನ್ನು ನಿಯೋಜನೆ ಮಾಡಿರುವುದನ್ನು ತಕ್ಷಣ ವಾಪಸ್ ತೆಗೆದುಕೊಳ್ಳಬೇಕು.ಇಲ್ಲವಾದಲ್ಲಿ ಕಾನೂನಾತ್ಮಕ ಹೋರಾಟ ನಡೆಸಬೇಕಾಗ್ತದೆ ಎಂದು ಎಚ್ಚರಿಸಿದ್ದಾರೆ.

ಆರೋಪಗಳಿಗೆ ಅರುಣ್ ಶ್ಯಾಂ ಏನನ್ತಾರೆ ಗೊತ್ತಾ…?  ಇನ್ನು ತಮ್ಮ ಬಗ್ಗೆ ಇರುವ ಆರೋಪಗಳ ಬಗ್ಗೆ  ಪ್ರತಿಕ್ರಿಯಿಸಿರುವ ಅರುಣ್ ಶ್ಯಾಂ,ತಮ್ಮ ಮೇಲೆ ಯಾವುದೇ ಆಪಾದನೆಗಳಿಲ್ಲ.ತಮ್ಮ ವಿರುದ್ಧ ಇದೆಲ್ಲಾ  ನನ್ನ ವಿರುದ್ಧ ನಡೆಸುತ್ತಿರುವ ವ್ಯವಸ್ಥಿತ ಪಿತೂರಿ.ಸರ್ಕಾರ ಕೂಡ ನೇಮಕಾತಿ ಮಾಡುವ ಸಂದರ್ಭದಲ್ಲಿ  ಕಾನೂನಾತ್ಮಕವಾಗಿಯೂ ಎಲ್ಲವನ್ನು ಪರಿಶೀಲಿಸಿರುತ್ತದೆ ಅಲ್ಲವೇ..ಇದರ ಬಗ್ಗೆ ಹೆಚ್ಚಿಗೇನೂ ರಿಯಾಕ್ಟ್ ಮಾಡಲಾರೆ ಎಂದ್ರು.

ಒಟ್ಟಿನಲ್ಲಿ ರಾಜಕೀಯ ಜಂಜಾಟ-ವೈರುದ್ಧ್ಯಗಳಲ್ಲೇ ಬ್ಯುಸಿಯಾಗಿರುವ ಸರ್ಕಾರಕ್ಕೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ನೇಮಕ ಮತ್ತೊಂದು ಕಾನೂನಾತ್ಮಕ ಇಕ್ಕಟ್ಟನ್ನು ಸೃಷ್ಟಿಸಿದೆ.ಅರುಣ್ ಶ್ಯಾಂ ಅವರ ನೇಮಕಾತಿಯನ್ನು ಸಮರ್ಥಿಸಿಕೊಳ್ಳುವ ವಿಚಾರ ಕೂಡ ದೊಡ್ಡ ಮಟ್ಟದ ಸವಾಲಾಗಿದೆ.ಅವರನ್ನು ನೇಮಕ ಮಾಡಿ ವಿವಾದಕ್ಕೆ ಸಿಲುಕಿರುವ ಸರ್ಕಾರ ವಿಷಯಗಳನ್ನೆಲ್ಲಾ ಪರಿಶೀಲಿಸಿ ಸತ್ಯಾಸತ್ಯತೆಗಳನ್ನು ಅವಲೋಕಿಸಿ ಒಂದ್ವೇಳೆ ಅವರ ನೇಮಕ ಸರಿಯಾಗಿಲ್ಲ ಎಂದು ತೀರ್ಮಾನಕ್ಕೆ ಬಂದು ಒಂದ್ವೇಳೆ, ನೇಮಕಾತಿಯನ್ನು ರದ್ದುಪಡಿಸಲು ಮುಂದಾದ್ರೆ ಅದು ಕೂಡ ದೊಡ್ಡ ಮುಜುಗರ ಸೃಷ್ಟಿಸಬಹುದು.ಒಟ್ಟಿನಲ್ಲಿ ಸರ್ಕಾರದ ಪರಿಸ್ಥಿತಿ ಅತ್ತ ದರಿ..ಇತ್ತ ಪುಲಿ ಎನ್ನುವ ಗಾಧೆಯಂತಾಗಿದೆ.

Spread the love

Related Articles

Leave a Reply

Your email address will not be published.

Back to top button
Flash News