BBMP ಆಡಳಿತಾಧಿಕಾರಿಯಾಗಿ ಗೌರವ್ ಗುಪ್ತಾ..!? ರೇಸ್ ನಲ್ಲಿದ್ದ ವಂದಿತಾಶರ್ಮಾ-ರಾಕೇಶ್ ಸಿಂಗ್  ಔಟ್..!

0
ಗೌರವ್ ಗುಪ್ತಾ ಬಿಬಿಎಂಪಿ ನೂತನ ಆಡಳಿತಾಧಿಕಾರಿ..!
ಗೌರವ್ ಗುಪ್ತಾ ಬಿಬಿಎಂಪಿ ನೂತನ ಆಡಳಿತಾಧಿಕಾರಿ..!
ವಂದಿತಾ ಶರ್ಮಾ
                ವಂದಿತಾ ಶರ್ಮಾ
ರಾಕೇಶ್ ಸಿಂಗ್
             ರಾಕೇಶ್ ಸಿಂಗ್

ಬೆಂಗಳೂರು:ಬಿಬಿಎಂಪಿ ನೂತನ ಆಡಳಿತಾಧಿಕಾರಿಯಾಗಿ ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ನೇಮಕವಾಗೋದು ಬಹುತೇಕ ಖಚಿತವಾದಂತಿದೆ.ಕನ್ನಡ ಫ್ಲಾಶ್ ನ್ಯೂಸ್ ಗೆ ಸಿಕ್ಕ ಸರ್ಕಾರದ ಉನ್ನತ ಮೂಲಗಳು ಗೌರವ್ ಗುಪ್ತಾ ಹೆಸರನ್ನೇ ಸರ್ಕಾರ ಬಹುತೇಕ ಫೈನಲ್ ಗೊಳಿಸಿದೆ ಎನ್ನುತ್ತಿವೆ.

ಆಡಳಿತಾಧಿಕಾರಿಗಳ  ರೇಸಿನಲ್ಲಿ  ವಂದಿತಾ ಶರ್ಮಾ,ಅನಿಲ್ ಕುಮಾರ್ ,ಹಾಲಿ ಆಯುಕ್ತ ಮಂಜುನಾಥ್ ಪ್ರಸಾದ್, ತುಷಾರ್ ಗಿರಿನಾಥ್ ,ರಾಕೇಶ್ ಸಿಂಗ್, ಹಾಗೂ ಗೌರವ್ ಗುಪ್ತಾ ಹೆಸರುಗಳಿದ್ದವು.ಇವರನ್ನೆಲ್ಲಾ ಹಿಂದಿಕ್ಕಿ ಗೌರವ್ ಗುಪ್ತಾ ಬಿಬಿಎಂಪಿಯ ಆಡಳಿತಾಧಿಕಾರಿಯಾಗಿ ನೇಮಕಗೊಳ್ಳುವುದು ನಿಚ್ಚಳವಾಗ್ತಿದೆ.

ವಂದನಾಶರ್ಮಾ ಹಾಗೂರಾಕೇಶ್ ಸಿಂಗ್ ರನ್ನು ಸೈಡಿಗಟ್ಟಿ,ಹಾಲಿ ಆಯುಕ್ತ ಮಂಜುನಾಥ್  ಪ್ರಸಾದ್ ರನ್ನು ಬದಿಗೆ ಸರಿಸಿ ಸರ್ಕಾರ ಅಂತಿಮವಾಗಿ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿರುವ ಗೌರವ್ ಗುಪ್ತಾ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲು ನಿರ್ದರಿಸಿದೆ ಎನ್ನುವ ಮಾಹಿತಿ ದೊರೆತಿದೆ.

5ವರ್ಷದ ಪಾಲಿಕೆ ಅವಧಿಯು ಮುಗಿದ ಬೆನ್ನಲ್ಲೇ ಈ ಬೆಳವಣಿಗೆ ಸರ್ಕಾರದ ನಿಲುವು, ನಿರ್ಧಾರ ಸ್ಪಷ್ಟವಾದಂತಿದೆ. ಹಿಂದಿನಿಂದ ಲೂ ಕಂದಾಯ ಸಚಿವ ಆರ್ ಅಶೋಕ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ  ಗೌರವ ಗುಪ್ತಾ ಬಿಬಿಎಂಪಿ ಆಯುಕ್ತರಾಗುತ್ತಾರೆನ್ನುವ ಸುದ್ದಿ   ಹಲವಾರು ಬಾರಿ ಕೇಳಿಬಂದಿತ್ತು.ಅದು ಈಗ ಅಂತಿಮವಾಗಿ ಅಧೀಕೃತಗೊಳ್ಳುತ್ತಿದೆ.ಅಂದ್ಹಾಗೆ ಗೌರವ್ ಗುಪ್ತಾ ಅವರ ಪರ ಕಂದಾಯ ಸಚಿವ ಆರ್.ಅಶೋಕ್ ಬ್ಯಾಟಿಂಗ್ ಮಾಡಿದ್ದರು ಎನ್ನಲಾಗಿದೆ.ಗೌರವ್ ಗುಪ್ತಾ ಸಚಿವ ಆರ್.ಅಶೋಕ್ ಅವರ ಅತ್ಯಾಪ್ತ ಅಧಿಕಾರಿ ಎನ್ನಲಾಗ್ತಿದೆ. 

BBMP ಆಡಳಿತಾಧಿಕಾರಿಯಾಗಿ ಗೌರವ್ ಗುಪ್ತಾ..!? ರೇಸ್ ನಲ್ಲಿದ್ದ ವಂದಿತಾಶರ್ಮಾ-ರಾಕೇಶ್ ಸಿಂಗ್  ಔಟ್..!

 

Spread the love
Leave A Reply

Your email address will not be published.

Flash News