CORONA VIRUSKANNADAFLASHNEWSFIGHTAGAINSTCORONAMoreTop NewsUncategorizedದೇಶ-ವಿದೇಶರಾಜಕೀಯವಿಚಿತ್ರ-ವಿಶೇಷ

ಭಾರತದ ವಾಯುಸೇನೆಗೆ ಭೀಮಬಲದ ರಫೆಲ್ ಸೇರ್ಪಡೆ-ರಕ್ಷಣಾ ಸಚಿವರಿಂದ ರಫೆಲ್ ಗೆ ಭವ್ಯ ಸ್ವಾಗತ..

ನವದೆಹಲಿ: ಭಾರತದ ವಾಯುಸೇನೆಗೆ ಭೀಮಬಲ ಬಂದಿದೆ.ನಮ್ಮ ಯುದ್ಧ ಸಾಮರ್ಥ್ಯ ಹೆಚ್ಚಿಸಬಲ್ಲ, ಶತೃದೇಶಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ ದೈತ್ಯಶಕ್ತಿ ಭಾರತೀಯ ವಾಯುಸೇನೆ ಸೇರ್ಪಡೆಯಾಗ್ತಿದೆ.ರಫೆಲ್ ಯುದ್ಧವಿಮಾನಗಳು  ಅಧೀಕೃತವಾಗಿ ವಾಯುಸೇನೆಯನ್ನು ಸೇರ್ಪಡೆಗೊಂಡಿವೆ. 

ಅಂಬಾಲದಲ್ಲಿರುವ ಭಾರತೀಯ ವಾಯುಸೇನೆಯ ವಾಯುನೆಲೆ ಇಂದು, ರಫೆಲ್ ಯುದ್ದವಿಮಾನಗಳನ್ನು ಸೇರ್ಪಡೆಗೊಳಿಸಿಕೊಳ್ಳುವ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಯ್ತು.ರಕ್ಷಣಾ ಸಚಿವ ರಾಜನಾಥ ಸಿಂಗ್ ರಫೆಲ್ ಯುದ್ಧವಿಮಾನಗಳನ್ನು ಸಂತೋಷಪೂರ್ವಕವಾಗಿ ಸೇರ್ಪಡೆಗೊಳಿಸಿಕೊಂಡು ಹೊಸ  ಇತಿಹಾಸ ಬರುದ್ರು. 

ರಫೆಲ್ ಯುದ್ಧವಿಮಾನ 17ನೇ ಸ್ಕ್ವಾಡ್ರನ್ ನ ಗೋಲ್ಡನ್ ಆರೋಸ್ ವಿಭಾಗದ ಪ್ರಮುಖ ಭಾಗವಾಗಿ ಕಾರ್ಯನಿರ್ವಹಿಸಲಿದೆ. ಎರಡು ದಕಗಳ ತೀವ್ರ ವಿವಾದದ ನಡುವೆಯೂ ಮೋದಿ ಸರ್ಕಾರ ರಫೆಲ್ ಯುದ್ಧವಿಮಾನ ಖರೀದಿಸಿ ವಾಯುಸೇನೆಯ ಬಲವನ್ನು ಹೆಚ್ಚಿಸಿದೆ. 

ವಿವಾದಗಳೇನೇ ಇದ್ದರೂ ರಫೆಲ್, ಭಾರತೀಯ ವಾಯುಸೇನೆಯನ್ನು ಸೇರ್ಪಡೆಗೊಳ್ಳುವ ಮೂಲಕ ಭಾರತದ ಯುದ್ಧ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ..ಅಷ್ಟೇ ಅಲ್ಲ,ದಶಕಗಳ ಕಾಲದ ಭಾರತೀಯರ ನಿರೀಕ್ಷೆಯನ್ನು ಸಾಕಾರಗೊಳಿಸಿರುವುದಂತೂ ಸತ್ಯ. 

ಭಾರತದ ವಾಯುಸೇನೆಗೆ ಭೀಮಬಲದ ರಫೆಲ್ ಸೇರ್ಪಡೆ-ರಕ್ಷಣಾ ಸಚಿವರಿಂದ ರಫೆಲ್ ಗೆ ಭವ್ಯ ಸ್ವಾಗತ..   

Spread the love

Related Articles

Leave a Reply

Your email address will not be published.

Back to top button
Flash News