ಕೆಪಿಎಲ್ ಗೂ “ಡ್ರಗ್ಸ್” ಲಿಂಕ್ ಮಾಡಿದ್ಲಾ ರಾಗಿಣಿ..!?ಕ್ರಿಕೆಟಿಗರು-ಪ್ರಾಂಚೈಸಿಗಳಿಗೂ ಡ್ರಗ್ಸ್ ನಂಟಿನ ಶಂಕೆ.!!ಸಿಸಿಬಿ, ಕರೆಕ್ಟ್ ವರ್ಕೌಟ್ ಮಾಡಿದ್ರೆ ಬಯಲಾಗ್ಬೋದೇನೋ ಸತ್ಯ..!

0

ಬೆಂಗಳೂರು:ಕೆಪಿಎಲ್ ಗೂ ಡ್ರಗ್ಸ್ ನಂಟಿದೆಯಾ..? ಇತ್ತಾ..?   ಡ್ರಗ್ಸ್ ಜಾಲದ ಬೆನ್ ಬಿದ್ದಿರುವ ಸಿಸಿಬಿ ತನಿಖೆಯ ಗತಿಯನ್ನು ಮತ್ತಷ್ಟು ತೀವ್ರಗೊಳಿಸಿದ್ರೆ ಈ ಸೂಕ್ಷ್ಮವೂ ಗೊತ್ತಾಗ್ಬೋದೇನೋ.. ಕರ್ನಾಟಕ ಪ್ರಿಮಿಯರ್ ಲೀಗ್ (KPL) ನ ಬಳ್ಳಾರಿ ಟಸ್ಕರ್ಸ್ ತಂಡಕ್ಕೆ  ಬ್ರಾಂಡ್ ಅಂಬಾಸಿಡರ್ ಆಗಿದ್ದ ಡ್ರಗ್ಗಿಣಿಯನ್ನು ಸರಿಯಾಗಿ ಡ್ರಿಲ್ ಮಾಡಿದ್ರೆ ಕೆಪಿಎಲ್ ಗೂ ಡ್ರಗ್ಸ್ ನಂಟನ್ನು ವ್ಯಾಪಿಸಿದ್ದರ ಬಗ್ಗೆ ಬಾಯ್ಬಿಡಬಹುದೇನೋ..

ಕ್ರಿಕೆಟ್ ಗೂ ಡ್ರಗ್ಸ್ ಗೂ ಎತ್ತಣೆಂದೆತ್ತಣ  ಸಂಬಂಧ ಎಂದು ಅನುಮಾನಿಸುವಂತೆಯೇ ಇಲ್ಲ.ಏಕೆಂದ್ರೆ ಇಲ್ಲಿ ಮ್ಯಾಚ್ ಫಿಕ್ಸಿಂಗ್ ಹೆಚ್ಚಾಗಿ ಸದ್ದು ಮಾಡಿದ್ರೂ ಫಿಟ್ ನೆಸ್ ಟೆಸ್ಟ್ ವೇಳೆ ಸಾಕಷ್ಟು ಆಟಗಾರರು ಡ್ರಗ್ಸ್ ರೂಪದ ರಾಸಾಯನಿಕಗಳನ್ನು ಸೇವಿಸಿ ಸಿಕ್ಕಿಬಿದ್ದಿರುವ ಉದಾಹರಣೆಗಳಿವೆ.ಸಾಕಷ್ಟು ಸುದ್ದಿಯಾಗ್ತವೆ.ಇನ್ನಲವು  ಹಾಗೇ  ಮುಚ್ಚಿ ಹಾಕಲ್ಪಡುತ್ತವೆ ಎನ್ನೋದು ಕೂಡ ಗೊತ್ತಿಲ್ಲದ ವಿಷಯವೇನಲ್ಲ.

ಕರ್ನಾಟಕದ ಸ್ಥಳೀಯ ಕ್ರಿಕೆಟ್ ಪಟುಗಳಿಗೆ ಅವರ ಸಾಮರ್ಥ್ಯ ಸಾಬೀತಿಗೆ ಹಾಗೂ ಆರ್ಥಿಕ ಗಳಿಕೆಗೆ ಪರಿಣಾಮಕಾರಿ ಫ್ಲಾಟ್ ಫಾಮ್ ಎನ್ನುವುದರಲ್ಲಿ ಅನುಮಾನವಿಲ್ಲ.ಕೆಪಿಎಲ್ ನಲ್ಲಿ ತಮ್ಮ ಕೆಪಾಸಿಟಿ ಪ್ರೂವ್ ಮಾಡಿದ ಒಂದಷ್ಟು ಕ್ರಿಕೆಟಿಗರು ಐಪಿಎಲ್ ನಲ್ಲೂ ಆಡಿದ ಉದಾಹರಣೆಗಳಿವೆ.ಅಲ್ಲದೇ ಹೆಸರಾಂತ ಆಟಗಾರರು ಕೂಡ ಕೆಪಿಎಲ್ ನಲ್ಲಿ ಆಡಿರುವುದುಂಟು..ಇಂದಿಗೂ ಆಡುತ್ತಿದ್ದಾರೆ ಕೂಡ.

ಕೆಪಿಎಲ್ ಗೆ ತಾರಾ ಮೆರಗು ನೀಡುವುದಕ್ಕಂತೆನೇ ಸಿನೆಮಾ ಸೆಲಬ್ರಿಟಿಗಳನ್ನು ಬ್ರಾಂಡ್ ಅಂಬಾಸಿಡರ್ ಗಳನ್ನಾಗಿ ನಿಯೋ ಜಿಸಿಕೊಳ್ಳುವುದು ಪ್ರಾಂಚೈಸಿಗಳಿಗೆ ಒಂದ್ರೀತಿ ಫ್ಯಾಷನ್.ಅದು ಐಪಿಎಲ್ ನಲ್ಲೂ ನಡೀತಾ ಬಂದಿದೆ.ತಂಡದ ಬ್ರಾಂಡನ್ನು ಎಸ್ಟಾಬ್ಲಿಷ್ ಮಾಡಿಕೊಳ್ಳೋದ್ರ ಜೊತೆಗೆ ಆಟಗಾರರನ್ನು ಚಿಯರ್ ಅಪ್ ಮಾಡೋದು ಕೂಡ ಪ್ಲ್ಯಾನ್ ನ ಭಾಗ.ಕೆಪಿಎಲ್ ವಿಷಯ ಕ್ಕೆ ಬಂದ್ರೆ ಡ್ರಗ್ಗಿಣಿ ರಾಗಿಣಿಯಮ್ಮ ಕೂಡ ಬಳ್ಳಾರಿಯ ಟಸ್ಕರ್ ತಂಡಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡಿದವಳು. ಕೆಪಿಎಲ್ ಉದ್ದಕ್ಕೂ ತಂಡದಲ್ಲಿದ್ದು ಚಿಯರ್ ಅಪ್ ಮಾಡಿ ಲಕ್ಷಾಂತರ ಗಿಟ್ಟಿಸಿದ್ದಾಳೆ ಕೂಡ.

ಕೆಪಿಎಲ್ ನ್ನು ಡ್ರಗ್ ಗೆ ಲಿಂಕ್ ಮಾಡಬಹುದಾಗಿರುವುದಕ್ಕೂ ಸಾಕಷ್ಟು ಕಾರಣಗಳಿವೆ.ರಾಗಿಣಿ ಕಾಲಿಟ್ಟಲ್ಲೆಲ್ಲಾ ಡ್ರಗ್ಸ್ ನ ಪ್ರಚಾರ ರಾಯಭಾರಿಯಾಗಿ ಕೆಲಸ ಮಾಡಿರುವಂತೆ ಕೆಪಿಎಲ್ ನಲ್ಲೂ ಬ್ರಾಂಡ್ ಅಂಬಾಸಿಡರ್ ಆದಂಥ ಸಂದರ್ಭದಲ್ಲಿ ಅಲ್ಲಿಯೂ ದಂಧೆ ಯ ಕಿಂಗ್ ಪಿನ್ ಆಗಿ ಕೆಲಸ ಮಾಡಿರುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ.ಆಟಗಾರರನ್ನು ಬುಟ್ಟಿಗೆ ಹಾಕ್ಕೊಂಡಿರುವ ಸಾಧ್ಯತೆಗಳನ್ನೂ ಅಲ್ಲಗೆಳೆಯುವಂತಿಲ್ಲವಂತೆ.

ಟೀಮ್ ನಲ್ಲಿರುವವರೆಗೂ ಡ್ರಗ್ಸ್ ನ್ನು ತನ್ನ ಕಾಂಟ್ಯಾಕ್ಟ್ ನ್ನು ಆಟಗಾರರಿಗೆ-ಪ್ರಾಂಚೈಸಿಗಳಿಗೆ,ಇತರೆ ತಂಡಗಳಿಗೂ ವಿಸ್ತರಿಸಿರುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ.ಕೆಪಿಎಲ್ ವೇಳೆ ಸಾಕಷ್ಟು ಬಾರಿ ಲೇಟ್ ನೈಟ್ ಪಾರ್ಟಿಗಳು ನಡೆದಿರಬಹುದು.ಆ ಪಾರ್ಟಿಯಲ್ಲಿ ರಾಗಿಣಿ ಡ್ರಗ್ಸ್ ನ ಕಿಂಗ್ ಪಿನ್ ಆಗಿ ಕೆಲಸ ಮಾಡಿರುವ ಸಾಧ್ಯತೆಗಳನ್ನೂ ಅಲ್ಲಗೆಳೆಯೊಕ್ಕಾಗೊಲ್ಲ.ಏಕೆಂದ್ರೆ ಎಲ್ಲೆಲ್ಲಾ ರಾಗಿಣಿ ಹವಾ ಇತ್ತೋ..ಅಲ್ಲೆಲ್ಲಾ ಆಕೆ ಇಂತದ್ದೊಂದು ನಶೆಯ ಪ್ರಪಂಚವನ್ನು ಸೃಷ್ಟಿಸಿ ಒಂದಷ್ಟು ಜನರನ್ನು ಹಾಳು ಮಾಡಿರುವ ಬಗ್ಗೆ ಸಾಕಷ್ಟು ನಿದರ್ಶನಗಳು ತನಿಖೆ ವೇಳೆಯಲ್ಲಿ ಸಿಕ್ಕಿವೆ.

ಅದೇ ರೀತಿ ಡ್ರಗ್ಸ್ ನ ನಶೆಯನ್ನು ಕೆಪಿಎಲ್ ನಲ್ಲೂ ಹಬ್ಬಿಸಿರುವ ಸಾಧ್ಯತೆಗಳಿವೆ.ಪ್ರಾಂಚೈಸಿಗಳೊಂದಿಗೆ ಆಕೆಗಿದ್ದ  ನಿಕಟ ಸಂಪರ್ಕವನ್ನೇ ಆಕೆ ಡ್ರಗ್ಸ್ ಗೆ ಮಿಸ್ಯೂಸ್ ಮಾಡ್ಕೊಂಡಿರುವ ಸಾಧ್ಯತೆಗಳಿವೆ.ಶ್ರೀಮಂತರೇ ಮಾಲೀಕರಾಗಿರುವ ಪ್ರಾಂಚೈಸಿ ಗಳನ್ನು ಒಳಗಾಕಿಕೊಂಡು ದಂಧೆ ನಡೆಸಿರುವ ಆತಂಕವಿದೆ.ಎಲ್ಲಾ ನಿಟ್ಟಿನಲ್ಲೂ ತನಿಖೆ ಕೈಗೊಂಡಿರುವ ಸಿಸಿಬಿ ಕೆಪಿಎಲ್ ಲಿಂಕ್ ನಲ್ಲೂ ವರ್ಕೌಟ್ ಮಾಡಿದ್ರೆ,ಸಾಕಷ್ಟು ಸ್ಪೋಟಕ ಮಾಹಿತಿಗಳು ಸಿಗ್ಬೋದೇನೋ…

ಅದು ಸತ್ಯವೇ ಆಗಿದ್ದರೆ ಕೇವಲ ಸೆಲಬ್ರಿಟಿಗಳು,..ಪೊಲಿಟಿಷಿಯನ್ಸ್ ಗಳಿಗೆ ಸೀಮಿತವಾಗಿದ್ದ ಡ್ರಗ್ಸ್ ದಂಧೆಯ ಕರಾಳ ಸಂಪರ್ಕ ಕ್ರಿಕೆಟ್ ತಂಡಗಳ ಪ್ರಾಂಚೈಸಿಗಳು ಹಾಗೂ ಆಟಗಾರರಿಗೂ ಇರುವ ಮತ್ತಷ್ಟು ಸ್ಪೋಟಕ ಸಂಗತಿಗಳು ಬಯಲಾಗ್ಬೋದು.ತನಿಖೆಯ ಬೆಳಕಿನಲ್ಲಿ ಕ್ರಿಕೆಟ್ ಪ್ಲೇಯರ್ಸ್ ಬಂಡವಾಳ ಕೂಡ ಬಯಲಾಗ್ಬೋದೇನೋ..   

Spread the love
Leave A Reply

Your email address will not be published.

Flash News