CORONA LOCKDOWN HEROESCORONA VIRUSKANNADAFLASHNEWSFIGHTAGAINSTCORONAMoreTop NewsUncategorizedಜಿಲ್ಲೆಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

ಬಿಬಿಎಂಪಿ ಬಾಸ್ ಆಗಿ ಗೌರವ್ ಗುಪ್ತ ಅಧಿಕಾರ ಸ್ವೀಕಾರ-“ಬೆಂಗಳೂರು ಅಭಿವೃದ್ಧಿ ಜತೆಗೆ ಜನರ ಹಿತಾಸಕ್ತಿ ಎತ್ತಿಹಿಡಿಯುವೆ”

ಬೆಂಗಳೂರು:ಬಿಬಿಎಂಪಿಯ ನೂತನ ಆಡಳಿತಾಧಿಕಾರಿ ಯಾಗಿ ಗೌರವ್ ಗುಪ್ತಾ ಇಂದು ಅಧಿಕಾರ ಸ್ವೀಕರಿಸಿದರು.

ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಕೇಂದ್ರ ಕಚೇರಿಯಲ್ಲಿ ಗೌರವ ಗುಪ್ತ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು ನೂತನ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಗೌರವ್ ಗುಪ್ತಾ ತಮ್ಮ ಮುಂದೆ ಇರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಭರವಸೆ ನೀಡಿದರು.

ಚುನಾಯಿತ ಪ್ರತಿನಿಧಿಗಳು ಇಲ್ಲದ ಸಂದರ್ಭದಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಅದು ಸವಾಲಿನ ವಿಷಯವೇ ಆದರೂ ಕೂಡ ಕಮಿಷನರ್ ಮಂಜುನಾಥ್ ಪ್ರಸಾದ್ ರವರ ಅಪಾರ ಅನುಭವ ಹಾಗೂ ಬಿಬಿಎಂಪಿಯ ಬಗ್ಗೆ ಇರುವ ಮಾಹಿತಿಯನ್ನು ಕ್ರೋಡೀಕರಿಸಿ ಅವರ ಸಹಕಾರದೊಂದಿಗೆ ಕೆಲಸವನ್ನು ನಿರ್ವಹಿಸುವುದಾಗಿ ಗೌರವ ಗುಪ್ತಾ ತಿಳಿಸಿದರು.
ಬೆಂಗಳೂರು ಅಭಿವೃದ್ಧಿ ಹಾಗೂ ನಾಗರಿಕರ ಕ್ಷೇಮಾಭಿವೃದ್ಧಿ ಎರಡೂ ಕೂಡ ತಮ್ಮ ಮುಂದಿರುವ ಬಹುದೊಡ್ಡ ಸವಾಲು ಗಳು.ಈ ಸವಾಲನ್ನು ಸಮರ್ಥವಾಗಿ ಎದುರಿಸಲಿದ್ದೇನೆ .ಇದಕ್ಕೆ ಚುನಾಯಿತ ಪ್ರತಿನಿಗಳಾಗಿದ್ದವರ ಸಹಕಾರ ಕೂಡ ಅಗತ್ಯವಾಗಿ ಬೇಕಾಗಿದೆ. ಈ ನಿಟ್ಟಿನಲ್ಲಿ ಅವರ ವಿಶ್ವಾಸ ಗಳಿಸುವ ಕೆಲಸವನ್ನು ಮಾಡುವುದಾಗಿ ಗೌರವ್ ಗುಪ್ತಾ ಹೇಳಿದರು.

ಅಂದಹಾಗೆ ಚುನಾಯಿತ ಪ್ರತಿನಿಧಿಗಳಿಲ್ಲದ ಸಂದರ್ಭದಲ್ಲಿ ಕಮಿಷನರ್ ಮಂಜುನಾಥ್ ಪ್ರಸಾದ್ ಹಾಗೂ ಗೌರವ್ ಗುಪ್ತಾ ಜೋಡೆತ್ತಿನಂತೆ ಕೆಲಸಮಾಡಬೇಕಾಗಿದೆ.ಇಬ್ಬರ ನಡುವೆಯೂ ಸಮನ್ವಯ ಅತ್ಯವಶ್ಯಕವಾಗಿದೆ.ಈ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳಾಗಿರುವ ಹಿನ್ನಲೆಯಲ್ಲಿ ಅವರ ನಡುವೆ ಸಮನ್ವಯದ ಕೊರತೆ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ಅವಕಾಶ ಕೊಡದ ರೀತಿಯಲ್ಲಿ ಕಾರ್ಯನಿರ್ವಹಿಸುವ ಜಾಗರೂಕತೆಯನ್ನು ಗೌರವ್ ಗುಪ್ತ ತೋರಿಸಬೇಕಾಗಿದೆ.

ಬಿಬಿಎಂಪಿ ನೂತನ ಕಾರ್ಪೊರೇಟರ್ ಗಳ ಆಯ್ಕೆ ಆಗುವ ವರೆಗೂ, ಹಾಗೆಯೇ ಚುನಾಯಿತ ವ್ಯವಸ್ಥೆ ಅಧಿಕಾರಕ್ಕೆ ಬರುವವರೆಗೂ ಆಡಳಿತಾಧಿಕಾರಿಯಾಗಿ ಗೌರವ್ ಗುಪ್ತಾ ಕಾರ್ಯನಿರ್ವಹಿಸಲಿದ್ದಾರೆ.ಈ ನಿಟ್ಡಿನಲ್ಲಿ ಸರ್ಕಾರದಿಂದ ಅನುದಾನವನ್ನು ತಂದು ಬೆಂಗಳೂರಿನ ಅಭಿವೃದ್ಧಿಗೆ ಯಾವುದೇ ರೀತಿಯಲ್ಲೂ ಕೊರತೆಯಾಗದಂತೆ ಶ್ರಮಿಸಬೇಕಾದ ಬೇಕಾದ ದೊಡ್ಡ ಹೊಣೆಗಾರಿಕೆ ಅವರ ಮೇಲಿದೆ.ಈ ನಿಟ್ಟಿನಲ್ಲಿ ಕನ್ನಡ ಫ್ಲಾಶ್ ನೂಸ್ ಕಡೆಯಿಂದ ಅವರಿಗೆ ಆಲ್ ದಿ ಬೆಸ್ಟ್.  

ಬಿಬಿಎಂಪಿ ಬಾಸ್ ಆಗಿ ಗೌರವ್ ಗುಪ್ತ ಅಧಿಕಾರ ಸ್ವೀಕಾರ-“ಬೆಂಗಳೂರು ಅಭಿವೃದ್ಧಿ ಜತೆಗೆ ಜನರ ಹಿತಾಸಕ್ತಿ ಎತ್ತಿಹಿಡಿಯುವೆ”

Spread the love

Related Articles

Leave a Reply

Your email address will not be published.

Back to top button
Flash News