CORONA VIRUSKANNADAFLASHNEWSFIGHTAGAINSTCORONAMoreTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆ

ದೇವಸ್ಥಾನದ 3 ಕಾವಲುಗಾರರ ಬರ್ಭರ ಕೊಲೆಗೆ ಬೆಚ್ಚಿಬಿದ್ದ ಮಂಡ್ಯ-ಒಂದೇ ವಾರದಲ್ಲಿ ಐದು ಕೊಲೆ-ಇದೇನಿದು ಎಸ್ಪಿ ಪರಶುರಾಮ್ ಸಾಹೇಬ್ರೇ…

ಮಂಡ್ಯ: ಸಕ್ಕರೆನಾಡು ಮಂಡ್ಯ ಬೆಚ್ಚಿಬಿದ್ದಿದೆ.ಇದಕ್ಕೆ ಕಾರಣ ಒಂದೇ ವಾರದಲ್ಲಿ ಐವರ  ಬರ್ಬರ ಹತ್ಯೆ.ಇದಕ್ಕೆ ಪುಷ್ಟಿ ನೀಡುವಂತೆ ಮೂವರ ಕಗ್ಗೊಲೆ ನಡೆದೋಗಿದೆ.ಇಲ್ಲಿನ ಗುತ್ತಲಿನ ಅರ್ಕೇಶ್ವರ ದೇವಾಲಯದಲ್ಲಿ ಕಾವಲಿಗಿದ್ದ ಮೂವರು ಕಾವಲುಗಾರರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ದೇವಾಲಯದಲ್ಲಿ ಮಲಗಿದ್ದ ಪ್ರಕಾಶ,ಆನಂದ,ಗಣಪತಿ  ಎನ್ನುವ ಕಾವಲುಗಾರರನ್ನು ದುಷ್ಕರ್ಮಿಗಳು ಕತ್ತಿ ಎತ್ತಾಕಿ ಕೊಲೆಗೈದಿದ್ದಾರೆ.ಈ ಮೂಲಕ ಒಂದೇ ವಾರದಲ್ಲಿ ನಡೆದ ಐವರ ಕೊಲೆ ನಡೆದಂತಾ್ಗಿದೆ.

ದೇವಾಲಯದಲ್ಲಿ ತಮಡಿಗಳಾಗಿ ಕೆಲಸ ಮಾಡ್ತಿದ್ದಪ್ರಕಾಶ,ಆನಂದ,ಗಣಪತಿ ಅವರ ಮೇಲೆ ಅಟ್ಯಾಕ್ ಮಾಡಿ  ಹುಂಡಿ ಕದ್ದೋಯ್ಯುವ ಸನ್ನಿವೇಶದಲ್ಲಿ ಈ ಕೊಲೆ ನಡೆದಂತೆ ಕಾಣುತ್ತಿದೆ.ಏಕೆಂದ್ರೆ ಸತ್ತವರಿಂದ ಒಂದಷ್ಟು  ದೂರದಲ್ಲಿ ಹುಂಡಿಯನ್ನು ದುಷ್ಕರ್ಮಿಗಳು ಬಿಸಾಡಿದಂತಿದೆ. ದೇವಾಲಯ ಕಳ್ಳತನ ನಡೆಸೋ ತಂಡದಿಂದ ದುಷ್ಕೃತ್ಯ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮಂಡ್ಯ ಡಿವೈಎಸ್ಪಿ ನವೀನ್  ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಈಗಾಗ್ಲೇ ನಡೆದ ಆ ಎರಡು ಕೊಲೆ ಮಾಡಿದ ಕಿರಾತಕರೇ  ಈ ಮೂವರು ಕಾವಲುಗಾರರನ್ನು ಕೊಲೆ ಮಾಡಿರಬಹುದಾ ಎನ್ನುವ ಶಂಕೆ ಹಿನ್ನಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.

ದೇವಸ್ಥಾನದ 3 ಕಾವಲುಗಾರರ ಬರ್ಭರ ಕೊಲೆಗೆ ಬೆಚ್ಚಿಬಿದ್ದ ಮಂಡ್ಯ-ಒಂದೇ ವಾರದಲ್ಲಿ ಐದು ಕೊಲೆ-ಇದೇನಿದು ಎಸ್ಪಿ ಪರಶುರಾಮ್ ಸಾಹೇಬ್ರೇ…

Spread the love

Related Articles

Leave a Reply

Your email address will not be published.

Back to top button
Flash News