ಹೊಸಪೇಟೆಯಲ್ಲಿ ದಿಢೀರ್ ಪ್ರತ್ಯಕ್ಷವಾದ ಮೊಸಳೆ-ಆತಂಕಗೊಂಡ ಜನ-ಮೊಸಳೆಗಳಿಂದ ಎಚ್ಚರದಿಂದಿರುವಂತೆ ಸೂಚನೆ

0

ಬಳ್ಳಾರಿ/ ಹೊಸಪೇಟೆ: ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದ ಮದ್ಯಬಾಗದಲ್ಲಿ ಹರಿಯುತ್ತಿರುವ ಬಸವಕಾಲುವೆಯಲ್ಲಿ ಮೊಸಳೆ ಪತ್ತೆಯಾಗಿದೆ.

ನಗರದ ಅಮರಾವತಿ ಪ್ರದೇಶ ಬಳಿಯಲ್ಲಿ ಹರಿದಿರುವ ಕಾಲುವೆ ದಡದಲ್ಲಿ  ಮೊಸಳೆ ಕಂಡು ಸ್ಥಳೀಯರು  ಆತಂಕಗೊಂಡಿದ್ದಾರೆ.ಇದೇ ಮೊದಲ ಬಾರಿಗೆ ಈ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಮೊಸಳೆ ಜನಸಂದಣಿ ಹೆಚ್ಚಾಗುತಿದ್ದಂತೆ ನೀರಿಗೆ ಇಳಿದು ಕಣ್ಮರೆಯಾಗಿದೆ.

ಇತ್ತೀಚೆಗೆ ತುಂಗಭದ್ರ ನದಿಗೆ ನೀರು ಹರಿ ಬಿಟ್ಟ ಹಿನ್ನೆಲೆಯಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಕಾಲುವೆಗೆ ಬಂದಿರಬಹುದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೀರಿನ ಹರಿವು ಹೆಚ್ಚಾದ ಹಿನ್ನಲೆಯಲ್ಲಿ ಮೊಸಳೆಗಳು ಈ ರೀತಿ ಬಂದಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಮೊಸಳೆಗಳಿಂದ ಎಚ್ಚರದಿಂದಿರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಜನರಿಗೆ ಎಚ್ಚರಿಸಿದ್ದಾರೆ.

Spread the love
Leave A Reply

Your email address will not be published.

Flash News