ಕರುಳಕುಡಿಯನ್ನೇ ಕೊಂದ ಪಾಪಿ ತಂದೆ-ಹೆಣ್ಣಾಯ್ತೆಂಬ ಕೋಪಕ್ಕೆ ಬಕೆಟ್ ನಲ್ಲಿ ಮುಳುಗಿಸಿ ..ಮುಳುಗಿಸಿ ಉಸಿರುಗಟ್ಟಿಸಿ ಕೊಂದ ದುರುಳ “ವಕೀಲ”

0
ಉಮಾಶಂಕರ್,
ಉಮಾಶಂಕರ್,

ಚಿಕ್ಕಮಗಳೂರು:ಚಿಕ್ಕಮಗಳೂರೆನ್ನುವ ಸುಸಂಸ್ಕ್ರತ ಜಿಲ್ಲೆ ದಾರುಣ ಕೃತ್ಯಕ್ಕೆ ಬೆಚ್ಚಿಬಿದ್ದಿದೆ.ಇಂತದ್ದೊಂದು ಕೃತ್ಯ ಎಸಗಿದ ದುರುಳನಿಗೆ ಹಿಡಿಶಾಪ ಹಾಕುತ್ತಿದೆ.ಇದಕ್ಕೆ ಕಾರಣವೇ ಆ ಅಮಾನುಷ ವಕೀಲ.  ಆತನ ಹೆಸರು ಉಮಾಶಂಕರ್, ವೃತ್ತಿಯಲ್ಲಿ ವಕೀಲ..ಸಂವಿಧಾನ-ಕಾನೂನು ತಿಳಿದವ.ಹೆಣ್ಣು-ಗಂಡು ಸಮಾನ ಎಂದು ಅನೇಕ ಬಾರಿ ಕೋರ್ಟ್ ನಲ್ಲಿ ವಾದಿಸುವಾಗ ಪುನರುಚ್ಛರಿಸುತ್ತಿದ್ದಾತ.ಈ ಕಾರಣಕ್ಕೆ   ಸಮಾಜದಲ್ಲಿ ಹೆಸರು ಕೂಡ ಮಾಡಿದ್ದ.

ಇಷ್ಟೆಲ್ಲಾ ಇರೋ ಈತನ ಬಗ್ಗೆ ಚಿಕ್ಕಮಗಳೂರು ಬೈಯ್ದುಕೊಳ್ಳುತ್ತಿದೆ. ನಿಜಕ್ಕೂ ಮನುಷ್ಯನಾ ಎಂಬ ಪ್ರಶ್ನೆ ಮಾಡುತ್ತಿದೆ.ಏಕೆಂದ್ರೆ ಆತ ಅಂತದ್ದೊಂದು ಹೀನಾತೀಹೀನ ಕೃತ್ಯ ಎಸಗಿದ್ದಾನೆ. ತನ್ನ 8 ತಿಂಗಳ ಪುಟ್ಟ ಮಗುವಿನ ಬಾಯಿಗೆ ಪ್ಲ್ಯಾಸ್ಟಿಕ್ ಸುತ್ತಿ, ಬಕೆಟ್ ನಲ್ಲಿದ್ದ ನೀರಿನಲ್ಲಿ ಮುಳುಗಿಸಿ..ಮುಳುಗಿಸಿ ಕೊಂದಾಕಿದ್ದಾನೆ. ತಾನು ಜನ್ಮ ಕೊಟ್ಟ ಮಗುವಿನ ಉಸಿರನ್ನೇ ನಿಲ್ಲಿಸಿದ್ದಾನೆ ಉಮಾಶಂಕರ್.

ಯಾವ ಕಾರಣಕ್ಕೆ ಈ ನೀಚ ಕೃತ್ಯ ಎಸಗಿದ ಅನ್ನೋ ಕಾರಣ ಕೇಳಿದ್ರೆ ಎಂಥಾವರು ಕೂಡ ಈ ವಕೀಲನಿಗೆ ಛೀಮಾರಿ ಹಾಕುತ್ತಾರೆ. ಕೆಲವು ಮೂಲಗಳು ತನಗೆ ಹೆಣ್ಣು ಮಗು ಹುಟ್ಟಿತಲ್ಲ ಎಂಬ ಮನಸ್ಥಿತಿಯಲ್ಲಿ ವಕೀಲ ಉಮಾಶಂಕರ ಮಗುವನ್ನು ಹೀಗೆ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎನ್ನುತ್ತಿವೆ.

ಅಷ್ಟಕ್ಕೂ ಈ ಮನಕಲಕುವ ದುರ್ಘಟನೆ ನಡೆದಿರೋದು ಕಾಫಿನಾಡು ಚಿಕ್ಕಮಗಳೂರಿನ ಕಡೂರು ಪಟ್ಟಣದ ದೊಡ್ಡ ಪೇಟೆಯಲ್ಲಿ…  ಈ ಮನಕುಲಕುವ ಸುದ್ದಿ ತಿಳಿದ ಕಡೂರು ಪೊಲೀಸರು ದುಷ್ಟ ಉಮಾಶಂಕರನನ್ನು ಬಂಧಿಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.ಆಧುನಿಕ ಯುಗದಲ್ಲೂ ಹೆಣ್ಣು ಅನ್ನೋ ಒಂದೇ ಕಾರಣಕ್ಕೆ ಈತ ಎಂಟು ತಿಂಗಳ ಮಗುವನ್ನೆ ಕೊಂದುಬಿಟ್ಟನಲ್ಲಾ ಈತನಿಗೆ ತಕ್ಷ ಶಿಕ್ಷೆ ಆಗಬೇಕು ಅಂತ ಕಡೂರು ಹಿಡಿಶಾಪ ಹಾಕ್ತಾ ಕಾನೂನನ್ನು ಒತ್ತಾಯಿಸುತ್ತಿದ್ದಾರೆ..

Spread the love
Leave A Reply

Your email address will not be published.

Flash News