ವಾರಿಯರ್ಸ್ ನ್ನೇ ಮರೆತ ಬಿಬಿಎಂಪಿ- ಕೆಂಪೇಗೌಡ ಪ್ರಶಸ್ತಿಯಲ್ಲಿ ನಿಲ್ಲದ ಲಾಭಿ- ಕೊರೊನಾ ಸೇವೆಗೆ ಸಂಬಂಧವೇ ಇಲ್ಲದ ಬಹುತೇಕರು ಕೂಡ ಪುರಸ್ಕ್ರತರೇ..!!

0

ಬೆಂಗಳೂರು: ಯಾರೇ ಮೇಯರ್ ಆದ್ರೂ..ಯಾವುದೇ ಪಕ್ಷ ಬಿಬಿಎಂಪಿಯಲ್ಲಿ ಆಡಳಿತಕ್ಕೆ ಬರಲಿ,ಈ ಕೆಂಪೇಗೌಡ ಪ್ರಶಸ್ತಿಯಲ್ಲಿ ನಡೆಯುವ ಲಾಭಿ-ಜಾತಿರಾಜಕಾರಣ-ಸ್ವಜನಪಕ್ಷಪಾತ ತಡೆಯೊಕ್ಕೆ ಸಾಧ್ಯವೇ ಆಗಿಲ್ಲ..ಸಾಧ್ಯವೂ ಆಗೊಲ್ಲ..ಅದು ಈ ಬಾರಿಯೂ ರಿಪೀಟ್ ಆಗಿದ್ದು ದೌರ್ಭಾಗ್ಯಪೂರ್ಣ.ಮೇಯರ್ ಹುದ್ದೆಯಿಂದ ಕೆಳಗಿಳಿಯುವ ವೇಳೆ  ಗೌತಮ್ ಜೈನ್ ಮಾಡಿದ್ದು ಕೂಡ ಅದೇ….

ಕೊರೊನಾ ವೇಳೆ ವಾರಿಯರ್ಸ್ ಗಳಾಗಿ ಕೆಲಸ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ಕೊಡುವುದಾಗಿ ಬಡಾಯಿ ಕೊಚ್ಚಿಕೊಂಡಿದ್ರು.ಪೌರ ಕಾರ್ಮಿಕರು,ನರ್ಸ್-ವೈದ್ಯರು ಹಾಗೂ ಎನ್ ಜಿಓ ಗಳನ್ನು ಇದಕ್ಕಾಗಿ ಪರಿಗಣಿಸಲಾಗ್ತದೆ ಎಂದೇ ಭಾವಿಸಲಾಗಿತ್ತು.ಇದಕ್ಕಾಗಿ ಕಮಿಟಿಯೊಂದ

ನ್ನು ಮಾಡ್ತೇವೆ ಎಂದೆಲ್ಲಾ ಹೇಳಿದ್ರು.ಆದ್ರೆ ಆದದ್ದು ಮಾತ್ರ ಅದೇ ಆವಾಂತರ-ಅಂಡಾಗುಂಡಿ.32 ಪುರಸ್ಕ್ರತರಲ್ಲಿ ಅದೆಷ್ಟ್ ಜನ ಕೊರೊನಾ ವಾರಿಯರ್ಸ್ ಆಗಿ ಕಾಣಿಸಿದೆಯೋ ಗೊತ್ತಿಲ್ಲ.ಒನ್ಸ್ ಎಗೈನ್ ಎಲ್ಲಾ ಮಾನದಂಡವನ್ನು ಗಾಳಿಗೆ ತೂರಿ ಕಮಿಟಿ ಪ್ರಶಸ್ತಿ ಪ್ರಕಟಿಸಿ ಕೊಟ್ಟಿದ್ದೂ ಆಗೋಗಿದೆ.

ಇಪ್ಪತ್ತು ಜನ ಕರೋನಾ ವಾರಿಯರ್ಸ್ ಗೆ ಮಾತ್ರ ಪ್ರಶಸ್ತಿ ನೀಡಿ ಮೇಲ್ಪಂಕ್ತಿ ಆಗ್ತೀನಿ ಸರಳತೆ ಮೇರಿತೀನಿ ಅಂತ ಬುರುಡೆ ಬಿಟ್ಟ ಗೌತಮ್ ಪಟ್ಟಿ 32 ಕ್ಕೇರಿತ್ತು.ಸಂಖ್ಯೆ ಹಾಳಾಹಿ ಹೋಗ್ಲಿ ಬಿಡಿ..ಅದೆಷ್ಟ್ ಜನ ಕೊರೊನಾ ವಾರಿಯರ್ಸ್ ಗೆ ಪ್ರಶಸ್ತಿ ನೀಡಲಾಗಿದೆ ಎನ್ನುವುದನ್ನು ಮೇಯರ್ ಸ್ಪಷ್ಟಪಡಿಸಬೇಕಿದೆ.

ಉದಾಹರಣೆ ನೋಡಿ..ನಂದಿ ದುರ್ಗದ ಬಾಲುಗೌಡ  ಎನ್ನೋರಿಗೆ ಎರಡನೇ ಬಾರಿ ಕೆಂಪೇಗೌಡ ಪ್ರಶಸ್ತಿ ನೀಡಿ ವಿವಾದ ಮೈಮೇಲೆ ಎಳೆದುಕಂಡಿದೆ ಬಿಬಿಎಂಪಿ/ ಇದರ ಹಿಂದೆ ಕರ್ನಾಟಕ ರಾಜ್ಯ ಒಕ್ಕಲಿಗ ಸಮುದಾಯದ ಶಿಫಾರಸ್ಸಿನ ಒತ್ತಡವಿತ್ತು ಎನ್ನಲಾಗ್ತಿದೆ. ಅದರಲ್ಲಿ ಸಂತೋಷ್ ತಮ್ಮಯ್ಯ ವಿವಾದಿತ, ಸಾಹಿತ್ಯ ರಚನೆ ಮಾಡದ ದೂರುಗಳಿದ್ದರೂ ಗೌತಮ್ ಅವರದು0  ದಿವ್ಯ ಮೌನ. ಇನ್ನು ಗಾಯಕ ರಾಜೇಶ್ ಕೃಷ್ಣನ್‌ರನ್ನ ವಿಚ್ಚೇಧಿತ ಪತ್ನಿ, ಗಾಯಕಿ ರಮ್ಯ ವಶಿಷ್ಠ ರಾಜೇಶ್ ವಿರುದ್ಧ ಷಂಡತನದ ಆರೋಪ ಹೊರಿಸಿದ್ದರು.ಅದು ವೈಯುಕ್ತಿಕ ಬಿಡಿ ಎಂದುಕೊಂಡ್ರೂ, ಅವರಿಗೆ  ಕೆಂಪೇಗೌಡ ಪ್ರಶಸ್ತಿಯನ್ನು ಯಾವ್ ಮಾನದಂಡದ ಮೇಲೆ ನೀಡಲಾಗಿದೆ ಎನ್ನುವುದು ಗೊತ್ತಾಗ್ತಿಲ್ಲ. ಈಯಮ್ಮ ಸಂಗೀತ ಕ್ಷೇತ್ರದಲ್ಲಿ ಅದೆಂಥಾ ಸಾಧನೆ ಮಾಡಿದ್ದಾಳೋ ದೇವರಿಗೆ ಗೊತ್ತು..

ಇನ್ನು ಶಿವಮೊಗ್ಗ ತೀರ್ಥಹಳ್ಳಿಯ ಅಚ್ಯುತ್ ಗೌಡರಿಗೆ ಕೆಂಪೇಗೌಡ ಪ್ರಶಸ್ತಿ ನೀಡಲಾಗಿದೆ.ಅದ್ಯಾವ ಆಂಗಲ್ ನಲ್ಲಿ ಈತ ಸಮಾಜ ಸೇವೆ ಮಾಡಿದ್ದಾನೋ ಗೊತ್ತಾಗ್ತಿಲ್ಲ. ವಿನಯ ಗುರೂಜಿಯ ಆಪ್ತ ಭಕ್ತವೃಂದದಲ್ಲಿ ಒಬ್ಬ,ಪಿ.ಸಿ ಮೋಹನ್,ಸಂಸದ ತೇಜಸ್ವಿ ಸೂರ್ಯನಿಗೆ ಪರಿಚಯಸ್ಥ ಎನ್ನೋದು ಬಿಟ್ಟರೆ ಕೊರೊನಾ ಟೈಮಲ್ಲಿ ಬೀದಿಗಿಳಿದು ವಾರಿಯರ್ ಆಗಿ ಕೆಲಸ ಮಾಡಿದ್ದು ಯಾರೊಬ್ಬರೂ ನೋಡಿಲ್ಲ.  

32 ಜನರಿಗೆಪ್ರಶಸ್ತಿ ನೀಡಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ.ಆದ್ರೆ ಇದರ ಲ್ಲಿ ಅದೆಷ್ಟು ಜನ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಿದ್ದಾರೆನ್ನೋದಷ್ಟೆ ನಮ್ಮ ವಾದ. ಏಕೆಂದ್ರೆ ಈ ಬಗ್ಗೆ ವಿರೋಧ ಪಕ್ಷ ನಾಯಕ ಅಬ್ದುಲ್ ವಾಜಿದ್ ಅಸಹನೆ ವ್ಯಕ್ತಪಡಿಸಿ ಪಟ್ಟಿ ಸಮೇತ ದೂರು ನೀಡಿದ್ದಾರೆ.

ಅಲ್ರಿ..ಕೊರೊನಾ ಶವಗಳನ್ನು ತಮ್ಮ ಜೀವದ ಹಂಗು ತೊರೆದು ವಿಧಿವತ್ತಾಗಿ ಅಂತ್ಯಸಂಸ್ಕಾರ ಮಾಡಿದ ಏಂಜೆಲ್ ಎನ್ನುವ ಎನ್ ಜಿಓ ಕೊರೊನಾ ವಾರಿಯರ್ ಆಗಿ ಗೋಚರಿಸದೇ ಹೋದದ್ದು ಟ್ರ್ಯಾಜಿಡಿ ಅಲ್ಲದೇ ಇನ್ನೇನು.ಸರ್ಕಾರದ ಮಟ್ಟದಲ್ಲಿರುವ ಸಚಿವರು,ಶಾಸಕರು,ಕಾರ್ಪೊರೇಟರ್ಸ್ ಗಳೇ ಫೋನ್ ಮಾಡಿ ತಮ್ ಕ್ಯಾಂಡಿಡೇಟ್ ಗೆ ಅವಾರ್ಡ್ ಸಿಗ್ಲೇಬೇಕೆಂದು ಶಿಫಾರಸ್ಸು ಮಾಡುವಾಗ ಅರ್ಹರು-ಪ್ರತಿಭಾನ್ವಿತರು-ಸಮರ್ಥರಿಗೆ ಕೆಂಪೇಗೌಡ ಪ್ರಶಸ್ತಿ ಸಿಗೊಕ್ಕಾಗುತ್ತಾ..ಸುಮ್ಮನೆ ಭ್ರಮೆ ಅಷ್ಟೇ..  

Spread the love
Leave A Reply

Your email address will not be published.

Flash News