KANNADAFLASHNEWSFIGHTAGAINSTCORONAMoreTop NewsUncategorizedಜಿಲ್ಲೆರಾಜಕೀಯರಾಜ್ಯ-ರಾಜಧಾನಿ

ನೆರೆಸಂತ್ರಸ್ಥರ ಗೋಳು ಕೇಳದ ಇಂಥ ಸಚಿವರು ನಿಜವಾಗ್ಲೂ ಬೇಕಾ…??ನೆರೆ ಜಿಲ್ಲೆಗಳಿಗೆ ಅಶೋಕ್-ಈಶ್ವರಪ್ಪ-ಸೋಮಣ್ಣ ಭೇಟಿ ಕೊಟ್ಟಿದ್ದೆಷ್ಟು ಬಾರಿ ಗೊತ್ತಾ..?

ಬೆಂಗಳೂರು:ನಾಚಿಕೆ..ಇವರಿಗಲ್ಲ..ಇಂಥವ್ರನ್ನು ಆಯ್ಕೆ ಮಾಡಿದ ನಮಗೆ ಆಗಬೇಕು..ನಮ್ಮ ತಪ್ಪುಗಳಿಗೆ ನಮ್ಮನ್ನು ನಾವೇ ಬೈಯ್ದುಕೊಳ್ಳಬೇಕು..ಇವರಿಗೆ ಬೈಯ್ದೇನ್  ಪ್ರಯೋಜನವಿಲ್ಲ.ನಮ್ಮ ಕಷ್ಟ-ಗೋಳು ಕೇಳಿಸಿಕೊಳ್ಳದ ಜನಪ್ರತಿನಿಧಿಗಳ ನಿರ್ಲಕ್ಷ್ಯ-ನಿರ್ಲಜ್ಜತನ ನೆರೆ ವಿಷಯದಲ್ಲೂ ಮುಂದುವರೆದಿದೆ.ಜವಾಬ್ದಾರಿಯುತ ಸಚಿವರೆನಿಸಿಕೊಂಡ ಸಾಕಷ್ಟು ಚುನಾಯಿತರು, ನೆರೆಯಿಂದ ಜನ  ತತ್ತರಿಸುತ್ತಿದ್ದರೂ ಭೇಟಿ ಕೊಟ್ಟು ಸ್ಪಂದಿಸಿದ್ದೇ ಕಡ್ಮೆ.ಇದರ ಒಂದಷ್ಟ್ ಡೀಟೈಲ್ಸ್ ಕೊಡ್ತೇವೆ ನೋಡಿ.

ನಿಮಗೆ ಗೊತ್ತಿರದೆ ಇರೊಲ್ಲ ಬಿಡಿ..ಕಳೆದ ವರ್ಷ  ಅಬ್ಬರಿಸಿದ ವರುಣ ರಾಜ್ಯದ 13 ಜಿಲ್ಲೆಗಳನ್ನು ಸಂಪೂರ್ಣ ಜಲಾವೃತ್ತಗೊಳಿಸಿದ್ದ.ನೂರಾರು ಕೋಟಿ ನಷ್ಟ..ಜೀವಹಾನಿ ಎಲ್ಲವೂ ಸಂಭವಿಸಿತ್ತು.ಆದ್ರೆ ಪ್ರಾಕೃತಿಕ ವಿಕೋಪದ ಸಂಪೂರ್ಣ ಉಸ್ತುವಾರಿ ಹೊತ್ತಿರುವ ಕಂದಾಯ ಸಚಿವ ಆರ್.ಅಶೋಕ್  ಎಷ್ಟು ಬಾರಿ 13 ಜಿಲ್ಲೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ ಗೊತ್ತಾ..ಕೇಳುದ್ರೆ ನಗುಬರುತ್ತೆ.ಜತೆಗೆ ಕೆಂಡಂಥ ಕೋಪ ಕೂಡ.

ಬೆಂಗಳೂರಿನಲ್ಲಿ ಕೂತು ರಾಜಕೀಯ ಮಾಡುವ “ಶೋಮ್ಯಾನ್” ಮಿನಿಸ್ಟರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ ಜಿಲ್ಲೆಗಳು ಎಷ್ಟು ಗೊತ್ತಾ..ಕೇವಲ 4 ಜಿಲ್ಲೆ ಎನ್ನಲಾಗಿದೆ.ಉಳಿದ 9 ಜಿಲ್ಲೆಗಳನ್ನು ಯಾರ್ ನೋಡ್ಬೇಕಿತ್ತು..ಅಲ್ಲಿನ ಸಂತ್ರಸ್ಥರ ಗೋಳನ್ನು ಯಾರ್ ಕೇಳ್ಬೇಕಿತ್ತು…ಇದನ್ನು ಖುದ್ದು ಸಚಿವ ಅಶೋಕ್ ಅವ್ರೇ ಹೇಳ್ಬೇಕು. 

ನಾಚಿಕೆಯಾಗುತ್ತೆ… ಕಂದಾಯ ಸಚಿವ ಆರ್ ಅಶೋಕ್ 13 ಜಿಲ್ಲೆಗಳ ಪೈಕಿ ಭೇಟಿ ಕೊಟ್ಟಿದ್ದು ಕೇವಲ 4 ಜಿಲ್ಲೆಗಳು ಎಂದ್ಹೇಳೊಕ್ಕೆ. 2019ರ ಆಗಸ್ಟ್ 29 ರಂದು ಕೊಡಗು,  ಅದೇ ತಿಂಗಳ 31 ರಂದು ಶಿವಮೊಗ್ಗ,2019ರ ಸೆಪ್ಟೆಂಬರ್ 19ಕ್ಕೆ ಚಿಕ್ಕಮಗಳೂರು,ಅಕ್ಟೋಬರ್ 27 ರಂದು ಬೆಳಗಾವಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.ಉಳಿದ 9 ಜಿಲ್ಲೆಗಳಿಗೆ ಭೇಟಿ ಕೊಟ್ಟಿದ್ದರ ಬಗ್ಗೆ ದಾಖಲೆಗಳೇ ಇಲ್ಲ. 

ಇನ್ನು ಗ್ರಾಮೀಣಾಭಿವೃದ್ದಿ ಹಾಗೂ  ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಕೂಡ ಇದಕ್ಕೆ ಹೊರತಾಗಿಲ್ಲ.ಆಗಸ್ಟ್ 21ರಂದು ಬಾಗಲಕೋಟೆ,29 ರಂದು ಬೆಳಗಾವಿ,25 ರಂದು ಕೊಡಗಿಗೆ ವಿಸಿಟ್ ಮಾಡಿದ್ದಾರಂತೆ.ಇನ್ನು ವಸತಿ ಸಚಿವ ವಿ.ಸೋಮಣ್ಣ ಇವರಿಗಿಂತ ನಾನೇನ್ ಕಡ್ಮೆ ಎನ್ನುವಂತೆ 2019ರ ನವೆಂಬರ್ 5-6 ರಂದು ಬಾಗಲಕೋಟೆ,ನವೆಂಬರ್ 4-11 ರಂದು ಬೆಳಗಾವಿಗೆ ಭೇಟಿ ಕೊಟ್ಟಿದ್ದಾರಂತೆ.ಉಳಿದ ಸಚಿವರುಗಳು ಎಲ್ಲೆಲ್ಲಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆನ್ನುವುದಕ್ಕೆ ಅಧೀಕೃತ ದಾಖಲೆಗಳೇ ಇಲ್ಲವಾಗಿದೆ.

ಅಂದ್ಹಾಗೆ ಕಳೆದ ವರ್ಷ ಸಂಭವಿಸಿದ ಜಲಪ್ರಳಯಕ್ಕೆ ಬೆಳಗಾವಿ,ಬಾಗಲಕೋಟೆ, ವಿಜಯಪುರ,ಧಾರವಾಡ, ಗದಗ್,ಹಾವೇರಿ, ಉತ್ತರ ಕನ್ನಡ,ಬಳ್ಳಾರಿ,ಬೀದರ್,ಕಲಬುರ್ಗಿ,ಕೊಪ್ಪಳ,ರಾಯಚೂರು,ಯಾದಗಿರಿ ಜಿಲ್ಲೆಗಳು ಸಂಪೂರ್ಣ ತತ್ತರಿಸಿದ್ದವು.ಈ ಪ್ರವಾಹದಲ್ಲಿ 7,521 ಮನೆಗಳು  ಜಲಾವೃತ್ತವಾಗಿದ್ರೆ 22,869 ಮನೆಗಳಿಗೆ ಭಾಗಶಃ ಹಾನಿಯಾಗಿತ್ತು.ಸಂಪೂರ್ಣ ಮನೆ ಕಳೆದುಕೊಂಡವರಿಗೆ 102 ಕೋಟಿ ಹಾಗೂ ಭಾಗಶಃ ಹಾನಿಗೊಳಗಾದ ಮನೆಗಳಿಗೆ 190 ಕೋಟಿ ಪರಿಹಾರವನ್ನು ನೀಡಲಾಗಿದೆ. 13,663 ಹೆಕ್ಟೇರ್ ನಲ್ಲಿ ಬೆಳೆಯಲಾಗಿದ್ದ ಬೆಳೆ ಹಾಳಾಗಿ 15,230 ಕೋಟಿ ನಷ್ಟವಾಗಿತ್ತು. ಸರ್ಕಾರ 35,160 ಕೋಟಿ ನಷ್ಟವಾಗಿತ್ತೆಂದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.ಆ ವೇಳೆ 1,652 ಕೋಟಿ ಮಾತ್ರ ಪರಿಹಾರ ಬಿಡುಗಡೆಯಾಗಿತ್ತು.

ಜವಾಬ್ದಾರಿಯುತ ಸಚಿವರಾಗಿ ಎಲ್ಲರಿಗಿಂತ ತನ್ನ ಹೊಣೆಗಾರಿಕೆ ಹಾಗೂ ನೈತಿಕತೆ ಮೆರೆಯಬೇಕಿದ್ದುದು  ಕಂದಾಯ ಸಚಿವ ಅಶೋಕ್.ಆದ್ರೆ ಸಾಹೇಬ್ರು ಬೆಂಗಳೂರನ್ನು ಬಿಟ್ಟು ಹೊರಗೆ ಹೋಗುವ ಮನಸು ಮಾಡುತ್ತಲೇ ಇಲ್ಲ.ಬಹುಷಃ ಬೆಂಗಳೂರಿಂದ ಹೊರ ಹೋದ್ರೆ ರಾಜಧಾನಿ ರಾಜಕಾರಣದ ಮೇಲೆ ಎಲ್ಲಿ ಹಿಡಿತ ತಪ್ಪೋಗ್ತದೋ ಎನ್ನುವ ಭಯ ಇರಬೇಕು ಅನ್ನಿಸುತ್ತೆ.ಹಾಗಾಗಿ ಅವರಿಗೆ ಉತ್ತರ ಕರ್ನಾಟಕದ ಜಲಪ್ರಳಯವೂ ಗಂಭೀರ ಎನಿಸಿರ್ಲಿಕ್ಕಿಲ್ಲ.

ಅಧಿಕಾರ ಕೇವಲ ಅನುಭವಿಸ್ಲಿಕ್ಕೆ ಮಾತ್ರ ಇರೋದು ಎನ್ನುವ ಮೆಂಟಾಲಿಟಿಯಲ್ಲಿ ಬಹುತೇಕ ಸಚಿವರು ಇರುವಂತಿದೆ. ಹಾಗಾಗಿ ನೇ ಪ್ರವಾಹದಲ್ಲಿ ಜನ ಸತ್ತರೇನು..ಮನೆಗಳು ಮುಳುಗೋದರೇನು..ಹೊಲಗದ್ದೆಗಳು ಜಲಾವೃತ್ತಗೊಂಡರೆ ನಮಗೇನು ಎನ್ನುವ ಮನಸ್ಥಿತಿಯಲ್ಲಿದ್ದಾರೆ.ಇಂಥವ್ರನ್ನು ನಾಯಕರನ್ನಾಗಿ ಪಡೆದ ನಾವೇ ಧನ್ಯೋಸ್ಮಿ..ಇವರಿಗೆಲ್ಲಾ ಸಂತ್ರಸ್ಥರ ಹಿಡಿಶಾಪ ತಟ್ಟದೇ ಇರುತ್ತಾ..  

Spread the love

Related Articles

Leave a Reply

Your email address will not be published.

Back to top button
Flash News