“ಕಾಫಿ”ಜಿಲ್ಲೆ ಚಿಕ್ಕಮಗಳೂರಿನಲ್ಲಿ ಆತಂಕ ಮೂಡಿಸಿರುವ ‘ಚರ್ಚ್”ಲೂಟಿ: ಖಾಕಿ ಮೌನಕ್ಕೆ ಆಕ್ರೋಶ

0
ಪೊಲೀಸ್ ವರಿಷ್ಠಾಧಿಕಾರಿ  ಹಾಕೆ ಅಕ್ಷಯ್ ಮಚ್ಚೇಂದ್ರ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಹಾಕೆ ಅಕ್ಷಯ್ ಮಚ್ಚೇಂದ್ರ

ಚಿಕ್ಕಮಗಳೂರು:ಕಾಫಿ ಜಿಲ್ಲೆ ಚಿಕ್ಕಮಗಳೂರಿನ ಪೊಲೀಸರ ನಿರ್ಲಕ್ಷ್ಯಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ.ಅವರು ಮಳೆಯ ಚಳಿಗೆ ಬೆಚ್ಚಗೆ ಕಂಬಳಿ ಹೊದ್ದು ಮಲಗಿದ್ದಾರೋ ಅಥವಾ ಬೇಜವಬ್ದಾರಿ ತೋರುತ್ತಿದ್ದಾರೋ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಹಾಕೆ ಅಕ್ಷಯ್ ಮಚ್ಚೇಂದ್ರ ಅವರೇ ಹೇಳಬೇಕಿದೆ.

ಯಾಕೋ ಗೊತ್ತಿಲ್ಲ..ರಾತ್ರಿ ವೇಳೆ  ಕಳ್ಳರು  ರಾಜಾರೋಷವಾಗಿ ಇಲ್ಲಿನ ಚರ್ಚ್‌ಗಳಿಗೆ ಕನ್ನ ಹಾಕುತ್ತಿದ್ದಾರೆ.ಇಷ್ಟೆಲ್ಲಾ ಆಗುತ್ತಿದ್ದರೋ ಅದ್ಯಾಕೋ  ಕಾಫಿನಾಡಿನ ಖಾಕಿ ಮೌನವಾಗಿದೆ…ಚಾಲಾಕಿ ಚೋರರು ನಾಲ್ಕುದಿನಗಳ  ಅಂತರದಲ್ಲಿ 2 ಚರ್ಚ್‌ನಲ್ಲಿ ಕೈಚಳಕ ತೋರುತ್ತಿದ್ರೂ ಆರಕ್ಷರು ಕಳ್ಳರನ್ನು ಖೆಡ್ಡಾಗೆ ಬೀಳಿಸಲು ತಿಣುಕಾಡುತ್ತಿದ್ದಾರೆ.

ಅಂದಹಾಗೆ, ಕಳೆದ ಭಾನುವಾರ ಮಧ್ಯರಾತ್ರಿ ಕಳ್ಳನೊಬ್ಬ ಇಲ್ಲಿನ  ಬೇಲೂರು ರಸ್ತೆ ಸಮೀಪದ ಹ್ಯಾಂಡಿಸ್ ಚರ್ಚ್ ನುಗ್ಗಿ ಚರ್ಚ್‌ನ ಕಾಣಿಕೆ ಹುಂಡಿಯನ್ನ ಲೂಟಿ ಮಾಡಿದ್ದಾನೆ. ಸುಮಾರು 30 ಸಾವಿರಕ್ಕೂ ಹೆಚ್ಚು ಕಾಣಿಕೆ ಹಣವನ್ನ  ಲಪಟಾಯಿಸಿ ಪರಾರಿಯಾಗಿದ್ದ. ಈ ಕೃತ್ಯದಿಂದ ಬೆಚ್ಚಿಬಿದ್ದ ಹ್ಯಾಂಡಿಸ್ ಚರ್ಚ್ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿತ್ತು. ಪೊಲೀಸರು ಸಹ ಸೋಮವಾರ ಬೆಳಗ್ಗೆ  ಚರ್ಚ್ ಗೆ ಆಗಮಿಸಿ, ಪರಿಶೀಲನೆ ನಡೆಸಿ ಕಳ್ಳನಿಗೆ ಖೆಡ್ಡ ತೋಡುವ ಭರವಸೆಯನ್ನ  ನೀಡಿದ್ರು.. ಪೊಲೀಸರು ನಮ್ಮ ಚರ್ಚ್‌ನಲ್ಲಿ ಕಳ್ಳತನವಾದ ಹಣವನ್ನು ವಾಪಸ್ ಕೊಡಿಸುತ್ತಾರೆ ಅನ್ನೋ ನಂಬಿಕೆಯಲ್ಲಿರುವಾಗಲೇ, ಕಳೆದ ಗುರುವಾರ ಇಂಥದ್ದೆ ಘಟನೆ ಬಿಜೆಪಿ ಕಚೇರಿ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಚಚ್ ನಲ್ಲೂ ಸಂಭವಿಸಿದೆ. ಕಳ್ಳನೊಬ್ಬ ಮಧ್ಯರಾತ್ರಿ ಚಚ್  ಗೆ ನುಗ್ಗಿ ಕಾಣಿಕೆ ಡಬ್ಬವನ್ನು ಹೊಡೆದು ಪರಾರಿಯಾಗಿದ್ದಾನೆ..

ಸೆಂಟ್ ಜೋಸೆಫ್ ಚರ್ಚ್ ಸಿಸಿಟಿವಿಯಲ್ಲಿ ಕಳ್ಳನ ಕರಾಮತ್ತು ಸಂಪೂರ್ಣವಾಗಿ ಸೆರೆಯಾಗಿದೆ. ಬರಿಗೈಯಲ್ಲಿ ಬಂದಿರುವ ಚೋರ ರಾಡ್ ನಿಂದ ಚಚ್   ಬಾಗಿಲು ಒಡೆದಿದ್ದಾನೆ. ಕಾಣಿಕೆ ಹುಂಡಿ ಹೊಡೆಯುತ್ತಿದ್ದಂತೆ ಅಲ್ಲೇ ಬೀದಿಯಲ್ಲಿದ್ದ ನಾಯಿಗೆ ಕಳ್ಳನ ಮೇಲೆ ಅನುಮಾನ ಬಂದು ಬೋಗಳಿವೆ. ಕೂಡಲೇ ನಾಯಿಗಳ ಸದ್ದಿಗೆ ಹೆದರಿ ಖತರ್ನಾಕ್ ಚೋರ ಎಲ್ಲಿಂದ ಕಾಲ್ಕಿತ್ತಿದ್ದಾನೆ.ಮುಂಜಾನೆ ಚರ್ಚ್‌ಗೆ ಭಕ್ತರು ಬಂದಾಗ ಕಳ್ಳತನದ ವಿಷಯ ಬೆಳಕಿಗೆ ಬಂದಿದೆ. ಸೆಂಟ್ ಜೋಸೆಫ್ ಚರ್ಚ್ ಆಡಳಿತ ಮಂಡಳಿ ಕೂಡ ಪೊಲೀಸರಿಗೆ ದೂರು ನೀಡಿದೆ.

ಚರ್ಚ್‌ಗಳ ಸಿಸಿಟಿವಿ ದೃಶ್ಯದ ಆಧಾರ ಮೇಲೆ ಪೊಲೀಸರು ಕಳ್ಳರ ಬೇಟೆಗೆ ರೂಪುರೇಷೆ ಸಿದ್ಧಪಡಿಸಿಕೊಂಡಿದ್ದಾರೆ. ಆದರೆ ನಾಲ್ಕೈದು ದಿನಗಳ ಅಂತರದಲ್ಲಿ ಕಳ್ಳರು ಎರಡು ಬಾರಿ ಎರಡು ಚರ್ಚ್‌ಗಳಲ್ಲಿ ಕಳ್ಳರು ಕನ್ನ ಹಾಕಿದ್ರೂ, ಕಳ್ಳರನ್ನ ಸೆರೆಹಿಡಿಯಲು ಪೊಲೀಸರು ಹೆಣಗಾಡುತ್ತಿದ್ದಾರೆ ಅಂತ ಚರ್ಚ್  ಭಕ್ತರು ಹಾಗೂ ಇಲ್ಲಿನ ಸ್ಥಳೀಯರು ಪೊಲೀಸರ ಮೇಲೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜನರು ಬೀದಿಗಿಳಿದು ಇದು ಧಾರ್ಮಿಕ ಸೂಕ್ಷ್ಮ ವಿಷಯವಾಗೊಕ್ಕೆ ಮುನ್ನ ಪೊಲೀಸ್ರು ನಿದ್ದೆ ಬಿಟ್ಟು ಬೆಲ್ಟ್ ಟೈಟ್ ಮಾಡ್ಕೊಂಡು ಕಳ್ಳರ ಹೆಡೆಮುರಿ ಕಟ್ಟಬೇಕಿದೆ.

 “ಕಾಫಿ”ಜಿಲ್ಲೆ ಚಿಕ್ಕಮಗಳೂರಿನಲ್ಲಿ ಆತಂಕ ಮೂಡಿಸಿರುವ ‘ಚರ್ಚ್”ಲೂಟಿ: ಖಾಕಿ ಮೌನಕ್ಕೆ ಆಕ್ರೋಶ

Spread the love
Leave A Reply

Your email address will not be published.

Flash News