ಸಚಿವ ಸಿ.ಟಿ ರವಿ ಸಂಬಂಧಿಯ ಕಾಮಗಾರಿ “ಆಧ್ವಾನ” ದೊಡ್ಡ ಕೆರೆ ಏರಿ ಒಡೆಯುವ ಆತಂಕ- ಆತಂಕದಲ್ಲಿ ಕೃಷಿಕ-ಜಿಲ್ಲಾಡಳಿತದಿಂದ ಹೈ ಅಲರ್ಟ್

0

ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಅವರ ಸಂಬಂಧಿಯೋರ್ವನ ನಿರ್ಲಕ್ಷ್ಯ ಇವತ್ತು ರೈತರ ಬದುಕನ್ನು ಬಲಿತೆಗೆದುಕೊಳ್ಳುವ ಆತಂಕ ನಿರ್ಮಿಸಿದೆ.ಪ್ರಮುಖ ರಸ್ತೆಯ ಕಾಮಗಾರಿಯನ್ನು ಮನಸೋಇಚ್ಛೆ ನಿರ್ವಹಿಸಿದ್ದರಿಂದ ಇವತ್ತು ರೈತರ ಜೀವನಾಧಾರವಾದ ಹೊಲಗದ್ದೆಗಳೇ ನಾಶವಾಗುವ ಸ್ತಿತಿ ಎದುರಾಗಿದೆ.

ಸುದರ್ಶನ್ ಎನ್ನುವ ಸಚಿವ ಸಿ.ಟಿ ರವಿ ಸಂಬಂಧಿ ನಡೆಸಿರುವ ಕಾಮಗಾರಿ ಕಳಪೆಯಾಗಿರುವುದರಿಂದ ದೊಡ್ಡಕೆರೆ ಏರಿ ಒಡೆದು ಹೋಗುವ ಆತಂಕ ಸೃಷ್ಟಿಯಾಗಿದೆ.ಆ ಒಂದು ಕೆರೆ ಏರಿಯೇನಾದ್ರೂ ಒಡೆದೋದ್ರೆ ಬಹುತೇಕ ಕೃಷಿಕರ ಜೀವನ ಬೀದಿಗೆ ಬರುತ್ತೆ..ಅದಕ್ಕಾಗಿ ವರುಣನನ್ನು ಅನ್ನದಾತ ನಿತ್ಯವೂ ಬೇಡಿಕೊಳ್ಳುತ್ತಿದ್ದಾನೆ. ಈ ನಡುವೆ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಿದೆ.

ಶುಕ್ರವಾರ ಜಿಲ್ಲಾದ್ಯಂತ ಮೋಡಕವಿದ ವಾತಾವರಣ ಇದ್ದು, ಮಲೆನಾಡು ಭಾಗದ ತಾಲೂಕುಗಳ ಪೈಕಿ ಮೂಡಿಗೆರೆ  ತಾಲೂಕಿನ ಚಾರ್ಮಾಡಿ, ಕೊಟ್ಟಿಗೆಹಾರ ಭಾಗದಲ್ಲಿ ಭಾರೀ ಮಳೆಯಾಗಿದೆ. 

ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದೆ.  ಈ ನಡುವೆ ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಮಳೆಗೆ ನಗರ ಸಮೀಪದ ಹಿರೇಮಗಳೂರು ದೊಡ್ಡ ಕೆರೆಯ ಏರಿ ಒಡೆಯುವ ಭೀತಿ ಎದುರಾಗಿದೆ. ಹಿರೇಮಗಳೂರು ಕೆರೆ ಏರಿ ಮೇಲಿರುವ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಬಿರುಕು ಬಿಟ್ಟಿದ್ದು, ಇಲ್ಲಿ ಓಡಾಡಲು ಜನರು, ವಾಹನ ಚಾಲಕರು ಭಯ ಪಡುತ್ತಿದ್ದಾರೆ. ಒಂದು ವೇಳೆ ಕೆರೆ ಒಡೆದರೆ, ಇಲ್ಲಿನ ಸುತ್ತ ಮುತ್ತಲ ಗ್ರಾಮಸ್ಥರು ಬೆಳೆದಿರುವ ಬೆಳೆ ಸಂಪೂರ್ಣವಾಗಿ ನಾಶವಾಗಲಿದೆ. ಹೀಗಾಗಿ  ಹಿರೇಮಗಳೂರು ದೊಡ್ಡ ಕೆರೆಯ ಏರಿಯಲ್ಲಿನ ಬಿರುಕು ಇಲ್ಲಿನ ರೈತರಿಗೂ ಆತಂಕವನ್ನುಂಟು ಮಾಡಿದೆ.

ಕೇವಲ 1 ವರ್ಷದ ಹಿಂದೆಯಷ್ಟೇ ಸಚಿವ ಸಿ. ಟಿ.ರವಿ ಸಂಬಂಧಿ ಹಾಗೂ ಗುತ್ತಿಗೆದಾರರೂ ಆಗಿರುವ ಸುದರ್ಶನ್ ನಿರ್ಮಿಸಿರುವ ರಸ್ತೆ ಕಳಪೆ ಕಾಮಗಾರಿಯಿಂದ ಕೂಡಿತ್ತು.ಇದರ ಪರಿಣಾಮವಾಗೇ  ರಸ್ತೆ ಕುಸಿಯುವ ಹಂತಕ್ಕೆ ಬಂದಿದೆ ಎಂದು ಇಲ್ಲಿನ ಸ್ಥಳೀಯರು ಆರೋಪಿಸುತ್ತಿದ್ದಾರೆ. ಕೆರೆ ಏರಿ ಒಡುದ್ರೆ ತನ್ನ ಬುಡಕ್ಕೆ ಬರುತ್ತೆನ್ನುವ ಕಾರಣಕ್ಕೆ ಸಿಟಿ ರವಿ ನಾಮಾಕವಸ್ಥೆಗೆ ಪರಿಶೀಲನೆ ನಡೆಸುವ ಸಾಧ್ಯೆತಗಳಿವೆ. 

Spread the love
Leave A Reply

Your email address will not be published.

Flash News