ಜಿಲ್ಲೆರಾಜಕೀಯ

ಭದ್ರಾವತಿ KSRTC ನಿಲ್ದಾಣಕ್ಕೆ “ಅಪ್ಪಾಜಿ” ಹೆಸರನ್ನೇ ಇಡಬೇಕು:ಶಿವಮೊಗ್ಗ-ಭದ್ರಾವತಿಯಲ್ಲಷ್ಟೇ ಈ ಕೂಗು-ಬೆಂಗಳೂರಿನಲ್ಲೂ ಆಗ್ರಹದ ಪ್ರತಿಧ್ವನಿ….

ಶಿವಮೊಗ್ಗ/ಭದ್ರಾವತಿ:ಶಿವಮೊಗ್ಗದ ಸರ್ಕಾರಿ ನೌಕರರ ಸಂಘದ ಕಟ್ಟಡದ ಆವರಣದ ಸಭಾಂಗಣದಲ್ಲಿ ಪಕ್ಷ ಬೇದ ಮರೆತು ನಡೆದ ನಾಯಕರ, ಸಂಘಟನೆಗಳ ಸಭೆಯಲ್ಲಿ ಅಪ್ಪಾಜಿ ಗೌಡರ ಒಡನಾಡಿಗಳು ನೆನಪು ಮಾಡಿಕೊಂಡು ಕೆಲವರು ಭಾವುಕರಾದರು. ಮಾಜಿ ಜಿಲ್ಲಾಪಂಚಾಯಿತಿ ಸದಸ್ಯರು ಹಾಲಿ ಅಧ್ಯಕ್ಷರು ಅಪ್ಪಾಜಿ ಗೌಡರ ಒಡನಾಡಿ ಬಾರಂದೂರು ಕುಮಾರ್ ಬಾವುಕರಾಗಿ ಮಾತನಾಡಿದ್ದು ಮನ ಕಲುಕುವಂತೆ ಇತ್ತು.

ಪ್ರಗತಿಪರ ಹೋರಾಟಗಾರರು ಹಾಗೂ ನ್ಯಾಯವಾದಿ ಕೆ .ಪಿ. ಶ್ರೀಪಾಲ್, ರಾಜ್ಯ ಜೆಡಿಎಸ್ ನಾಯಕರಾದ ಎಂ. ಶ್ರೀಕಾಂತ್, ಹಿರಿಯ ಪತ್ರಕರ್ತ ರವಿಕುಮಾರ್, ರೈತ ಸಂಘದ ಬಸವರಾಜಪ್ಪ, ಕೆ. ಟಿ. ಗಂಗಾಧರ್, ಜೆಡಿಎಸ್ ಜಿಲ್ಲಾ ಅಧ್ಯಕ್ಷರು ಮಂಜುನಾಥ ಗೌಡ, ಮಾಜಿ ಎಂ. ಎಲ್ ಸಿ ಆರ್. ಕೆ. ಸಿದ್ದರಾಮಣ್ಣ… ಮುಂತಾದವರು ಮಾತನಾಡಿ ಕಾರ್ಯಕ್ರಮ ಯಶಸ್ವಿಯಾಗವಲ್ಲಿ ಗಮನ ಹರಿಸಲಾಗಿತ್ತು.

ಇದೇ ವೇಳೆ  ಅಪ್ಪಾಜಿಗೌಡರ ಒಡನಾಡಿಗಳಾಗಿದ್ದ ಇದೀಗ ಬೆಂಗಳೂರಿನಲ್ಲಿ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸಾಕಷ್ಟು ಸ್ನೇಹಿತರು ಕೂಡ ಅಪ್ಪಾಜಿಗೌಡರ ಸೇವೆಯನ್ನು ಸ್ಮರಿಸಿದ್ದಾರೆ.ಅಪ್ಪಾಜಿಗೌಡ ಭದ್ರಾವತಿಯನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಮಾಡಿದ ಸೇವೆ ಅನನ್ಯ.

ಅದರಲ್ಲೂ ಎಂಪಿಎಂ ಹಾಗೂ ವಿಐಎಸ್ ಎಲ್ ಉಳಿಸುವ ನಿಟ್ಟಿನಲ್ಲಿ ಮಾಡಿದ ಹೋರಾಟ ಸ್ಮರಣೀಯ.ವಿಐಎಸ್ ಎಲ್ ನ್ನು ಉಳಿಸಲೇಬೇಕೆನ್ನುವ ನಿಟ್ಟಿನಲ್ಲಿ ತಮ್ಮ ಜೀವ ಪಣಕ್ಕಿಟ್ಟು ಹೋರಾಡಿದ್ರು ಎಂದು ಸ್ಮರಿಸಿದ್ದಾರೆ.ಭದ್ರಾವತಿ ಬೆಳವಣಿಗೆಗೆ ಅವರು ಮಾಡಿದ ಸೇವೆಯ ಹಿನ್ನಲೆಯಲ್ಲಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಶ್ರಮಿಸಿದ ಕಾರಣಕ್ಕೆ ಬಸ್ ನಿಲ್ದಾಣಕ್ಕೆ ಅವರ ಹೆಸರನ್ನೇ ಇಡಬೇಕೆಂದು ಒತ್ತಾಯಿಸಿದ್ದಾರೆ.ಅಪ್ಪಾಜಿ ಅವರ ಒಡನಾಡಿ ಯೋಗೇಶ್ ಗೌಡ ಬಂಡಾರಹಳ್ಳಿ ಈ ನಿಟ್ಟಿನಲ್ಲಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ

Spread the love

Related Articles

Leave a Reply

Your email address will not be published.

Back to top button
Flash News