CORONA VIRUSKANNADAFLASHNEWSFIGHTAGAINSTCORONAMoreTop NewsUncategorizedದೇಶ-ವಿದೇಶರಾಜಕೀಯ

ಸಾಮಾಜಿಕ ಪರಿವರ್ತನೆಯ ಹರಿಕಾರ-ರಾಜಿರಹಿತ ಹೋರಾಟಗಾರ ಸ್ವಾಮಿ ಅಗ್ನಿವೇಶ್ ದೇಹಾಂತ್ಯ.

ಸಾಮಾಜಿಕ ಹೋರಾಟದ ಮಹತ್ವದ ಕೊಂಡಿಯೊಂದು ಕಳಚಿದೆ. ದೇಶೀಯ ಮಟ್ಟದಲ್ಲಿ ಹಲವಾರು ಹೋರಾಟಗಳ ಮೂಲಕ ಪ್ರಸಿದ್ಧಿಯನ್ನು ಪಡೆದಿದ್ದ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ತಮ್ಮ ಎಂಭತ್ತರ ವಯಸ್ಸಿನಲ್ಲಿ ದೆಹಲಿಯ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಪಿತ್ತಜನಕಾಂಗದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ದೀರ್ಘ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

  ಮೂಲತಃ ಆಂಧ್ರ ಪ್ರದೇಶದವರಾಗಿದ್ದು ಸ್ವಾಮಿ ಅಗ್ನಿವೇಶ್ ಚಿಕ್ಕವಯಸ್ಸಿನಿಂದಲೇ ಜಾತ್ಯತೀತೆಯ ಮನೋಪ್ರವೃತ್ತಿಯನ್ನು ಬೆಳೆಸಿಕೊಂಡು ಆ ನಿಟ್ಟಿನಲ್ಲಿ ಸಾಮಾಜಿಕ ಅಸಮಾನತೆಯ ವಿರುದ್ಧ ಹಾಗೂ ಜಾತಿ ವ್ಯವಸ್ಥೆ ವಿರುದ್ಧ ತಿರುಗಿಬಿದ್ದ ಹೋರಾಟಕ್ಕೆ ಧುಮುಕಿದವರು. ಸಾಕಷ್ಟು ಸಾಮಾಜಿಕ ಕಾರ್ಯಕರ್ತರ ಕಣ್ಣಿಗೆ ಬಿದ್ದ ಸ್ವಾಮಿ ಅಗ್ನಿವೇಶ್ ಮುಂದೆ ಕೆಲವೇ ವರ್ಷಗಳಲ್ಲಿ ರಾಷ್ಟ್ರಮಟ್ಟದಲ್ಲಿ ತಮ್ಮ ಸಾಮಾಜಿಕ ಕಳಕಳಿಯ ಹಾಗೆಯೇ ಜಾತ್ಯತೀತ ಜಾತ್ಯಾತೀತ ನಿಲುವಿನಿಂದಾಗಿ ಮುನ್ನಲೆಗೆ ಬಂದ್ರು.

ಅವರ ಜಾತ್ಯತೀತ ಮನೋಪ್ರವೃತ್ತಿ ಹಾಗೂ ಸಾಮಾಜಿಕ ಕಳಕಳಿಯ ಬದ್ಧತೆ ಯಾವ ಮಟ್ಟಿಗೆ ಇತ್ತು ಎಂದರೆ ತಮ್ಮ ಹೆಸರು ಮತ್ತು ಜಾತಿ ಧರ್ಮವನ್ನು ತ್ಯಜಿಸಿ ಅವರು ಸನ್ಯಾಸದೀಕ್ಷೆಯನ್ನು ಸ್ವೀಕರಿಸಿದರು.ಅವರ ಹೋರಾಟಗಳ ಹಿನ್ನೆಲೆಯಲ್ಲಿ ಗಮನಿಸಿದಾಗ ಸಾಕಷ್ಟು ಹೋರಾಟಗಳ ಮೂಲಕ ಸಾಮಾಜಿಕ ಬದಲಾವಣೆಯನ್ನು ವ್ಯವಸ್ಥೆಯೊಳಗೆ ತರುವ ಮೂಲಕ ಸಮಾಜ ಸಾಮಾಜಿಕ ಸಮಾನತೆಯನ್ನು ಸೃಷ್ಟಿಸಿದ ಕೀರ್ತಿ ಅವರದು.

 ಜೀತ ಕಾರ್ಮಿಕರ ಮುಕ್ತಿ ಮೋರ್ಚಾವನ್ನು ಸ್ಥಾಪಿಸಿ ಜೀತ ಪದ್ಧತಿಯ ನಿರ್ಮೂಲನೆಗೆ ಹಾಗೂ ಮೂಲೋತ್ಪಾಟನೆಗೆ ಹೋರಾಟಕ್ಕೆ ಧುಮುಕಿದವರು ಸ್ವಾಮಿ ಅಗ್ನಿವೇಶ್. ಈ ಹೋರಾಟ ಅವರನ್ನು ದೇಶ ಮಟ್ಟದಲ್ಲಿ ದೊಡ್ಡ ಹೋರಾಟಗಾರನನ್ನಾಗಿ ರೂಪಿಸು ವಲ್ಲಿ ಯಶಸ್ವಿಯಾಯಿತು. ಸಾಮಾಜಿಕ ಹೋರಾಟದ ಮೂಲಕ ರಾಜಕೀಯ ಪ್ರವೇಶಕ್ಕೂ ದಾರಿ ಮಾಡಿಕೊಟ್ಟಿತ್ತು

  ರಾಜಕೀಯಕ್ಕೆ ಧುಮುಕಿದರು ತಮಗೆ ಹಾಗೂ ತಮ್ಮ ಬೆಳವಣಿಗೆಗೆ ಕಾರಣವಾದ ಸಾಮಾಜಿಕ ಬದ್ಧತೆಯನ್ನು ಅಗ್ನಿವೇಶ್ ಎಂದೂ ಕೂಡ ಮರೆಯಲಿಲ್ಲ. 1977 ರಲ್ಲಿ‌  ಹರ್ಯಾಣ ವಿಧಾನಸಭೆಗೆ ಆಯ್ಕೆಯಾಗಿದ್ದ ಅವರು 2ವರ್ಷಗಳ ಕಾಲ ಶಿಕ್ಷಣ ಸಚಿವರಾಗಿಯೂ ಕೆಲಸ ಮಾಡಿದ್ದರು.ಆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದರು.

ಸಾಮಾಜಿಕ ಹೋರಾಟಗಾರ ಹೋರಾಟಗಳನ್ನು ರಾಜಕೀಯದಲ್ಲಿದ್ದುಕೊಂಡು ನಿರಂತರವಾಗಿ ಹೋರಾಟ ಮಾಡುತ್ತ ಬಂದಿದ್ದರು ಅಗ್ನಿವೇಶ್.ಅವರ ನೇರನುಡಿ,ನಿಷ್ಠೂರತೆ ಹಾಗೂ ಧೋರಣೆ ರಾಜಕೀಯದವರಿಗೆ ಪಥ್ಯವೆನಿಸಲಿಲ್ಲ ಆ ಕಾರಣಕ್ಕೆ ಅವರ ಸಾಕಷ್ಟು ನಿಲುವುಗಳನ್ನು ಪ್ರಶ್ನಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು  ರಾಜಿ ಯಾಗದ ಮನಸ್ಥಿತಿಯ ಅಗ್ನಿವೇಶ್ ಅವೆಲ್ಲವನ್ನು ಖಂಡಿಸಿಯೇ ರಾಜಕೀಯದಿಂದ ಹೊರಬರುವ ನಿರ್ಧಾರವನ್ನು ಕೂಡ ಮಾಡಿದ್ದರು.

ಸಾಮಾಜಿಕ ಹೋರಾಟಗಾರರಾಗಿ ಹಾಗೂ ರಾಜಕೀಯ ಧುರೀಣರಾಗಿ ಹೆಸರು ಮಾಡಿದ್ದ ಸ್ವಾಮಿ ಅಗ್ನಿವೇಶ್ ರವರ ಹೆಸರು ಹಾಗೂ ವ್ಯಕ್ತಿತ್ವವನ್ನು ದೇಶೀಯ ಮಟ್ಟದಲ್ಲಿ ಮುನ್ನೆಲೆಗೆ ತಂದದ್ದು ತಂದದ್ದು ಅಣ್ಣಾ ಹಜಾರೆಯವರ ಹೋರಾಟ ಭ್ರಷ್ಟಾಚಾರ ಮುಕ್ತ ಭಾರತದ ನಿರ್ಮಾಣ ಉದ್ದೇಶದಲ್ಲಿ ಅಣ್ಣಾ ಹಜಾರೆಯವರು ದೆಹಲಿಯಲ್ಲಿ ಆರಂಭಿಸಿದ ಹೋರಾಟದಲ್ಲಿ ಸ್ವಾಮಿ ಅಗ್ನಿವೇಶ್ ಅವರು ಪಾಲ್ಗೊಂಡು ಅವರಿಗೆ ಕೈ ಜೋಡಿಸಿದ್ದು ಇತಿಹಾಸ.

  ಸ್ವಾಮಿ ಅಗ್ನಿವೇಶ್ ತಮ್ಮ ಹೋರಾಟಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದವರು ಈ ಕಾರಣಕ್ಕೆ ಸಾಕಷ್ಟು ಸಂದರ್ಭಗಳಲ್ಲಿ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಟೀಕಾಪ್ರಹಾರ ಕೂಡ ಗುರಿಯಾಗಬೇಕಾಯಿತು ಆದ್ರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಹೋರಾಟದ ಬದ್ದತೆಯನ್ನು ಮುಂದುವರಿಸಿದ ಅವರದು ಬಹು ಮುಖ ವ್ಯಕ್ತಿತ್ವ ಎನ್ನುವುದಕ್ಕೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದೇ ಒಂದು  ಉದಾಹರಣೆ.

  ತಮ್ಮ ಬದುಕಿನ ಕೊನೆಯ ಕ್ಷಣಗಳವರೆಗೂ, ಸಾಮಾಜಿಕ ಬದ್ಧತೆ ಹಾಗೂ ವ್ಯವಸ್ಥೆಯೊಳಗೆ ಸುಧಾರಣೆ ತರುವಂತಹ ಆಶಯವನ್ನು ಮೂಡಿಸಿಕೊಂಡಿದ್ದರು ಅಗ್ನಿವೇಶ್  ಹಾಗೂ ಅದನ್ನೇ ಉಸಿರ ಉಸಿರಾಗಿಸಿಕೊಂಡಿದ್ದರು.ಅವರ  ನಿಧನಕ್ಕೆ ರಾಷ್ಟ್ರ  ಮಟ್ಟದಲ್ಲಿ ತೀವ್ರ ಸಂತಾಪ ವ್ಯಕ್ತವಾಗಿದೆ. ಪ್ರಧಾನಿ ಮೋದಿಯವರು ಸೇರಿದಂತೆ ಸಾಕಷ್ಟು ಗಣ್ಯರು ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. 

Spread the love

Related Articles

Leave a Reply

Your email address will not be published.

Back to top button
Flash News