CORONA VIRUSKANNADAFLASHNEWSFIGHTAGAINSTCORONAMoreTop NewsUncategorizedಜಿಲ್ಲೆರಾಜಕೀಯರಾಜ್ಯ-ರಾಜಧಾನಿ

ಅತೃಪ್ತರ ಒಳಜಗಳ-ಆಂತರಿಕ ಬೇಗುದಿಯಿಂದ್ಲೇ ಬಿಜೆಪಿ ಸರ್ಕಾರ ಉರುಳೋಗ್ತದಾ…? ಬಾಡೋ “ಕಮಲ”ವನ್ನು “ತೆನೆಹೊತ್ತ ಮಹಿಳೆ” ಮುಡಿದುಕೊಳ್ಳುತ್ತಾಳಾ..? ಪೊಲಿಟಿಕಲ್ ಹೈಡ್ರಾಮಾದ ಕ್ಲೈಮ್ಯಾಕ್ಸ್ ಏನಾಗುತ್ತೆ ಗೊತ್ತಾ.??!!

ಬೆಂಗಳೂರು:ರಾಜಕಾರಣವೇ ಹಾಗೆ ಅದು ನಿಂತ ನೀರಲ್ಲ, ಸದಾ ಹರಿಯುವ ಗುಪ್ತಗಾಮಿ. ಅದರ ಒಳ ಸುಳಿಗಳೇ ಗೊತ್ತಾಗುವುದಿ.ಲ್ಲ ಸದ್ಯದ ರಾಜಕಾರಣವು ಕೂಡ ಹಾಗೆ… ಎಲ್ಲವೂ ಸರಿಯಾಗಿದೆ ಎಂದುಕೊಂಡಿರುವಾಗಲೇ, ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಸಂಚಲನವನ್ನು ಮೂಡಿಸಿದೆ. ರಾಜ್ಯ ಸರ್ಕಾರದ ಭವಿಷ್ಯದ ಮೇಲೆ ಈ ಮಾತುಕತೆ ಏನಾದರೂ ಪರಿಣಾಮ ಬೀರಬಹುದಾ ಎನ್ನುವ ಲೆಕ್ಕಾಚಾರಗಳು ಆರಂಭವಾಗಿವೆ.

ಒಂದಿಷ್ಟು ಗೊಂದಲ ಹಾಗೂ ವೈರುಧ್ಯಗಳ ನಡುವೆಯೇ ರಾಜ್ಯ ಸರ್ಕಾರ ನಡೆಯುತ್ತಿದೆ. ಭಿನ್ನಮತ- ಭಿನ್ನಾಭಿಪ್ರಾಯಗಳು ಎಲ್ಲರ ನಡುವೆ ಇದ್ದಿದ್ದೆ. ಇಂಥದ್ದರ ನಡುವೆ ದಾಸರಹಳ್ಳಿ ಶಾಸಕ ಮಂಜುನಾಥ್ ಅವರ ಜೊತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು   ಭೇಟಿಯಾದಂತದ್ದು ಚರ್ಚೆಗಳಿಗೆ ರೆಕ್ಕೆಪುಕ್ಕ ನೀಡಿದೆ.ಯಡಿಯೂರಪ್ಪನವರ ಮನೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಭೇಟಿ ಹಾಗೂ ಅರ್ಧ ಗಂಟೆಗಳ ಮಾತುಕತೆ ರಾಜಕೀಯದ ಹೊರತಾಗಿ ನಡೆದಿರಲು ಸಾಧ್ಯವೇ ಇಲ್ಲ.

 ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದದ್ದು ..ಅದರಿಂದ ಸಾಕಷ್ಟು ಅನಾಹುತ ಸಂಭವಿಸಿದಂತದ್ದು.. ಬೆಂಗಳೂರಿನ ವ್ಯಾಪ್ತಿಯಲ್ಲಿ ನಡೆಯಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆಯೆಲ್ಲಾ ಚರ್ಚೆ ನಡೆಸಲಾಯಿತು ಎಂದು ಕುಮಾರಸ್ವಾಮಿ ಹೇಳಿದ್ದಾರೆ.ಆದ್ರೆ ದಾಸರಹಳ್ಳಿ ಶಾಸಕ ಮಂಜುನಾಥ್ ರವರನ್ನು ಹೊರಗಿಟ್ಟು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿರುವಂಥದ್ದು ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ

 ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಇದನ್ನು ಕೇವಲ ಔಪಚಾರಿಕ ಭೇಟಿ ಹಾಗೆಯೇ ಮಾತುಕತೆ ಎಂದು ಹೇಳಿದ್ದರೂ ಕೂಡ ಅವರ ಮಾತಿನ ತಾತ್ಪರ್ಯ ದ ಹಿಂದೆ ಸಾಕಷ್ಟು ನಿಗೂಢತೆ ಹಾಗೆಯೇ ರಹಸ್ಯಗಳು ಇದ್ದದ್ದು ಸ್ಪಷ್ಟ. ಏಕೆಂದರೆ ಸರ್ಕಾರ ಮೇಲ್ನೋಟಕ್ಕೆ ಸುಭದ್ರ ಎಂದು ಕಂಡು ಬಂದರೂ ಯಾವುದೇ ಸಂದರ್ಭದಲ್ಲೂ ಕೂಡ ಅಭದ್ರತೆ ಎದುರಾಗುವ ಸಾಧ್ಯತೆಗಳು ಇದ್ದೇ ಇದೆ.

ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪರವರು ಆಡಳಿತ ನಡೆಸುತ್ತಿದ್ದರೂ ಕೂಡ ಪಕ್ಷದ ಒಳಗಿನ ಆಂತರಿಕ ಭಿನ್ನಮತ, ಬೇಗುದಿ ಗಳಂತೂ ಇದ್ದೇ ಇದೆ. ಅವರ ಕಾಲೆಳೆಯುವ ಪ್ರಯತ್ನ ವನ್ನು ಸಾಕಷ್ಟು ಶಾಸಕರು -ಸಚಿವರು ಮಾಡುತ್ತಲೇ ಇದ್ದಾರೆ ಎನ್ನುವುದು ಕೂಡ ಅಷ್ಟೇ ಸತ್ಯ. ಈ ಎಲ್ಲ ಸಂಗತಿಗಳನ್ನು ಸಾಕಷ್ಟು ಸಂದರ್ಭಗಳಲ್ಲಿ ಪರೋಕ್ಷವಾಗಿ ಯಡಿಯೂರಪ್ಪನವರು ಬಹಿರಂಗಪಡಿಸಿದ್ದಾರೆ ಕೂಡ.

ಇದೆಲ್ಲದರ ನಡುವೆ ಸಚಿವ ಸಂಪುಟ ವಿಸ್ತರಣೆ ವಿಧಾನಸಭೆ ಅಧಿವೇಶನದ ಮುನ್ನಾ ನಡೆಸಲಾಗುತ್ತದೆ ಎಂದು ಯಡಿಯೂರಪ್ಪನವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಉಮೇಶ್ ಕತ್ತಿ ಸೇರಿದಂತೆ ಸಾಕಷ್ಟು ಜನರನ್ನ ಒಳಗೆ ಸೇರಿಸಿ ಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇಲ್ಲವಾದಲ್ಲಿ ಸರ್ಕಾರವನ್ನು ಸರ್ಕಾರವನ್ನು ಅಭದ್ರಗೊಳಿಸುವ  ಎಚ್ಚರಿಕೆಯನ್ನು ಕೂಡ ಅವರೀಗಾಗಲೇ ನೀಡಿರುವುದು ಯಡಿಯೂರಪ್ಪ ಅವರನ್ನು‌ ಆತಂಕಕ್ಕೀಡು‌ಮಾಡಿರುವುದು ಕೂಡ ಅಷ್ಟೇ ಸತ್ಯ.

ಒಂದು‌ ವೇಳೆ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಉಮೇಶ್ ಕತ್ತಿ ಸೇರಿದಂತೆ ಒಂದಷ್ಟು ಸಚಿವಾಕಾಂಕ್ಷಿಗಳಿಗೆ ಸಚಿವ ಸ್ಥಾನ ಸಿಗದೇ ಹೋದರೆ ಅವರು ಸರ್ಕಾರವನ್ನು ಅಭದ್ರಗೊಳಿಸುವ  ಥ ಪ್ರಯತ್ನಗಳನ್ನು ಮಾಡೊಲ್ಲ ಎನ್ನುವಂಗಿಲ್ಲ.ಈಗಾಗ್ಲೇ ಅದರ ಸಿದ್ದತೆಗಗಳು ಕೂಡ ಗೌಪ್ಯವಾಗಿ ನಡೆಯುತ್ತಲೇ ಇವೆ.ಒಂದ್ವೇಳೆ ಅತೃಪ್ತರ ಕೂಡ ಹಾಗೆ  ಮಾಡಿದ್ದೇ ಆದಲ್ಲಿ ಸರ್ಕಾರವನ್ನು ಉಳಿಸಿಕೊಳ್ಳಲು ಏನು ಮಾಡಬಹುದು? ಎನ್ನುವ ನಿಟ್ಟಿನಲ್ಲಿ ಚಿಂತನೆಗಳು ನಡೆಯುತ್ತಿರುವಾಗಲೇ ಕುಮಾರಸ್ವಾಮಿ ಅವರ ಭೇಟಿ ಕುತೂಹಲ ಮೂಡಿಸಿದೆ.

 ಒಂದು  ವೇಳೆ ಸಚಿವಾಕಾಂಕ್ಷಿಗಳಿಗೆ ಸಚಿವ ಸ್ಥಾನ ಸಿಗದೇ ಹೋದರೆ ಸರ್ಕಾರವನ್ನು ಪತನಗೊಳಿಸುವ ಮಟ್ಟಕ್ಕೂ ಹೋಗುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ಸರ್ಕಾರವನ್ನು ಉಳಿಸಿಕೊಳ್ಳಲು ಬಹುಮತದ ಅವಶ್ಯಕತೆ ಇರುವುದರಿಂದ ಕುಮಾರಸ್ವಾಮಿ.ಆಪದ್ಬಾಂಧವರಾಗಿ  ಯಡಿಯೂರಪ್ಪನವರ ಸಹಾಯಕ್ಕೆ ಬರಲಿದ್ದಾರೆ ಅನ್ನುವಂಥ ಚರ್ಚೆಗಳು ಕೂಡ ಈ ಭೇಟಿಯ ಹಿನ್ನಲೆಯಲ್ಲಿ ವ್ಯಕ್ತವಾಗುತ್ತಿವೆ.

ಕೆಲವು ಮೂಲಗಳ ಪ್ರಕಾರ ಕುಮಾರಸ್ವಾಮಿಯವರು ಯಡಿಯೂರಪ್ಪನವರಿಗೆ ಭರವಸೆಯನ್ನು ಕೂಡ ನೀಡಿದ್ದಾರೆ ಎನ್ನಲಾಗುತ್ತಿದೆ.ಏನಾದ್ರೂ ಸರ್ಕಾರ ಅತೃಪ್ತರ ಕಾರಣಕ್ಕೆ ಪತನಗೊಳ್ಳುವ ಸ್ತಿತಿ ಬಂದ್ರೆ, ಜೆಡಿಎಸ್,ಸರ್ಕಾರದ ನೆರವಿಗೆ  ಬರುವ ಸಾಧ್ಯತೆಗಳ ನಿಟ್ಟಿನಲ್ಲಿ ಚಿಂತಿಸಲಾಗುವುದು ಎನ್ನುವ ಆಶ್ವಾಸನೆ ಕೂಡ ಕುಮಾರಸ್ವಾಮಿ ನೀಡಿದ್ದಾರೆ  ಎನ್ನಲಾಗಿದೆ.

  ಮಾಜಿ ಸಿಎಂ ಕುಮಾರಸ್ವಾಮಿ ಯಡಿಯೂರಪ್ಪರವರನ್ನು ಭೇಟಿ ಅಂಥದರ ಬಗ್ಗೆ ಪಕ್ಷದಲ್ಲಿ ಸಾಕಷ್ಟು ಆಕ್ಷೇಪ ಅಸಮಾಧಾನ ವ್ಯಕ್ತವಾಗುತ್ತಿದೆ ಎಲ್ಲವೂ ಸರಿಯಾಗಿ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಕುಮಾರಸ್ವಾಮಿಯವರನ್ನ ಭೇಟಿ ಮಾಡುವ ಅವಶ್ಯಕತೆ ಏನಿತ್ತು.ಕೆಲ ಮೂಲಗಳ ಪ್ರಕಾರ ಯಡಿಯೂರಪ್ಪನವರೇ, ಕುಮಾರಸ್ವಾಮಿಯವರನ್ನ ತಮ್ಮ ಮನೆಗೆ ಆಹ್ವಾನಿಸಿ ಮಾತುಕತೆ ನಡೆಸಿದ್ದಾರೆ ಎನ್ನುವಂಥ ಮಾತುಗಳೂ ಕೇಳಿಬರುತ್ತಿವೆ.

 ಅದೇನೇ ಆಗಲಿ ಒಂದು ವೇಳೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಸನ್ನಿವೇಶ ಎದುರಾದರೆ, ಜೆಡಿಎಸ್ ಅವರಿಗೆ ಊರುಗೋಲಾಗಿ ನಿಲ್ಲಲಿದೆಯಾ ಎನ್ನುವಂಥ ಅನುಮಾನಗಳಿಗೆ ಎಡೆ ಮಾಡಿಕೊಡುವ ರೀತಿಯಲ್ಲಿ ನಿನ್ನೆಯ ಭೇಟಿ ಹಾಗೂ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.

ಸಚಿವ ಸ್ಥಾನದ  ಆಸೆಗಾಗಿ ಸರ್ಕಾರವನ್ನು ಬೇಕಾದ್ರೂ ಉರುಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿರುವ ಹಾಗೆಯೇ ಒಂದಷ್ಟು ಶಾಸಕರನ್ನು ಗುಂಪು ಗುಂಪು ಕಟ್ಟಿಕೊಂಡು ರಾಜಕೀಯ ನಡೆಸುತ್ತಿರುವ ಅತೃಪ್ತರಿಗೆ. ನಿನ್ನೆಯ ಹಾಲಿ ಹಾಗೂ ಮಾಜಿ‌ ಸಿಎಂಗಳ ಭೇಟಿ ಪರೋಕ್ಷವಾಗಿ ಟಾಂಗ್ ಕೊಟ್ಟಿದೆ ಎನ್ನುವುದಂತೂ ಸತ್ಯ.

ಕೆಲವು ಮೂಲಗಳ ಪ್ರಕಾರ ಒಂದು ವೇಳೆ ಸರ್ಕಾರ ಪತನಗೊಳ್ಳುವ ಸಾಧ್ಯತೆಗಳು ನಿರ್ಮಾಣವಾಗಿದ್ದೇ ಆದಲ್ಲಿ ವಿಧಾನಸಭೆ ಅಧಿವೇಶನದ ಬಳಿಕ ಮತ್ತಷ್ಟು ರಾಜಕೀಯ ಚಟುವಟಿಕೆಗಳು ಗರಿಗೆದರುವ ಸಾಧ್ಯತೆಗಳಿವೆ. ಎಲ್ಲವೂ ನಿರೀಕ್ಷೆಯಂತೆ ಆದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. 

Spread the love

Related Articles

Leave a Reply

Your email address will not be published.

Back to top button
Flash News