ಕೈ ಮುಗಿಯುತ್ತೇನೆ ,ಸಿದ್ದರಾಮಯ್ಯ ಅವರೇ..ಡ್ರಗ್ ವಿಚಾರದಲ್ಲಿ ಜಮೀರ್ ನ್ನು ರಕ್ಷಿಸ್ಬೇಡಿ.. “ಅಲ್ಪಸಂಖ್ಯಾತ” ಟ್ಯಾಗ್ ಬಳಸಿ ತಪ್ಪಿಸಿಕೊಳ್ಳೊಕ್ಕೆ ಯತ್ನಿಸ್ತಿದ್ದಾರೆ..

0

ಚಿಕ್ಕಬಳ್ಳಾಪುರ: ನಾನು ಅಲ್ಪಾಸಂಖ್ಯಾತ ಎಂಬ ಕಾರಣಕ್ಕೆ ಡ್ರಗ್‌ ವಿಚಾರದಲ್ಲಿ ಟಾರ್ಗೆಟ್‌ ಮಾಡಲಾಗಿದೆ ಎಂಬ ಜಮೀರ್ ಅಹಮದ್ ಹೇಳಿಕೆಗೆ ತಿರುಗೇಟು ನೀಡಿದ ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್‌ , ಅಲ್ಪಸಂಖ್ಯಾತ ಅನ್ನೋದು ರಕ್ಷಣೆಯ ಟ್ಯಾಗಾ? ಅದೇನು ಅವರ ಐಡಿ ಕಾರ್ಡಾ? ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಪ್ರಶ್ನಿಸಿದರು.

ಅಲ್ಪಸಂಖ್ಯಾತ ಎನ್ನೋದು ರಕ್ಷಣೆಯ ಟ್ಯಾಗ್ ಅಲ್ಲ. ಅದೇನು ಐಡಿನಾ? ನಾನು ನನ್ನ ಜಾತಿ ಹೇಳಿಕೊಂಡು ಐಡಿ ಇಟ್ಟುಕೊಳ್ಳಬೇಕಾ? ಡ್ರಗ್ ದಂಧೆಯಲ್ಲಿ ತಪ್ಪಿತಸ್ಥರು ಯಾವ ಜನಾಂಗ, ಜಾತಿಯವರೇ ಆಗಲಿ ಶ್ರೀಮಂತರೇ ಇರಲಿ, ಬಡವರೇ ಇರಲಿ ಪಕ್ಷಾತೀಯ ಹಾಗೂ ಜಾತ್ಯಾತೀತವಾಗಿ ಬಿಜೆಪಿ ಸರಕಾರ ಕ್ರಮ ತೆಗೆದುಕೊಳ್ಳಲಿದೆ.

ಮುಂದಿನ ದಿನಗಳ ಡ್ರಗ್‌ ನಿಯಂತ್ರಣಕ್ಕೆ ಸ್ಪಷ್ಟ ಕಾನೂನು ತಂದು, ಯುವ ಪೀಳಿಗೆಯನ್ನು ಇದರಿಂದ ರಕ್ಷಣೆ ಮಾಡುವ ಅಗತ್ಯವಿದೆ ಎಂದು ಹೇಳಿದರು. ಯುವ ಜನರನ್ನು ರಕ್ಷಣೆ ಮಾಡದೇ ಹೋದರೆ ಸಮಾಜದ ಸ್ವಾ ಸ್ಯ್ಥ ಹಾಳಾಗುತ್ತದೆ. ಡ್ರಗ್ ವಿಚಾರವನ್ನು ಕಾಂಗ್ರೆಸ್ ಲಘುವಾಗಿ ಪರಿಗಣಿಸಿ ಎಂದೆನಿಸುತ್ತಿದೆ. ಇದು ಗಂಭೀರ ಪ್ರಕರಣ. ನಮ್ಮ ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ‌ ನೇತೃದಲ್ಲಿ ಅರಿವು ಮೂಡಿಸುವ ಕೆಲಸ ಮಾಡ ಲಾಗುತ್ತಿದೆ. ಜಿಲ್ಲೆಯ ಗಡಿ ಭಾಗದ 20 ಕಡೆ ದಾಳಿ ಮಾಡಿ 20 ಜನರನ್ನು ಬಂಧಿಸಿ 60 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಈ ಮಾಫಿಯಾ ಬಗ್ಗೆ ವಿಸ್ತಾರವಾದ ತನಿಖೆ ಆಗುತ್ತಿದ್ದು, ಯಾರ ರಕ್ಷಣೆ ಮಾಡಲಾಗು ತ್ತಿಲ್ಲ,ಇದನ್ನು ಬುಡಸಮೇತವಾಗಿ ಕಿತ್ತು ಹಾಕಲು ಸಹಕಾರ ನೀಡಬೇಕು. ಯಾರೂ ಇದರಿಂದ ನುಣುಚಿಕೊಳ್ಳಲು ಅವಕಾಶ ನೀಡಬೇಡಿ. ಹಾಗೇ, ನೀವು ಯಾರನ್ನು ರಕ್ಷಣೆ ಮಾಡಬೇಡಿ ಎಂದರು.   

Spread the love
Leave A Reply

Your email address will not be published.

Flash News