CORONA VIRUSKANNADAFLASHNEWSFIGHTAGAINSTCORONAMoreTop NewsUncategorizedಜಿಲ್ಲೆಮಾಹಿತಿ/ತಂತ್ರಜ್ಞಾನರಾಜಕೀಯ

ಅ.17:ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ:ಅಕ್ಟೋಬರ್ 2 ರಂದು ಗಜಪಡೆ ಸ್ವಾಗತ-ಕೇವಲ 50 ಮಂದಿ ಮಾತ್ರ ಭಾಗಿ.

ಮೈಸೂರು : ಅಕ್ಟೋಬರ್ 17ಕ್ಕೆ ನಡೆಯಲಿದೆ.ಮೈಸೂರು ಉಸ್ತುವಾರಿ ಸಚಿವರೂ ಆಗಿರುವ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ದಸರಾ ಉದ್ಘಾಟನೆ ದಿನಾಂಕವನ್ನು ಅಧೀಕೃತಗೊಳಿಸಿದ್ದಾರೆ.

ಅಕ್ಟೋಬರ್ 17ರ  ಬೆಳಗ್ಗೆ 7.45 ರಿಂದ 8.15 ಒಳಗೆ ದಸರಾ ಉದ್ಘಾಟನೆ ನಡೆಯಲಿದೆ‌. ದಸರಾ  ಉದ್ಘಾಟನೆಯನ್ನು ಮಾಡುವ ಗಣ್ಯರ ಹೆಸರನ್ನು ಇನ್ನೂ ಫೈನಲ್ ಮಾಡಲಾಗಿಲ್ಲ.ಆದ್ರೆ ಸರಳ ದಸರಾ ಆಚರಣೆಗೆ ನಿರ್ಧರಿಸಲಾಗಿದೆ ಎಂದರು.

ಅಂದ್ಹಾಗೆ ದಸರಾ ಹಬ್ಬದ ಪೂರ್ವಭಾವಿಯಾಗಿ ಅಕ್ಟೋಬರ್ 2 ರಂದು 12.18 ನಿಮಿಷಕ್ಕೆ ಗಜಪಡೆಗಳನ್ನ ಸ್ವಾಗತಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಕೇವಲ 50 ಮಂದಿ ಮಾತ್ರ ಭಾಗಿಯಾಗಲಿದ್ದಾರೆ‌. ಚಾಮುಂಡಿ ಬೆಟ್ಟದಲ್ಲಿ ನಡೆಯುವ ಉದ್ಘಾಟನೆ ಕಾರ್ಯಕ್ರಮಕ್ಕೆ ಈಗಾಗಲೇ ಐವರು ಹೆಸರನ್ನ ಶಿಫಾರಸು ಮಾಡಲಾಗಿದ್ದು, ಉದ್ಘಾಟಕರ ಜವಾಬ್ದಾರಿಯನ್ನ ಇಲಾಖೆಗೆ ಬಿಡಲಾಗಿದೆ. ಈ ಬಾರಿ ದಸರಾ ವೇಳೆ ಕೊರೊನಾ ವಾರಿಯರ್ಸ್ ಸೇರಿದಂತೆ ಮೃತದೇಹಗಳನ್ನ ಅಂತ್ಯ ಸಂಸ್ಕಾರ ಮಾಡಿದವರಿಗೆ ಸನ್ಮಾನ ಮಾಡಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ‌ ಎಂದರು. ದಸರಾ ಆಚರಣೆ ವಿಚಾರವಾಗಿ ನಡೆದ ಸಭೆಯಲ್ಲಿ ಸಚಿವ ಎಸ್‌ಟಿ ಸೋಮಶೇಖರ್,ಕನ್ನಡ ಮತ್ತು ಸಂಸ್ಕ್ರತಿ ಸಚಿವ ಸಿ.ಟಿ ರವಿ  ಹಾಗು ಜಿಲ್ಲಾಡಳಿತದ ಅಧಿಕಾರಿಗಳು ಭಾಗವಹಿಸಿದ್ದರು.

Spread the love

Related Articles

Leave a Reply

Your email address will not be published.

Back to top button
Flash News