ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಆಡಳಿತಾಧಿಕಾರಿ ಗೌರವ್ ಗುಪ್ತಾ ಭೇಟಿ-ಪರಿಶೀಲನೆ

0

ಬೆಂಗಳೂರು:ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಮಾರನೇ ದಿನವೇ ಗೌರವ್ ಗುಪ್ತಾ ಫೀಲ್ಡ್ ಇನ್ಸ್ ಪೆಕ್ಷನ್ ಶುರು ಮಾಡಿದ್ದಾರೆ.ನಿರಂತರ ಸುರಿದ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಇಂದು ಬಿಬಿಎಂಪಿ ತಂಡದೊಂದಿಗೆ ಪರಿಶೀಲನೆ ನಡೆಸಿದರು.

ಮಳೆಯಿಂದ ಹಾನಿಗೊಳಗಾಗಲು ಕಾರಣವಾದ ರಾಜಕಾಲುವೆ ಒತ್ತುವರಿ ಬಗ್ಗೆ ಮಾಹಿತಿ ಪಡೆದ ಗೌರವ್ ಗುಪ್ತಾ,ಒತ್ತುವರಿ ತೆರವಿನ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಇದೇ ವೇಳೆ ಕೆಲವು ಅಧಿಕಾರಿಗಳನ್ನು ಕೂಡ ತರಾಟೆಗೆ ತೆಗೆದುಕೊಂಡರು.

ಯೋಜನೆ ವಿಭಾಗದ ವಿಶೇಷ ಆಯುಕ್ತ  ಮನೋಜ್ ಜೈನ್, ಆಸ್ತಿ ವಿಭಾಗದ ವಿಶೇಷ ಆಯುಕ್ತ ಮಂಜುನಾಥ್.ಜಿ,ಕಲ್ಯಾಣ ವಿಭಾಗದ  ವಿಶೇಷ ಆಯುಕ್ತ ರವೀಂದ್ರ, ಮುಖ್ಯ ಎಂಜಿನಿಯರ್ ಎಂ.ಆರ್.ವೆಂಕಟೇಶ್,ಹಣಕಾಸು ವಿಭಾಗದ  ಜಂಟಿ ಆಯುಕ್ತ  ವೆಂಕಟೇಶ್, ವಲಯ ಜಂಟಿ ಆಯುಕ್ತರಾದ  ಅಶೋಕ್, ವೆಂಕಟಾಚಲಪತಿ,ರಾಜಕಾಲುವೆ ವಿಭಾಗದ  ಮುಖ್ಯ ಅಭಿಯಂತರ ಪ್ರಹ್ಲಾದ್, ರಮೇಶ್, ಶ್ರೀ ಮೋಹನ್ ಕೃಷ್ಣ ಹಾಜರಿದ್ದರು.

Spread the love
Leave A Reply

Your email address will not be published.

Flash News