CORONA VIRUSKANNADAFLASHNEWSFIGHTAGAINSTCORONAMoreTop NewsUncategorizedಜಿಲ್ಲೆರಾಜಕೀಯರಾಜ್ಯ-ರಾಜಧಾನಿ

“ಇನ್ನೊಂದ್ ವಾರ ಯಾರೂ ನನ್ ಮನೆ ಹತ್ರ ಬರ್ಬೇಡಿ”ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೀಗಂದುಬಿಟ್ರಾ..

ಬೆಂಗಳೂರು:ಹೊಂ ಕ್ವಾರಂಟೈನ್ ನಿಂದಾಗಿ ಇನ್ನೂ ಒಂದು ವಾರ ಯಾರನ್ನೂ ಭೇಟಿಯಾಗಲು ಸಾಧ್ಯವಿಲ್ಲ,ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಕೋವಿಡ್ ಸೋಂಕಿನಿಂದ ಗುಣಮುಖನಾಗಿದ್ದೇನೆ. ಇನ್ನೂ ಒಂದು ವಾರ ಹೊಂ ಕ್ವಾರಂಟೈನ್ ಇರಬೇಕಾಗಿರುವುದರಿಂದ ನಾನು ಯಾರನ್ನು ಭೇಟಿ ಮಾಡಲು ಸಾಧ್ಯವಿಲ್ಲ. ಎಲ್ಲರು ದಯವಿಟ್ಟು ಸಹಕರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ಈ ವಿಚಾರವಾಗಿ ಜನತೆಗೆ ಮನವಿ ಮಾಡಿರುವ ಡಿ.ಕೆ ಶಿವಕುಮಾರ್, ‘ನಮ್ಮ ನಾಯಕರು, ಕಾರ್ಯಕರ್ತರು, ರಾಜ್ಯದ ಜನರ ಪ್ರಾರ್ಥನೆ, ಹಾರೈಕೆಯಿಂದಾಗಿ ನಾನು ಚೇತರಿಸಿಕೊಂಡು ನಿನ್ನೆಯಷ್ಟೇ ಮನೆಗೆ ಬಂದಿದ್ದೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದಗಳನ್ನು ಸಮರ್ಪಿಸಿದರು.ಒಂದು ವಾರಗಳ ಕಾಲ ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆಯಲು ವೈದ್ಯರು  ಸೂಚಿಸಿರುವ ಹಿನ್ನೆಲೆಯಲ್ಲಿ ಸದ್ಯ ನಾನು ಯಾರನ್ನೂ ಭೇಟಿ ಮಾಡಲು ಆಗುವುದಿಲ್ಲ.

ನೀವುಗಳು ಬಂದಾಗ ನಮ್ಮ ಸಿಬ್ಬಂದಿ ಭೇಟಿ ಮಾಡಲು ಅವಕಾಶ ಸಿಗುವುದಿಲ್ಲ. ಹೀಗಾಗಿ ಮುಂದಿನ ಒಂದು ವಾರ ಯಾರೂ ಮನೆಯ ಬಳಿ ಬರಬೇಡಿ. ಈ ವಿಚಾರದಲ್ಲಿ ತಪ್ಪು ಭಾವಿಸದೆ ಸಹಕರಿಸಬೇಕಾಗಿ ವಿನಂತಿಸುತ್ತೇನೆ. ನಿಮ್ಮ ಪ್ರೀತಿ ವಿಶ್ವಾಸ ನನ್ನ ಶಕ್ತಿ. ಅದಕ್ಕಾಗಿ ಕೋಟಿ ನಮಸ್ಕಾರಗಳು. ಮುಂದಿನ ಒಂದು ವಾರ ನನಗೆ ಕಾಲಾವಕಾಶ ಮಾಡಿ ಕೊಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ. ಧನ್ಯವಾದಗಳು’ ಎಂದು ತಿಳಿಸಿದ್ದಾರೆ.

“ಇನ್ನೊಂದ್ ವಾರ ಯಾರೂ ನನ್ ಮನೆ ಹತ್ರ ಬರ್ಬೇಡಿ”ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೀಗಂದುಬಿಟ್ರಾ..

Spread the love

Related Articles

Leave a Reply

Your email address will not be published.

Back to top button
Flash News