ಬಿಟ್ಟಿ ತಿಂಡಿ-ಊಟ ಕ್ಕೆ “ಲಿಂಗಣ್ಣ” ಬೇಕಿತ್ತು.. ಆದ್ರೆ “ಮೊಬೈಲ್ ಕ್ಯಾಂಟೀನ್” ಗೋಸ್ಕರ  ಆತನ  “ಅನ್ನ”ವನ್ನೇ ಕಸಿದುಕೊಂಡ್ರಲ್ಲ:ಆತ್ಮಹತ್ಯೆಗೆ ಮುನ್ನ ಎಷ್ಟೆಲ್ಲಾ ನೊಂದಿರ್ಬೇಕು  “ಆ “ಜೀವ

0
ಕ್ಯಾಂಟೀನ್  ಲಿಂಗಣ್ಣ
ಕ್ಯಾಂಟೀನ್  ಲಿಂಗಣ್ಣ

ಬೆಂಗಳೂರು: ಮೇಯರ್-ಡೆಪ್ಯೂಟಿ ಮೇಯರ್-ಸ್ಟ್ಯಾಂಡಿಂಗ್ ಕಮಿಟಿ-ಯೂನಿಯನ್ ಫಂಕ್ಷನ್ಸ್  ಏನೇ ಆಗಲಿ,ಪುಗಸಟ್ಟೆ ತಿಂಡಿ-ಊಟ  ಪೂರೈಸ್ಲಿಕ್ಕೆ  ಕ್ಯಾಂಟೀನ್ ಲಿಂಗಣ್ಣ ಬೇಕಿತ್ತು.ಆತನ ಕ್ಯಾಂಟೀನ್ ನಲ್ಲಿ ತಿಂದು ಹಣ ಕೊಡದೆ ಹೋಗ್ತಿದ್ದೋರೇ ಅದೆಷ್ಟೋ ಜನ.ಬಡವರು-ನಿರ್ಗತಿಕರು ಹಸಿದುಕೊಂಡು ಬಂದ್ರೆ ಅವರಿಂದ ಹಣ ಪಡೆಯದೆ ಊಟ ಬಡಿಸುತ್ತಿದ್ದ ಬಿಬಿಎಂಪಿ ಕ್ಯಾಂಟೀನ್  ಲಿಂಗಣ್ಣನನ್ನು ಬಿಬಿಎಂಪಿ ಕ್ಯಾಂಪಸ್ ನಲ್ಲಿರೋರೇ ಬಲಿ ತೆಗೆದುಕೊಂಡ್ ಬಿಟ್ರಲ್ಲಾ..ಇದು ನ್ಯಾಯನಾ..ಲಿಂಗಣ್ಣನ ಆತ್ಮ ಇದನ್ನು ಕ್ಷಮಿಸುತ್ತಾ..ಖಂಡಿತಾ ಇಲ್ಲ.

ಲಿಂಗಣ್ಣನನ್ನು ಬಲಿಗೊಡ್ಲಿಕ್ಕಾಗಿಯೇ  ಹೊರಗಿನವರನ್ನು ಕರೆ ತಂದು ತಿಂಗಳಿಗೆ 5 ಸಾವಿರ ಫಿಕ್ಸ್ ಮಾಡಿ 5 ವರ್ಷಗಳವರೆಗೆ ಲೀಸ್ ಕೊಡಲಾಗ್ತದೆ.ಇದಕ್ಕೆ ಮಾಜಿ ಮೇಯರ್ ಗೌತಮ್ ಕುಮಾರ್ ಬ್ಯಾಟಿಂಗ್ ಮಾಡ್ತಾರೆ.ಪದ್ಮನಾಭರೆಡ್ಡಿ,ಮುನಿಂದ್ರಕುಮಾರ್ ಅವರಂಥವ್ರು ಸಾಥ್ ಕೊಡ್ತಾರೆ ಎಂದ್ರೆ ಅದಕ್ಕಿಂತ ಅಪಮಾನಕಾರಿ ಸಂಗತಿ ಇನ್ನೊಂದಿದೆಯಾ..?

ಮೊಬೈಲ್ ಕ್ಯಾಂಟೀನ್ ಮಾಲೀಕನ ಕಿಕ್ ಬ್ಯಾಕ್ ಆಸೆಗೆ ಕ್ಯಾಂಟೀನ್ ನಡೆಸಿಯೇ ಜೀವನ ಕಟ್ಟಿ ಕೊಂಡಿದ್ದ ಲಿಂಗಣ್ಣ ಎನ್ನೋ ನಿರುಪದ್ರವಿ-ನಿಷ್ಪಾಪಿ ಬದುಕು-ಜೀವನಾಧಾರ ಮೂಲ ಕೊನೆಗೆ ಜೀವವನ್ನೇ  ಬಲಿ ತೆಗೆದುಕೊಂಡ್ ಬಿಟ್ರಲ್ಲ ಕೆಲವ್ರು.ಅವರು ಉದ್ದಾರವಾಗ್ತಾರಾ.. ನನ್ ಮಾಂಗಲ್ಯಭಾಗ್ಯ ಕಸಿದುಕೊಂಡವ್ರ, ಹೆಂಡ್ತಿ ಮಕ್ಕಳು ಚೆನ್ನಾಗಿರ್ತಾರಾ..ಹಾಳಾಗಿ ಹೋಗ್ತಾರೆ. .ಲಿಂಗಣ್ಣನ ಶವದ ಮುಂದೆ ಪತ್ನಿ ನಿಟ್ಟುಸಿರುಬಿಡ್ತಾ ಹಾಕಿದ ಈ ರೀತಿಯ ಶಾಪ ತಟ್ಟದೇ ಇರುತ್ತಾ..

ಯೆಸ್..ಬಿಬಿಎಂಪಿ ಕ್ಯಾಂಪಸ್ ನಲ್ಲಿ ಹಸಿದವರ ಪಾಲಿಗೆ ಆಪದ್ಬಾಂಧವನಂತಿದ್ದ ಕ್ಯಾಂಟೀನ್ ಲಿಂಗಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ..ಈ ಸಾವನ್ನು ಅಕಾಲಿಕ ಎಂದು ಪರಿಗಣಿಸಿ, ಮನಸಿನಲ್ಲೊಂದು ಶೃದ್ದಾಂಜಲಿ ಸಲ್ಲಿಸಿ ಸುಮ್ಮನಾಗಲಿಕ್ಕೆ ಸಾಧ್ಯವೇ ಇಲ್ಲ..ಸದಾ ಜೀವನೋತ್ಸಾಹದಿಂದ ಪುಟಿಯುತ್ತಿದ್ದ,ಆ  ಜೀವ  ದಿಢೀರ್ ಆತ್ಮಹತ್ಯೆಯಂಥ ದುರಂತದ  ನಿರ್ದಾರ ಕೈಗೊಳ್ಳುತ್ತೆ ಎಂದ್ರೆ  ಅದಕ್ಕೆ ಪ್ರಚೋದನೆ ನೀಡಿದವ್ರನ್ನು ಕ್ಷಮಿಸಲಿಕ್ಕಾಗುತ್ತಾ..ಹಾಗೆ ಮಾಡುದ್ರೆ  ಲಿಂಗಣ್ಣನ ಆತ್ಮ ನೆಮ್ಮದಿ ಮಗ್ಗಲು ಬದ್ಲಿಸುತ್ತಾ..ಖಂಡಿತಾ ಇಲ್ಲ.ಲಿಂಗರಾಜ್ ಅಲಿಯಾಸ್ ಲಿಂಗಣ್ಣ ಬದುಕ್ಬೇಕಾದ ವಯಸ್ಸಿನಲ್ಲಿ ಸಾವಿನ ಮನೆ ಸೇರಿದ್ದಾರೆ. ಸಾಯುವಂಥ ವಯಸ್ಸೇನೂ ಅವರದಾಗಿರಲಿಲ್ಲ.ಆದ್ರೆ ಕೆಲ ವ್ಯಕ್ತಿಗಳು ಹಾಗೆಯೇ ಸಂದರ್ಭಗಳು, ಬದುಕನ್ನು ದಾರುಣವಾಗಿ ಅಂತ್ಯಗೊಳಿಸಿಕೊಳ್ಳುವ ಸ್ಥಿತಿಗೆ ಪ್ರಚೋದಿಸಿದ್ದು ಮಾತ್ರ ಅಕ್ಷಮ್ಯ.

ಬರಿಗೈಯಲ್ಲಿ ಬೆಂಗಳೂರಿಗೆ ಬಂದು ಇದೇ ಬಿಬಿಎಂಪಿ ಕ್ಯಾಂಟೀನ್ ನಲ್ಲಿ ಇನ್ನೊಬ್ಬರ ಕೆಳಗೆ ಕೆಲಸ ಮಾಡಿ ಸಾಹುಕಾರರಿಂದ್ಲೇ ಕ್ಯಾಂಟೀನ್ ಪಡೆದು ಬದುಕು ಕಟ್ಟಿಕೊಂಡಾತ ಲಿಂಗಣ್ಣ. ಕಷ್ಟಪಟ್ಟು ಒಂದಷ್ಟು ಸಂಪಾದಿಸಿದ್ದನ್ನು ಹೆಮ್ಮೆಯಿಂದಲೂ ಹೇಳಿಕೊಂಡಿದ್ದ.ಗ್ಲೋಬಲ್ ವಿಲೇಜ್ ಸಮೀಪದ  ಮೈಲಸಂದ್ರದ ಮೂಕಾಂಬಿಕ ನಗರದಲ್ಲಿ ಮನೆ ಕಟ್ಟಿ ವಾಸವಿದ್ದ.ಆದರೆ ಇತ್ತೀಚೆಗೆ ತನ್ನ ಜೀವನಾಧಾರ ಮೂಲವಾದ ಕ್ಯಾಂಟೀನ್  ಕೈತಪ್ಪಿದ್ದರಿಂದ  ಆತ್ಮಸ್ಥೈರ್ಯ ಕಳಕೊಂಡು ನಿರ್ಲಿಪ್ತವಾಗಿರುತ್ತಿದ್ದ.ಆದರೆ ಅದಕ್ಕಾಗಿ ಸಾಯುವಂಥ ನಿರ್ದಾರ ಮಾಡಿದ್ದು ದೌರ್ಭಾಗ್ಯಪೂರ್ಣ.

ಆಪ್ತ ಸಹಾಯಕ ಕಿರಣ್ ಕುಮಾರ್
ಆಪ್ತ ಸಹಾಯಕ ಕಿರಣ್ ಕುಮಾರ್
ಮಾಜಿ ಮೇಯರ್ ಗೌತಮ್ ಕುಮಾರ್
ಮಾಜಿ ಮೇಯರ್ ಗೌತಮ್ ಕುಮಾರ್
ಲಿಂಗಣ್ಣನ ಆತ್ಮಹತ್ಯೆಗೆ ಕಾರಣವಾಯ್ತಾ ಬಿಬಿಎಂಪಿ ತೆಗೆದುಕೊಂಡ ಈ ನಿರ್ಣಯ
ಲಿಂಗಣ್ಣನ ಆತ್ಮಹತ್ಯೆಗೆ ಕಾರಣವಾಯ್ತಾ ಬಿಬಿಎಂಪಿ ತೆಗೆದುಕೊಂಡ ಈ ನಿರ್ಣಯ

ಹತ್ತಾರು ವರ್ಷ  ಕಷ್ಟಪಟ್ಟು ಕಟ್ಟಿಕೊಂಡ  ಕ್ಯಾಂಟೀನ್ ನ್ನು ಕಸಿದುಕೊಂಡು ಕಿಕ್ ಬ್ಯಾಕ್ ಆಸೆಗೆ ಇನ್ನೊಂದು ಮೊಬೈಲ್ ಕ್ಯಾಂಟೀನ್ ಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಅಕ್ಷರಶಃ ಕನಲಿ ಹೋಗಿದ್ದ ಲಿಂಗಣ್ಣ ಆತ್ಮಹತ್ಯೆ ನಿರ್ದಾರ ಮಾಡಿಯೇ ಬಿಟ್ಟಿದ್ದ ಅನ್ಸುತ್ತೆ. ಹಾಗಾಗಿನೇ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಮೈಸೂರಿಗೆ ಕಳುಹಿಸಿದ್ದರು.ನಿನ್ನೆ ಮಧ್ಯಾಹ್ನ-ಸಂಜೆಯೆಲ್ಲಾ ಕೆಲವು ಆತ್ಮೀಯರ ಜೊತೆ ಮಾತ್ನಾಡಿದ್ದಾರೆ.ತನ್ನ ನೋವನ್ನು ಹೇಳಿಕೊಂಡಿದ್ದರೆ ವಿನಃ ಆತ್ಮಹತ್ಯೆ ಮಾಡಿಕೊಳ್ಳಬಹುದಾದ ಯಾವುದೇ ಸುಳಿವನ್ನು ನೀಡಿಲ್ಲ. ಆದ್ರೆ ರಾತ್ರಿ ಬೆಡ್ ರೂಂನಲ್ಲಿ ಫ್ಯಾನ್ ಗೆ ತನ್ನ ಹೆಂಡತಿ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ. ಬಾಗಿಲು ಮುಚ್ಚದ್ದನ್ನು ಕಂಡ ಬಾಡಿಗೆ ಮನೆಯವ್ರು ಬಾಗಿಲು ಸರಿಸಿ ನೋಡಿದಾಗ ಲಿಂಗಣ್ಣನ ನೇತಾಡುತ್ತಿದ್ದ ಶವ ಗೋಚರಿಸಿದೆ.ಅನಕ್ಷರಸ್ಥರಾಗಿದ್ದ ಯಾವುದೇ ಡೆತ್ ನೋಟೆ ಬರೆದಿರಲಿಲ್ಲ.ಆದ್ರೆ ಸಾಯುವ ಮುನ್ನ  ಮುನ್ನ ಕೆಲವರ ಜೊತೆ ಮಾತನಾಡಿದ್ದರೆನ್ನಲಾಗಿದೆ.

ಇದೆಲ್ಲಾ ಆತ್ಮಹತ್ಯೆಯ ಕಥೆಯಾದ್ರೆ,ಲಿಂಗಣ್ಣ ಆತ್ಮಹತ್ಯೆ ಮಾಡಿಕೊಳ್ಳುವಂಥ ಸ್ತಿತಿಗೆ ಅವರನ್ನು ತಂದವರು ಯಾರೆನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದ್ರೆ ಒಂದಷ್ಟು ಘಟನೆ-ಮತ್ತೊಂದಷ್ಟು ವ್ಯಕ್ತಿಗಳು ಉತ್ತರವಾಗಿ ಕಾಣಿಸಿಕೊಳ್ತಾರೆ.ಅದರಲ್ಲಿ ಪ್ರಮುಖವಾಗಿ ಮಾಜಿ ಮೇಯರ್ ,ಅವರ ಅಪ್ತ ಸಹಾಯಕ ಹಾಗೂ  ಬಿಬಿಎಂಪಿ ನೌಕರರ ಸಂಘದ ಮುಖಂಡರೊಬ್ಬರ ಹೆಸರುಗಳು  ಕೇಳಿಬರುತ್ತಿವೆ.

ಅನೇಕ ವರ್ಷಗಳಿಂದ ಕ್ಯಾಂಟೀನ್ ನಡೆಸಿಕೊಂಡು ಬದುಕು ಕಟ್ಟಿಕೊಂಡಿದ್ದರು ಲಿಂಗಣ್ಣ. ಅವರ ಹೊಟೇಲ್ ನ ಊಟದ ಗುಣಮಟ್ಟದ ಬಗ್ಗೆ ಒಂದಷ್ಟು ಆಕ್ಷೇಪಗಳಿದ್ದುದು ಎಷ್ಟು ನಿಜನೋ..ಅದನ್ನು ಸರಿಪಡಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಂಡಿದ್ದರೆನ್ನುವುದು ಕೂಡ ಅಷ್ಟೇ ಸತ್ಯ.ಆದ್ರೆ ಇದ್ದಕ್ಕಿದ್ದಂತೆ ಕ್ಯಾಂಟೀನ್  ಮುಂದೆಯೇ ಬೆಂಗಳೂರು ತಿಂಡೀಸ್ ಎನ್ನುವ ಮೊಬೈಲ್ ಕ್ಯಾಂಟೀನ್ ಆರಂಭವಾಯ್ತು.ಇದು ಲಿಂಗಣ್ಣನಿಗೆ ಆಕಾಶವೇ ಕಳಚಿಬಿದ್ದ ಅನುಭವ ಮೂಡಿಸ್ತು.ತನ್ನ ಜೀವನಾಧಾರ ಮೂಲವನ್ನೇ ಕಸಿದುಕೊಳ್ಳುತ್ತಿರುವಂತೆ ಭಾಸವಾಯ್ತು.

ಕೆಎಂಸಿ ಕಾಯ್ದೆಯನ್ನು ಉಲ್ಲಂಘಿಸಿ BUTTER STORIES HOSPITALITY PVT LIMITEDಎನ್ನುವ ಮೊಬೈಲ್ ಕ್ಯಾಂಟೀನ್ ಗೆ ಐದು ವರ್ಷ ಅಪ್ರೂವಲ್ ಕೊಟ್ಟಿದ್ದು ಮಾಜಿ ಮೇಯರ್ ಗೌತಮ್ ಕುಮಾರ್.ಇದೆಲ್ಲದ್ದಕ್ಕೂ ಕುಮ್ಮಕ್ಕು ನೀ  ಡಿದರೆನ್ನೋ ಆಪಾದನೆ ಇರೋದು ಅವರ ಆಪ್ತ ಸಹಾಯಕ ಕಿರಣ್ ಕುಮಾರ್ ಮೇಲೆ.BUTTER STORIES HOSPITALITY PVT LIMITED ಗೆ ಅಕ್ರಮವಾಗಿ ಕ್ಯಾಂಪಸ್ ನೊಳಗೆ ಸ್ಥಾನ ಕಲ್ಪಿಸೊಕ್ಕೆ ಲಕ್ಷಾಂತರ ಮೊತ್ತದ ಕಿಕ್ ಬ್ಯಾಕ್ ಕಿರಣ್ ಕುಮಾರ್ ಹಾಗೂ ಮಾಜಿ ಮೇಯರ್ ಪಡೆದಿದ್ದಾರೆನ್ನುವ ಆರೋಪವು ಕೇಳಿಬಂದಿದೆ.ಅದನ್ನು ಲಿಂಗರಾಜ್ ಅವ್ರೇ ಅತ್ಯಾಪ್ತರ ಬಳಿ ಹೇಳಿಕೊಂಡಿದ್ದರಂತೆ. 10 ಲಕ್ಷ  ಅಲ್ಲದಿದ್ದರೂ ಒಂದಷ್ಟು ಲಕ್ಷಗಳನ್ನು ನಾನೇ ಕೊಡುತ್ತೇನೆ..ದಯವಿಟ್ಟು ನನ್ನ ಕ್ಯಾಂಟೀನ್ ಮುಚ್ಚಿಸ್ಬೇಡಿ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದರಂತೆ ಲಿಂಗಣ್ಣ..ಅದನ್ನು ಆತ ಕಣ್ಣೀರಾಕುತ್ತಾ ನೋವು ತೋಡಿಕೊಂಡಿದ್ರಂತೆ.ಆದ್ರೆ ಸುತಾರಾಂ ಆಗೊಲ್ಲ ಎಂದಿದ್ದರಂತೆ ಮಾಜಿ ಮೇಯರ್.ಅವರಿವರ ಬಳಿಯೂ ಮಾಜಿ ಮೇಯರ್ ಗೆ ಹೇಳಿಸುವ ಕೆಲಸವನ್ನು ಲಿಂಗಣ್ಣ ಮಾಡಿದ್ರು.ಆದ್ರೆ ಪ್ರಯೋಜನವಾಗ್ಲೇ ಇಲ್ಲ..

ಕ್ಯಾಂಟೀನ್ ಉಳಿಸಿಕೊಳ್ಳೊಕ್ಕೆ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದಾಗ ಕೊನೇ ಪ್ರಯತ್ನ ಎನ್ನುವಂತೆ ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ  ಅಮೃತ್ ರಾಜ್ ಗೂ ಮನವಿ ಮಾಡಿದ್ರಂತೆ.ಅಂದ್ಹಾಗೆ ಲಿಂಗಣ್ಣನ ಕ್ಯಾಂಟೀನ್ ತೆರವು ಮಾಡಬೇಕೆನ್ನುವುದರ ಪ್ರಯತ್ನದ ಹಿಂದೆ ಅಮೃತ್ ರಾಜ್ ಹೆಸರು ಕೇಳಿಬರುತ್ತಿದೆ.ಅಮೃತ್ ರಾಜ್ ಸುಮ್ಮನಾದ್ರೆ ಏನೂ ಗೊಂದಲ ಇರೊಲ್ಲ ಎನ್ನೋ ಗ್ಯಾರಂಟಿಯಿಂದ ಅಮೃತ್ ರಾಜ್ ಅವರನ್ನೂ ಕೂಡ ಲಿಂಗಣ್ಣ ಅಪ್ರೋಚ್ ಮಾಡಿದ್ರಂತೆ.ಆದ್ರೆ ಅದೂ ಪ್ರಯೋಜನವಾಗದೆ ಇದ್ದಾಗ ಜೀವನಕ್ಕೆ ಏನು ಎನ್ನುವ ಪ್ರಶ್ನೆ ಬೃಹದಾಕಾರವಾಗಿ ಸೃಷ್ಟಿಯಾಗಿದೆಯೇನೋ..

ಜೀವನಾಧಾರ ಮೂಲವಾದ ಕ್ಯಾಂಟೀನೇ ಕೈ ತಪ್ಪಿ ಹೋಗಿದ್ರಿಂದ ಕಂಗಾಲಾದ ಲಿಂಗರಾಜ್ ಮಾನಸಿಕ ಸ್ಥಿಮಿತವನ್ನೇ ಕಳ್ಕೊಂಡಿದ್ದಾರೆ.ಅದು ಅಂತಿಮವಾಗಿ ಆತ್ಮಹತ್ಯೆ ಮಾಡಿಕೊಳ್ಳೋಕ್ಕೆ ಪ್ರಚೋದನೆ ನೀಡಿರುವ ಸಾಧ್ಯತೆಗಳಿವೆ ಎನ್ನೋದು ಅವರ ಆತ್ಮೀಯರ ಅಭಿಪ್ರಾಯ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಲಿಂಗಣ್ಣ  ಅನೇಕರ ಬಳಿ ಮಾತನಾಡಿರುವ ಸಾಧ್ಯತೆಗಳಿವೆ,ತನ್ನ ಬದುಕನ್ನು ಬೀದಿಗೆ ತಂದು ನಿಲ್ಲಿಸಿದವರ ಬಗ್ಗೆಯೂ ಸುಳಿವು ನೀಡಿರಬಹುದು.ಇದೆಲ್ಲವೂ ಸ್ಟೋರ್ ಆಗಿರುವ ಮೊಬೈಲನ್ನು  ಕೆಂಗೇರಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಅದೇನೇ ಇರಲಿ, ಕ್ಯಾಂಟೀನ್ ಲಿಂಗಣ್ಣನ ಸಾವಿಗೆ ಕಾರಣರಾದವ್ರು ಯಾರೇ ಇರಲಿ,ಅವರಿಗೆ ಶಿಕ್ಷೆ ಆಗಲೇಬೇಕು.. ಇಲ್ಲವಾದಲ್ಲಿ ಲಿಂಗಣ್ಣನ ಸಾವಿಗೆ ನ್ಯಾಯ ಹಾಗೂ ಆತ್ಮಕ್ಕೆ ಶಾಂತಿ ಸಿಗಲಿಕ್ಕೆ ಸಾಧ್ಯವೇ ಇಲ್ಲ.

Spread the love
Leave A Reply

Your email address will not be published.

Flash News