CORONA VIRUSKANNADAFLASHNEWSFIGHTAGAINSTCORONAMoreTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆರಾಜಕೀಯರಾಜ್ಯ-ರಾಜಧಾನಿ

”ಆಲಾ”ನಂಬಿ ಹಣ ಹಾಕಿದವರಿಗೆ ವಕ್ಕರಿಸ್ತಾ “ಕೆಟ್ಟ ಕಾಲ.”ಯಾ ಅಲ್ಲಾ”..! ಕೊನೆಗೂ ಬಯಲಾಯ್ತು ಐಎಂಎ,ಆಂಬಿಡೆಂಟ್ ಮಾದರಿಯ ಬೃಹತ್ ವಂಚನೆ.

ಆಲಾ ಪೂಂಜಿ ಸಂಸ್ಥೆಯ ಅಧ್ಯಕ್ಷ ನದೀಮ್ ಅಹ್ಮದ್,
“ಆಲಾ” ಪೂಂಜಿ ಸಂಸ್ಥೆಯ ಅಧ್ಯಕ್ಷ ನದೀಮ್ ಅಹ್ಮದ್,

ಬೆಂಗಳೂರು: ನೀವೇನಾದ್ರೂ ಈಗ ನಾವ್ ಹೇಳೊಕ್ಕೆ ಹೊರಟಿರುವ ಆ ಫ್ರಾಡ್ ಸಂಸ್ಥೆಯಲ್ಲಿ ಬಂಡವಾಳ ಹೂಡಿಕೆ ಮಾಡಿದ್ದೇ ಆದಲ್ಲಿ ನೀವು ಯಾಮಾರಿದ್ದೀರಿ..ನಿಮ್ಮ ಬೆವರಿನ ಹಣ ಪರರ ಗಂಟಾಯ್ತೆಂದೇ  ಅಂದ್ಕೊಳ್ಳಿ.ಇದನ್ನು ನಾವ್ ಹೇಳ್ತಿಲ್ಲ,ಸರ್ಕಾರದ ಕಂದಾಯ ಇಲಾಖೆಯ ಸ್ಪೆಷಲ್ ಸೆಲ್ ಇದನ್ನು ಸ್ಪಷ್ಟಪಡಿಸಿದೆ.ಅಷ್ಟೇ ಅಲ್ಲ,ಆ ಫ್ರಾಡ್ ಸಂಸ್ಥೆಗೆ ನೊಟೀಸ್ ನ್ನು ಕೂಡ ಸರ್ವ್ ಮಾಡಿದೆ. 

ರಾಜಧಾನಿ ಬೆಂಗಳೂರಲ್ಲಿ ಐಎಂಎ,ಆಂಬಿಡೆಂಟ್ ರೀತಿಯೇ ಮತ್ತೊಂದು ದೋಖಾ ಕಂಪೆನಿ ಹೂಡಿಕೆದಾರರಿಂದ ನೂರಾರು ಕೋಟಿ ಸಂಗ್ರಹಿಸಿ ವಂಚಿಸಿರುವ ಮಾಹಿತಿ ಬಹಿರಂಗವಾಗಿದೆ.ಹೂಡಿಕೆ ಹಣವನ್ನು ದುಪ್ಪಟ್ಟುಗೊಳಿಸಿಕೊಡುವ ಸುಳ್ಳನ್ನೇಳಿ  ಬಡ-ಮದ್ಯಮ ಹಾಗು ಶ್ರೀಮಂತರನ್ನು ನಂಬಿಸಿ ನೂರಾರು ಕೋಟಿ ಕಲೆಕ್ಟ್ ಮಾಡಿ ವಂಚಿಸಿದೆ.ಹೂಡಿಕೆದಾರರು ರಿಟರ್ನ್ಸ್ ಕೇಳಿದ್ರೆ ಸಬೂಬು ಹೇಳ್ತಾ ಕಾಲಹರಣ ಮಾಡಿರುವ ಸಂಸ್ಥೆ ವಿರುದ್ದ ದಾಖಲಾದ ದೂರುಗಳ ಮೇಲೆ ತನಿಖೆ ನಡೆಸಿದ  ಬೆಂಗಳೂರು ನಗರ ಜಿಲ್ಲಾ ನ್ಯಾಯಾಧೀಶರೂ ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಈ ಸಂಸ್ಥೆಯ ದೋಖಾಪುರಾಣ ಮನದಟ್ಟಾಗಿದೆ.

ಅಂದ್ಹಾಗೆ  ಆಂಬಿಡೆಂಟ್..ಐಎಂಎ ನಂಥ ಫ್ರಾಡ್ ಸಂಸ್ಥೆ ಪಟ್ಟಿಗೆ ಸೇರ್ಪಡೆಯಾಗುತ್ತಿರುವ ಆ ದೋಖಾ ಸಂಸ್ಥೆಯೇ ಆಲಾ..ಯೆಸ್..ಆಲಾ ವೆಂಚರ್ಸ್ ಲಿಮಿಟೆಡ್ ಹೂಡಿಕೆದಾರರಿಗೆ ಹಣ ವಾಪಸ್ ಮಾಡದೆ,ಲಾಭಾಂಶವನ್ನು ನೀಡದೆ ದೋಖಾ ಮಾಡ್ತಿದೆ ಎನ್ನುವ ಆರೋಪ ಕೇಳಿಬಂದಿದೆ.ಸಂಸ್ಥೆಯ ವಂಚನೆ ಮೇಲ್ನೋಟಕ್ಕೆ ಸಾಬೀತಾಗಿರುವುದಕ್ಕೆ ಕಂದಾಯ ಇಲಾಖೆಯ ವಿಶೇಷ ಕೋಶದ ಅಧೀನ ಕಾರ್ಯದರ್ಶಿ  ನೊಟೀಸ್ ಸರ್ವ್ ಮಾಡಿರುವ  ಪತ್ರಿಕೆಗಳ ಪ್ರತಿ “ಕನ್ನಡ ಫ್ಲಾಶ್ ನ್ಯೂಸ್” ಗೆ ಲಭ್ಯವಾಗಿದೆ.

ಆಲಾ ವೆಂಚರ್ಸ್ ..ಬೆಂಗಳೂರಿನ ಬಾಣಸವಾಡಿಯಲ್ಲಿ 2014ರ ಡಿಸೆಂಬರ್ 3 ರಂದು ಕಾರ್ಯಾರಂಭ( ವೆಬ್ ಸೈಟ್ ನಲ್ಲಿ ಸಂಸ್ಥೆಯವ್ರೇ ಡಿಕ್ಲೇರ್ ಮಾಡಿಕೊಂಡಂತೆ) ಮಾಡಿದ ಸಂಸ್ಥೆ.ಹಣ ಉಳಿಸಿ ಅದನ್ನು ಕಷ್ಟಕಾಲಕ್ಕೆ ಬಳಸಿಕೊಳ್ಳಬಹುದೆನ್ನುವ ಬಡ ಹಾಗೂ ಮದ್ಯಮವರ್ಗದವರ ಮನಸ್ಥಿತಿಯನ್ನೇ ಟಾರ್ಗೆಟ್ ಮಾಡ್ಕೊಂಡು ನದೀಮ್ ಅಹ್ಮದ್,ನಜ್ಮುಲ್ ಹುಸೇನ್,ಇನಾಮುಲ್ ಹಸನ್ ಮನಿಕರ್,ಸೈಯ್ಯದ್ ಪಾಷಾ ಎನ್ನುವವರು ಸೇರಿಕೊಂಡು ಕಟ್ಟಿದ ಸಂಸ್ಥೆ ಇದು.ಗಿಲೀಟ್ ಮಾತುಗಳನ್ನೇಳಿ ಜನರನ್ನು ಬುಟ್ಟಿಗೆ ಹಾಕ್ಕೊಂಡ ಸಂಸ್ಥೆಯ ನಿರ್ದೇಶಕರು ಕೆಲವೇ ವರ್ಷಗಳಲ್ಲಿ ನೂರಾರು ಕೋಟಿ ಹಣವನ್ನು ಹೂಡಿಕೆ ಮಾಡಿಸಿಕೊಂಡರೆನ್ನುವುದು ಕಂದಾಯ ವಿಭಾಗಕ್ಕೆ ಸಿಕ್ಕ ಮಾಹಿತಿ.

ಆಲಾ ವೆಂಚರ್ಸ್ ಎನ್ನುವ ಸಂಸ್ಥೆ ಈ ಹೂಡಿಕೆ ಹಣದಿಂದ್ಲೇ ಕೇವಲ ನಾಲ್ಕೈದು ವರ್ಷಗಳಲ್ಲಿ  AALA VENTURES LIMITED SOFTINWAY DIGITAL ENGINEERING PRIVATE LIMITED,  ZISMART TECH SOLUTIONS PRIVATE LIMITED, BOOKS & TAX SERVICES LLP, LAMU CONSULTING PRIVATE LIMITED (OPC), ARTDIZIRE ENTERTAINMENTS & EVENTS PRIVATE LIMITED, ARTDIZIRE INFRA SOLUTIONS (OPC) PRIVATE LIMITED, REECON PROJECTS & ENERGY PRIVATE LIMITED, REECON BIOPRODUCTS LLP ಗ್ರೂಪ್ ಆಫ್ ಕಂಪೆನಿಯನ್ನು ಪ್ರಾರಂಭಿಸಿ ಅಲ್ಲಿಯೂ ಕೋಟಿ ಕೋಟಿ ಸಂಪಾದಿಸಿದ್ರು.

ಬೆಂಗಳೂರಿನ ಸುಮಾರು 25 ಕಡೆ ಹಣವನ್ನು ಹೂಡಿಕೆ ಮಾಡಿ ಆಸ್ತಿಯನ್ನು ಖರೀದಿಸಿದ ಈ ಡೈರೆಕ್ಟರ್ಸ್, ಪಾಪ.. ಹೂಡಿಕೆದಾರರು ಕಷ್ಟವಿದೆ ಹಣ ಕೊಡಿ ಎಂದು ಲಾಭಾಂಶ ಕೇಳುದ್ರೆ ಅವರನ್ನು ಗಿಲೀಟ್ ಮಾತುಗಳಿಂದ ಯಾಮಾರಿಸ್ತಾ ಬಂದ್ರೆ ಹೊರತು,ನಯಾಪೈಸೆ ಹಣವನ್ನು ಮಾತ್ರ ವಾಪಸ್ ಕೊಡಲಿಲ್ಲ.ಹೂಡಿಕೆ  ಮಾಡಿದ ಬಡವರು ಹಾಗೂ ಮಧ್ಯಮ ವರ್ಗದವರಿಂದ ಕೋಟ್ಯಾಂತರ ಹಣವನ್ನು ಸಂಗ್ರಹಿಸಿ ಈಗ ಸಬೂಬು ಹೇಳಿ ಯಾಮಾರಿಸುತ್ತಿರುವ ಸಂಸ್ಥೆಯ ವಂಚನೆ ಬಗ್ಗೆ ಸಾಕಷ್ಟು ಹೂಡಿಕೆದಾರರು ಕಂಪ್ಲೆಂಟ್ ಕೊಟ್ಟಿದ್ದಾರೆ.ಇದೆಲ್ಲವನ್ನು ಕ್ರೋಢೀಕರಿಸಿ ಇದೀಗ ಕಂದಾಯ ವಿಭಾಗ ಸಂಸ್ಥೆ ವಿರುದ್ದ ಕ್ರಮಕ್ಕೆ ಮುಂದಾಗಿದೆ.ಹೂಡಿಕೆದಾರರ ಹಣವನ್ನು ಅವರಿಗೆ ನೀಡದೆ ಆ ಹಣದಿಂದ್ಲೇ ಅನೇಕ ಕಡೆ ಬೆಲೆ ಬಾಳುವ ಭೂಮಿ ಖರೀದಿಸಿ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿರುವ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದಾರೆ.ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳೊಕ್ಕೆ ಸಿದ್ಧವಾಗಿದ್ದು ಈ ಸಂಬಂಧ ನೊಟೀಸ್ ಕೂಡ ಸರ್ವ್ ಮಾಡಿದ್ದಾರೆ.

ಅದೇನೇ ಇರಲಿ,ಆಲಾ ಸಂಸ್ಥೆ ನಮ್ಮನ್ನು ಉದ್ಧಾರ ಮಾಡುತ್ತೆ ಎಂದು ನಂಬಿ ಇರೋ ಬರೋದನ್ನೆಲ್ಲಾ ಹೂಡಿಕೆ ಮಾಡಿ ಈಗ ಮೂರ್ಖರಾಗಿರುವ ಹೂಡಿಕೆದಾರರು ನ್ಯಾಯಕ್ಕಾಗಿ ಕಾನೂನಿನ ಮೊರೆ ಹೋಗಿದ್ದಾರೆ.ಅದು ಇನ್ನ್ಯಾವಾಗ ಮುಗಿಯುತ್ತೋ.. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಅದ್ಯಾವಾಗ ಸಿಗುತ್ತೋ..ಆ ಅಲ್ಲಾಹುವಿಗೆ ಗೊತ್ತು..ಒಟ್ಟಿನಲ್ಲಿ ಪೂಂಜಿ ಕಂಪೆನಿಗಳು ಮಾಡುವ ಮೋಸ ಗೊತ್ತಿದ್ದರೂ ಜನ  ಐಎಂಎ,ಆಂಬಿಡೆಂಟ್,ಆಲಾದಂಥ ದಗಲ್ಬಾಜಿ ಸಂಸ್ಥೆಗಳಿಗೆ ಹೂಡಿಕೆ ಮಾಡಿ ಮೋಸ ಹೋಗೋದು ತಪ್ಪೋದಿಲ್ಲ ನೋಡಿ..ಯಾಕಂದ್ರೆ ಏನೇ ಗೊತ್ತಿದ್ರೂ ಮೋಸ ಹೋಗೋದು ಮನುಷ್ಯ ಸಹಜ ಸ್ವಭಾವ ಅಲ್ವೇ.. 

Spread the love

Related Articles

Leave a Reply

Your email address will not be published.

Back to top button
Flash News