“ಡ್ರಗ್ಸ್ ಸುಳಿವು ಸಿಕ್ಕರೆ ಗ್ರಹಚಾರ ಬಿಡುಸ್ ಬಿಡ್ತೇವೆ..ಡ್ರಗ್ಸ್ ನಶೆ ಹತ್ತಿಸಿಕೊಂಡ್ರೆ ಅಂಥವ್ರ ಮಾಹಿತಿ ಕೊಟ್ಟೋರಿಗೆ ಬಹುಮಾನ ಕೊಡ್ತೇವೆ” ಹೀಗೆ ಖಡಕ್ ವಾರ್ನಿಂಗ್ ಕೊಟ್ಟೋರು ಯಾರು..ಏಕೆ ಗೊತ್ತಾ?.

0

ಚಿಕ್ಕಮಗಳೂರು:ಡ್ರಗ್ಸ್ ಸುಳಿವು ಸಿಕ್ಕರೆ ಗ್ರಹಚಾರ ಬಿಡುಸ್ ಬಿಡ್ತೇವೆ..ನಿಮ್ಮಲ್ಲಿಗೆ ಬರೋರಲ್ಲಿ ಯಾರಾದ್ರೂ ಡ್ರಗ್ಸ್ ನಶೆ ಹತ್ತಿಸಿಕೊಂಡ್ರೆ ಅಂಥವ್ರ ಮಾಹಿತಿ ಕೊಟ್ಟೋರಿಗೆ ಬಹುಮಾನ ಕೊಡ್ತೇವೆ..ಹೀಗೊಂದು ವಾರ್ನಿಂಗ್ ಹಾಗೂ ವಿನೂತನ ಆಫರ್ ನ್ನು ನೀಡಿರೋದು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್.

ಇದೀಗ ಖಾಕಿ ಕಣ್ಣು ರೆಸಾರ್ಟ್ ಹಾಗೂ ಹೋಂ ಸ್ಟೇಗಳ ಮೇಲೆ ದೃಷ್ಟಿ ಬೀರಿದೆ.ಖುದ್ದು ಪ್ರವೀಣ್ ಸೂದ್ ಅವರೇ ಫೀಲ್ಡ್ ಗಿಳಿದಿದ್ದಾರೆ.ಈ ಹಿನ್ನಲೆಯಲ್ಲಿ ನಿನ್ನೆ ಅವರು  ಚಿಕ್ಕಮಗಳೂರು ಜಿಲ್ಲೆಗೂ ಭೇಟಿ ಕೊಟ್ಟು ಚರ್ಚೆ ನಡೆಸಿದರು. ಹೌದು..ಡ್ರಗ್ಸ್ ದಂಧೆ ವಿರುದ್ಧ ಕಾರ್ಯಚರಣೆ ನಡೆಸುತ್ತಿರುವ ಖಾಕಿ ಪಡೆ ಎಲ್ಲೆಡೆ ಡ್ರಗ್ಸ್ ಮಾಫಿಯಾದವರನ್ನ ಹೆಡೆಮುರಿ ಕಟ್ಟುತ್ತಿದ್ದಾರೆ. ರಾಜ್ಯದೆಲ್ಲಡೆ ಬಸ್ಸು,ರೈಲು ನಿಲ್ದಾಣ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತಲಾಶ್ ನಡೆಸುತ್ತಿರುವ ಆರಕ್ಷಕರು ಡ್ರಗ್ಸ್ ಪೆಡ್ಲರ್ ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

ಇದೀಗ ಮಾದಕ ಪದಾರ್ಥಗಳು ರೆಸಾರ್ಟ್ , ಹೋಂ ಸ್ಟೇಗಳಲ್ಲಿ ಸುಲಭವಾಗಿ ಸಿಗುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅದರಲ್ಲೂ ಮಡಿಕೇರಿ, ಚಿಕ್ಕಮಗಳೂರಿನಲ್ಲಿ ಸಾಕಷ್ಟು ಹೋಂ ಸ್ಟೇಗಳಲ್ಲಿ ಹಾಗೂ ರೆಸಾಟ್ ಗಳಲ್ಲಿ ಮಾದಕ ವಸ್ತುಗಳ ವಹಿವಾಟು ಹಾಗೂ ಸೇವನೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಕೊಕೆನ್, ಹೆರಾಯಿನ್ ಸೇರಿದಂತೆ ವಿವಿಧ ಬಗೆಯ ಡ್ರಗ್ಸ್ ಗಳ ಸೇವನೆಗೆ ಚಿಕ್ಕಮಗಳೂರು ಹಾಗೂ ಮಡಿಕೇರಿ ಹೇಳಿ ಮಾಡಿಸಿದ ತಾಣ.. ಇಲ್ಲಿನ ಹಚ್ಚ ಹಸಿರು ನಡುವೆ ತಂಪಾದ ವಾತಾವರಣದಲ್ಲಿ ಡ್ರಗ್ಸ್ ಸೇವನೆ ಮಾಡೋದು ಅಂದ್ರೆ ಡ್ರಗ್ಸ್ ವ್ಯವಸನಿಗಳಿಗೆ ಎಲ್ಲಿಲ್ಲದ ಸಂತೋಷ.ಹೀಗಾಗಿಯೇ ಇಲ್ಲಿನ ಹಚ್ಚಹಸಿರ ನಡುವೇ ಅಮಲು ಏರಿಸಿಕೊಂಡು ಮತ್ತಿನಲ್ಲಿ ತೇಲಾಡಿ ಮೋಜು ಮಸ್ತಿ ಮಾಡಲು ಸಾಕಷ್ಟು ಜನರು ವಾರಾಂತ್ಯದಲ್ಲಿ ಇಲ್ಲಿಗೆ ಆಗಮಿಸ್ತಾರೆ. ಅದರಲ್ಲೂ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಇಲ್ಲಿಗೆ ಬಂದು ಮಸ್ ಮಜಾ ಮಾಡೋರೆ ಹೆಚ್ಚು…  ಇದನ್ನೇ ಬಂಡವಾಳವನ್ನಾಗಿಸಿಕೊಂಡು ಕೆಲ ಡ್ರಗ್ಸ್ ಡೀಲರ್ಸ್, ಪೆಡ್ಲರ್ಸ್ ಮಡಿಕೇರಿ ಹಾಗೂ ಚಿಕ್ಕಮಗಳೂರಿನ ಹೋಂ ಸ್ಟೇ, ರೆಸಾಟ್  ಗಳಲ್ಲಿ  ಲಕ್ಷಾಂತರೂ ಡ್ರಗ್ಸ್ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್. ಸೋಮವಾರ ಮಡಿಕೇರಿ ಹಾಗೂ ಚಿಕ್ಕಮಗಳೂರಿಗೆ ನೀಡಿ ಪರಿಶೀಲನೆ ನಡೆಸಿದರ. ಕೆಲ ರೆಸಾಟ್ , ಹೋಂ ಸ್ಟೇಗಳನ್ನು ತಲಾಶ್ ಮಾಡಿಸಿ ಕಮಲ್ ಪಂತ್ ಡ್ರಗ್ಸ್ ಸೇವನೆ ಅಥವಾ ಬ್ಯುಸಿನೆಸ್ ಏನಾದ್ರೂ ನಡೆಸಿದ್ರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ರೇಸಾಟ್  ಅಂಡ್ ಹೋಂ ಸ್ಟೇ ಮಾಲೀಕರಿಗೆ ಎಚ್ಚರಿಕೆ ನೀಡಿದರು.

“ಡ್ರಗ್ಸ್ ಸುಳಿವು ಸಿಕ್ಕರೆ ಗ್ರಹಚಾರ ಬಿಡುಸ್ ಬಿಡ್ತೇವೆ..ಡ್ರಗ್ಸ್ ನಶೆ ಹತ್ತಿಸಿಕೊಂಡ್ರೆ ಅಂಥವ್ರ ಮಾಹಿತಿ ಕೊಟ್ಟೋರಿಗೆ ಬಹುಮಾನ ಕೊಡ್ತೇವೆ” ಹೀಗೆ ಖಡಕ್ ವಾರ್ನಿಂಗ್ ಕೊಟ್ಟೋರು ಯಾರು..ಏಕೆ ಗೊತ್ತಾ?.  

Spread the love
Leave A Reply

Your email address will not be published.

Flash News