ತುಪ್ಪದ ಬೆಡಗಿ ರಾಗಿಣಿ ಜೈಲ್ ಗೆ-ಸಂಜನಾ ಸಿಸಿಬಿ ಕಸ್ಟಡಿಗೆ-ರಾಗಿಣಿ 14 ದಿನ ಜೈಲು -ಸಂಜನಾಗೆ 3 ದಿನ ಸಿಸಿಬಿ ಪಾಲು..

0

ಬೆಂಗಳೂರು: ಡ್ರಗ್ಸ್ ಆರೋಪ ಸುಳಿಯಲ್ಲಿ ಸಿಲುಕಿರುವ ಚಂದನವನದ ಮಾದಕ ಚೆಲುವೆ ರಾಗಿಣಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಈ ಮೂಲಕ ಡ್ರಗ್ಸ್ ಕೇಸ್ ನಲ್ಲಿ ನಟಿಯೊಬ್ಬರು ಜೈಲು ಸೇರಿದ ಕನ್ನಡ ಚಿತ್ರರಂಗದ ಮೊದಲ ನಟಿ ಎಂಬ ಅಪಖ್ಯಾತಿಗೆ ತುಪ್ಪದ ಬೆಡಗಿ ರಾಗಿಣಿ ಗುರಿಯಾಗಿದ್ದಾರೆ.

ಸೋಮವಾರ ಸಿಸಿಬಿ ಪೊಲೀಸರ ಕಸ್ಟಡಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಸೋಮವಾರ ರಾಗಿಣಿ ಹಾಗೂ ಸಂಜನಾ ಮತ್ತು ಡ್ರಗ್ಸ್ ಆರೋಪದ ಇತರ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ ಕೋಟ್ ಗೆ ಹಾಜರು ಪಡಿಸಿದ್ರು.  ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ರಾಗಿಣಿಗೆ 14  ದಿನಗಳ ನ್ಯಾಯಾಂಗ ಬಂಧನದ ಆದೇಶ ಹೊರಡಿಸಿತು. ಸಂಜನಾಳನ್ನು
3 ದಿನ ಸಿಸಿಬಿ ಕಸ್ಟಡಿಗೆ ಒಪ್ಪಿಸಲಾಯ್ತು.

ಡ್ರಗ್ಸ್ ಪ್ರಕರಣದಲ್ಲಿ ಸಂಜನಾ ಸರಿಯಾಗಿ ಮಾಹಿತಿ ನೀಡುತ್ತಿಲ್ಲ, ಆಕೆ ಈ ಹಿಂದೆ ಬಳಸುತ್ತಿದ್ದ ಸಿಮ್ ಬಗ್ಗೆ ಆಕೆ ಮಾಹಿತಿ ನೀಡುತ್ತಿಲ್ಲ, ಹೀಗಾಗಿ ಡ್ರಗ್ಸ್ ಗೆ ಸಂಬಂಧ ಪಟ್ಟಂತೆ ಆಕೆಯಿಂದ ಮತ್ತಷ್ಟು ಮಾಹಿತಿ ಬೇಕಾಗಿದ್ದು ಐದು ದಿನ ತಮ್ಮ ವಶಕ್ಕೆ ನೀಡಿ ಅಂತ ಸಿಸಿಬಿ ಪೊಲೀಸರ ಪರ ವಕೀಲರು ಕೋಟ್ ನಲ್ಲಿ ಮನವಿ ಮಾಡಿದರು.ಈ ಮನವಿ ಆಲಿಸಿದ ನ್ಯಾಯಾಲಯ ಮೂರು ದಿನ ಸಂಜನಾಳನ್ನು ಸಿಸಿಬಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿತು.

ಇನ್ನೂ ನಟಿ ರಾಗಿಣಿ ಪರ ವಕೀಲರು, ರಾಗಿಣಿ ಅವರಿಗೆ ತನಗೆ ಆರೋಗ್ಯ ಸಮಸ್ಯೆ ಇದೆ. ಅಸ್ತಮ, ಬೆನ್ನುನೋವು, ಸ್ಲಿಪ್ ಡಿಸ್ಕ್ ನಿಂದ ಬಳಲುತ್ತಿ ದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿದರು. ಆದರೆ ಕೋರ್ಟ್ ಕಾ ರಾಗೃಹದ ಆಸ್ಪತ್ರೆಯಲ್ಲೆ ಚಿಕಿತ್ಸೆ ಪಡೆಯಲು ಸೂಚಿಸಿತು.

ಆರೋಪಿಗಳನ್ನ ಕೋಟ್ ಗೆ ಮುಂದೆ ಹಾಜರುಪಡಿಸುವ ಮುನ್ನ ವೈದ್ಯಕೀಯ ತಪಾಸಣೆ ನಡೆಲಾಯ್ತು. ಈ ವೇಳೆ ರಾಗಿಣಿ ಹಾಗೂ ಸಂಜನಾ ಕರೋನಾ ಟೆಸ್ಟ್ ನಲ್ಲಿ ನೆಗೆಟಿವ್ ಬಂತು. ವಿಚಾರಣಾಧಿನ ಖೈದಿಯಾಗಿ ಇದೇ ತಿಂಗಳ 27 ರವರೆಗೂ ರಾಗಿಣಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಇರಬೇಕಾಗಿದೆ. ಸೆಪ್ಟೆಂಬರ್ 16 ಕ್ಕೆ ರಾಗಿಣಿ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.

Spread the love
Leave A Reply

Your email address will not be published.

Flash News