ಶಿಷ್ಯ “ನರ್ಜ್”  ಬಾಯ್ಬಿಡಿಸಿದ್ರೆ ಗುರು “ಫಜಲ್” ಬಗ್ಗೆ ಸುಳಿವು ಪಕ್ಕಾ..!! ಉತ್ತರ ಕರ್ನಾಟಕದಲ್ಲೇ ಫಜಲ್ ಸೇಫ್ ಆಗಿರುವ ಶಂಕೆ..??

0

ಬೆಂಗಳೂರು: ಡ್ರಗ್ ಕಿಂಗ್ ಪಿನ್ ಶೇಖ್ ಫಜಿಲ್ ನ ನವರಂಗಿ ಅವತಾರಗಳು ಒಂದೊಂದಾಗಿ ಬಯಲಾಗ್ತಿವೆ.ಫಜಲ್ ಎನ್ನೋ ಪಿಂಪ್-ಕಿಂಗ್ ಪಿನ್-ದಲ್ಲಾಳಿ-ತಲೆ ಹಿಡುಕಿನಿಂದ ಡ್ರಗ್ಸ್ ಮಾಫಿಯಾ ತನ್ನ ಕಬಂದ ಬಾಹುವನ್ನು ಚಾಚಿಕೊಂಡಿದ್ದರ ವಿವರ ಕೇಳುತ್ತಿದ್ರೆ ಮೈ ಝುಮ್ಮೆನಿಸುತ್ತೆ.

ಒಂದೊತ್ತಿನ ಊಟಕ್ಕೂ ಲಾಟಿ ಹೊಡೆಯುತ್ತಿದ್ದ ಆಸಾಮಿ ಕೇವಲ ಹತ್ತೆನ್ನೆರಡು ವರ್ಷಗಳಲ್ಲಿ 100 ಕೋಟಿ ಆಸ್ತಿ ಒಡೆಯನಾಗ್ತಾನೆ..ಸಿನೆಮಾ ಇಂಡಸ್ತ್ರಿಯವರ ಅತ್ಯಾಪ್ತನಾಗ್ತಾನೆ..ಮಾಡೆಲಿಂಗ್ ಕ್ಷೇತ್ರದ ದಿಗ್ಗಜರುಗಳ ಮುಖೇನ ಫ್ಯಾಷನ್ ಶೋ ನಡೆಸುತ್ತಾನೆ.ಮದ್ಯಪ್ರಾಚ್ಯ ಪ್ರದೇಶಗಳಲ್ಲಿ ಹಣ ಹೂಡಿಕೆ ಮಾಡುತ್ತಾನೆ.ವಿಮಾನಯಾನ ಎನ್ನೋದು ಆತನ ಪಾಲಿಗೆ ಬಿಎಂಟಿಸಿ ಬಸ್ ನಂತಾಗುತ್ತೆ ಎಂದ್ರೆ ಆತನ ಬೆಳವಣಿಗೆ ಹಿಂದೆ ಡ್ರಗ್ಸ್-ಕ್ಯಾಸಿನೋ-ಮಾಡೆಲ್ಸ್-ಸೆಲೆಬ್ರಿಟಿಸ್-ಪೊಲಿಟಿಷಿಯನ್ಸ್ ಗಳ ಜತೆಗಿನ ಲಿಂಕ್ ಯಾವ್ ರೇಂಜ್ನಲ್ಲಿ ಕೆಲಸ ಮಾಡಿರ್ಬೋದು ಅರ್ಥ ಮಾಡ್ಕೊಳ್ಳಿ.

ಇಂಥಾ ಡ್ರಗ್ ಕಿಂಗ್ ಪಿನ್-ಕ್ಯಾಸಿನೋ ದಲ್ಲಾಳಿ ಶೇಖ್ ಫಜಲ್ ಎಲ್ಲಿದ್ದಾನೆ…ಎಲ್ಲಿ ತಲೆ ಮರೆಸಿಕೊಂಡಿದ್ದಾನೆ.ಯಾರ ರಕ್ಷಣೆ ಪಡೆದು ಕೊಂಡಿದ್ದಾನೆ.ಎಲ್ಲೆ ಬಚ್ಚಿಟ್ಟುಕೊಂಡ್ರೂ ಪಾತಾಳಗರಡಿ ಹಾಕಿ ಪತ್ತೆ ಮಾಡಬಲ್ಲಂಥ ಕೆಪಾಸಿಟಿ-ಟೆಕ್ನಾಲಜಿ ಇರುವ ನಮ್ಮ ಪೊಲೀಸರಿಗೇನೆ ಆತ ಚಳ್ಳೆ ಹಣ್ಣು ತಿನ್ನಿಸಿದ್ದಾನಾ….ಅಥವಾ ಪೊಲೀಸ್ರೇ ಫಜಲ್ ಬಗ್ಗೆ ತಲೆ ಕೆಡಿಸಿಕೊಳ್ತಿಲ್ವೋ.. ಸಾಕಷ್ಟು ಗೊಂದಲಕ್ಕೆ ಕಾರಣವಾಗಿರುವ ಪ್ರಶ್ನೆಗಳಿವು..ಫಜಲ್  ಬಗ್ಗೆ  ಕನ್ನಡ ಫ್ಲಾಶ್ ನ್ಯೂಸ್ ಗೆ ಸಿಕ್ಕಿರುವ ಕೆಲವು  ಮಾಹಿತಿ ಪ್ರಕಾರ ಆತ ಉತ್ತರ ಕರ್ನಾಟಕದಲ್ಲಿ ಸೇಫ್ ಆಗಿ ಅಡಗಿ ಕೂತಿರುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ.

ಶೇಖ್ ಫಜಲ್ ವಿಷಯ ಬಹಿರಂಗವಾಗ್ತಿದ್ದಂಗೆ ಡ್ರಗ್ಸ್ ಮಾಫಿಯಾದ ತನಿಖೆಯ ಗತಿಯೇ ರೋಚಕ ತಿರುವು ಪಡೆದಿದ್ದು ಎಲ್ಲರಿಗೂ ಗೊತ್ತೇ ಇದೆ.ಶ್ರೀಲಂಕಾದಲ್ಲಿ ಕ್ಯಾಸಿನೋ ನಡೆಸುತ್ತಿದ್ದ,ಸೆಲಬ್ರಿಟಿಗಳೊಂದಿಗಿನ ಲಿಂಕ್ ಬಗ್ಗೆಯೂ ಮಹತ್ವದ ಮಾಹಿತಿ ಹೊರಬಿದ್ದಿದೆ.ಇದೆಲ್ಲವೂ ಬಹಿರಂಗವಾಗುತ್ತಿದ್ದಂತೆಯೇ ತನ್ನ ಬಂಡವಾಳ ಎಲ್ಲಿ ಬಯಲಾಗ್ತದೋ ಎನ್ನುವ ಕಾರಣಕ್ಕೆ ಫಜಿಲ್ ಊರನ್ನೇ ಬಿಟ್ಟಿದ್ದಾನೆ.ಆತನ ಮೊಬೈಲ್ ಸ್ವಿಚಾಫ್ ಆಗಿದೆ.ಆತನ ಮನೆಯವ್ರ ಸುಳಿವೂ ಇಲ್ಲ..ತನಿಖೆಗೆ ಇದ್ದ ಮಹತ್ವದ ಲಿಂಕೇ ತಪ್ಪೋಗಿರುವುದರಿಂದ ಸಿಸಿಬಿ ಇಕ್ಕಟ್ಟಿಗೆ ಸಿಲುಕಿದೆ.

ಕನ್ನಡ ಫ್ಲಾಶ್ ನ್ಯೂಸ್ ಗೆ ಸಿಕ್ಕ ಮಾಹಿತಿ  ಪ್ರಕಾರ ಫಜಿಲ್ ರಾಜ್ಯ ಬಿಟ್ಟೇನೂ ಹೊರಹೋಗಿಲ್ವಂತೆ.ಉತ್ತರ ಕರ್ನಾಟಕದ ಯಾವುದೋ ಒಂದು ಜಿಲ್ಲೆಯಲ್ಲಿ ಅಡಗಿ ಕೂತಿರಬಹುದೆನ್ನುವ ಶಂಕೆ ವ್ಯಕ್ತಪಡಿಸಲಾಗ್ತಿದೆ.ಡ್ರಗ್ಸ್-ಜೂಜಿನ ಕಿಂಗ್ ಪಿನ್ ಆಗಿದ್ರಿಂದ ರಾಜ್ಯಾದ್ಯಂತ ಆತನಿಗಿರಬಹುದಾದ ಸಂಪರ್ಕವನ್ನು ಎನ್ ಕ್ಯಾಶ್ ಮಾಡಿಕೊಂಡಿರಬಹುದಾದ ಸಾಧ್ಯತೆಗಳಿವೆ.ಫಜಿಲ್ ಗೆ ರಾಜಕಾರಣಿಗಳೇ ಆಶ್ರಯ ನೀಡಿರಬಹುದೇ..ಸಾಧ್ಯತೆಗಳನ್ನು ಅಲ್ಲಗೆಳೆಯೊಕ್ಕೆ ಸಾಧ್ಯವೇ ಇಲ್ಲ..ಆದ್ರೆ ಫಜಿಲ್ ನ ಮೂಲ ಪತ್ತೆ ಮಾಡೋದು ಸಿಸಿಬಿಗೆ ಕಷ್ಟಸಾಧ್ಯವಾಗಿರೋದು ಮಾತ್ರ ಅಚ್ಚರಿ ಹಾಗೂ ವಿಪರ್ಯಾಸ.

ಈ ಕಾರಣಕ್ಕೇನೆ ಸಿಸಿಬಿ ಫಜಲ್ ನ ಪೂರ್ವಾಪರವನ್ನು ಚೆನ್ನಾಗಿ ಅರಿತಿರುವ ವ್ಯಕ್ತಿಗಳ ಬೆನ್ನುಬಿದ್ದಿದ್ದಾರೆ.ಫಜಿಲ್ ನ ಮೂಲ ತಲುಪಲಿಕ್ಕೆ ನೇರ ಸಂಪರ್ಕ ಕೊಂಡಿಯಂತಿರುವ ಆ ವ್ಯಕ್ತಿಯ ವಿಚಾರಣೆಗೆ ಪೊಲೀಸ್ರು ಮುಂದಾಗಿದ್ದಾರೆನ್ನುವ ಮಾಹಿತಿ ಜಯಕಿರಣಕ್ಕೆ ಸಿಕ್ಕಿದೆ.ಅಂದ್ಹಾಗೆ ಆ ವ್ಯಕ್ತಿ ಯಾರ್ ಗೊತ್ತಾ..ಶಾಸಕ ಜಮೀರ್ ಅಹಮದ್ ಗೆ ಫಜಿಲ್ ಬೇನಾಮಿ ಎಂದ್ಹೇಗೆ ಹೇಳಲಾಗ್ತಿದೆಯೋ,ಹಾಗೆಯೇ ಫಜಿಲ್ ನ ಬೇನಾಮಿಯಾಗಿ ಓರ್ವ ಕೆಲಸ ಮಾಡುತ್ತಿದ್ದಾನೆ.ಆತನೇ ನರ್ಜ್ ಅಲಿಯಾಸ್ ನೀಲಸಂದ್ರದ ನರ್ಜ್.

ಫಜಲ್ ನ ಬಲಗೈ ಭಂಟ ನರ್ಜ್ ನನ್ನು ಸರಿಯಾಗಿ ವರ್ಕೌಟ್ ಮಾಡಿದ್ರೆ ತನ್ನ ಗುರುವಿನ  ರಹಸ್ಯವನ್ನೆಲ್ಲಾ ಬಿಚ್ಚಿಡಬಹುದು ಎನಿಸುತ್ತೆ.ಶಾಂತಿನಗರ ವಿಧಾನಸಭಾ ಕ್ಷೇತ್ರದ ನೀಲಸಂದ್ರದ ನಿವಾಸಿ,ಫಜಿಲ್ ನಷ್ಟೇ ನಟೋರಿಯಸ್ ಕ್ಯಾರೆಕ್ಟರ್ ಇವನದು.ಫಜಿಲ್ ತನ್ನ ಬಹುತೇಕ ಬೇನಾಮಿ ವ್ಯವಹಾರಗಳನ್ನು  ನರ್ಜ್ ಗೆ ವಹಿಸಿಕೊಟ್ಟಿದ್ದ.ಈ ನರ್ಜ್ ಕೇವಲ ಫಜಿಲ್ ನ ಅಲ್ಲ,ಶಿವಾಜಿನಗರ ವಾರ್ಡ್ ಕಾರ್ಪೊರೇಟರ್ ರ ಪತಿ ಇಷ್ತಿಯಾಕ್ ಪೈಲ್ವಾನ್ ರ ಬೇನಾಮಿ ಕೂಡ ಎನ್ನಲಾಗ್ತಿದೆ.ಇದಕ್ಕೆ ಸಾಕಷ್ಟು ಪುರಾವೆಗಳಾಗಬಲ್ಲಂಥ ಫೋಟೋಗಳು ಕೂಡ ಕನ್ನಡ ಫ್ಲಾಶ್ ನ್ಯೂಸ್ ಗೆ  ಲಭ್ಯವಾಗಿದೆ.

ನರ್ಜ್, ನೀಲಸಂದ್ರದಲ್ಲಿದ್ದರೂ ಆತ ಫಜಿಲ್ ಕೊಡ್ತಿದ್ದ ಇಶಾರೆಗಳ ಮೇಲೆ ಕೆಲಸ ಮಾಡ್ತಾ ಹಣ ಸಂಪಾದಿಸ್ತಿದ್ದ.ಫಜಿಲ್ ಬೆಂಗಳೂರಿನಲ್ಲಿ ಏನೇ ಫ್ಯಾಷನ್ ಶೋ,ನೈಟ್ ಪಾರ್ಟಿಸ್ ಅರೆಂಜ್ ಮಾಡಿದ್ರೂ ಆತನ ಬೆನ್ನಿಗೆ ನಿಂತು ಸಹಕಾರ ನೀಡ್ತಿದ್ದಾತನೇ ಈ ನರ್ಜ್.ಒಂದಷ್ಟು ಪುಡಿ ರೌಡಿಗಳನ್ನಿಟಟ್ಟುಕೊಂಡು ವ್ಯವಹಾರ ಮಾಡ್ತಿದ್ದ ನರ್ಜ್ ತನ್ನ 20 ಜನರ ಗ್ಯಾಂಗ್ ನೊಂದಿಗೆ 2019ರ ಜೂನ್ 8 ರಂದು ಕೊಲಂಬೋದ ಕ್ಯಾಸಿನೊಕ್ಕೆ ತೆರಳಿದ್ದ,ಇದರ ನೇತೃತ್ವವನ್ನು ಕರ್ಛಿಫ್ ಮುಜಾಹಿದ್ ನ್ನುವ ಮಾಹಿತಿ ಇದೆ.ಸಿಸಿಬಿ ಪೊಲೀಸ್ರು ನರ್ಜ್ ನನ್ನು ಹಿಡಿದು ಬಾಯ್ಬಿಡಿಸಿದ್ರೆ ಈ ಸತ್ಯ ಬಯಲಾಗ್ಬೋದೇನೋ..

ಕೊಲಂಬೋಕ್ಕೆ ತೆರಳಿ ಕ್ಯಾಸಿನೋದಲ್ಲಿ ಮೋಜು ಮಸ್ತಿ ಮಾಡಿದ್ದ ನರ್ಜ್ ಹಾಗು ಗ್ಯಾಂಗ್ ಫಜಿಲ್ ನ ಸಾಮ್ರಾಜ್ಯದ ನವರಂಗಿ ಮಾಡೆಲ್ ಗಳೊಂದಿಗೆ-ಡ್ರಗ್ಸ್ ಮಾನಿನಿಯರ ಜೊತೆಗೆ ಪಲ್ಲಂಗ ಹಂಚಿಕೊಂಡು ಮೈಮನಸನ್ನು ಕೂಲ್ ಮಾಡ್ಕೊಂಡ್ ಬಂದಿದ್ರೆನ್ನುವ ಮಾತುಗಳು ಕೂಡ ಇವೆ. ಇಷ್ತಿಯಾಕ್ ಪೈಲ್ವಾನ್ ನಂತೆಯೇ ಸಾಕಷ್ಟು ಮುಸ್ಲಿಂ ಮುಖಂಡರೊಂದಿಗೂ ಈ ನರ್ಜ್ ಗೆ ಕಾಂಟ್ಯಾಕ್ಟ್ ಇತ್ತಂತೆ.ಅವರನ್ನೆಲ್ಲಾ ಕೊಲಂಬೋಗೆ ತಾನೇ ಫ್ಲೈಟ್ ಟಿಕೆಟ್ ಖರ್ಚು ಮಾಡಿ ಕರೆದುಕೊಂಡು ಹೋಗಿ ಮದ್ಯ-ಮಾನಿನಿ-ಡ್ರಗ್ಸ್ ನಶೆಯ ಹುಚ್ಚನ್ನು ಹಿಡಿಸುತ್ತಿದ್ದನಂತೆ.ಹೋದವರಿಂದ ಲಕ್ಷಾಂತರ ಕಳೆಸಿ ಫಜಿಲ್ ಗೆ ಲಾಭ ಮಾಡಿಕೊಡುತ್ತಿದ್ದನಂತೆ.ಫಜಿಲ್ ನ ಬೇನಾಮಿಯಾಗಿ ಆತನೆಲ್ಲಾ ಕಾಲದಂಧೆಯನ್ನು ತಾನೇ ಮುಂದೆ ನಿಂತು ನಿರ್ವಹಿಸುತ್ತಿದ್ದ ನರ್ಜ್ ನನ್ನು ಹಡೆಮುರಿ ಕಟ್ಟೊಕ್ಕೆ ಸಿಸಿಬಿ ಮುಂದಾಗಿದೆಯಂತೆ.

ಶಿಷ್ಯ “ನರ್ಜ್”  ಬಾಯ್ಬಿಡಿಸಿದ್ರೆ ಗುರು “ಫಜಲ್” ಬಗ್ಗೆ ಸುಳಿವು ಪಕ್ಕಾ..!! ಉತ್ತರ ಕರ್ನಾಟಕದಲ್ಲೇ ಫಜಲ್ ಸೇಫ್ ಆಗಿರುವ ಶಂಕೆ..?? 

Spread the love
Leave A Reply

Your email address will not be published.

Flash News