CORONA VIRUSKANNADAFLASHNEWSFIGHTAGAINSTCORONAMoreTop NewsUncategorizedಜಿಲ್ಲೆಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯ

ಸಿಎಂ  BSY ಕೊರೊನಾ ಆಸ್ಪತ್ರೆ “ಬಿಲ್” ಪಾವತಿ ವಿವಾದ..?! ಸರ್ಕಾರವೂ ಪಾವತಿಸಿಲ್ಲ.. BSY ಫ್ಯಾಮಿಲಿನೂ  ಕ್ಲಿಯರ್ ಮಾಡಿಲ್ಲ..ಆಸ್ಪತ್ರೆನೇ ಮನ್ನಾ ಮಾಡ್ತಾ..??

ಬೆಂಗಳೂರು:ಪ್ರಶ್ನೆಯಾಗಿ ಕಾಡ್ತಿರೋದು ಇದೇ. ಆದ್ರೆ,ಇಂಥಾ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೊರೊನಾ ಆಸ್ಪತ್ರೆ ಬಿಲ್ ಬಗ್ಗೆ ಇಷ್ಟೊಂದು ಚರ್ಚೆ ಆಗಬೇಕಿತ್ತಾ..ಅದರ ಅಗತ್ಯ ಇದೆಯಾ..ಎನ್ನೋ ಪ್ರಶ್ನೆ ಸಾರ್ವಜನಿಕವಾಗಿ ಸೃಷ್ಟಿಯಾಗದೆ ಇರೊಲ್ಲ..ಆದ್ರೆ ಕೆಲವೊಂದು ಸಂಗತಿಗಳಿಗೆ ಕೆಲ ಕಾರಣಗಳಿಂದ  ಉತ್ತರ ಸಿಗಲೇಬೇಕಿರುತ್ತೆ.ಅಂಥಾ ಸಂಗತಿಗಳಲ್ಲಿ ಬಿ.ಎಸ್ ಯಡಿಯೂರಪ್ಪ ಅವರ ಕೊರೊನಾ ಆಸ್ಪತ್ರೆ ಬಿಲ್ ಕೂಡ ಒಂದಾಗಿರಬಹುದಲ್ಲವೇ..?

ಕೊರೊನಾಕ್ಕೆ ತುತ್ತಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಾನ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಆಸ್ಪತ್ರೆ ಬಿಲ್ ನ್ನು ಯಾರು ಪಾವತಿಸಿದ್ದು..ಸರ್ಕಾರನಾ..? ಫ್ಯಾಮಿಲಿನಾ..? ಅಥವಾ ಅವೆರಡೂ ಅಲ್ವಾ..?.ಹೋಗ್ಲಿ, ಆಸ್ಪತ್ರೆಯವ್ರೇ ಬಿಲ್ ನ್ನು ಮನ್ನಾ ಮಾಡಿದ್ರಾ..ಯಾವುದಕ್ಕೂ ಉತ್ತರ ಸಿಕ್ಕಿಲ್ಲ.ಬಿಎಸ್ ವೈ ಆಸ್ಪತ್ರೆಗೆ ದಾಖಲಾಗಿದ್ರಿಂದ ಹಿಡಿದು ಡಿಸ್ಚಾರ್ಜ್ ಆಗೋವರೆಗು ಎಷ್ಟು ಹಣವನ್ನು ಅವರ ಚಿಕಿತ್ಸಾ ವೆಚ್ಚವಾಗಿ ಖರ್ಚು ಮಾಡಲಾಗಿದೆ. ಶುಲ್ಕವನ್ನು ಭರಿಸಿದವರು ಯಾರು..ದಯವಿಟ್ಟು ಲೆಕ್ಕ ಕೊಡಿ ಎಂದು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮುಖ್ಯಮಂತ್ರಿಗಳ ಕಚೇರಿಗೆ ದಿ ಫೈಲ್ ಅರ್ಜಿ ಹಾಕಿತ್ತು.

ಇದಕ್ಕೆ ಉತ್ತರಿಸಿರುವ  ಮುಖ್ಯಮಂತ್ರಿಗಳ ಕಚೇರಿ,ಸರ್ಕಾರದಿಂದ ಯಾವುದೇ ಚಿಕಿತ್ಸಾವೆಚ್ಚವನ್ನು ಭರಿಸಲಾಗಿಲ್ಲ ಎಂದಷ್ಟೆ ಕೊಡಲಾಗಿದೆ.ಇನ್ನು ಸಿಎಂ ಮನೆಯವರೇನಾದ್ರೂ ಆಸ್ಪತ್ರೆ ಬಿಲ್ ಭರಿಸಿದ್ರಾ ಆ ಸಾಧ್ಯತೆ ಕಡ್ಮೆ  ಇದೆ..ಏಕಂದ್ರೆ ಸರ್ಕಾರವೇ ಹಣ ಭರಿಸ್ಬೋದು ಎನ್ನುವ ಕಾರಣಕ್ಕೆ ಶುಲ್ಕ ಕ್ಲಿಯರ್ ಮಾಡಿರೋದಿಲ್ಲ ಅನ್ಸುತ್ತೆ.

ಹಾಗಾದ್ರೆ ಸರ್ಕಾರವೂ ಕೊಟ್ಟಿಲ್ಲ..ಸಿಎಂ ಮನೆಯವ್ರೂ ಕೊಟ್ಟಿಲ್ಲ ಎಂದ್ರೆ ಇನ್ನ್ಯಾರು  ಆಸ್ಪತ್ರೆ ಬಿಲ್ ಪಾವತಿಸಿದ್ರು ಎನ್ನುವ ಪ್ರಶ್ನೆ ಸಹಜವಾ ಗೇ ಉದ್ಭವವಾಗುತ್ತೆ.ಸಿಎಂಗೆ ಆಪ್ತರಾಗಿರುವ ಯಾರಾದ್ರೂ ಹಣ ಪಾವತಿಸಿದ್ರಾ ಅದೂ ಗೊತ್ತಾಗ್ತಿಲ್ಲ..ಬಹುಷಃ ಸಿಎಂಗೆ ಗೌರವ ಸಲ್ಲಿಸೊಕ್ಕೆ ಆಸ್ಪತ್ರೆಯವ್ರೇ ಬಿಲ್ ಮನ್ನಾ ಮಾಡಿದ್ರಾ ಅದೂ ಗೊತ್ತಾಗ್ತಿಲ್ಲ.ಸಿಎಂ ಅವರಂಥವ್ರು ತಮ್ಮ ಆಸ್ಪತ್ರೆಗೆ ಸೇರುವುದರಿಂದ ಘನತೆ ಹೆಚ್ಚುತ್ತೆ..ಗೌರವ ಅಧಿಕವಾಗ್ತದೆ ಎನ್ನುವ ಕಾರಣಕ್ಕೆ ಮಣಿಪಾಲ್ ಆಸ್ಪತ್ರೆಯವ್ರು ಬಿಲ್ ನ್ನು ಮನ್ನಾ ಮಾಡಿರುವ ಸಾಧ್ಯತೆಗಳು ದಟ್ಟವಾಗಿದೆ.

ಇದೆಲ್ಲಾ ಸರಿ,ಆದ್ರೆ ಪ್ರಶ್ನೆ ಇರುವುದು ನೇರವಾಗಿ ಕೊರೊನಾ ಪಾಸಿಟಿವ್ ಇರೋರು ಸರ್ಕಾರಿ ಆಸ್ಪತ್ರೆ ವೈದ್ಯರ ಶಿಫಾರಸ್ಸು-ಸಲಹೆ ಇಲ್ಲದೆ ಖಾಸಗಿ ಆಸ್ಪತ್ರೆ ಸೇರುವಂತಿಲ್ಲ.ಕೊವಿಡ್ ನಿಯಾಮವಳಿಗಳು ಹೇಳೋದು ಕೂಡ ಇದೆ.ಅಂದ್ರೆ ಮಣಿಪಾಲ್ ಆಸ್ಪತ್ರೆಗೆ ಯಡಿಯೂರಪ್ಪ ಸೇರಬೇಕೆಂದು ಮನಸು ಮಾಡಿದ್ರೂ ಏಕಪಕ್ಷೀಯವಾಗಿ ಅವರು ಆ ನಿರ್ದಾರ ಮಾಡೊಕ್ಕೆ ಬರೊಲ್ಲ.ಸರ್ಕಾರಿ ಆಸ್ಪತ್ರೆ ವೈದ್ಯ ಶಿಫಾರಸ್ಸು ಮಾಡಿದ ಮೇಲೆಯೇ ಖಾಸಗಿ ಆಸ್ಪತ್ರೆಗೆ ಸೇರಬೇಕಾಗ್ತದೆ.ಯಡಿಯೂರಪ್ಪ ಅವರಿಗೆ ಅಂತದ್ದೊಂದು ಶಿಫಾರಸ್ಸು ಮಾಡಿದವ್ರು ಯಾರು ಎನ್ನುವುದು ಈವರೆಗೂ ಗೊತ್ತಾಗ್ತಿಲ್ಲ.ಬಹುಷಃ ಕೊವಿಡ್ ನಿಯಾಮವಳಿಗಳನ್ನು ಉಲ್ಲಂಘಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯ್ತಾ ಗೊತ್ತಾಗ್ತಿಲ್ಲ.

ಯಡಿಯೂರಪ್ಪ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು,ಚಿಕಿತ್ಸಾ ವೆಚ್ಚ ಭಾರೀ ದೊಡ್ಡ ಸುದ್ದಿಯಲ್ಲ ಎಂದೆನಿಸಿದ್ರೂ ಮುಖ್ಯಮಂತ್ರಿ ಹುದ್ದೆಯಲ್ಲಿರುವ ಕಾರಣಕ್ಕೆ ಈ ಸಂಗತಿಗಳೆಲ್ಲಾ ಸಾರ್ವಜನಿಕವಾಗಿ ಬಹಿರಂಗವಾಗಲೇಬೇಕಿದೆ.ಹಾಗಾಗಿ ಕೊರೊನಾಕ್ಕೆ ತುತ್ತಾದ ಯಡಿಯೂರಪ್ಪ ಅವರ ಚಿಕಿತ್ಸಾ ವೆಚ್ಚ ಭರಿಸಿದವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಗಲೇಬೇಕಿದೆ. ಸಾರ್ವಜನಿಕವಾಗಿ ಉದ್ಭವವಾಗಿರುವ ಈ ಪ್ರಶ್ನೆಗೆ ಖುದ್ದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೇ ಉತ್ತರ ಕೊಡ್ಬೇಕಿದೆ.ಏಕಂದ್ರೆ ಇದು ನೈತಿಕತೆಯ ವಿಷಯ. 

Spread the love

Related Articles

Leave a Reply

Your email address will not be published.

Back to top button
Flash News