CORONA VIRUSKANNADAFLASHNEWSFIGHTAGAINSTCORONAMoreTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆ

ಆಕೆಯ ಕಾಮಕ್ಕೆ  ನಡೆದೇ ಹೋಯ್ತು ಕೊಲೆ- ಸಿನಿಮೀಯ ರೀತಿಯಲ್ಲಿ ಅಟೆಂಡರ್ ನ್ನು ಕೊಂದು ಜೈಲು ಸೇರಿದ  ಲಾಯರ್…

ಚಿಕ್ಕಬಳ್ಳಾಪುರ:ಇದು ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಡಿಫರೆಂಟ್ ಇಮೇಜ್ ತಂದುಕೊಟ್ಟ ದೃಶ್ಯ ಚಿತ್ರವನ್ನೇ ಕೊಂಚ ನೆನಪಿಸುವಂಥ ಘಟನೆ.ಆದ್ರೆ ಸ್ವಲ್ಪ ಟ್ವಿಸ್ಟ್ ಇದೆ ಅಷ್ಟೇ..ಇಲ್ಲಿನ ದೌರ್ಭಾಗ್ಯೆಯ ಹೆಸರು ದೀಪಾ.. ಇಬ್ಬರು ಪ್ರೇಮಿಗಳೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ಲು.ಟ್ರ್ಯಾಜಿಡಿಟಿಕಲ್ ವಿಷಯ ಏನಂದ್ರೆ ಆಕೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಪ್ರೇಮಿಗಳಿಬ್ಬರ ಹೆಸರೂ ನವೀನ.ಆಕೆಗಾಗಿ ಒಬ್ಬ ಇನ್ನೊಬ್ಬನ ಕೊಲೆ ಮಾಡ್ತಾನೆ.ಕೊಲೆ ಮಾಡಿದಾತ ಜೈಲ್ ನಲ್ಲಿ ಮುದ್ದೆ ಮುರಿಯುತ್ತಿದ್ದಾನೆ.ದುರಂತ ನೋಡಿ,ಇಬ್ಬರೂ ನವೀನರನ್ನು ಕಳ್ಕೊಂಡ ದೀಪಾ ಮಾತ್ರ ವಿರಹವೇದನೆಯಲ್ಲಿ ಚಡಪಡಿಸುತ್ತಿದ್ದಾಳೆ.

 ಅಂದ್ಹಾಗೆ ಇಂತದ್ದೊಂದು ಘಟನೆ ನಡೆದಿರುವುದು ಚಿಕ್ಕಬಳ್ಳಾಪುರದಲ್ಲಿ.ಇಲ್ಲಿನ  ಜಿಲ್ಲಾ ನ್ಯಾಯಾಲಯದಲ್ಲಿ ಅಟೆಂಡರ್ ಾಗಿದ್ದ ನವೀನ ಹಾಗೂ ವಕೀಲ ನವೀನರನ್ನು ದೀಪಾ ತುಂಬಾ ಪ್ರೀತಿಸುತ್ತಿದ್ದಳಂತೆ. ಇಬ್ಬರಿಗೂ ತನ್ನ  “ಪ್ರೀತಿ”ಯನ್ನ ಸಮಾನಾಗಿ ಹಂಚಿದ್ದಳಂತೆ ಕೂಡ. ಆದರೆ ಎಲ್ಲಾ ಪ್ರೀತಿಯೂ ತನಗೆ ಬೇಕೆಂದು ಜಿದ್ದಿಗೆ ಬಿದ್ದ ವಕೀಲ ನವೀನ, ತನ್ನ ಸಹಚರರಾದ ಯಲಹಂಕದ ಕೃಷ್ಣಮೂರ್ತಿ ಹಾಗೂ ಅನಿಲ್ ಜೊತೆ ಸೇರಿ ಅಟೆಂಡರ್ ನವೀನನಿಗೆ ಸಾವಿನ ಮುಹೂರ್ತ ಇಟ್ಟು ಬಿಡ್ತಾನೆ. ಪ್ರಶಾಂತ ನಗರದ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದ ಅಟೆಂಡರ್ ನವೀನನ್ನ ಕೋಣೆಗೆ ನುಗ್ಗಿ ಆತನ ಜಿನ್ಸ್ ಪ್ಯಾಂಟ್ನಿಂದ ಕುತ್ತಿಗೆ ಬಿಗಿದು ಸಾಯಿಸಿ, ಸಾಕ್ಷ್ಯಗಳನ್ನು ನಾಶ ಪಡಿಸಿ ಕೊಲೆಗೈಯ್ಯತ್ತಾರೆ.

ಹೇಳಿ ಕೇಳಿ ವಕೀಲ ನವೀನ್ ದೃಶ್ಯ ಸಿನಿಮಾದ ತಂತ್ರಜ್ಞಾನ ಬಳಸಿ ಈ ಕೊಲೆಗಾಗಿ ಫೋನ್ ಹಾಗೂ ಬೇನಾಮಿ ಸಿಮ್ ಕಾರ್ಡ್ ಖರೀದಿಸಿ, ಕೊಲೆಯ ನಂತರ ಡಿ-ಆಕ್ಟಿವೆಟ್ ಮಾಡಿಸಿ ಪ್ರಕರಣದ ದಿಕ್ಕು ತಪ್ಪಿಸಿದ್ದ. ಆದರೆ ದೀಪಾಳ ಚಲನವಲನಗಳ ಮೇಲೆ ಕಣ್ಣಿಟ್ಟ ಸರ್ಕಲ್ ಇನ್ಸ್ ಪೆಕ್ಟರ್ ಪ್ರಶಾಂತ್ ಅಂಡ್ ಟೀಂ ಪ್ರಕರಣವನ್ನು ಬೇಧಿಸಿ ನಾಲ್ವರನ್ನು ಜೈಲಿಗಟ್ಟಿದ್ದಾರೆ.ಆ ಕಡೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಅಟೆಂಡರ್ ನವೀನ,ಈ ಕಡೆ ಆತನನ್ನು ಕೊಂದ ಲಾಯರ್ ನವೀನ್ ಇಬ್ಬರನ್ನೂ ಕಳಕೊಂಡು ದೀಪಾ ದಿಕ್ಕೇ ತೋಚದಂತಾಗಿದ್ದಾಳೆ.ಇಲ್ಲಿ ಯಾವುದು ಕುರುಡು..ಪ್ರೀತಿನೋ..ಕಾಮನೋ..     

Spread the love

Related Articles

Leave a Reply

Your email address will not be published.

Back to top button
Flash News