BreakingCORONA LOCKDOWN HEROESKANNADAFLASHNEWSFIGHTAGAINSTCORONAMoreTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

BBMP ಗೆ ರೀ ಎಂಟ್ರಿ ಕೊಡೋ ಭ್ರಷ್ಟ ಎಂಜಿನಿಯರ್ಸ್ ಆಸೆಗೆ ಬ್ರೇಕ್…ಸ್ಪಷ್ಟನೆ ಕೇಳಿ ಪತ್ರ ಬರೆದ ಕಮಿಷನರ್ ಮಂಜುನಾಥ ಪ್ರಸಾದ್..ಇದು ಕನ್ನಡ ಫ್ಲಾಶ್ ನ್ಯೂಸ್ ವರದಿ ಬಿಗ್ ಇಂಪ್ಯಾಕ್ಟ್

ಬೆಂಗಳೂರು:ಇದು ಕನ್ನಡ ಫ್ಲಾಶ್ ನ್ಯೂಸ್ ವರದಿಯ ಬಿಗ್.ಬಿಗ್.. ಇಂಪ್ಯಾಕ್ಟ್.

ಭ್ರಷ್ಟ ಎಂಜಿನಿಯರ್ ಗಳನ್ನು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಕಮಿಟಿ ರಿಪೋರ್ಟ್ ನ ಶಿಫಾರಸ್ಸುಗಳಿಗೆ ವ್ಯತಿರಿಕ್ತವಾಗಿ ಬಿಬಿಎಂಪಿಯಲ್ಲಿ ನಿಯೋಜಿಸಿಕೊಳ್ಳಲು ನಡೆದಿದ್ದ ಪ್ರಯತ್ನಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.1500 ಕೋಟಿ ಬಿಲ್ ಹಗರಣದಲ್ಲಿ ಸಿಕ್ಕಾಕೊಂಡಿದ್ದ ಎಂಜಿನಿಯರ್ಸ್ ಗಳು ಬಿಬಿಎಂಪಿಗೆ ರೀ ಎಂಟ್ರಿ ಕೊಡ್ಲಿಕ್ಕೆ ಮಾಡುತ್ತಿದ್ದ ಪ್ರಯತ್ನದ ಬಗ್ಗೆ ಕನ್ನಡ ಫ್ಲಾಶ್ ನ್ಯೂಸ್ ಮಾಡಿದ್ದ ವರದಿ..ಅದಕ್ಕೆ ಪೂರಕವಾಗಿ ನಗರಾಭಿವೃದ್ಧಿ ಇಲಾಖೆಗೆ ಫ್ಯೂಚರ್ ಇಂಡಿಯಾ ಆರ್ಗನೈಸೇಷನ್ ನೀಡಿದ ದೂರಿನ ಹಿನ್ನಲೆಯಲ್ಲಿ ಸ್ಪಷ್ಟಿಕರಣ ಕೇಳಿ ಬಿಬಿಎಂಪಿ ಕಮಿಷನರ್ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದಾರೆ.

ಅಂದ್ಹಾಗೆ ಗಾಂಧೀನಗರ,ಮಲ್ಲೇಶ್ವರಂ ಹಾಗೂ ರಾಜರಾಜೇಶ್ವರಿ ನಗರ ವಿಭಾಗಗಳಲ್ಲಿ ನಡೆದ ಬಿಲ್ ಹಗರಣಕ್ಕೆ ಸಂಬಂಧಿಸಿದಂತೆ  ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸರ್ಕಾರ ಸಮಿತಿಯನ್ನು ರಚಿಸಿತ್ತು.ಎಲ್ಲಾ ದಾಖಲೆ-ಮಾಹಿತಿ ಕ್ರೋಢೀಕರಿಸಿದ ಸಮಿತಿ  ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಈ ವರದಿಯಲ್ಲಿ 20ಕ್ಕೂ ಹೆಚ್ಚು ಭ್ರಷ್ಟ ಎಂಜಿನಿಯರ್ಸ್ ಗಳನ್ನು ತಪ್ಪಿತಸ್ಗರನ್ನಾಗಿಸಿ ಅವರಿಂದ ನಷ್ಟ ವಸೂಲಿ ಮಾಡಿ ಮಾತೃ ಇಲಾಖೆಗೆ ರವಾನಿಸುವಂತೆ ಸೂಚಿಸಲಾಗಿತ್ತು.

ಆದ್ರೆ ಟ್ರ್ಯಾಜಿಡಿ ವಿಷಯ ಏನೆಂದ್ರೆ ವರದಿಯಲ್ಲಿ ತಪ್ಪಿತಸ್ಥರೆಂದ್ಹೇನು ಪರಿಗಣಿಸಲಾಗಿತ್ತು.ಅದರಲ್ಲಿ ಬಹುತೇಕ ಭ್ರಷ್ಟರು ಮಾತೃ ಇಲಾಖೆಗೆ ಈವರೆಗೂ ಡ್ಯೂಟಿ ರಿಪೋರ್ಟೇ ಮಾಡಿಕೊಂಡಿಲ್ಲ.ಬಿಬಿಎಂಪಿಗೆ ಬಂದು ಮತ್ತೆ ಲೂಟಿಗೆ ಇಳಿಯುವ ಕಾರಣದಿಂದ ನಗರಾಭಿವೃದ್ದಿ ಇಲಾಖೆಯಿಂದ ನಿಯೋಜನೆಗೆ ಇಂಡೆಂಟ್ ಹಾಕಿಸಿಕೊಂಡು ಬರುತ್ತಿದ್ದರು.ನಾಗಮೋಹನ್ ದಾಸ್ ಸಮಿತಿ ವರದಿಯನ್ನು ಮರೆಮಾಚಿಮರುನಿಯೋಜನೆಗೆ ಆದೇಶ ತರುತ್ತಿದ್ದ ಬಗ್ಗೆ ಕನ್ನಡ ಫ್ಲಾಶ್ ನ್ಯೂಸ್ ಸರಣಿ ವರದಿಗಳನ್ನು ಪ್ರಕಟಿಸಿತ್ತು.ಈ ನಡುವೆ ಮತ್ತಮೋಹನ್,.ಕುಮಾರ್,ಹರೀಶ್,ರೇವಣ್ಣ ಎನ್ನುವ ಎಂಜಿನಿಯರ್ಸ್ ನಗರಾಭಿವೃದ್ದಿ ಇಲಾಖೆ ಮೂಲಕ ನಿಯೋಜನೆಗೆ ಪತ್ರ ತಂದಿದ್ದರು.ಇದನ್ನು ಪತ್ತೆ ಮಾಡಿದ ಕನ್ನಡ ಫ್ಲಾಶ್ ನ್ಯೂಸ್ ಮತ್ತೊಂದು ವರದಿಯನ್ನು ಪ್ರಕಟಿಸಿತ್ತಲ್ಲದೇ ಇದರ ವರದಿ ಆಧಾರದ ಮೇಲೆ ಫ್ಯೂಚರ್ ಇಂಡಿಯಾ ಆರ್ಗನೈಸೇಷನ್ ನಗರಾಭಿವೃದ್ಧಿ ಇಲಾಖೆಗೇನೆ ದೂರು ನೀಡಿ ಅಕ್ರಮ ತಡೆಯುವಂತೆ ಮನವಿ ಮಾಡಿತ್ತು.

ಕಮಿಷನರ್ ಮಂಜುನಾಥ್ ಪ್ರಸಾದ್ ಗೂ ಅಕ್ರಮ ತಡೆಯುವಂತೆ ಮನವಿ ಮಾಡಿದ್ದ ಹಿನ್ನಲೆಯಲ್ಲಿ ಇಂದೇ ಪತ್ರ ಬರೆದು ಸಂಬಂಧಪಟ್ಟವರ ನಿಯೋಜನೆ ವಿಷಯದಲ್ಲಿ ಉದ್ಭವವಾಗುತ್ತಿರುವ ಗೊಂದಲ ಸರಿಪಡಿಸಿ ಸ್ಪಷ್ಟಿಕರಣ ನೀಡುವಂತೆ ನಗರಾಭಿವೃದ್ದಿ ಇಲಾಖೆಗೆ ಪತ್ರ ಬರೆದಿದ್ದಾರೆ.ಇದರಿಂದಾಗಿ ಸರ್ಕಾರದಿಂದ ಸ್ಪಷ್ಟನೆ ಬರುವವರೆಗೂ ಬಿಬಿಎಂಪಿಗೆ ಮರುನಿಯೋಜನೆಗೊಳ್ಳುವ ಭ್ರಷ್ಟ ಎಂಜಿನಿಯರ್ಸ್ ಗಳ ಕನಸು ಈಡೇರೋದು ಕಷ್ಟಸಾಧ್ಯ.  

Spread the love

Related Articles

Leave a Reply

Your email address will not be published.

Back to top button
Flash News