BreakingCORONA VIRUSKANNADAFLASHNEWSFIGHTAGAINSTCORONAMoreTop NewsUncategorizedಜಿಲ್ಲೆಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

ಭಾರೀ ಸನ್ಮಾನ-ಪುಷ್ಕಳ ಬೋಜನ-ದುಬಾರಿ ಐ ಫೋನ್ ಕೊಡುಗೆ.. ಯಲಹಂಕ BBMP ಜಂಟಿ ಆಯುಕ್ತ ಡಾ.ಅಶೋಕ್  “ಬಕೆಟ್” ಪುರಾಣ..!

ಕೆಎಎಸ್ ಅಧಿಕಾರಿ ಡಾ.ಅಶೋಕ್.
ಕೆಎಎಸ್ ಅಧಿಕಾರಿ ಡಾ.ಅಶೋಕ್.

ಬೆಂಗಳೂರು:ಇಂಥವ್ರು ಮಾಡುವಂಥ ಕೆಲಸ ಸರ್ಕಾರಿ ಇಲಾಖೆಗಳ ವ್ಯವಸ್ಥೆ ಬಗ್ಗೆ ಸಾರ್ವಜನಿಕವಾಗಿ ರವಾನಿಸುವ ಸಂದೇಶ ತುಂಬಾ ಅಪಾಯಕಾರಿಯಾದದ್ದು.ರಾಜಕಾರಣ ಹಾಗೂ ಅಧಿಕಾರಿಗಳು ಒಂದು ನಾಣ್ಯದ ಎರಡು ಮುಖ..ಒಪ್ಪಿಕೊಳ್ಳೋಣ, ಆದ್ರೆ ಅವರ ಕೃಪಕಟಾಕ್ಷಕ್ಕೆ ಪಾತ್ರವಾಗೊಕ್ಕೆ,ಅವರ ವಿಶ್ವಾಸ ಗಳಿಸೊಕ್ಕೆ,ನಿಮ್ಮ ಕೈಗಳು ನಮ್ಮ ತಲೆಯನ್ನು ಸದಾ ಕಾಯ್ಬೇಕೆಂದು ಬಕೆಟ್ ಹಿಡ್ಕೊಂಡಿರಬೇಕೆಂದೇನಿಲ್ಲ..ಇಂತದ್ದೊಂದು ಕೆಲಸ ಮಾಡುವ ಮೂಲಕ ಇಡೀ ಅಧಿಕಾರಿ ವಲಯ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದ್ದಾರೆ  ಬಿಬಿಎಂಪಿಯ ಕೆಎಎಸ್ ಅಧಿಕಾರಿ ಡಾ.ಅಶೋಕ್.

ಕಾರ್ಪೊರೇಟರ್ಸ್ ಗಳೊಂದಿಗೆ ವಿಶ್ವಾಸ-ಆತ್ಮೀಯತೆ ಇರಲಿ,ಅದನ್ನು ಯಾರೂ ಪ್ರಶ್ನಿಸೋದು ಇಲ್ಲ,ಆಕ್ಷೇಪಿಸೋದು ಇಲ್ಲ.ಆದ್ರೆ ಅದಕ್ಕಾಗಿ ಬಕೆಟ್ ಹಿಡಿಯುವ ಮಟ್ಟಕ್ಕೆ ಯಾವ್ದೇ ಅಧಿಕಾರಿನೂ ಹೋಗಬಾರದು. ಆದ್ರೆ ಯಲಹಂಕ ವಲಯದ ಜಂಟಿ ಆಯುಕ್ತರಾಗಿರುವ ಡಾ.ಅಶೋಕ್ ಎನ್ನೋರು ತನ್ನ ಹುದ್ದೆಯ ಘನತೆ-ಗಾಂಭೀರ್ಯ-ಪ್ರತಿಷ್ಟೆಯನ್ನೇ ಗಾಳಿಗೆ ತೂರಿ ಮಾಜಿಯಾದ 11  ಕಾರ್ಪೊರೇಟರ್ಸ್ ಗಳನ್ನು ಸನ್ಮಾನಿಸಿ ವಿವಾದಕ್ಕೆ ಸಿಲುಕಿದ್ದಾರೆ.ಕಾರ್ಪೊರೇಟರ್ಸ್ ಗಳ ಐದು ವರ್ಷದ ಅಧಿಕಾರವಧಿ ಮುಗಿದ ಹಿನ್ನಲೆಯಲ್ಲಿ ಅವರಿಗೆ ಸ್ಟಾರ್ ಹೊಟೇಲ್ ವೊಂದರಲ್ಲಿ  ಪುಷ್ಕಳ ಭೋಜನ ಮಾಡಿಸಿದ್ದಲ್ಲದೇ ಅವರ ಕೈಗೆ ಬೆಲೆಬಾಳುವ ಐ-ಫೋನ್ ಗಳನ್ನು ಉಡುಗೊರೆಯಾಗಿ ನೀಡಿದ್ದಾರೆನ್ನುವ ಆರೋಪ ಕೇಳಿಬಂದಿದೆ.ಅತಿಯಾದ ಸ್ವಾಮಿನಿಷ್ಠೆ ತೋರಿಸ್ಲಿಕ್ಕೆ ಹೋದ ಈ ಕೆಎಎಸ್ ಗೆ ಸಾರ್ವಜನಿಕರು ಛೀ..ಥೂ..ಎಂದು ಉಗಿಯಲಾರಂಭಿಸಿದ್ದಾರೆ.

ಡಾ.ಅಶೋಕ್ ಅವರಿಗೆ ಗೌರವ ಮನಸಲ್ಲಿ ಇರಬೇಕು ನಿಜ,ಆದ್ರೆ ಅದನ್ನು ಲಕ್ಷಾಂತರ ರೂ ಖರ್ಚು ಮಾಡಿ ತೋರಿಸಿಕೊಳ್ಳುವ ಅವಶ್ಯಕತೆ ಏನಿತ್ತು ಎನ್ನುವ ಪ್ರಶ್ನೆ ಸಾರ್ವಜನಿಕವಾಗಿ ಸೃಷ್ಟಿಯಾಗಿದೆ.ಅಷ್ಟೇ ಅಲ್ಲ,ಒಬ್ಬ ಸರ್ಕಾರಿ ಅಧಿಕಾರಿಯಾಗಿದ್ದುಕೊಂಡು ಚುನಾಯಿತ ಪ್ರತಿನಿಧಿಗಳನ್ನು ಖಾಸಗಿಯಾಗಿ ಸನ್ಮಾನಿಸುವ ಅನುಮತಿ-ಅವಕಾಶ ಸರ್ಕಾರಿ ನಿಯಾಮವಳಿಗಳಲ್ಲಿ ಇದೆಯೇ ಎನ್ನುವ   ಪ್ರಶ್ನೆಯನ್ನು ಸಾರ್ವಜನಿಕರು ಮಾಡ್ತಿದಾರೆ.

 ಸನ್ಮಾನಿತಗೊಂಡ ಮಾಜಿ ಕಾರ್ಪೊರೇಟರ್ಸ್ ಗಳ ಜತೆ ಜಂಟಿ ಆಯುಕ್ತ ಡಾ.ಅಶೋಕ್ ಕಿಲ..ಕಿಲ..ಇದಕ್ಕಿಂತ ಹೆಚ್ಚಿನ ಸಾಕ್ಷ್ಯ ಬೇಕಾ...
ಸನ್ಮಾನಿತಗೊಂಡ ಮಾಜಿ ಕಾರ್ಪೊರೇಟರ್ಸ್ ಗಳ ಜತೆ ಜಂಟಿ ಆಯುಕ್ತ ಡಾ.ಅಶೋಕ್ ಕಿಲ..ಕಿಲ..ಇದಕ್ಕಿಂತ ಹೆಚ್ಚಿನ ಸಾಕ್ಷ್ಯ ಬೇಕಾ…

ಯಲಹಂಕದ ಪ್ರತಿಷ್ಟಿತ ಹಾಗು ಐಷಾರಾಮಿ ಹೊಟೇಲ್ ನಲ್ಲಿ ಎಲ್ಲಾ 11 ಮಾಜಿ  ಕಾರ್ಪೊರೇಟರ್ಸ್ ಗಳನ್ನು ಆತ್ಮೀಯವಾಗಿ ಆಮಂತ್ರಿಸಿ ಅವರನ್ನು ಸನ್ಮಾನಿಸಿ,ಬೆಲೆ ಬಾಳುವ ಐ ಫೋನ್ ಗಳನ್ನು ಉಡುಗೊರೆಯಾಗಿ ನೀಡಿದ್ದಾರೆನ್ನುವ ಆರೋಪಕ್ಕೆ ಡಾ.ಅಶೋಕ್ ತುತ್ತಾಗಿದ್ದಾರೆ.ಮಾಜಿ ಪುರಪಿತೃಗಳ ಜೊತೆ ಕುಳಿತ್ಕೊಂಡು ಫೋಸ್ ಕೊಟ್ಟಿರುವ ಚಿತ್ರಗಳು ಈಗಾಗ್ಲೇ ವೈರಲ್ ಆಗಿದೆ.ಅವರಿಂದ ಸನ್ಮಾನಿಸಿಕೊಂಡ  ಮಾಜಿಗಳೇ ಅಂದಿನ ಕಾರ್ಯಕ್ರಮದ ವೈಭವೋಪೇತ ಆಯೋಜನೆ ಬಗ್ಗೆ ಸಾರ್ವಜನಿಕವಾಗಿ ಮಾತ್ನಾಡಿಕೊಂಡಿದ್ದಾರೆ ಕೂಡ.ಒಬ್ಬ ಸರ್ಕಾರಿ ಅಧಿಕಾರಿಯಾಗಿ ಡಾ.ಅಶೋಕ್ ಗೆ ಮಾಡೊಕ್ಕೆ ಸಾಕಷ್ಟು ಕೆಲಸಗಳಿವೆ.ಅದನ್ನು ಬಿಟ್ಟು ಇಂತದ್ದೊಂದು ಬಕೆಟ್ ಹಿಡಿಯುವ ಕೆಲಸ ಮಾಡಿದ್ದು ನಾಚಿಕೆಗೇಡಲ್ಲದೇ ಇನ್ನೇನು.

ವಿಶ್ವಾಸ-ಆತ್ಮೀಯತೆ ಇದ್ದರೆ ಎಲ್ಲಾ ಮಾಜಿಗಳನ್ನು ತನ್ನ ಮನೆಗೆ ಕರೆಯಿಸಿಕೊಂಡು ಡಾ.ಅಶೋಕ್ ಉಪಚರಿಸಬಹುದಿತ್ತು. ಅದನ್ನು ಬಿಟ್ಟು ಹೊಟೇಲ್ ನಲ್ಲಿ ಲಕ್ಷಾಂತರ ಖರ್ಚು ಮಾಡಿ,ಬೆಲೆ ಬಾಳುವ ಐ ಫೋನ್ ಗಳನ್ನು ಉಡುಗೊರೆಯಾಗಿ ನೀಡುವ ಅಗತ್ಯವೇನಿತ್ತು.ಇದು ರಾಜಕಾರಣಿಗಳ ಜೊತೆಗೆ ಅವರ ಸಂಬಂಧ ಯಾವ್ ರೀತಿ ಇತ್ತೆನ್ನುವುದನ್ನು ಎತ್ತಿ ತೋರಿಸುತ್ತದೆ.

ಒಬ್ಬ ಸರ್ಕಾರಿ ಅಧಿಕಾರಿಗೆ ರಾಜಕಾರಣಿಗಳನ್ನು ಈ ಪರಿ ಎಂಟರ್ ಟೇನ್ ಮಾಡುವ ಅಗತ್ಯವೇ ಇಲ್ಲ..ಸರ್ಕಾರಿ ನಿಯಾಮಗಳಿಗಳು ಕೂಡ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎನ್ನುತ್ತಾರೆ ನಿವೃತ್ತ ಖಡಕ್ ಕೆಎಎಸ್ ಅಧಿಕಾರಿ ಕೆ.ಮಥಾಯ್. ರಾಜಕಾರಣಿಗಳ ಜತೆಗೆ ಗಳಸ್ಯ ಕಂಠಸ್ಯ ಎನ್ನುವಂಥ ಸಂಬಂಧ ಹೊಂದಿರಬಹುದಾದ ಡಾ.ಅಶೋಕ್ ಅವರಂಥವ್ರು ಡಿಪಾರ್ಟ್ಮೆಂಟ್ ಗೇನೆ ಕಳಂಕ.ರಾಜಕಾರಣಿಗಳ  ಜೊತೆಗಿನ ನಂಟೇ ಅವರು ತಮ್ಮ ಕೆಲಸವನ್ನು ಎಷ್ಟು ನಿಷ್ಠೆ-ಪ್ರಾಮಾಣಿಕತೆಯಿಂದ ಮಾಡುತ್ತಿದ್ದಾರೆನ್ನುವದಕ್ಕೆ ಸಾಕ್ಷಿ.ಇಂಥವ್ರನ್ನು ಕೆಲಸದಲ್ಲಿ ಮುಂದುವರೆಸುವುದೇ ವೇಸ್ಟ್..ಮನೆಗೆ ಕಳುಹಿಸಿಬಿಡ್ಬೇಕು..ಇಂಥವರಿಂದ ನಿಷ್ಠೆ-ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿರುವ ಅದೆಷ್ಟೋ ಅಧಿಕಾರಿಗಳಿಗೆ ಕೆಟ್ಟ ಹೆಸರು ಬರುತ್ತೆ.ಇತರರಿಗೂ ಇವರ ಚಾಳಿ ಹತ್ತಿಬಿಡುವ ಆತಂಕವಿದೆ ಎನ್ನುತ್ತಾರೆ ಮಥಾಯ್. 

ಆದ್ರೆ ಕಾರ್ಯಕ್ರಮದಲ್ಲಿ ನಾನಿದ್ದುದು ನಿಜ.ಅವರನ್ನು ಸನ್ಮಾನಿಸಿದ್ದು ನಿಜ.ಆದ್ರೆ ಕಾರ್ಯಕ್ರಮಕ್ಕೆ ಖರ್ಚು ಮಾಡಿದ ಹಣ ನನ್ನದಲ್ಲ.ಅಲ್ಲದೇ ಬೆಲೆ ಬಾಳುವ ಐ ಫೋನ್ ಗಳನ್ನು ಉಡುಗೊರೆಯಾಗಿ ನೀಡಿದ್ದೇನೆ ಎನ್ನುವುದು ಮಾತ್ರ ಸುಳ್ಳು ಎಂದು ಮಾದ್ಯಮಗಳಿಗೆ ಸ್ಪಷ್ಟೀಕರಣ ನೀಡುವ ಪ್ರಯತ್ನ ಮಾಡಿದ್ದಾರೆ ಅಶೋಕ್.ಆದ್ರೆ ಉಡುಗೊರೆ ಪಡೆದ  ಕೆಲವು ಮಾಜಿ ಕಾರ್ಪೊರೇಟರ್ಸ್ ಗಳೇ ಐ ಫೋನ್ ಪಡೆದಿದ್ದರ ಬಗ್ಗೆ ಹೇಳಿಕೆ ನೀಡಿದ್ದಾರೆನ್ನುವುದು ಕೂಡ ವೈರಲ್ ಆಗಿದೆ.ಹಾಗಾದ್ರೆ ಕಾರ್ಯಕ್ರಮ ಆಯೋಜಿಸಿದ್ದು ಯಾರು..ಆಯೋಜನೆಗೆ ಹಣದ ಮೂಲ ಯಾವುದು..ಬೆಲೆ ಬಾಳುವ ಐ ಫೋನ್ ಗಳನ್ನು ನೀಡಿದ್ದು ಯಾರು..ಅದರ ಮೂಲ ಯಾವುದೆನ್ನುವುದನ್ನು ಅಶೋಕ್ ಸ್ಪಷ್ಟಪಡಿಸಬೇಕಿದೆ.

ಪೂರ್ವ ವಲಯದಲ್ಲಿ ಇದ್ದಾಗ್ಲೂ ಈ ಡಾ,ಅಶೋಕ್ ಎನ್ನೋ ಕೆಎಎಸ್ ಬಕೆಟ್ ಆಸಾಮಿ ಎಂದೇ ಕರೆಯಿಸಿಕೊಂಡಿದ್ರು.ಯಾವ್ದೆ ಕಾರ್ಪೊರೇಟರ್ಸ್ ಗಳನ್ನು ಅವರು ಅಕ್ರಮ ಮಾಡಿದ್ರೂ ಅದನ್ನು ಪ್ರಶ್ನಿಸುವ ಗೋಜಿಗೇನೆ ಹೋಗುತ್ತಿರಲಿಲ್ಲ.ಎಲ್ಲರೊಂದಿಗು ಹೊಂದಿಕೊಂಡು ಹೋಗುವ ಅಡ್ಜೆಸ್ಟ್ಮೆಂಟ್ ಗಿರಾಕಿ ಎಂದೇ ಕರೆಯಿಸಿಕೊಂಡಿದ್ದ ಅಧಿಕಾರಿ.ಕರೆಕ್ಟಾಗಿ ತನ್ನ ಕೆಲಸ ಮಾಡಿದ್ದೇ ಆಗಿದ್ದರೆ ಉತ್ತಮ ಹೆಸರನ್ನು ಸಣ್ಣ ವಯಸ್ಸಿನಲ್ಲೇ ಸಂಪಾದಿಸ್ಬೋದಿತ್ತೇನೋ..

ಆದ್ರೆ ಬಿಬಿಎಂಪಿಯಲ್ಲಿ ಉಳಿಯಲೇಬೇಕೆನ್ನುವ ನಿರ್ದಾರ ಮಾಡ್ಕೊಂಡು ಬಂದಂತೆ ಕಾಣುವ ಡಾ.ಅಶೋಕ್,ಯಲಹಂಕದಲ್ಲೂ ಇದೇ ಚಾಳಿ ಮುಂದುವರೆಸಿದ್ದರೆನ್ನೋದಕ್ಕೆ ಸಾಕಷ್ಟು ನಿದರ್ಶನಗಳಿವೆ.ಅದಕ್ಕೆ ಲೇಟೆಸ್ಟ್ ಸೇರ್ಪಡೆ ಮಾಜಿಗಳನ್ನು ಸನ್ಮಾನಿಸಿ ಅವರಿಗೆ ಬೆಲೆಬಾಳುವ ಉಡುಗೊರೆ ನೀಡುವ ಬಕೆಟ್ ಕಾರ್ಯಕ್ರಮ.ಸನ್ಮಾನದ ವೇಳೆಯೇ “ನೀವು ಮಾಜಿಗಳಾದ್ರೂ ನಿಮ್ಮ ಕರುಣೆ ನನ್ನ ತಲೆ ಮೇಲಿರಲಿ ಎಂದು ಅವರಿಂದ ಮನವಿ ಮಾಡಿಕೊಂಡಿದ್ದಾರೆನ್ನುವ ಮಾತು ಕೂಡ ಕೇಳಿಬಂದಿದೆ.

ಡಾ,ಅಶೋಕ್ ಯಲಹಂಕ ವಲಯದ ಜಂಟಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಮೇಲೆ ತಮ್ಮ ವ್ಯಾಪ್ತಿಗೆ ಬರುವ 11 ವಾರ್ಡ್ ಗಳ ಕಾರ್ಪೊರೇಟರ್ಸ್ ಗಳನ್ನು ಪಕ್ಷಾತೀತವಾಗಿ ಬ್ಯಾಲೆನ್ಸ್ ಮಾಡಿಕೊಳ್ತನೇ ಬಂದಿದ್ದಾರೆ.ಕಾಮಗಾರಿಗಳ ಬಗ್ಗೆ ಏನೇ ದೂರು ಬಂದ್ರೂ ಅದರ ವಿರುದ್ದ ಕ್ರಮ ಕೈಗೊಳ್ಳುವ ಕೆಲಸ ಮಾಡೋದ್ ಬಿಟ್ಟು ದೂರುದಾರರನ್ನು ಮೆಂಟೇನ್ ಮಾಡುವ ದಲ್ಲಾಳಿಯಂತೆಯೂ ಕೆಲಸ ಮಾಡಿದ್ದಾರೆನ್ನುವ ಆರೋಪವನ್ನು ಅನೇಕ ಮಾಹಿತಿ ಹಕ್ಕು ಕಾರ್ಯಕರ್ತರೇ ಮಾಡಿದ್ದಾರೆ.

ನಮ್ಮ ತೆರಿಗೆ ಹಣದಿಂದ ಸರ್ಕಾರ ಕೊಡುವ ಸಂಬಳಕ್ಕೆ ನೀಯತ್ತಾಗಿದ್ದುಕೊಂಡು ಕೆಲಸ ಮಾಡ್ಬೇಕಿದ್ದ ಡಾ.ಅಶೋಕ್ ಅತಿಯಾದ ಸ್ವಾಮಿನಿಷ್ಠೆಯನ್ನು ಬಹಿರಂಗಗೊಳಿಸ್ಲಿಕ್ಕೆ ಹೋಗಿ ಸಖತ್ತಾಗೇ ತಗ್ಲಾಕೊಂಡಿದ್ದಾರೆ.ಅವರ ವಿರುದ್ಧ ಕಠಿಣ ಕ್ರಮವಾಗಬೇಕೆನ್ನುವುದು ಆಡಳಿತಾಧಿಕಾರಿ ಗೌರವ್ ಗುಪ್ತಾ ಹಾಗೂ  ಕಮಿಷನರ್ ಮಂಜುನಾಥ್ ಪ್ರಸಾದ್ ಅವರನ್ನು ಸಾರ್ವಜನಿಕವಾಗಿ ಮನವಿ ಮಾಡಿಕೊಳ್ಳಲಾಗ್ತಿದೆ.ಗೌರವ್ ಗುಪ್ತಾ ಹಾಗೂ ಮಂಜುನಾಥ್ ಪ್ರಸಾದ್ ಅವರು ಇದನ್ನು ಗಂಭೀರವಾಗಿ ಪರಿಗಣಿಸಿ ಅಶೋಕ್ ವಿರುದ್ದ ಕ್ರಮ ತೆಗೆದುಕೊಂಡ್ರೆ ಇನ್ನುಳಿದವರು ಅಲರ್ಟ್ ಆಗ್ತಾರೆ.ಚುನಾಯಿತರಿಗೆ ಬಕೆಟ್ ಹಿಡಿಯೋದು ನಿಂತೋಗುತ್ತೆ. 

Spread the love

Related Articles

Leave a Reply

Your email address will not be published.

Back to top button
Flash News