BreakingCORONA VIRUSKANNADAFLASHNEWSFIGHTAGAINSTCORONAMoreTop NewsUncategorizedಜಿಲ್ಲೆಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜ್ಯ-ರಾಜಧಾನಿ

ಆರ್ಥಿಕ ನಷ್ಟ ತಗ್ಗಿಸೊಕ್ಕೆ BMTC ನೌಕರರ ಸಸ್ಪೆಂಡ್..!?   ಸಂಬಳ ಕೊಡ್ಲಿಕ್ಕಾಗದೆ, ಕ್ಷುಲ್ಲಕ ಕಾರಣಗಳಿಗೂ ನೌಕರರ ಮೇಲೆ ಸಸ್ಪೆಂಡ್ ಅಸ್ತ್ರ..

ಬೆಂಗಳೂರು: ಇದೆಂಥಾ ಕಾನೂನು,ರೀತಿ ರಿವಾಜು ಕಣ್ರಿ..ಬಿಎಂಟಿಸಿ ಆಡಳಿತ ಮಂಡಳಿಗೆ ನೌಕರರ ಬೆವರಿನ ಶ್ರಮ ಬೇಕು..ಸಂಬಳ ಕೊಡ್ಬೇಕಾದ್ರೆ ಮಾತ್ರ ಇವ್ರ ಕಣ್ಣು ಕೆಂಪಗಾಗುತ್ತೆ.ಆರ್ಥಿಕ ನಷ್ಟದ ನೆಪವೊಡ್ಡಿ ಸಂಬಳ ತಡಮಾಡುತ್ತಿದ್ದ ಆಡಳಿತ ಮಂಡಳಿ ಇದೀಗ ಹೊಸ ಪ್ಲ್ಯಾನ್ ಮಾಡ್ಕೊಂಡಿದೆ.ಅದೇ ಡ್ರೈವರ್ಸ್-ಕಂಡಕ್ಟರ್ಸ್ ಗಳ ಅಮಾನತ್ತು.ಮೊದಲಾದ್ರೂ ಎಚ್ಚರಿಕೆ ನೊಟೀಸ್-ದಂಡ ಪ್ರಯೋಗ ಮಾಡುತ್ತಿತ್ತು.ಆದ್ರೆ ಇದೀಗ ನೇರವಾಗಿ ಸಸ್ಪೆಂಡ್.ಸಾಕಷ್ಟು ನೌಕರರು ಸಕಾರಣವಿಲ್ಲದೆ ಅಮಾನತ್ತಾಗುತ್ತಿದ್ದಾರೆ.

ಅದೇನೋ ಒಂದ್ ಗಾಧೆ ಇದೆ ನೋಡಿ..ಕುಣಿಯಲಾರದವಳ್ಯಾರೋ ನೆಲ ಡೊಂಕು ಅಂದ್ಲಂತೆ. ಬಿಎಂಟಿಸಿ ಆಡಳಿತ ಮಂಡಳಿ ಧೋರಣೆ.ನೀಯತ್ತಾಗಿ ದುಡಿವ ನೌಕರ ಸಿಬ್ಬಂದಿ ಸಂಬಳ ಕೊಡ್ಲಿಕ್ಕೆ ಯೋಗ್ಯತೆ ಇಲ್ಲದ ಆಡಳಿತ ಮಂಡಳಿ ನೌಕರರ ಮೇಲೆ ಗಧಾಪ್ರಹಾರ ಮಾಡ್ಲಿಕ್ಕೆ ಕ್ಷುಲ್ಲಕ ಕಾರಣಗಳಿಗೂ ಸಸ್ಪೆಂಡ್ ಅಸ್ತ್ರ ಪ್ರಯೋಗಿಸ್ಲಿಕ್ಕೆ ಮುಂದಾಗಿದೆ.ಸಣ್ಣಪುಟ್ಟ ಕಾರಣ ಸಿಕ್ರೂ ಸಾಕು ಅವರನ್ನು ಸಸ್ಪೆಂಡ್ ಮಾಡುವಂತ ಮೌಖಿಕ ಆದೇಶವನ್ನೇನಾದ್ರೂ ಮೇಲಾಧಿಕಾರಿಗಳು ಹೊರಡಿಸಿಬಿಟ್ರಾ ಗೊತ್ತಾಗ್ತಿಲ್ಲ.

ಇದು ನಿಜಕ್ಕು ಬಿಎಂಟಿಸಿ ನೌಕರರಿಗೆ ಆಡಳಿತ ಮಂಡಳಿ ಮಾಡ್ತಿರುವ ಮಹಾಮೋಸ..ಹಾಗೆಯೇ ಕ್ರೌರ್ಯ ಕಣ್ರಿ.ಮೊದಲೆಲ್ಲಾ ಗಂಭೀರ ಎನ್ನುವಂಥ ಪ್ರಕರಣಗಳಲ್ಲಿ ಮಾತ್ರ ಡ್ರೈವರ್ಸ್-ಕಂಡಕ್ಟರ್ಸ್ ಗಳಿಗೆ ನೊಟೀಸ್ ಸರ್ವ್ ಮಾಡಿ,ನಾಮಿನಲ್ ಆದ ಫೈನ್ ಹಾಕಿ ವಾರ್ನ್ ಮಾಡಿ ಬಿಡಲಾಗ್ತಿತ್ತು.ಆದ್ರೆ ಈಗ ಸೀಟ್ ಖಾಲಿ ಇದ್ರೂ ಪ್ರಯಾಣಿಕರೇನಾದ್ರು ನಿಂತ್ಕೊಂಡು ಸಂಚರಿಸ್ತಿರೋದು ಕಂಡ್ ಬಂದ್ರೂ ಅದಕ್ಕೆ ಡ್ರೈವರ್ಸ್-ಕಂಡಕ್ಟರ್ಸ್ ಗಳನ್ನು ಟಾರ್ಗೆಟ್ ಮಾಡಿ ಅಮಾನತ್ತುಗೊಳಿಸುವ ನೀಚಪ್ರವೃತ್ತಿಯನ್ನು ಕೆಲಸದ ವ್ಯಾಪ್ತಿಯಲ್ಲಿ ಅಳವಡಿಸಿಕೊಳ್ಳಲಾಗಿದೆ.

ಡ್ರೈವರ್ಸ್-ಕಂಡಕ್ಟರ್ಸ್ ಜೀವಭಯದಲ್ಲಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.ಯಾವ್ ಕ್ಷಣದಲ್ಲಿ ಲೈನ್ ಚೆಕ್ಕಿಂಗ್ ನಲ್ಲಿರುವ ತನಿಖಾಧಿಕಾರಿಗಳು ಬಸ್ ಹತ್ತುತ್ತಾರೋ..ತಮ್ಮ ವಿರುದ್ಧ ಅಮಾನತ್ತಿನ ಅಸ್ತ್ರವನ್ನು ಪ್ರಯೋಗಿಸ್ತಾರೋ ಎನ್ನುವ ಆತಂಕದಲ್ಲೇ ಕೆಲಸ ಮಾಡುವಂತಾಗಿದೆ.ಬಸ್ ನಲ್ಲಿ ಪ್ರಯಾಣಿಕರು ನಿಂತ್ ಕೊಂಡ್ರೆ ಅವರಿಗೆ ಟಿಕೆಟ್ ಇಶ್ಯೂ ಮಾಡೊಕ್ಕೆ ಕೊಡುವ ಆಧ್ಯತೆಗಿಂತ ಕುಳಿತುಕೊಳ್ಳುವಂತೆ ಮನವಿ ಮಾಡಿಕೊಳ್ಳುವುದಕ್ಕೇನೆ ಹೆಚ್ಚು ಒತ್ತು ನೀಡುವಂತಾಗಿದೆ.

ನಿಂತುಕೊಂಡು ಪ್ರಯಾಣಿಸಿದ್ರೆ ಅದಕ್ಕೆ ಡ್ರೈವರ್ಸ್-ಕಂಡಕ್ಟರ್ಸ್ ಗಳೇ ಹೊಣೆ ಎನ್ನುವ ಅವೈಜ್ಞಾನಿಕ ಆದೇಶ ಹೊರಡಿಸಿದ್ದೇ ಹೊರಡಿಸಿದ್ದು ಲೈನ್ ಚೆಕ್ಕಿಂಗ್ ಗೆ ಬರುವ ಸಿಬ್ಬಂದಿ ಬಸ್ ಗಳನ್ನು ಹತ್ತಿ ತಪಾಸಣೆ ನಡೆಸುವುದನ್ನೇ ಚಾಳಿಯನ್ನಾಗಿಸಿಕೊಂಡಿದ್ದಾರೆ.ಪ್ರಯಾಣಿಕರೇನಾದ್ರೂ ನಿಂತ್ ಕೊಂಡಿರುವುದು ಕಂಡ್ರೆ ಸಾಕು,ಬಸ್ ಎಷ್ಟೇ ಸ್ಪೀಡ್ ನಲ್ಲಿರಲಿ,ಕೈ ಹಾಕಿ ತಡೆದು ನೊಟೀಸ್ ಸರ್ವ್ ಮಾಡ್ತಿದ್ದಾರೆ.ಹಾಗೆ ನೊಟೀಸ್ ಸರ್ವ್ ಆದ್ರೆ, ಅವ್ರ ಅಮಾನತ್ತು ಗ್ಯಾರಂಟಿ.ಈ ರೀತಿಯಾಗಿ ಸಸ್ಪೆಂಡ್ ಆದವ್ರ ಸಂಖ್ಯೆಯೇ 20ಕ್ಕೂ ಹೆಚ್ಚು ಎನ್ನುತ್ತವೆ ಬಿಎಂಟಿಸಿ ನೌಕರರ ಮೂಲಗಳು.

ಕ್ಷುಲ್ಲಕ ಕಾರಣಗಳಿಗೂ ಡ್ರೈವರ್ಸ್-ಕಂಡಕ್ಟರ್ಸ್ ಗಳನ್ನು ಸಸ್ಪೆಂಡ್ ಮಾಡುವ ಪ್ರವೃತ್ತಿಯ ಹಿಂದಿನ ಉದ್ದೇಶ ಸಾಧ್ಯವಾದಷ್ಟು ಮಟ್ಟಿಗೆ ಡ್ರೈವರ್ಸ್-ಕಂಡಕ್ಟರ್ಸ್ ಗಳನ್ನು ಸಂಬಳವಿಲ್ಲದೆ ಮನೆಯಲ್ಲಿ ಕೂರಿಸಿ ಆರ್ಥಿಕ ಹೊರೆಯನ್ನು ತಗ್ಗಿಸಿಕೊಳ್ಳುವುದು ಎನ್ನಲಾಗ್ತಿದೆ.ಮೂರು ತಿಂಗಳು ಸಂಬಳವಿಲ್ಲದೆ ನೌಕರರು ಮನೆಯಲ್ಲಿ ಕೂತ್ರೆ ಅದರಿಂದ ಎಷ್ಟೋ ಹಣ ಉಳಿತಾಯವಾಗ್ತದೆ.ಇದರಿಂದ ನಿಗಮಕ್ಕೆ ಆಗ್ತಿರುವ ನಷ್ಟವನ್ನು ಕಡ್ಮೆ ಮಾಡಿಕೊಳ್ಳುವುದೆನ್ನುವ ಲೆಕ್ಕಾಚಾರ ಆಡಳಿತ ಮಂಡಳಿ ಮಾಡಿದ್ರೂ ಆಶ್ಚರ್ಯವಿಲ್ಲ ಎನ್ನುತ್ತಾರೆ ಅದೆಷ್ಟೋ ನೊಂದ ನೌಕರರು.

ಆದ್ರೆ  ನೌಕರರ ಹೊಟ್ಟೆ ಮೇಲೆ ಹೊಡೆದೇ,..ಅವರ ನೀಯತ್ತಿನ ಸಂಬಳವನ್ನು ಕಬಳಿಸಿಯೇ.. ಆರ್ಥಿಕ ಹೊರೆ ಕಡ್ಮೆ ಮಾಡಿ ಕೊಳ್ಳಬಹುದೆನ್ನುವುದೇ ಬಿಎಂಟಿಸಿ ಆಡಳಿತ ಮಂಡಳಿ ಲೆಕ್ಕಾಚಾರವಾದ್ರೆ ಅದಕ್ಕಿಂತ ಹೀನಮಟ್ಟದ ಆಲೋಚನೆ ಮತ್ತೊಂದಿಲ್ಲ ಎನ್ನುತ್ವೆ ಸಾರಿಗೆ ನೌಕರರ ಯೂನಿಯನ್ಸ್.ಲಾಕ್ ಡೌನ್ ನಡುವೆಯೂ  ನಿಗಮದಲ್ಲಿ ನಡೆಯುತ್ತಿರಬಹುದಾದ ಭ್ರಷ್ಟಾಚಾರ-ಅಕ್ರಮ,ಅದಿಕಾರಿಗಳ ಅಂದಾದರ್ಬಾರ್ ಗೆ ಬ್ರೇಕ್ ಹಾಕಿದ್ರೇನೆ ನಿಗಮದ ನಷ್ಟ ಎಷ್ಟೋ ಕಡ್ಮೆಯಾಗುತ್ತೆ.ಅದು ಮೇಲಾಧಿಕಾರಿ ಗಳಿಗೂ ಗೊತ್ತಿದೆ.ಅದನ್ನೆಲ್ಲಾ ಮುಚ್ಚಾಕಿ ನೌಕರರನ್ನು ಮನೆಯಲ್ಲಿ ಕೂರಿಸಿ ಅವರ ಸಂಬಳದಿಂದ ನಷ್ಟ ಕಡ್ಮೆ ಮಾಡಿಕೊಳ್ಳುತ್ತೇವೆಂದು ಆಲೋಚಿಸಿ,ಅದನ್ನು ಕಾರಯಗತಗೊಳಿಸುತ್ತಿರುವುದು ನಿಜಕ್ಕೂ ಅಮಾನವೀಯತೆಯ ಪರಮಾವದಿ ಎನ್ನುತ್ತಾರೆ ಸಾರಿಗೆ ಯೂನಿಯನ್ ಮುಖಂಡರು.

ನೌಕರರ ಮೇಲೆ ಇಷ್ಟೆಲ್ಲಾ  ಕ್ರೌರ್ಯ ನಡೆಯುತ್ತಿದ್ದರೂ ಸಚಿವರೆನಿಸಿಕೊಂಡ ಲಕ್ಷ್ಮಣ್ ಸವದಿಯಾಗಲಿ, ಅಧ್ಯಕ್ಷರೆನಿಸಿಕೊಂಡ ನಂದೀಶ್ ರೆಡ್ಡಿಯಾಗ್ಲಿ ತುಟಿಬಿಚ್ಚದೆ ಮೇಲಾಧಿಕಾರಿಗಳ ಅಂದಾದರ್ಬಾರ್ ಗೆ ಅವಕಾಶ ಕೊಟ್ಟಿರುವುದು ಎಷ್ಟು ಸರಿ..ನೌಕರರ ಶ್ರಮದ ರಕ್ತ-ಬೆವರಿನಿಂದ್ಲೇ ನಿಗಮ ನಡೆಯುತ್ತಿದೆ ಎನ್ನೋ ಸಾಮಾನ್ಯಜ್ಞಾನವೂ ಅವರಿಗಿಲ್ಲವೇ..ಹೀಗೆ ಪರಿಸ್ತಿತಿ ಮುಂದುವರೆದ್ರೆ ನೌಕರರು ಧಂಗೆ ಏಳೋ ದಿನಗಳು ಹತ್ತಿರವಿಲ್ಲ ಎನಿಸುತ್ತದೆ.ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದ್ರೆ ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳಬೇಕು.

Spread the love

Related Articles

Leave a Reply

Your email address will not be published.

Back to top button
Flash News