BreakingCORONA VIRUSKANNADAFLASHNEWSFIGHTAGAINSTCORONAMoreTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

ಡ್ರಗ್ಸ್ ಜಾಲದಲ್ಲಿ ಅರಿಭಯಂಕರ ಅಕುಲ್ ಬಾಲಾಜಿ,ಮಾಜಿ ಕಾರ್ಪೊರೇಟರ್ ಯುವರಾಜ್,ನಟ  ಸಂತೋಷ್ ಭಾಗಿ-ಸಿಸಿಬಿ ನೊಟೀಸ್..

ಬೆಂಗಳೂರು:ಡ್ರಗ್ಸ್ ದಂಧೆಯಲ್ಲಿ ಯಾರ್ ಶಾಮೀಲಾಗಿದ್ದಾರೆ..ಯಾರೆಲ್ಲಾ ಲಿಂಕ್ ಪಡೆದಿದ್ದಾರೆ.ಇನ್ನು ಯಾರ್ಯಾರ ಹೆಸರುಗಳು ಥಳಕು ಹಾಕ್ಕೊಂಡಿವೆಯೋ..ಯಾರ್ಯಾರ ಹೆಸರುಗಳು ಹೊರಬರಲಿವೆಯೋ ಒಂದೂ ಗೊತ್ತಾಗ್ತಿಲ್ಲ.ಇಂದು ಸಿಸಿಬಿ ನೊಟೀಸ್ ನೀಡಿರುವ ಶಂಕಿತರ ಲೀಸ್ಟ್ ನಲ್ಲಿರೋರ ಹೆಸರುಗಳನ್ನು ನೋಡುದ್ರೆ ಆಶ್ಚರ್ಯವಾದ್ರೂ ಅವರ ಪಾಲ್ಗೊಳ್ಳುವಿಕೆ ಇಲ್ಲವೇ ಇಲ್ಲ ಎಂದ್ಹೇಳೋದು ಕಷ್ಟವಾಗಬಹುದೇನೋ..

ಅದೇಕೋ ರಾಜಧಾನಿ ಬೆಂಗಳೂರು ಡ್ರಗ್ಸ್ ಅಮಲಿನಿಂದ ಹೊರಗೆ ಬರುವ ಲಕ್ಷಣಗಳೇ ಕಾಣುತ್ತಿಲ್ಲ! ರಾಜ್ಯ ರಾಜಕಾರಣಕ್ಕಿಂತಲೂ  ರೋಚಕ ತಿರುವು ಪಡೆದುಕೊಳ್ಳುತ್ತಿದೆ ಡ್ರಗ್ಸ್ ಮಾಫಿಯಾ.ದಿನಕ್ಕೊಂದರಂತೆ  ಅಚ್ಚರಿಯ ಹೆಸರುಗಳು ಕೇಳಿ ಬರುತ್ತಲೇ ಇವೆ.ಅದಕ್ಕೆ ಮತ್ತೆ ಮೂವರ ಹೆಸರುಗಳು ಸೇರ್ಪಡೆಯಾಗಿವೆ.ದಿ ಫೇಮಸ್ ಆಂಕರ್ ಅಕುಲ್ ಬಾಲಾಜಿ, ಮಾಜಿ ಕಾರ್ಪೊರೇಟರ್ ಆರ್.ವಿ.ಯುವರಾಜ್ ಹಾಗೂ ಚಿತ್ರನಟ ಸಂತೋಷ್..ಮೂವರಿಗೂ ಡ್ರಗ್ ಲಿಂಕ್ ಇರಬಹುದೆನ್ನುವ ಕಾರಣಕ್ಕೆ ಸಿಸಿಬಿ ನೊಟೀಸ್ ಜಾರಿ ಮಾಡಿದೆ.

ರಾಗಿಣಿ, ಸಂಜನಾ ಸಿಸಿಬಿಗೆ ಸಿಲುಕಿ, ನಲುಗಿ ಇದೀಗ ಪರಪ್ಪನ ಅಗ್ರಹಾರದಲ್ಲಿ ಸೊಳ್ಳೆಗಳೊಂದಿಗೆ ಸಂಸಾರ ಮಾಡುತ್ತಿದ್ದಾರೆ. ಅದರ ಬೆನ್ನಲ್ಲೇ ಐಂದ್ರಿತಾ ರೈ, ದಿಗಂತ್‌ರನ್ನು ಬೆತ್ತಲು ಮಾಡಿ ಎಚ್ಚರಿಸಿ ಕಳುಹಿಸಿದ್ದಾರೆ. ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವಾ, ವಿವೇಕ್ ಓಬೆರಾಯ್‌ರಂತಹ ಸೆಲಬ್ರಿಟಿಗಳು ಸಿಸಿಬಿಗೆ ಸಿಲುಕದೆ ಕಣ್ಮರೆಯಾಗಿದ್ದಾರೆ. ಸಾಕಷ್ಟು ಪ್ರಭಾವ, ಒತ್ತಡಗಳಿಂದ ಘಟಾನುಘಟಿಗಳ ಪಟ್ಟಿ ಬೆಳೆಯುತ್ತಲೇ ಇದೆ. ನೋಟಿಸ್ ನಿರೀಕ್ಷೆಯಲ್ಲಿ ಕಂಗಾಲಾಗಿದ್ದಾರೆ.

ಇನ್ನು ಚಿಕ್ಕಪೇಟೆಯ ಮಾಜಿ ಶಾಸಕ ಆರ್.ವಿ.ದೇವರಾಜ್ ಅವರ  ಪುತ್ರ ಕುಲ್ಡಾಮಿಲ್ಡಿ ಕಾರ್ಪೊರೇಟರ್ ಆಗಿ ಇದೀಗ ಮಾಜಿಯೂ ಆದ  ಯುವರಾಜ್,ನಿರೂಪಕ ಮತ್ತು ಅರಿಭಯಂಕರ ಅಕುಲ್ ಬಾಲಾಜಿ ಹಾಗೂ ಹಿರಿತೆರೆ-ಕಿರುತೆರೆ ನಟ ಸಂತೋಷ್ ಅವರ ಹೆಸರುಗಳು ಕೇಳಿಬಂದಿರುವುದು ಅಚ್ಚರಿ ಮೂಡಿಸಿದೆ.ಹೇಳಿ ಕಳುಹಿಸಿದ ದಿನ ಸಿಸಿಬಿಗೆ ಬಂದು ಹಾಜರಾತಿ ಹಾಕಿ ಹೇಳಿಕೆ ಕೊಡ್ಬೇಕೆಂದು ನೊಟೀಸ್ ನೀಡಿರುವುದನ್ನು ನೋಡಿ ಕಂಗಾಲಾಗಿದ್ದಾರೆ.

ರೇವ್ ಪಾರ್ಟಿಗಳನ್ನು ಆಯೋಜಿಸುವುದರಲ್ಲಿ ಸಿದ್ಧಹಸ್ತನಾಗಿರುವ ಅಕುಲ್ ಬಾಲಾಜಿ,ನೋಡೊಕ್ಕೆ ಥೇಟ್ ಪುಂಡಪೋಕರಿಯಂತೆ ಕಾಣುವ ಆರ್.ವಿ ಯುವರಾಜ್,ಸ್ವಲ್ಪ ಹೆಸ್ರು ಬರ್ತಿದ್ದಂಗೆ ನೆಲ ಕಾಣದಂತಾಗಿ ಪಾರ್ಟಿ-ಪಬ್ಬುಗಳೆಂದು ಅಂಡಲೆಯುತ್ತಿದ್ದ ಸಂತೋಷ್ ಮೂವರಿಗೂ ಡ್ರಗ್ ಲಿಂಕ್ ಇರೋದು ಮೇಲ್ನೋಟಕ್ಕೆ ಸಾಬೀತಾದಂತಿದೆ.ಅದೇನೇ ಇರಲಿ,ಡ್ರಗ್ ಚಟಕ್ಕೆ ಬಿದ್ದು ಬದುಕನ್ನೇ ರೌರವ ನರಕ ಮಾಡಿಕೊಂಡವರ ನಿದರ್ಶನಗಳು ಇರುವಾಗ್ಲೇ, ಅದರಿಂದ ಬುದ್ದಿ ಕಲಿಯದೆ ಎಡವಿದ್ದಕ್ಕೆ ಇವತ್ತು ಜೈಲು ಶಿಕ್ಷೆಯ ಆತಂಕ ಎದುರಾಗಿದೆ.ಇದು ಇವರಿಗಷ್ಟೇ ನಿಲ್ಲುವಂಗೆ ಕಾಣ್ತಿಲ್ಲ.ಮತ್ತಷ್ಟು ಜನರ ಹೆಸರುಗಳು ಕೇಳಿಬರುತ್ತಿದ್ದು ಎಲ್ಲರನ್ನೂ ಆತಂಕ ಎನ್ನೋದು ಇಡಿಇಡಿಯಾಗಿ ಕಿತ್ತು ತಿನ್ನುತ್ತಿದೆ.

Spread the love

Related Articles

Leave a Reply

Your email address will not be published.

Back to top button
Flash News