BreakingCORONA VIRUSKANNADAFLASHNEWSFIGHTAGAINSTCORONAMoreTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆರಾಜಕೀಯರಾಜ್ಯ-ರಾಜಧಾನಿ

ಪೊಲೀಸ್ ಭದ್ರತೆ ಕೊಟ್ಟರೆ  ಡ್ರಗ್ಸ್ ಲಿಂಕ್ ಬಯಲು ಮಾಡ್ತೇನೆ..   ಸಾಮಾಜಿಕ ಕಾರ್ಯಕರ್ತ  ಎಚ್.ಎಂ.ವೆಂಕಟೇಶ್  ರಿಂದ ಕಮಿಷನರ್ ಗೆ  ಮಾಹಿತಿ ಸಲ್ಲಿಕೆ

ಬೆಂಗಳೂರು: “ನನಗೆ ರಕ್ಷಣೆ ಕೊಟ್ಟರೆ ಡ್ರಗ್ಸ್ ದಂಧೆಯಲ್ಲಿ ಮತ್ತಷ್ಟು ಪ್ರತಿಷ್ಠಿತರ ಹೆಸರುಗಳನ್ನು ಬಯಲು ಮಾಡುತ್ತೇನೆ…” ಹೀಗೊಂದು ಸ್ಫೋಟಕ ಮಾಹಿತಿಯನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ಹೊರಹಾಕಿದ್ದಾರೆ.ಯಲಹಂಕದ ನ್ಯಾಯಾಂಗ ಬಡಾವಣೆಯ ನಿವಾಸಿಯಾಗಿರುವ ಸಾಮಾಜಿಕ ಕಾರ್ಯಕರ್ತ ಹೆಚ್.ಎಂ.ವೆಂಕಟೇಶ್ ಇಂತಹದ್ದೊಂದು ಹೇಳಿಕೆ ನೀಡಿರುವುದು ಸಾಕಷ್ಟು ರೀತಿಯ ಕುತೂಹಲ ಹಾಗೂ ಚರ್ಚೆಯನ್ನು ಹುಟ್ಟು ಹಾಕಿದೆ.

ನಿರ್ದೇಶಕ ಹಾಗೂ ಪತ್ರಕರ್ತ ಇಂದ್ರಜಿತ್ ಲಂಕೇಶ್ ಸ್ಯಾಂಡಲ್‌ವುಡ್ ಡ್ರಗ್ಸ್ ದಂಧೆಯ ಬಗ್ಗೆ ಮಾಹಿತಿ ನೀಡುವ ವೇಳೆ ದಂಧೆಯಲ್ಲಿ ಸೆಲಬ್ರಿಟೀಸ್‌ಗಳ ಪಾಲ್ಗೊಳ್ಳುವಿಕೆಯ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿರುವವರು ಕೇವಲ ಚಿತ್ರರಂಗದ ನಟ-ನಟಿಯರು ಮಾತ್ರವೇ ಎಂಬ ಪ್ರಶ್ನೆ ಅಂದೇ ಸೃಷ್ಟಿಯಾಗಿತ್ತು. ಒಂದಷ್ಟು ರಾಜಕಾರಣಿಗಳು ಹಾಗೂ ಅವರ ಮಕ್ಕಳು ಇದರಲ್ಲಿ ಪಾಲ್ಗೊಂಡ ನಿದರ್ಶನಗಳು ಸಿಕ್ಕರೂ ಅದೇಕೋ ಸಿಸಿಬಿ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲೇ ಇಲ್ಲ! ಹಾಗಾಗಿ ಕಾರ್ಪೊರೇಟರ್ ಕೇಶವಮೂರ್ತಿ ಮಗ ಹಾಗೂ ‘ಕೈ’ ಶಾಸಕರೊಬ್ಬರ ಪುತ್ರರತ್ನ ತನಿಖೆಯ ಹಾಗೂ ವಿಚಾರಣೆಯ ಆತಂಕದಿಂದ ತಪ್ಪಿಸಿಕೊಂಡರು!!

ಈಗ  ಸಾಮಾಜಿಕ ಕಾರ್ಯಕರ್ತ ಹೆಚ್.ಎಂ.ವೆಂಕಟೇಶ್ ಡ್ರಗ್ಸ್ ದಂಧೆಯಲ್ಲಿ ರಾಜಕಾರಣಿಗಳು ಹಾಗೂ ಉದ್ಯಮಿಗಳ ಪುತ್ರರು ಸಾಕಷ್ಟು ಸಂಖ್ಯೆಯಲ್ಲಿ ಡ್ರಗ್ಸ್ ಲಿಂಕ್ ಹೊಂದಿರುವ ಮಾಹಿತಿಯನ್ನು ಹೊರಹಾಕಿದ್ದಾರೆ. ಅಷ್ಟೇ ಅಲ್ಲ ಅದಕ್ಕೆ ಪೂರಕ ನಿದರ್ಶನಗಳನ್ನು ಈಗಾಗಲೇ ಪೊಲೀಸ್ ಕಮೀಷನರ್ ಕಮಲ್ ಪಂತ್ ಅವರಿಗೆ ನೀಡಿದ್ದಾರೆ ಕೂಡಾ! ಇದರ ಬೆನ್ನಲ್ಲೇ ಅವರಿಗೆ ಇರುವ ಆತಂಕ, ಜೀವಭಯ. ತನಗೆ ರಕ್ಷಣೆಯನ್ನು ನೀಡಬೇಕೆಂದು ಮನವಿಯನ್ನೂ ಮಾಡಿದ್ದಾರೆ.

ವೆಂಕಟೇಶ್ ಅವರ ಪ್ರಕಾರ ಹೆಸರಾಂತ ರಾಜಕಾರಣಿಗಳ ಪುತ್ರರು ಡ್ರಗ್ಸ್ ದಂಧೆಯಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ಅವರೇ ಪಾರ್ಟಿಗಳನ್ನು ಆಯೋಜಿಸಿ ಡ್ರಗ್ಸ್ ನಶೆಯಲ್ಲಿ ತೇಲುತ್ತಾರೆ. ಇಂತಹ ಪಾರ್ಟಿಗಳಿಗೆ ಹತ್ತಿರತ್ತಿರ ಕೋಟ್ಯಂತರ ಹಣವನ್ನು ಖರ್ಚು ಮಾಡುತ್ತಾರಂತೆ! ಇವರೊಂದಿಗೆ ಉದ್ಯಮಿಗಳ ಮಕ್ಕಳೂ ಕೂಡ ಶಾಮೀಲಾಗಿದ್ದಾರೆ. ಅಂತಹ ಹೆಸರುಗಳನ್ನು ಸಾಕ್ಷ್ಯ ಸಮೇತ ಪೊಲೀಸ್ ಕಮೀಷನರ್‌ಗೆ ನೀಡಿರುವುದಾಗಿ ವೆಂಕಟೇಶ್ ತಿಳಿಸಿದ್ದಾರೆ.ಕೇವಲ ಸಿಸಿಬಿ ಸೆಲಬ್ರಿಟಿಗಳ ತನಿಖೆಯ ಸುತ್ತವೇ ಗಿರಕಿ ಹೊಡೆಯದೆ ಡ್ರಗ್ಸ್ ಜೊತೆಗೆ ಇರಬಹುದಾದ ರಾಜಕಾರಣಿಗಳು ಹಾಗೂ ಉದ್ಯಮಿಗಳ ಮಕ್ಕಳ ಲಿಂಕ್ ಬಗ್ಗೆಯೂ ತಲೆಕೆಡಿಸಿಕೊಂಡರೆ ಬೃಹತ್ ತಿಮಿಂಗಿಲಗಳು ಹೊರಬಹುದು ಅವರ ಬಣ್ಣವೂ ಬಯಲಾಗಬಹುದು!!

Spread the love

Related Articles

Leave a Reply

Your email address will not be published.

Back to top button
Flash News