BreakingCORONA VIRUSKANNADAFLASHNEWSFIGHTAGAINSTCORONAMoreTop NewsUncategorizedಜಿಲ್ಲೆಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜಕೀಯರಾಜ್ಯ-ರಾಜಧಾನಿ

ಅಂತೂ ಇಂತೂ ಬೆಂಗಳೂರಿನಲ್ಲಿ ವಾಹನ ಪಾರ್ಕಿಂಗ್ ಅಶಿಸ್ತಿಗೆ ಬಿತ್ತು ಕಡಿವಾಣ…-ಸ್ಮಾರ್ಟ್ ಪಾರ್ಕಿಂಗ್ ಜಾರಿಗೆ….-10 ರಸ್ತೆಗಳ ಆಯ್ಕೆ…-ವರ್ಷಕ್ಕೆ 31.45 ಕೋಟಿ ಆದಾಯ

ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ವಾಹನ ದಟ್ಟಣೆ ತಗ್ಗಿಸೊಕ್ಕೆ ಇರೋ ಒಂದೇ ಒಂದು ಮಾರ್ಗೋಪಾಯ ಎಂದ್ರೆ ಅದು ಸುವ್ಯವಸ್ಥಿತ ಪಾರ್ಕಿಂಗ್ ಮಾತ್ರ.ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳಾದ್ರೂ ಯಾವುದೂ ಪ್ರಯೋಜನಕಾರಿಯಾಗಿರಲಿಲ್ಲ.ಈ ಕಾರಣಕ್ಕೆ ಅಂತಿಮವಾಗಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗ್ತಿದೆ.ಇದರ ಭಾಗವಾಗಿ ಬೆಂಗಳೂರಿನ 10 ಕಡೆ ಸ್ಮಾರ್ಟ್ ಪಾರ್ಕಿಂಗ್ ಸ್ಪಾಟ್ ಗಳನ್ನು ಫಿಕ್ಸ್ ಮಾಡಿ ವಲಯವಾರು ದರವನ್ನು ಕೂಡ ಫಿಕ್ಸ್ ಮಾಡಲಾಗಿದೆ.

ಅಂದ್ಹಾಗೆ ಬಿಬಿಎಂಪಿಗೆ ಆಡಳಿತಾಧಿಕಾರಿಯಾಗಿ ಗೌರವ್ ಗುಪ್ತಾ ಬಂದ್ಮೇಲೆ ಕಮಿಷನರ್ ಮಂಜುನಾಥ್ ಪ್ರಸಾದ್ ಜತೆ ಕೂತು ಸ್ಮಾರ್ಟ್ ಪಾರ್ಕಿಂಗ್ ರೂಪುರೇಷೆ ಅಂತಿಮಗೊಳಿಸಲಾಗಿದೆ.ಇದರ ಪ್ರಕಾರ ಸೆಂಟ್ರಲ್ ಪಾರ್ಕಿಂಗ್ ಸರ್ವಿಸ್ ಎನ್ನುವ ಸಂಸ್ಥೆಗೆ 10 ವರ್ಷಗಳಿಗೆ ಅನ್ವಯವಾಗುವಂತೆ ಪಾರ್ಕಿಂಗ್ ಗುತ್ತಿಗೆ ಕೊಡಲಾಗಿದೆ.ಇದರಿಂದ ಪ್ರತಿ ವರ್ಷ 31.56 ಕೋಟಿ ಆದಾಯವನ್ನು ಬಿಬಿಎಂಪಿ ನಿರೀಕ್ಷಿಸುತ್ತಿದೆ.

ಅಂದ್ಗಾಗೆ ಮೊದಲ ಹಂತದಲ್ಲಿ  ಸ್ಮಾರ್ಟ್ ಪಾರ್ಕಿಂಗ್ ಗೆ ಆಯ್ಕೆ ಮಾಡಿಕೊಳ್ಳಲಾಗಿರುವ 10 ಪ್ರದೇಶಗಳ ವಿವರ ನೋಡೋದಾದ್ರೆ

1-ಕನ್ನಿಂಗ್ ಹ್ಯಾಂ ರಸ್ತೆ

2-ಎಂಜಿ ರಸ್ತೆ

3-ಕಸ್ತೂರಬಾ ರಸ್ತೆ

4-ಸೆಂಟ್ ಮಾರ್ಕ್ಸ್ ರಸ್ತೆ

5-ರೆಸಿಡೆನ್ಸಿ ರಸ್ತೆ

6-ಮ್ಯೂಸಿಯಂ ರಸ್ತೆ

7-ವಿಠ್ಠಲ ಮಲ್ಯ ರಸ್ತೆ

8-ಚರ್ಚ್ ಸ್ಟ್ರೀಟ್

9-ಅಲಿ ಅಸ್ಗರ್ ರಸ್ತೆ

10-ಮಲ್ಯ ಆಸ್ಪತ್ರೆ ರಸ್ತೆ

ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.ಇದರಿಂದ 475 ಕಾರುಗಳು ಹಾಗೂ 510 ದ್ವಿ ಚಕ್ರ ವಾಹನಗಳ ಪಾರ್ಕಿಂಗ್ ಸುಗಮವಾಗಲಿದೆಯಂತೆ.

 

ಇನ್ನು ಉಳಿದ ರಸ್ತೆಗಳನ್ನು ನಂತರದ ಹಂತಗಳಲ್ಲಿ ಆಯ್ಕೆ ಮಾಡಿಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.ಈ ಸ್ಪಾಟ್ ಗಳ ವಿವರವನ್ನು ನಮ್ಮ ಬೆಂಗಳೂರು ಪಾರ್ಕಿಂಗ್ ಆಪ್ ನಲ್ಲಿ ಸಂಗ್ರಹಿಸಲಾಗಿದ್ದು ಆಪ್ ನ್ನು ಡೌನ್ ಲೋಡ್ ಮಾಡಿಕೊಂಡ್ರೆ ಸ್ಮಾರ್ಟ್ ಪಾರ್ಕಿಂಗ್ ಸ್ಪಾಟ್ ಗಳ ವಿವರ ಹಾಗು ಲಭ್ಯತೆಯ ಮಾಹಿತಿ ಅನಾಯಾಸವಾಗಿ ಸಿಗಲಿದೆ.  

ಸ್ಮಾರ್ಟ್ ಪಾರ್ಕಿಂಗ್ ನ್ನು ವಲಯವಾರು ವಿಂಗಡಿಸಲಾಗಿದೆ.ಎ,ಬಿ.ಸಿ ಎನ್ನುವ ಮೂರು ವಲಯ ಮಾಡಲಾಗಿದ್ದು,ಎ ವಲಯದಲ್ಲಿ 60 ನಿಮಿಷ ಪಾರ್ಕಿಂಗ್ ಮಾಡಿದ್ರೆ 30 ರೂ ಪಾವತಿಸಬೇಕಾಗುತ್ತೆ.ವಾಹನಗಳನ್ನು ಈ ನಿಗಧಿತ ಅವಧಿಯೊಳಗೆ ತೆರವು ಮಾಡಬೇಕಿರುತ್ತೆ.ಹೆಚ್ಚುವರಿ 5 ನಿಮಿಷ ಕೊಡಲಾಗುತ್ತೆ.ಅಷ್ಟರೊಳಗೆ ವಾಹನಗಳನ್ನು ತೆಗೆಯದಿದ್ದರೆ ಎನ್ ಪೋರ್ಸ್ ಮೆಂಟ್ ಸೆಲ್ ನವರ ಸಹಕಾರದಿಂದ ವಾಹನಗಳನ್ನು ತೆರವುಗೊಳಿಸಲಾಗುತ್ತೆ.500 ರೂ ಪಾವತಿಸಿ ವಾಹನಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತೆ.  

ವಲಯವಾರು ಫಿಕ್ಸ್ ಮಾಡಲಾಗಿರುವ ಸ್ಮಾರ್ಟ್ ಪಾರ್ಕಿಂಗ್ ಮೊತ್ತ,ಸಮಯದ ವಿವರ ಕೆಳಕಂಡಂತಿದೆ.

ವಲಯ    ಸಮಯ                ಮೊತ್ತ 

ಎ          60 ನಿಮಿಷ               30 ರೂ

ಬಿ          20 ನಿಮಿಷ               10 ರೂ

ಸಿ          15 ನಿಮಿಷ                 05 ರೂ  

ಒಟ್ಟಿನಲ್ಲಿ ಸ್ಮಾರ್ಟ್ ಪಾರ್ಕಿಂಗ್ ಅನುಷ್ಠಾನಕ್ಕೆ ಬರುವ ಮೂಲಕ ವಾಹನಗಳನ್ನು ಪಾರ್ಕಿಂಗ್ ಮಾಡುವಲ್ಲಿ ಚಾಲಕರು ಹಾಗೂ ಮಾಲೀಕರು ತೋರುತ್ತಿದ್ದ ಅಸಭ್ಯತೆಗೆ ಕಡಿವಾಣ ಬಿದ್ದಂತಾಗುತ್ತಿದೆಯಲ್ಲದೇ, ಬಿಬಿಎಂಪಿಗೆ ಸೋರಿಕೆಯಾಗ್ತಿದ್ದ ಹತ್ತಾರು ಕೋಟಿ ಆದಾಯವೂ ಬೊಕ್ಕಸ ಸೇರಿದಂತಾಗ್ತಿದೆ. 

Spread the love

Related Articles

Leave a Reply

Your email address will not be published.

Back to top button
Flash News