BreakingScrollTop News

ಹೊಸಪೇಟೆಯ ಮದಲಗಟ್ಟ ಸೇತುವೆ ಲಿಂಕ್ ರೋಡ್ ಕುಸಿತ-ಕಾರು ಅಪಘಾತ- ಸಂಚಾರ ಬಂದ್.

ಹೊಸಪೇಟೆ:ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮದಲಗಟ್ಟಿ ಗ್ರಾಮದ ಬಳಿಯ ತುಂಗಭದ್ರ ನದಿಗೆ ಅಡ್ಡಲಾಗಿ ಕಟ್ಟಿರುವ  ಸೇತುವೆಯಿಂದ ಒಂದು ಅಡಿಯಷ್ಟು ರಸ್ತೆ ಕುಸಿದ ಪರಿಣಾಮ ರಸ್ತೆ ಸಂಚಾರ ಬಂದ್ ಆಗಿದೆ.

ಹೂವಿನಹಡಗಲಿ ತಾಲೂಕಿನ ಮದಲಗಟ್ಟಿ ಗ್ರಾಮದ ಕಡೆಯಿಂದ ಸೇತುವೆಗೆ ಸಂಪರ್ಕ ಕಲ್ಪಿಸುವ ಈ ಸೇತುವೆಯನ್ನು  ಇಪ್ಪತ್ತು ವರ್ಷಗಳ ಹಿಂದೆ ನಿರ್ಮಾಣ  ಮಾಡಲಾಗಿತ್ತು.

ಬಳ್ಳಾರಿ ಜಿಲ್ಲೆ ಮತ್ತು ಗದಗ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಸೇತುವೆ ಇತ್ತೀಚೆಗೆ ತುಂಗಭದ್ರ ನದಿ ಉಕ್ಕಿ ಹರಿದ ಪರಿಣಾಮ ಸೇತುವೆ ಸಿಥಿಲಾವಸ್ಥೆಗೆ ತಲುಪಿತ್ತು.

ಮಲೆನಾಡಿನಲ್ಲಿ ಮಳೆ ಅಬ್ಬರ ಹಿನ್ನೆಲೆ ಇಂದು ಕೂಡ ತುಂಗಭದ್ರ ನದಿ ಉಕ್ಕಿ ಹರಿಯುತ್ತಿದೆ.ಮದಲಗಟ್ಟಿ ಸೇತುವೆ ಕುಸಿತ ಹಿನ್ನೆಲೆ ಕಾರ್ ಕೂಡ ಅಪಘಾತಕ್ಕೆ ಒಳಗಾಗಿದೆ. ಚಾಲಕ ಸ್ವಲ್ಪ ಎಚ್ಚರ ತಪ್ಪಿದ್ದರೂ ತುಂಗಭದ್ರ ನದಿಗೆ ಬೀಳುವ ಸಾಧ್ಯತೆ ಇತ್ತು.ಕುಸಿದ ಗುಂಡಿಗೆ ಬಿದ್ದು ಎದ್ದಿರುವುದರಿಂದ ಬಾರಿ ಅನಾಹುತ ತಪ್ಪಿದೆ.ಇದರಿಂದ ಕಾರಿನ ಕೆಳಬಾಗದ ಇಂಜಿನ್ ಗೆ ಹಾನಿಯಾಗಿದೆ. ಸ್ಥಳಕ್ಕೆ ಸಂಭಂದ ಪಟ್ಟ ಇಲಾಖೆಯ ಇಂಜಿನಿಯರ್ ಗಳು ದೌಡಾಯಿಸಿ ದುರಸ್ಥಿ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News