BreakingCORONA VIRUSKANNADAFLASHNEWSFIGHTAGAINSTCORONAMoreTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆರಾಜ್ಯ-ರಾಜಧಾನಿಸಿನೆಮಾ ಹಂಗಾಮ

ಸಿನ್ಮಾ ಸಿಗದ ಖಿನ್ನತೆಯಿಂದಲೇ ಕೊಕೇನ್ ಸೇವಿಸಿದ್ದೆ: ಸಿಸಿಬಿ ಮುಂದೆ ಹೀಗೆಂದು ದೂದ್ ಪೇಡಾ ದಿಗಂತ್ ತಪ್ಪೊಪ್ಪಿಗೆ…!

ಬೆಂಗಳೂರು: ಡ್ರಗ್ಸ್ ಸುಳಿಯಲ್ಲಿ ಸಿಲುಕಿರುವ ದೂದ್ ಪೇಡಾ ದಿಗಂತ್ ಎರಡನೆ ಬಾರಿ ಸಿಸಿಬಿ ವಿಚಾರಣೆ ಒಳಗಾಗಿದ್ದಾರೆ. ಮೊದಲನೇ ಬಾರಿಯ ವಿಚಾರಣೆಯಲ್ಲಿ ಲವಲವಿಕೆಯಿಂದ ಸಿಸಿಬಿ ವಿಚಾರಣೆ ಎದುರಿಸಿದ ದಿಗಂತ್ ಎರಡನೆ ಬಾರಿ ಅದ್ಯೋಕೋ ಬೇಸರದಿಂದ ವಿಚಾರಣೆಯನ್ನ ಎದುರಿಸಿ ಸ್ಫೋಟಕ ಮಾಹಿತಿಯನ್ನ ಸಿಸಿಬಿ ಪೊಲೀಸರ ಮುಂದೆ ಹೇಳಿದ್ದಾರೆ…

ಸಿಸಿಬಿ ಪೊಲೀಸರ ಖಡಕ್ ಪ್ರಶ್ನೆಗಳಿಗೆ ಹೆದರಿದ ದಿಗಂತ್ ತಾನು ಡ್ರಗ್ಸ್ ಸೇವಿಸಿದ್ದೆ ಅನ್ನೋ ಸತ್ಯವನ್ನ ಒಪ್ಪಿಕೊಂಡಿದ್ದಾರೆ. ತಾನು ಯಾಕೆ ಯಾವ ಡ್ರಗ್ಸ್ ಸೇವಿಸಿದೆ ಅನ್ನೋದನ್ನೂ ಕೂಡ ಸಿಸಿಬಿ ಮುಂದೆ ಬಾಯ್ಬಿಟ್ಟಿದ್ದಾರೆ. ಕರೋನಾ ಲಾಕ್ ಡೌನ್ ವೇಳೆ ಮೂರ‍್ನಾಲ್ಕು ಸಲ ಕೊಕೆನ್ ಸೇವಿಸಿದ್ದೆ ಅಂತ ಹೇಳಿರುವ ದಿಗಂತ್ ಅದಕ್ಕೆ ಸಮಜಾಯಿಶಿ ಕೂಡ ನೀಡಿದ್ದಾರೆ. ಸಿನಿಮಾಗಳಿಲ್ಲದೆ ಖಿನ್ನತೆಗೆ ಒಳಗಾಗಿದ್ದೆ, ಹೀಗಾಗಿ ಸ್ನೇಹಿತರ ಮನೆಯಲ್ಲಿ ಕೊಕೆನ್ ಸೇವಿಸಿರೋದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಇನ್ನೂ ಕೊಕೆನ್ ನಿಮ್ಮಗೆ ಎಲ್ಲಿ ಸಿಕ್ತು..? ಯಾವ ಪೆಡ್ಲರ್ ಗಳಿಂದ ಸಿಕ್ತು ಅನ್ನೋ ಸಿಸಿಬಿ ಪೊಲೀಸರ ಪ್ರಶ್ನೆಗೆ ತಬ್ಬಿಬ್ಬಾಗಿ ಉತ್ತರಿಸಿರುವ ಮನಸಾರೆ ನಾಯಕ ನನ್ನ ಸ್ನೇಹಿರೊಬ್ಬರು, ನೈಜಿರಿಯನ್ ಮೂಲಕದ ಡ್ರಗ್ಸ್ ಪೆಡ್ಲರ‍್ಸ್ ಮೂಲಕ ಕೊಕೆನ್ ತರಿಸಿದ್ರು ಅಂತ ಹೇಳಿದ್ದಾರೆ.ಇನ್ನೂ ಇದೇ ವೇಳೆ ಸಿಸಿಬಿ ಪೊಲೀಸರ ಎದುರು ದಿಗಂತ್ ಮನವಿಯನ್ನೂ ಕೂಡ ಮಾಡಿಕೊಂಡಿದ್ದಾರೆ. ದಯವಿಟ್ಟು ನನ್ನನ್ನು ಪದೇ ಪದೇ ವಿಚಾರಣೆಗೆ ಕರೆಯಬೇಡಿ ಒಂದೇ ಬಾರಿ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದಿದ್ದಾರೆ.ಇದಕ್ಕೆ ಸಿಸಿಬಿ ಪೊಲೀಸರು ಅವಶ್ಯಕತೆ ಇದ್ದಾಗ ಮತ್ತೆ ವಿಚಾರಣೆಗೆ ಕರೆಯುವುದಾಗಿ ತಿಳಿಸಿದ್ದಾರೆ.  

Spread the love

Related Articles

Leave a Reply

Your email address will not be published.

Back to top button
Flash News