“ಮಾಜಿ”ಗಳಾದ್ರೂ ನಿಲ್ಲದ ದರ್ಪ, ನೋಡೆಲ್ ಅಧಿಕಾರಿಗಳ ಮೇಲೆ ಎಕ್ಸ್ ಪುರಪಿತೃಗಳ ಸವಾರಿ-ರಾಜಕೀಯ ಹಸ್ತಕ್ಷೇಪಕ್ಕೆ ಆರಂಭದಲ್ಲೇ ಅಧಿಕಾರಿಗಳು ಹೈರಾಣ..?!

0

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅವಧಿ ಮುಗಿದಿದೆ. ಆದ್ರೂ ಕರೋನಾ ಹಾಗೂ ಮತ್ತಿತರ ಕಾರಣಗಳಿಂದ ಸದ್ಯಕ್ಕೆ ಚುನಾವಣೆ ನಡೆಯದ ಕಾರಣ, ಪಾಲಿಕೆಯ ೧೯೮ ವಾಡ್ ಗಳಿಗೂ ನೋಡೆಲ್ ಅಧಿಕಾರಿಗಳನ್ನ ನೇಮಿಸಲಾಗಿದೆ. ಪಾಲಿಕೆ ಅವಧಿ ಮುಗಿದಿರೋದ್ರಿಂದ ಸಾರ್ವಜನಿಕರು ಹಾಗೂ ಪಾಲಿಕೆ ಸಮನ್ವಯ ಸಾಧಿಸುವ ದೃಷ್ಟಿಯಿಂದ ಪ್ರತಿ ವಾರ್ಡ್‌ಗೂ ಒಬ್ಬ ಹಿರಿಯ ಐಎಎಸ್ ಅಧಿಕಾರಿಯನ್ನ ನೋಡೆಲ್ ಅಧಿಕಾರಿಯಾಗಿ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ನೇಮಿಸಿದ್ದಾರೆ.

ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಓಎಫ್ ಸಿ ಕೇಬಲ್ ವಿರುದ್ಧ ಕ್ರಮ ಕೈಗೊಳ್ಳುವುದು, ವಾರದಲ್ಲಿ ಮೂರು ದಿನ ಕಡ್ಡಾಯವಾಗಿ ಬೆಳಗ್ಗೆ ೬:೩೦ಕ್ಕೆ ಪೌರಕಾರ್ಮಿಕರ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ಪರಿಶೀಲನೆ ನಡೆಸುವುದು, ತೆರಿಗೆ ವಸೂಲಿ ಕ್ರಮ ಕೈಗೊಳ್ಳುವುದು, ಕಸ ವಿಲೇವಾರಿ ಹಾಗೂ ವಿಂಗಡಣೆ ಬಗ್ಗೆ ಪರಿಶೀಲನೆ ನಡೆಸುವುದು, ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು, ಪಾಲಿಕೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು, ಸಾರ್ವಜನಿರು ಕುಂದು ಕೊರತೆಗಳನ್ನು ಪರಿಹರಿಸುವುದು ಸೇರಿದಂತೆ ಹಲವು ಕಾರ್ಯಗಳನ್ನ ನೋಡೆಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಿಬಿಎಂಪಿ ಚುನಾವಣೆ ನಡೆಸು ಬೆಂಗಳೂರಿನ ಪ್ರತಿ ವಾರ್ಡ್‌ಗೂ ಚುನಾಯಿತ ಕಾಪೋರೇಟರ್ ಗಳು ಆಯ್ಕೆ ಯಾಗುವ ವರೆಗೂ ನೋಡೆಲ್ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.

ಪಾಲಿಕೆಯ ಎಲ್ಲಾ ವಾಡ್ ಗಳಿಗೂ ನೋಡೆಲ್ ಅಧಿಕಾರಿಗಳು ನೇಮಕವಾಗುತ್ತಿದ್ದಂತೆ ಮಾಜಿ ಕಾಪೋರೇಟರ್ ಗಳ ಒತ್ತಡದ ವರಸೆ ಶುರುವಾಗಿದೆ. ನೋಡೆಲ್ ಅಧಿಕಾರಿಗಳನ್ನ ಬುಕ್ ಮಾಡಿಕೊಳ್ಳಲು ಹಲವು ಮಂದಿ ಮಾಜಿ ಪಾಲಿಕೆ ಸದಸ್ಯರು ಯತ್ನಿಸುತ್ತಿದ್ದಾರೆ… ನೋಡೆಲ್ ಅಧಿಕಾರಿಗಳನ್ನ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಸಚಿವರು ಹಾಗೂ ಶಾಸಕರ ಮಟ್ಟದಲ್ಲಿ ಲಾಭಿ ನಡೆಸುತ್ತಿದ್ದಾರೆ.  ನೋಡೆಲ್ ಅಧಿಕಾರಿ ಯಾವುದೇ ನಿರ್ಧಾರಗಳನ್ನ ಕೈಗೊಳ್ಳಬೇಕಾದರೂ ತಮ್ಮ ಅಪ್ಪಣೆ ಬಳಿಕವೇ ಎಲ್ಲವೂ ತೀರ್ಮಾನ ಆಗಬೇಕು, ಯಾವುದೇ ಫೈಲ್ ಮೂವ್ ಆಗೋದಕ್ಕೂ ಮುನ್ನ ನಮ್ಮ ಗಮನಕ್ಕೆ ಬರಬೇಕು ಅಂತ ಕೆಲ ಸಚಿವರಿಂದ ಹಾಗೂ ಶಾಸಕರಿಂದ ನೋಡೆಲ್ ಅಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದೆ. ಮಾಜಿ ಪಾಲಿಕೆ ಸದಸ್ಯರಾದ್ರೂ ನೋಡೆಲ್ ಅಧಿಕಾರಿಗಳ ಅಧಿಕಾರದಲ್ಲಿ ಹಲವು ಕಾರ್ಪೋರೇಟರ‍್ಸ್ ಮೂಗುತೂರಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪಾಲಿಕೆಯ ಉನ್ನತ ಮೂಲಗಳು ಪ್ರಕಾರ ಈಗಾಗಲೇ ಕೆಲ ನೋಡೆಲ್ ಅಧಿಕಾರಿಗಳನ್ನ ಮಾಜಿ ಕಾರ್ಪೋರೇಟರ್ ಗಳನ್ನ ತಮ್ಮ ಬುಟ್ಟಿಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೆ ಕೆಲ ನೋಡಲೆ ಅಧಿಕಾರಿಗಳು ಯಾವ ಒತ್ತಡಕ್ಕೂ ಬಗ್ಗದೇ ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ.ಒಟ್ಟಾರೆ ಮಾಜಿ ಕಾರ್ಪೋರೇಟರ‍್ಸ್‌ಗಳ ಒತ್ತಡದ ನಡುವೆ ನೋಡೆಲ್ ಅಧಿಕಾರಿಗಳು ಹೇಗೆ ಕಾರ್ಯನಿರ್ವಹಿಸುತ್ತಾರೆ, ಸಾರ್ವಜನಿಕರು ಹಾಗೂ ಪಾಲಿಕೆ ನಡುವೆ ಯಾವ ಮಟ್ಟದಲ್ಲಿ ಸಮನ್ವಯತೆ ಸಾಧಿಸುತ್ತಾರೆ, ಜನರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತಾರೆ ಅನ್ನೋದು ತೀವ್ರತ ಕುತೂಹಲ ಮೂಡಿಸಿದೆ.

Spread the love
Leave A Reply

Your email address will not be published.

Flash News