BreakingScrollTop Newsಸಿನೆಮಾ ಹಂಗಾಮ

ಕನ್ನಡದ ನಂಬರ್ 1 ಟಿವಿ  ಆಂಕರ್ ಅನುಶ್ರೀ ಡ್ರಗ್ ಲಿಂಕ್-ನೊಟೀಸ್ ಜಾರಿ

ಖ್ಯಾತ ಟಿವಿ ನಿರೂಪಕಿ ಅನುಶ್ರೀಗೆ ಡ್ರಗ್ ವಿಚಾರದಲ್ಲಿ ಸಿಸಿಬಿ ನೊಟೀಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ. ಡ್ಯಾನ್ಸರ್ ಕಿಶೋರ್ ಶೆಟ್ಟಿ ಜೊತೆಗೆ ಆಕೆಗೆ ಡ್ರಗ್ ಲಿಂಕ್ ಇರುವ ಬಗ್ಗೆ ಅನುಮಾನವಿದೆ.ಈ ಕಾರಣಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಸೂಚನೆ ನೀಡಿದೆ.ವಾಟ್ಸಪ್ ಮೂಲಕ  ಅನುಶ್ರೀಗೆ ನೊಟೀಸ್ ಜಾರಿ ಮಾಡಲಾಗಿದೆ.ಆದ್ರೆ ಅನುಶ್ರೀ ಈ ಬಗ್ಗೆ ತಮಗೆ ಯಾವುದೆ ನೊಟೀಸ್ ಬಂದಿಲ್ಲ ಎಂದು ತಿಳಿಸಿದ್ದಾರೆ.ಆದ್ರೆ ಕೆಲವು ಮೂಲಗಳ ಪ್ರಕಾರ  ಅನುಶ್ರೀ ಅವರನ್ನು ವಿಚಾರಣೆಗೆ ಒಳಪಡಿಸಲು ಮಂಗಳೂರಿನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.ಈ ನಡುವೆ ಅನುಶ್ರೀ ಜತೆಗೆ ಸಂಪರ್ಕದಲ್ಲಿದ್ದ ಕಿಶೋರ್ ಶೆಟ್ಟಿ ಆಪ್ತ ತರುಣ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.ಅನುಶ್ರೀ ಕಳೆದ 5 ವರ್ಷಗಳಿಂದಲೂ ಅನೇಕ ಪಾರ್ಟಿಗಳಲ್ಲಿ ಅನುಶ್ರೀ ಭಾಗಿಯಾಗಿದ್ದರೆನ್ನುವುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ ಎನ್ನಲಾಗಿದೆ.ಇದೇ ಸನ್ನಿವೇಶದಲ್ಲಿ ಆಕೆ ಡ್ರಗ್ ಪೆಡ್ಲರ್ ಗಳ ಜೊತೆ ಸಂಪರ್ಕಕ್ಕೆ ಬಂದಿರುವ ಸಾಧ್ಯತೆಗಳಿವೆ.ಒಟ್ಟಿನಲ್ಲಿ ಅನುಶ್ರೀ ಹೆಸರು ಡ್ರಗ್ ದಂಧೆಯಲ್ಲಿ ಥಳಕು ಹಾಕ್ಕೊಂಡಿರುವುದು ಹೊಸ ಟ್ವಿಸ್ಟ್ ನೀಡಿದೆ. 

Spread the love

Related Articles

Leave a Reply

Your email address will not be published.

Back to top button
Flash News