BreakingCORONA VIRUSKANNADAFLASHNEWSFIGHTAGAINSTCORONAMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆರಾಜಕೀಯ

ಸಚಿವ ಆನಂದ್ ಸಿಂಗ್ ಗೆ ತಪ್ಪದ ಸಂಕಷ್ಟ-ಸಹೋದರಿ ಸಂಯುಕ್ತ ಕಚೇರಿ ಮೇಲೆ SIT  ದಾಳಿ

ಬಳ್ಳಾರಿ: ಬಳ್ಳಾರಿ ಎಂದರೆ ತತ್‌ಕ್ಷಣಕ್ಕೆ ನೆನಪಾಗುವುದು ಅಕ್ರಮ ಗಣಿಗಾರಿಕೆ, ಹಾಗೂ ಅಪರಿಮಿತ ಪ್ರಾಕೃತಿಕ ಸಂಪತ್ತಿನ ಲೂಟಿ. ಈ ಕಾರಣಕ್ಕೆ ಮೇಲ್ಕಂಡ ಜಿಲ್ಲೆ ಕುಖ್ಯಾತಿ ಪಡೆದದ್ದು ಈಗ ಇತಿಹಾಸ. ಜನಾರ್ಧನ ರೆಡ್ಡಿ ಜೈಲಿಗೂ ಕೂಡ ಹೋಗಿ ಬರಬೇಕಾಯಿತು. ರೆಡ್ಡಿ ಬ್ರದರ್ಸ್‌ಗಳ ಕ್ರೌರ್ಯಕ್ಕೆ ಇಡೀ ಬಳ್ಳಾರಿ ನಲುಗಬೇಕಾಯಿತು. ಈಗ ಅಂತಹದ್ದೇ ಮತ್ತೊಂದು ಪ್ರಕರಣ ಮುನ್ನೆಲೆಗೆ ಬಂದಿದೆ.

2005 ರಲ್ಲಿನ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಮತ್ತೆ ತನಿಖೆಯನ್ನು ಕೈಗೆತ್ತಿಕೊಂಡಿದೆ. ಹೊಸಪೇಟೆಯ ಗಣಿ ಮಾಲೀಕರ ಕಛೇರಿ ಮತ್ತು ಮನೆಗಳಲ್ಲಿ ವ್ಯಾಪಕ ಶೋಧ ಕೈಗೊಂಡಿದೆ. ಶೋಧದ ವೇಳೆ ಸ್ಫೋಟಕ ಎನ್ನುವಂತಹ ಸಂಗತಿಗಳು ಹೊರಬಿದ್ದಿದೆ. ಗಣಿಗಾರಿಕೆಗೆ ಸಂಬಂಧಿಸಿದಂತೆ ತನಿಖೆಗೆ ಪೂರಕವಾಗುವ ಸಾಕಷ್ಟು ದಾಖಲೆಗಳು ಎಸ್‌ಐಟಿಗೆ ದೊರೆತಿದೆ.

ಎಸ್‌ಐಟಿ ತನಿಖೆ ಈಗ ಅರಣ್ಯ ಸಚಿವ ಆನಂದ್ ಸಿಂಗ್ ಅಸಹೋದರಿ ಸಂಯುಕ್ತ ಅವರ ಮನೆ ಮತ್ತು ಕಚೇರಿಯತ್ತ ಕೇಂದ್ರೀಕೃತವಾಗಿದೆ. ಜೋಳದರಾಶಿ ಗುಡ್ಡದ ಬಳಿಯ ಸಂಯುಕ್ತ ಅವರ ಮನೆ ಮತ್ತು ಕಾಲೇಜು ರಸ್ತೆಯಲ್ಲಿರುವ ಹಳೆಯ ನಿವಾಸ ಮತ್ತು ಎಂ.ಪಿ.ಪ್ರಕಾಶ್ ನಗರದಲ್ಲಿರುವ ಕಚೇರಿಗಳ ಮೇಲೆ ಎಸ್‌ಐಟಿ ದಿಢೀರ್ ದಾಳಿ ನಡೆಸಿದೆ.

ಆನಂದ್ ಸಿಂಗ್ ಅವರ ಸಹೋದರಿ ಸಂಯುಕ್ತ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆಯೂ ಕೂಡ. ಅವರ ಒಡೆತನದಲ್ಲಿ ಕೃಷ್ಣಾ ಮಿನರಲ್ಸ್ ಎನ್ನುವ ಗಣಿ ಕಂಪೆನಿ ಕಾರ್ಯನಿರ್ವಹಿಸುತ್ತದೆ. ೨೦೧೫ರಲ್ಲಿ ತೀವ್ರ ಸದ್ದು ಮಾಡಿದ್ದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕೃಷ್ಣಾ ಮಿನರಲ್ಸ್ ಕೂಡಾ ಆಪಾದಿತ ಪಟ್ಟಿಯಲ್ಲಿತ್ತು. ಅಷ್ಟೇ ಅಲ್ಲ ಅಕ್ರಮಕ್ಕೆ ಪೂರಕವಾದ ಸಾಕಷ್ಟು ಪುರಾವೆಗಳೂ ಕೂಡ ಈ ಕಚೇರಿಯಲ್ಲಿ ಲಭ್ಯವಾಗಿತ್ತು. ಅಂದಿನಿಂದ ಎಸ್‌ಐಟಿ ಈ ಕಂಪೆನಿಯ ಆಗುಹೋಗುಗಳು ಹಾಗೂ ವ್ಯವಹಾರಗಳ ಮೇಲೆ ಹದ್ದುಗಣ್ಣಿನ ನಿಗಾ ಇಟ್ಟಿತ್ತು.

ಇವತ್ತು ಇದ್ದಕ್ಕಿದ್ದಂತೆ ಸಂಯುಕ್ತ ಅವರ ಕಚೇರಿ ಮತ್ತು ಮನೆಗಳ ಮೇಲೆ ದಾಳಿ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಾಗೆಯೇ ಅಕ್ರಮ ಗಣಿಗಾರಿಕೆ ಪ್ರಕರಣದ ಬಾಕಿ ತನಿಖೆ ಮತ್ತಷ್ಟು ಚುರುಕು ಪಡೆಯುವ ಸಾಧ್ಯತೆಗಳನ್ನು ಹುಟ್ಟು ಹಾಕಿದೆ. ಇದು ಅರಣ್ಯ ಸಚಿವ ಆನಂದ್ ಸಿಂಗ್ ಅವರ ರಾಜಕೀಯ ಭವಿಷ್ಯದ ಮೇಲೂ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.  

Spread the love

Related Articles

Leave a Reply

Your email address will not be published.

Back to top button
Flash News