CORONA VIRUSKANNADAFLASHNEWSFIGHTAGAINSTCORONAMoreScrollTop NewsUncategorizedಕ್ರೈಮ್ /ಕೋರ್ಟ್ರಾಜ್ಯ-ರಾಜಧಾನಿಸಿನೆಮಾ ಹಂಗಾಮ

ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದಲ್ಲಿ ಅಕ್ರಮ-ವಂಚನೆ-ಅನ್ಯಾಯ-ಅವ್ಯವಹಾರ..! ಹಣಕಾಸು ವ್ಯವಹಾರಕ್ಕೆ ತಾತ್ಕಾಲಿಕ ಬ್ರೇಕ್..!ದೂರು

ಬೆಂಗಳೂರು: ನ್ನಡ ಚಿತ್ರ ನಿರ್ಮಾಪಕರ ಸಂಘದಲ್ಲಿ ಭಿನ್ನಮತ- ಗುಂಪುಗಾರಿಕೆ ಸ್ಪೋಟವಾಗಿದೆ.ಇದೆಲ್ಲಕ್ಕಿಂತ ಹೆಚ್ಚಾಗಿ ಹಣಕಾಸಿನ ವ್ಯವಹಾರದಲ್ಲಿ ಬೃಹತ್ ಗೋಲ್ಮಾಲ್ ನಡೆಯುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಇದೆಲ್ಲಕ್ಕೂ ಪುಷ್ಟಿ ನೀಡುವಂತೆ ನಿರ್ಮಾಪಕ ಸಂಘದ ಬಗ್ಗೆ ಕೇಳಿಬಂದಿದೆ ಎನ್ನಲಾಗಿರುವ ಅಕ್ರಮ ಸಂಬಂಧ ದೂರು ಕೂಡ ದಾಖಲಾಗಿದೆ.  ಕನ್ನಡ ಚಿತ್ರೋಧ್ಯಮದ ಕೇಂದ್ರವಾದ ಗಾಂಧಿನಗರದ ಗಲ್ಲಿಗಲ್ಲಿಯಲ್ಲಿ ಸಧ್ಯ ಕೇಳಿಬರುತ್ತಿರುವ ಸುದ್ದಿ ಕನ್ನಡ ಚಿತ್ರ ನಿರ್ಮಾಪಕರ ಸಂಘದಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ.

ರಾಜ್ಯ ಸರ್ಕಾರ ಈ ಹಿನ್ನಲೆಯಲ್ಲಿ ನಿರ್ಮಾಪಕರ ಸಂಘಕೆ ಶಾಕ್ ನೀಡಿದೆ. ಸದ್ಯಕ್ಕೆ ಯಾವುದೇ ಹಣಕಾಸು ವ್ಯವಹಾರ ನಡೆಸದಂತೆ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ಜಿಲ್ಲಾ ನೋಂದಣಾಧಿಕಾರಿಗಳು ತಾಕೀತು ಮಾಡಿದ್ದಾರೆ.

ನಿರ್ಮಾಪಕ ಕೃಷ್ಣೇಗೌಡ ಹಾಗೂ ಜಿ.ಡಿ ಫಿಲ್ಮ್ ಪ್ರೊಡೆಕ್ಷನ್ ನ ಪ್ರದೀಪ್  ಅವರು,ಬೆಂಗಳೂರು ಜಿಲ್ಲಾ ನೋಂದಣಾಧಿಕಾರಿಗಳಿಗೆ  ನಿರ್ಮಾಪಕರ ಸಂಘಕ್ಕೆ ಖಡಕ್ ವಾರ್ನಿಂಗ್ ನೀಡಲು ಮನವಿ ಮಾಡಿದ್ರು. ನಿರ್ಮಾಪಕ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂಬುದು ಅವರ  ಗಂಭೀರ ಆರೋಪ.

ಕಳೆದ ವರ್ಷ ನಡೆದ ನಿರ್ಮಾಪಕರ ಸಂಘದ ಚುನಾವಣೆ ವೇಳೆ ಅಕ್ರಮ ನಡೆದಿದೆ. ಸಂಘದ ಸದಸ್ಯರು ಅಲ್ಲದೆ ಇರುವವರು ನಕಲಿ ಮತದಾನ ಮಾಡಿದ್ದಾರೆ ಎಂದು ಕೃಷ್ಣೇಗೌಡ ಹಾಗೂ ಪ್ರದೀಪ್    ಜಿಲ್ಲಾ ನೋಂದಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಇಬ್ಬರು ನಿರ್ಮಾಪಕರ ದೂರು ಪುರಸ್ಕರಿಸಿರುವ ಜಿಲ್ಲಾ ನೋಂದಣಾಧಿಕಾರಿಗಳು ದೂರು ಇತ್ಯರ್ಥ್ಯ ಆಗುವ ತನಕ ನಿರ್ಮಾಪಕರ ಸಂಘದಲ್ಲಿ ಯಾವುದೇ ಹಣಕಾಸು ವ್ಯವಹಾರ ನಡೆಸದಂತೆ ತಡೆನೀಡಿದ್ದಾರೆ. ಇದು ನಿರ್ಮಾಪಕರ ಸಂಘದಲ್ಲಿ ಭಾರೀ ಬೇಸರ ಮೂಡಿಸಿದೆ.

ಅದೇನೇ ಆಗಲಿ ಕನ್ನಡ ನಿರ್ಮಾಪಕರ ಸಂಘದ ಬಗ್ಗೆ ಕೇಳಿಬಂದಿರುವ ದೂರು ಕನ್ನಡ ಚಿತ್ರೋದ್ಯಮದ ಪಾಲಿಗೆ ಕಳಂಕವಾಗಿದೆ.ಇವರನ್ನು ನೆಚ್ಚಿಕೊಂಡು ಚಿತ್ರೋದ್ಯಮದ ಚಟುವಟಿಕೆಗಳನ್ನು ಇವರಿಗೆ ವಹಿಸಿರುವ ಹಿರಿಯ ನಟ-ನಿರ್ಮಾಪಕ-ನಿರ್ದೇಶಕ ಹಾಗು ತಂತ್ರಜ್ಞರು ಎಚ್ಚೆತ್ತುಕೊಳ್ಳದಿದ್ದರೆ ಕನ್ನಡ ಚಿತ್ರರಂಗದ ಮಾನ ಮೂರಾಮಟ್ಟೆಯಾಗುವುದರಲ್ಲಿ ಡೌಟೇ ಇಲ್ಲ. 

Spread the love

Related Articles

Leave a Reply

Your email address will not be published.

Back to top button
Flash News