BreakingCORONA VIRUSKANNADAFLASHNEWSFIGHTAGAINSTCORONAMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆರಾಜಕೀಯರಾಜ್ಯ-ರಾಜಧಾನಿ

8 ವರ್ಷ-7,000 ಪುಟ-2,80,000 ಕೋಟಿ ಲೂಟ್.. “ಅಲ್ಲಾಹು” ಭೂಮಿ ನುಂಗಿದ ಕೀಚಕರಿಗೆ ಕಂಟಕವಾಗಲಿದೆಯೇ “ವಕ್ಫ್” ರಿಪೋರ್ಟ್..!

ಬೆಂಗಳೂರು:.ಛೀ…ಥೂ…ಅಲ್ಲಾಹು ಕ್ಷಮಿಸ್ತಾನೇನ್ರಿ..ಈ ಕಿರಾತಕರನ್ನು..

ವಕ್ಫ್ ರಿಪೋರ್ಟನ್ನು ಸೋಸಿ ನೋಡಿದಾಗ ಲೂಟಿ ನಡೆದಿರುವ-ಅದನ್ನು ನೆಡಸಿರುವವರ ಭೂದಾಹವನ್ನು ಗಮನಿಸಿ ದಾಗ ಸಹಜವಾಗೇ ಉಕ್ಕುವ ಆಕ್ರೋಶ ಇದು..ವಕ್ಫ್ ಆಸ್ತಿಯನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳಲೇಬೇಕಿ ರುವ ಕ್ರಮಗಳ ಮೇಲೆ ಬೆಳಕು ಚೆಲ್ಲಿರುವ ಅಲ್ಪ ಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ  ಅನ್ವರ್ ಮಾಣಿಪ್ಪಾಡಿ ಅವರು ಸಿದ್ಧಪಡಿಸಿ ಸರ್ಕಾರಕ್ಕೆ ವಕ್ಫ್ ಭೂಮಿ ಅಕ್ರಮದ  ರಿಪೋರ್ಟನ್ನು ಸಲ್ಲಿಸಿಯಾಗಿದೆ.ಯಾರೊಬ್ಬರೂ ಮಾಡದ ಧೈರ್ಯವನ್ನು ಮಾಡುವ ಮೂಲಕ ಇತಿಹಾಸ ಸೃಷ್ಟಿಸಿರುವ ಮಾಣಿಪ್ಪಾಡಿ ಅವರಿಗೆ   ಕನ್ನಡ ಫ್ಲಾಶ್ ನ್ಯೂಸ್ ಅಭಿನಂದನೆ ಸಲ್ಲಿಸಿ ರಿಪೋರ್ಟ್ ಮೇಲೆ ಬೆಳಕು ಚೆಲ್ಲುತ್ತೆ.

ದುರಂತ ಏನ್ ಗೊತ್ತಾ..?ಮಾತಿನ ಮಧ್ಯೆಯೆಲ್ಲಾ ಇನ್ಷಾ ಅಲ್ಲಾ ಎಂದು ಆತನ  ಸ್ಮರಣೆ ಮಾಡುವ  ಮುಖಂಡರುಗಳಿಗೆನೆ , ಅಲ್ಲಾಹುವಿನ ಭೂಮಿಯನ್ನೇ ಬಡಿದು ಬಾಯಿಗೆ ಹಾಕಿಕೊಳ್ಳುವ ದರಿದ್ರ ಸ್ಥಿತಿ ಯಾಕೆ ಬಂತೋ ಗೊತ್ತಿಲ್ಲ..ಭೂದಾಹಕ್ಕೆ ವಕ್ಫ್ ಭೂಮಿಯನ್ನು ನುಂಗಿ ನೀರು ಕುಡಿದ ಪಾಪ, ಒಂದ್ಕಡೆ ಇವರನ್ನು ಸುತ್ತಿಕೊಂಡ್ರೆ,ಇನ್ನೊಂದೆಡೆ ಕಾನೂನಿನ ಕುಣಿಕೆ ಕೊರಳಿಗೆ ಉರುಳಾಗುವ ಆತಂಕ ಎದುರಾಗಿದೆ.ವಕ್ಫ್ ಭೂಮಿಯನ್ನು ಕಬಳಿಸಿದ ರಾಜಕಾರಣಿಗಳ ಪಟ್ಟಿಯೇ ಹೊರಬಿದ್ದಿದೆ.ವರದಿಯಲ್ಲಿ ಕೇಳಿಬಂದಿರುವವರಿಗೆ ಮಾತ್ರ  ಈ ವರದಿ ಕಂಟಕವಾಗೋದ್ರಲ್ಲಿ ಡೌಟೇ ಇಲ್ಲ(ಅದು ಕೂಡ ಸರ್ಕಾರ  ಒತ್ತಡಕ್ಕೆ ಮಣಿಯದೆ ಅಂಥದ್ದೊಂದು ಧೈರ್ಯ ಪ್ರದರ್ಶಿಸಿದ್ದಲ್ಲಿ ಮಾತ್ರ)

ವಕ್ಫ್ ರಿಪೋರ್ಟ್ ಸಲ್ಲಿಕೆ ಎನ್ನೋದೇ ಒಂದ್ ರೀತಿಯ ಗಜ ಪ್ರಸವದಂತಿದೆ.ಏಕೆಂದ್ರೆ ಎಲ್ಲವೂ ನಿರೀಕ್ಷೆಯಂತಾಗಿದ್ದರೆ 2012 ರಲ್ಲೇ 7 ಸಾವಿರ ಪುಟಗಳ ಬೃಹತ್ ಹಗರಣದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗ್ಬೇಕಿತ್ತು.ಆದ್ರೆ ಹಗರಣದಲ್ಲಿ  ಸರ್ಕಾರದ ಭಾಗವಾಗಿರುವ  ರಾಜಕಾರಣಿಗಳು,ಅಧಿಕಾರಿಗಳೇ ಶಾಮೀಲಾಗಿದ್ರಿಂದ ಆ ಗ್ರಹಣ ಕಳೆಯೊಕ್ಕೆ ಬರೋಬ್ಬರಿ  8 ವರ್ಷಗಳೇ  ಬೇಕಾಯ್ತು.  ರಾಜ್ಯವನ್ನೆಲ್ಲಾ ಸುತ್ತಿ  ಮಾಹಿತಿ ಹೆಕ್ಕಿ ತೆಗೆದು ಸಿದ್ಧಪಡಿಸಿಟ್ಟುಕೊಂಡು ಅದರ ಮುಕ್ತಿಗಾಗಿ ಚಾತಕಪಕ್ಷಿಯಂತಾಗಿದ್ದ ಆಯೋಗದ ಮಾಜಿ ಅಧ್ಯಕ್ಷ  ಅನ್ವರ್ ಮಾಣಿಪ್ಪಾಡಿ ಅವರಿಗೆ ಇದು ಯುದ್ಧವೊಂದನ್ನು ಗೆದ್ದ ಸಂಭ್ರಮದ ಅನುಭವ ಅದು ಸಹಜ ಬಿಡಿ..

ಈ ವಿಷಯ ಬಹುತೇಕ ಜನರಿಗೆ ಗೊತ್ತಿರಲಿಕ್ಕಿಲ್ಲವೇನೋ..ಹೇಳ್ತೇವೆ ಕೇಳಿ.ರಾಜ್ಯದಲ್ಲಿ ಅತೀ ದೊಡ್ಗ ಪ್ರಮಾಣದ ಆಸ್ತಿ ಹೊಂದಿರುವ ಯಾವುದಾದ್ರೂ ಧಾರ್ಮಿಕ ಸಂಸ್ಥೆ ಇದೆ ಎಂದ್ರೆ ಅದು ಮುಸ್ಲಿಂ ಸಮುದಾಯದ ವಕ್ಫ್ ಬೋರ್ಡ್ ಮಾತ್ರ.ಆ ನಂತರದ ಸ್ಥಾನ ಡಿಫೆನ್ಸ್,ಕ್ರೈಸ್ತ ಸಮುದಾಯಕ್ಕೆ ಸಲ್ಲುತ್ತೆ ಎನ್ನುತ್ವೆ ಮೂಲ ಗಳು.ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಲಕ್ಷಾಂತರ ಎಕ್ರೆ ಪ್ರದೇಶದಲ್ಲಿರುವ ವಕ್ಫ್ ಆಸ್ತಿ ಸಂರಕ್ಷಣೆಗೆಂದೇ ಸರ್ಕಾರ ವಕ್ಫ್ ಬೋರ್ಡ್ ರಚಿಸಿತು.ಕಾವಲುಗಾರ ಸ್ಥಾನದಲ್ಲಿದ್ದುಕೊಂಡು ಕೆಲಸ ಮಾಡ್ಬೇಕಿದ್ದ ವಕ್ಫ್ ಆಡಳಿತ ಮಂಡಳಿಯೇ ಆಸ್ತಿ ಲೂಟಿಗೆ ಇಳಿದಿದ್ದು ದುರಾದೃಷ್ಟಕರ ಎನ್ನದೇ ವಿಧಿಯಿಲ್ಲ.

ರಾಜಕೀಯವಾಗಿ ಅಧಿಕಾರಕ್ಕೆ ಬಂದವರೆಲ್ಲಾ ವಕ್ಫ್ ಆಸ್ತಿ ಸಂರಕ್ಷಿಸೋದನ್ನು ಬಿಟ್ಟು ಅದನ್ನು ಲೂಟಿ ಮಾಡಿದ್ದರಿಂದ್ಲೇ ಅನ್ವರ್ ಮಾಣಿಪ್ಪಾ ಡಿ ಲೆಕ್ಕ ಹಾಕಿದಂತೆ 2 ಲಕ್ಷದ 80 ಸಾವಿರ ಕೋಟಿ ಮೌಲ್ಯದ ಆಸ್ತಿ ಕಬಳಿಕೆಯಾದ ಸ್ಪೋಟಕ ಸತ್ಯ ಬಯಲಾಯ್ತು. ರಾಜ್ಯದ ಇತಿಹಾಸದಲ್ಲಿ ಕಂಡುಕೇಳರಿಯದ ಬೃಹತ್ ಹಗರಣ ಎಂದು ಮೇಲ್ನೋಟಕ್ಕೆ ಗೊತ್ತಾಗ್ತಿದ್ದಂಗೆ ಸರ್ಕಾರದಿಂದ ತನಿಖೆಗೆ  ಅನುಮತಿ ಕೇಳಲಾಯ್ತು.ಅದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕ ಮೇಲೆ ಕುರ್ಚಿಯಿಂದ ಕೆಳಗಿಳಿಯುವವರೆಗೂ ನಿರಂತ ರವಾಗಿ ತನಿಖೆ-ಅಧ್ಯಯನ ಮಾಡಿ ಬೃಹತ್ ಹಗರಣದ ಇಂಚಿಂಚೂ ಮಾಹಿತಿ ಕಲೆ ಹಾಕಿದಾಗ  ಅದು 7 ಸಾವಿರ ಪುಟಗಳ ಸಂಪುಟವಾಯ್ತು.

ಮಂಡನೆಗೆ ವರದಿಯನ್ನು ಹಿಡಿದು ಯಾರ ಬಳಿ ಹೋದ್ರೂ ಅದಕ್ಕೆ ಮಂಡನೆಯ ಭಾಗ್ಯವೇ ದೊರಕಿಲಿಲ್ಲ..ಈ ಬಗ್ಗೆ ಮಾಣಿಪ್ಪಾಡಿ ಸರ್ಕಾರಗಳ ವಿರುದ್ಧ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದಿದೆ.ಅಂತಿಮವಾಗಿ ಅದಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಡನೆ ಭಾಗ್ಯ ಸಿಕ್ಕಂತಾಯ್ತು. ವರದಿಯ ಮಂಡನೆ  ಯಾಕೆ ಇಷ್ಟು ತಡವಾಯ್ತು ಎನ್ನೋದಕ್ಕೆ ವರದಿಯಲ್ಲಿರುವ ಸ್ಪೋಟಕ ಸಂಗತಿಗಳೇ ಸಾಕ್ಷಿ.ಒತ್ತುವರಿದಾರರ,ಕಬಳಿಕೆಗೆ ಅಧಿಕಾರದಲ್ಲಿದ್ದುಕೊಂಡು ಸಾಥ್ ಕೊಟ್ಟಂತ ಘಟಾನುಘಟಿ ರಾಜಕಾರಣಿಗಳು, ಅಧಿಕಾರಿಗಳ ಬಹುದೊಡ್ಡ ಪಟ್ಟಿಯೇ ವರದಿಯಲ್ಲಿದೆ.ಆ ಹೆಸರುಗಳು ಬಯಲಾಗ್ತಿದ್ದಂಗೆ ರಾಜಕಾರಣಿಗಳ ಎದೆ ಝಲ್ಲೆಂದಿದೆ.ಹೃದಯಬಡಿತವೇ ನಿಂತೋಗಿರುವುದಂತೂ ಸತ್ಯ.

ವಕ್ಳ್ ಬೂ ಕಬಳಿಕೆದಾರರು ಹಾಗೂ ಅದನ್ನು ಬೆಂಬಲಿಸಿದವರ ಲೀಸ್ಟ್ ನಲ್ಲಿ ಹೆಚ್ಚಿರುವುದು ಕೈ ಮುಖಂಡರ ಹೆಸರು. ದಿವಂಗತ ರಾಗಿರುವ ಮಾಜಿ ಸಂಸದ ಜಾಫರ್ ಷರೀಫ್,ಮಾಜಿ ಸಚಿವ ಖಮರುಲ್ ಇಸ್ಲಾಂ ಸೇರಿದಂತೆ ಹಾಲಿ ಸಂಸದ  ಮಲ್ಲಿಕಾರ್ಜುನ್ ಖರ್ಗೆ,ಶಾಸಕಿ ಖನೀಜ್ ಫಾತಿಮಾ,ಎನ್ ಎ ಹ್ಯಾರೀಸ್, ಮಾಜಿಗಳಾದ ಇಕ್ಬಾಲ್ ಅಹಮದ್ ಸರಡಿ, ಸಿಎಂ ಇಬ್ರಾಹಿಂ,ರೋಷನ್ ಬೇಗ್,ಇಕ್ಬಾಲ್ ಅನ್ಸಾರಿ ಅವರ ಹೆಸರುಗಳು ಪಟ್ಟಿಯಲ್ಲಿವೆ.ಕೇವಲ ಮುಸ್ಲಿಂ ನಾಯಕರಷ್ಟೇ ಅಲ್ಲ ಮುಸ್ಲಿಮೇತರ ನಾಯಕರು ಕೂಡ ಕಬಳಿಕೆಯಲ್ಲಿ  ನೇರ ಹಾಗೂ ಪರೋಕ್ಷವಾಗಿ ಭಾಗಿಯಾಗಿರುವುದು ವರದಿಯಲ್ಲಿ ಉಲ್ಲೇಖವಾಗಿದೆ.

ಇನ್ನು ವರದಿ ಮಂಡನೆ ಬೆನ್ನಲ್ಲೇ ಅನ್ವರ್ ಮಾಣಿಪ್ಪಾಡಿ ಜೀವಬೆದರಿಕೆ ಕರೆಗಳು ಬರುತ್ತಿವೆ ಎನ್ನಲಾಗಿದೆ.ಆದರೆ ಇದು ಸಾರ್ವಜನಿಕ ಹಿತಾಸಕ್ತಿ ಪ್ರಕರಣವಾಗಿರುವುದರಿಂದ ಸರ್ಕಾರ ಮಾಣಿಪ್ಪಾಡಿ ಅವರಿಗೆ ಬೇಕಾದ ಎಲ್ಲಾ ಭದ್ರತೆ ಕಲ್ಪಿಸಬೇಕೆಂದು ಸೂಚಿಸಿದೆ.

 ಕೈ ಮುಖಂಡರ ಭಾಗಿ ಈಗ ರಾಜಕೀಯವಾಗಿ ದೊಡ್ಡ ಕೋಲಾಹಲವನ್ನೇ ಎಬ್ಬಿಸಿದೆ.ಕೈ ನಾಯಕರ ನೈತಿಕತೆಯನ್ನು ವಿಪಕ್ಷಗಳು ಪ್ರಶ್ನಿಸಲಾರಂಭಿಸಿವೆ.ಕಾನೂನಾತ್ಮಕವಾಗಿ ತಪ್ಪಿತಸ್ಥರ ವಿರುದ್ದ ತನಿಖೆ ನಡೆದು ಶಿಕ್ಷೆಯಾಗಬೇಕೆಂದು ಬಿಜೆಪಿ ಹಾಗೂ ಜೆಡಿಎಸ್ ಪಟ್ಟುಹಿಡಿದಿವೆ.ಅಷ್ಟೇ ಅಲ್ಲ ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಯನ್ನಿಟ್ಟು ಕೊಂಡು ಹೋರಾಟ ನಡೆಸುತ್ತಿರುವ ಸಂಘಟನೆಗಳು ಕೂಡ ಕಾನೂನಾತ್ಮಕ ಹೋರಾಟ ಮುಂದುವರೆಸಿವೆ.ಒಟ್ಟಿನಲ್ಲಿ ಅಂದುಕೊಂಡಂತೆ ಎಲ್ಲವೂ ನಡುದ್ರೆ ಕಬಳಿಕೆದಾರರಿಗೆ ಸೂಕ್ತ ಶಿಕ್ಷೆ ಗ್ಯಾರಂಟಿ. ಆದ್ರೆ ಅಂಥಾ ದಾಷ್ಟ್ಯ೵ವನ್ನು ಸಅಂಥಾ ಸರಕಾರ ಪ್ರದರ್ಶಿಸುತ್ತಾ..ಡೌಟ್ ಇರೋದೇ ಅಲ್ಲಿ..

 

ಒತ್ತುವರಿದಾರರ ಲೀಸ್ಟ್ ನಲ್ಲಿರುವ ಪ್ರಮುಖರು

*ಮಲ್ಲಿಕಾರ್ಜುನ್ ಖರ್ಗೆ- ಸಂಸದ

*ಎನ್ ಎ ಹ್ಯಾರೀಸ್- ಶಾಸಕ 

* ರೆಹಮಾನ್ ಖಾನ್- ಮಾಜಿ ಸಂಸದ  (ಇಡೀ ಅಕ್ರಮದ ರೂವಾರಿ ಎನ್ನುವ ಆರೋಪವಿದೆ)

*ಉಬೇದುಲ್ಲಾ ಷರೀಫ್-ಮಾಜಿ ವಕ್ಫ್ ಮಂಡಳಿ ಅಧ್ಯಕ್ಷ

*ರೋಷನ್ ಬೇಗ್-ಮಾಜಿ ಸಚಿವ

 *ಜಾಫರ್ ಷರೀಫ್-ಮಾಜಿ ಕೇಂದ್ರ ಸಚಿವ(ನಿಧನ)

  *ಖಮರುಲ್ ಇಸ್ಲಾಂ- ಮಾಜಿ ಸಚಿವ

*ಖನೀಜ್ ಫಾತಿಮಾ- ,ಶಾಸಕಿ

*ಇಕ್ಬಾಲ್ ಅಹಮದ್ ಸರಡಗಿ-ಮಾಜಿ ಸಚಿವ

*ಸಿಎಂ ಇಬ್ರಾಹಿಂ-ಮಾಜಿ ಎಮ್ಮೆಲ್ಸಿ

 

ಒತ್ತುವರಿದಾರರ ಲೀಸ್ಟ್ ನಲ್ಲಿರುವ ಲೀಡರ್ಸ್

*ಸ್ಥಳ: ವಿಂಡರ್ಸ್ ಮ್ಯಾನರ್ 1.65 ಲಕ್ಷ ಚದರ ಅಡಿ ಭೂಮಿ -ರೆಹಮಾನ್ ಖಾನ್,ಮಾಜಿ ಸಂಸದ,

*ಸ್ಥಳ:ಲಾಲ್ ಭಾಗ್ ಸಮೀಪದ ಅಣ್ಣಿಪುರ ಗ್ರಾಮದ 2.30 ಎಕರೆ- ಖಾಲಿದ್ ಅಹಮದ್- ವಕ್ಫ್ ಮಂಡಳಿ ಅಧ್ಯಕ್ಷ

*ಎ.ಎಂ ಹಿಂಡಸಗೇರಿ-ಮಾಜಿ ಸಚಿವ -ಕುಂಬಾರಪೇಟೆ, ನವಾಬ್ ಇಬ್ರಾಹಿಂ ಅಲಿ ಷಾ ಷಟಾರಿ,ಕುಂಬಾರ ಪೇಟೆ

*ರೋಷನ್ ಬೇಗ್-ಬಡೇಪುರ ಗ್ರಾಮ 10.05 ಎಕ್ರೆ . ಪಿಳ್ಳಿಯಾರ್ ಕೊಯಿಲ್ ಸ್ಟ್ರೀಟ್,ಮಕಾನ್ ರಸ್ತೆ-7,329 ಚದರ ಅಡಿ

* ಎನ್ ಎ ಹ್ಯಾರೀಸ್ ಹಾಗು ಕುಟುಂಬ-ಬಡೇಪುರ ಸರ್ವೆ ನಂಬರ್ 2-5,7-9,11-13ರಲ್ಲಿ 10.5 ಎಕ್ರೆ 

*ಉಬೇದುಲ್ಲಾ ಷರೀಫ್-ಅಲ್ಪಸಂಖ್ಯಾತ ಘಟಕದ ಮುಖಂಡ,ಜಾಫರ್ ಷರೀಫ್-ಮಾಜಿ ಸಂಸದ(ದಿವಂಗತ)

*ಬಿಳೇಕಳ್ಳಿ ಸರ್ವೆ ನಂಬರ್ 55 ರಲ್ಲಿ 122.50 ಎಕ್ರೆ ಪೈಕಿ 50 ಜನರಿಗೆ ಮಂಜೂರು ಮಾಡಿ ಉಳಿದ ಭೂಮಿಯ ಒತ್ತುವರಿ 

Spread the love

Related Articles

Leave a Reply

Your email address will not be published.

Back to top button
Flash News