ಶಾಕಿಂಗ್..ಶಾಕಿಂಗ್ ನ್ಯೂಸ್….ಮತ್ತೆ ಕ್ಷೀಣಿಸಿದ ಸ್ವರಸಾಮ್ರಾಜ್ಞ-‘ಸರಸ್ವತಿ ಪುತ್ರ” SPB ಆರೋಗ್ಯ..!

0

ಚೆನ್ನೈ:ಅದ್ಭುತ ಕಂಠಸಿರಿಯ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯರ ಆರೋಗ್ಯದ ಬಗ್ಗೆ ಸ್ಯಾಡ್ ನ್ಯೂಸ್ ಹೊರಬಿದ್ದಿದೆ.ಇನ್ನೇನು ಚೇತರಿಕೆ ಕಂಡು ಸಂಪೂರ್ಣ ಗುಣಮುಖರಾಗ್ತಾರೆಂದು ನಿಟ್ಟುಸಿರು ಬಿಟ್ಟಿದ್ದ ಅಭಿಮಾನಿಗಳಿಗೆ ಮತ್ತೆ ಆರೋಗ್ಯದ ಬಗ್ಗೆ ಶಾಕಿಂಗ್ ನ್ಯೂಸ್ ಬಂದಿದೆ.ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್ಪಿಬಿ ಅವರ ಆರೋಗ್ಯ ಮತ್ತೆ ಬಿಗಡಾಯಿಸಿದೆ ಎನ್ನುವ ವರ್ತಮಾನ ಬಂದಿದೆ.

ಯಾವ ಬಗೆಯ ಸಾಹಿತ್ಯವಾದರೂ ಅದಕ್ಕೆ ಜೀವ ತುಂಬುವ ಕಂಚಿನ ಕಂಠ…ಕನ್ನಡ, ತಮಿಳು, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬರೋಬ್ಬರಿ 40 ಸಾವಿರಕ್ಕೂ ಹೆಚ್ಚಿನ ಗೀತೆಗಳಿಗೆ ಅದ್ಭುತ ಗಾಯನ.. ವ್ಯಕ್ತಿತ್ವದಲ್ಲಿ ಸರಳತೆ ಜೊತೆಗೆ ನೈಜತೆ…ಹೀಗೆ ಹೇಳ್ತಾ ಹೊದ್ರೆ ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯ ಅವರ ಅಸಮಾನ್ಯ ಪ್ರತಿಭೆ ಪದಗಳೆ ಸಾಲೋದಿಲ್ಲ… ಭಾರತೀಯ ಚಿತ್ರರಂಗದಲ್ಲಿ ಹಲವು ದಶಕಗಳ ಕಾಲ ಗಾಯನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸರಸ್ವತಿ ಪುತ್ರ ಎಂದು ಕರೆಸಿಕೊಂಡಿರುವ ಎಸ್.ಪಿ.ಬಿ ಅವರ ಆರೋಗ್ಯ ಅದ್ಯೋಕೋ ಮತ್ತೆ ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿದೆ…

ಕಳೆದ ಆಗಸ್ಟ್ 5  ರಂದು ಕಾಣಿಸಿಕೊಂಡ ಕರೋನಾ ಸೋಂಕು ಗಾನ ಗಂಧರ್ವ ಎಸ್ಪಿಬಿ ಅವರನ್ನ ಈವರೆಗೂ ಕಾಡುತ್ತಿದೆ. ಕೆಲ ದಿನಗಳ ಹಿಂದೆ  ಕನ್ನಡ ಚಿತ್ರರಂಗ ಸೇರಿದಂತೆ ಭಾರತೀಯ ಚಿತ್ರರಂಗದ ನಟ ನಟಿಯರು ಸಂಗೀತಗಾರರು  ಸೇರಿದಂತೆ ಸಿನಿ ಗಣ್ಯರೆಲ್ಲರೂ ಎಸ್ಪಿಪಿ ಆರೋಗ್ಯ ಸುಧಾರಿಸಲಿ ಎಂದು ಪ್ರಾರ್ಥಿಸಿದ್ರು. ಇವರ ಪ್ರಾರ್ಥನೆಯ ಫಲವೋ ಏನೋ ಎಂಬಂತೆ ಅವರ ಆರೋಗ್ಯ ತಕ್ಕ ಮಟ್ಟಿಗೆ ಸುಧಾರಿಸಿತ್ತು. ಎರಡ್ಮೂರು ದಿನಗಳ ಹಿಂದೆಯಷ್ಟೇ ಅವರ ಪುತ್ರ ತಂದೆ ಆರೋಗ್ಯ ಸುಧಾರಿಸುತ್ತಿದೆ ಎಂದು ಮಾಹಿತಿ ನೀಡಿದ್ರು. ಇನ್ನೇನು ಎಸ್ಪಿಬಿ ಗುಣಮುಖ ಆಗ್ಬಿಟ್ರು ಅಂತ ಎಲ್ಲರೂ ಭಾವಿಸಿದ್ರು. ಆದ್ರೆ ಗುರುವಾರ ಸಂಜೆ ವೇಳೆಗೆ ಚೆನ್ನೈನ ಎಂಜಿಎಂ ಆಸ್ಪತ್ರೆ ಶಾಕಿಂಗ್ ನ್ಯೂಸ್ ನೀಡಿದೆ.. ಇದು ಕೋಟ್ಯಾಂತರ ಎಸ್ಪಿಬಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ….

“ಕಳೆದ 24  ಗಂಟೆಗಳಲ್ಲಿ ಎಸ್ಪಿಬಿ ಅವರ ಆರೋಗ್ಯ ತೀರಾ ಹದ ಗೆಟ್ಟಿದೆ… ಲೈಫ್ ಸಪೋಟ್ ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.. ತಜ್ಞ ವೈದ್ಯರ ತಂಡ ಅವರ ಆರೋಗ್ಯದ ಸೂಕ್ಷ್ಮತೆಯನ್ನು ಗಮನಿಸುತ್ತಿದೆ’ ಎಂದು ಚೆನ್ನೈನ ಎಂಜಿಎಂ ವೈದ್ಯರು ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಿದ್ದಾರೆ. 

ಚೆನ್ನೈನ ಎಂಜಿಎಂ ಆಸ್ಪತ್ರೆ ವೈದ್ಯರ ಈ ಹೇಳಿಕೆ ತಿಳಿದ ಕೂಡಲೇ ನಟ ಕಮಲ್ ಹಾಸನ್ ಸೇರಿದಂತೆ ಸಾಕಷ್ಟು ಗಣ್ಯರು ಎಸ್ಪಿಬಿ ಅವರನ್ನು ನೋಡಲು ಆಸ್ಪತ್ರೆಗೆ ಬರುತ್ತಿದ್ದಾರೆ. ಸಾಕಷ್ಟು ಮಂದಿ ಮನೆಯಲ್ಲೇ ಎಸ್ಪಿಬಿ ಅವರ ಆರೋಗ್ಯ ಸುಧಾರಿಸಲಿ ಅಂತ ಪ್ರಾರ್ಥಿಸುತ್ತಿದ್ದಾರೆ. ಮತ್ತೊಂದೆಡೆ ಚೆನ್ನೈನ ಎಂಜಿಎಂ ವೈದ್ಯರು ತಮ್ಮ ಎಲ್ಲಾ ಅಸ್ತ್ರಗಳನ್ನ ಪ್ರಯೋಗಿಸಿ ಪ್ರಯೋಗಿಸುತ್ತಿದ್ದಾರೆ.ಇನ್ನುಳಿದಿರುವುದು ಅಭಿಮಾನಿಗಳ ಪ್ರಾರ್ಥನೆ-ಹರಕೆ-ಆರೈಕೆ ಅಷ್ಟೇ..

Spread the love
Leave A Reply

Your email address will not be published.

Flash News